ಸುಡು ಬಿಸಿಲಿನಲ್ಲಿ ಅತ್ಯಂತ ಹೆಚ್ಚು ಪ್ರಭಾವ ದೇಹದ ಮೇಲೆ ಉಂಟಾಗುತ್ತದೆ. ಬಿರು ಬಿಸಿಲು ಮತ್ತು ಉಷ್ಣದಿಂದಾಗಿ ದೇಹದ ಸ್ವೇದ ಗ್ರಂಥಿಗಳು ಮುಚ್ಚಿಹೋಗುತ್ತವೆ. ಇದರಿಂದ ತ್ವಚೆಯಲ್ಲಿ ಹೆಚ್ಚು ನವೆಯುಂಟಾಗುತ್ತದೆ. ಅನೇಕ ಬಾರಿ ಕೀವು ತುಂಬಿದ ಗುಳ್ಳೆಗಳು ಉಂಟಾಗುತ್ತವೆ ಮತ್ತು ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ ಸಹ ಉಂಟಾಗುತ್ತದೆ. ಆದ್ದರಿಂದ ವಿಶೇಷ ಗಮನ ಅಗತ್ಯ.

ಬಟರ್‌ ಫ್ಲೈ ಏರಿಯಾ

ಅನೇಕ ಬಾರಿ ಅಲ್ಟ್ರಾ ವೈಲೆಟ್‌ ಕಿರಣಗಳಿಂದಾಗಿ ಮುಖದ ಬಟರ್‌ ಫ್ಲೈ ಏರಿಯಾ ಮೇಲೆ ಕೆಂಪಾಗುವಿಕೆ ಮತ್ತು ಉರಿ ಉಂಟಾಗುತ್ತದೆ. ಬೆವರೂ ಕೂಡ ಚುಚ್ಚ ತೊಡಗುತ್ತದೆ. ಆದ್ದರಿಂದ ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಒಳ್ಳೆಯ ಉಪಾಯ.

ಎಸ್‌ಪಿಎಫ್‌ ಸನ್‌ಸ್ಕ್ರೀನ್‌

ಬಿಸಿಲಿನಲ್ಲಿ ಹೊರಗೆ ಹೊರಡುವಾಗ ಶರೀರವನ್ನು ಮುಚ್ಚುವ ಉಡುಪನ್ನು ಧರಿಸಿ ಮತ್ತು ಬಿಸಿಲಿನಲ್ಲಿ ಸದಾ ಛತ್ರಿ ಉಪಯೋಗಿಸಿ. ವೈದ್ಯರ ಸಲಹೆ ಪಡೆದು ಎಸ್‌ಪಿಎಫ್‌ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಬೇಕು.

ತೊಡೆಗಳಲ್ಲಿ ಇನ್‌ಫೆಕ್ಷನ್‌

ಬಿಸಿಲು ಮತ್ತು ಬೆವರಿನಿಂದಾಗಿ ತೊಡೆಗಳಲ್ಲೂ ಸಹ ಫಂಗಲ್ ಇನ್‌ಫೆಕ್ಷನ್‌, ನವೆ ಹಾಗೂ ಕೆಂಪಾಗುವಿಕೆ ಉಂಟಾಗುತ್ತದೆ. ಅನೇಕ ಬಾರಿ ಕೆಂಪು ಬಣ್ಣ ಕಪ್ಪಾಗಿ ಬದಲಾಗುತ್ತದೆ.

ಸ್ಕಿನ್‌ ಪ್ರಾಬ್ಲಂ

ತ್ವಚೆಯ ಕ್ರಾನಿಕ್‌ ತೊಂದರೆಗಳು ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚಾಗುತ್ತವೆ. ಬಿಸಿಲಿನಿಂದ ಕಾಯಿಲೆಗಳು ಹೆಚ್ಚುತ್ತವೆ. ಉದಾಹರಣೆಗೆ ಬೇಸಿಗೆಯಲ್ಲಿ ಕ್ರಾನಿಕ್‌ ಎಗ್ಸಿಮಾ, ಕಜ್ಜಿ ಹೆಚ್ಚಾಗುತ್ತದೆ. ಅದರಿಂದಾಗಿ ಅಲ್ಲಿನ ತ್ವಚೆ ದಪ್ಪಗಾಗುತ್ತದೆ, ಬಣ್ಣ ಬದಲಾಗುತ್ತದೆ.

ಆ್ಯಕ್ನೆ

ಬೇಸಿಗೆಯಲ್ಲಿ ಆ್ಯಕ್ನೆ ಸಮಸ್ಯೆ ಹೆಚ್ಚಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಹಾನಿಕರ. ಸಿಸ್ಟಮ್ಯಾಟಿಕ್ ಎರಪ್ಶನ್‌ನಿಂದ ಸಂಧುಗಳಲ್ಲಿ ನೋವುಂಟಾಗುತ್ತದೆ, ಜ್ವರ ಬಂದು ಕೆಂಪು ದದ್ದುಗಳಾಗುತ್ತವೆ. ಈ ಕಾಯಿಲೆ ಆಟೋ ಇಮ್ಯೂನ್‌ ಡಿಸ್‌ಆರ್ಡರ್‌ ಆಗಿದ್ದು ಬಿಸಿಲಿನಿಂದ ಹೆಚ್ಚಾಗುತ್ತದೆ.

ಹೀಗೆ ಮಾಡಿ ನೋಡಿ

ಹೆಚ್ಚು ಬಿಸಿಲಿನಲ್ಲಿ ಹೊರಗೆ ಓಡಾಡಬೇಡಿ.

ಬೆವರು ಸಾಲೆಯ ಮೇಲೆ ಪೌಡರ್‌ ಹಾಕಿಕೊಂಡಾಗ ತಂಪಾಗುತ್ತದೆ. ಆದರೆ ಅದು ಖಾಯಂ ಚಿಕಿತ್ಸೆ ಅಲ್ಲ. ಬೆವರುಸಾಲೆ ಸರಿಹೋಗದಿದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ತೆಳು ಬಣ್ಣದ ಕಾಟನ್‌ ಬಟ್ಟೆಯನ್ನೇ ಧರಿಸಿ.

ಬಿಸಿಲಲ್ಲಿ ಹೊರಡುವಾಗ ತುಂಬುತೋಳಿನ ಶರ್ಟ್‌ನ್ನೇ ಧರಿಸಿ. ಅಂದರೆ ಕಮೀಜ್‌ ಅಥವಾ ಕುರ್ತಾ ಧರಿಸಿ.

ಹೆಚ್ಚು ಬೆವರು ಬರದಿರಲು ಅಂಡರ್‌ ಗಾರ್ಮೆಂಟ್ಸ್ ಮತ್ತು ಜೀನ್ಸ್ ಇತ್ಯಾದಿ ಬಿಗಿಯುಡುಗೆಗಳನ್ನು ಧರಿಸಬೇಡಿ.

ತ್ವಚೆಯನ್ನು ಕತ್ತರಿಸುವಂತಹ ಸಿಂಥೆಟಿಕ್‌ ಮತ್ತು ಬಿಗಿ ಉಡುಪುಗಳನ್ನು ಧರಿಸಬೇಡಿ. ಏಕೆಂದರೆ, ಟೈಟಾಗಿರುವುದರಿಂದ ಕಂಕುಳು ಹಾಗೂ ತೊಡೆಗಳಲ್ಲಿ ಉಜ್ಜುವಿಕೆಯಿಂದ ತ್ವಚೆಯಲ್ಲಿ ಕೆಂಪು ದದ್ದು ಮತ್ತು ಊತ ಉಂಟಾಗುತ್ತದೆ. ಇದರಲ್ಲಿ ಉರಿ ಮತ್ತು ನೋವುಂಟಾಗುತ್ತದೆ.

- ಡಾ. ಸುಧಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ