ಇತ್ತೀಚೆಗೆ ಬಹಳಷ್ಟು ಭಾರತೀಯರು ಓದು ಮುಂದುರೆಸಲು ಹಾಗೂ ವ್ಯಾಪಾರ ವಹಿವಾಟು ನಡೆಸಲು ವಿದೇಶಗಳಿಗೆ ಹೋಗುತ್ತಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಭಾರತದೊಂದಿಗೆ ಸಂಪರ್ಕದಲ್ಲಿರುವುದು ಅತ್ಯವಶ್ಯ. ನೀವು ವಿದೇಶದ ಯಾವುದೇ ಮೂಲೆಗೆ ಹೋಗಿ, ಮ್ಯಾಟ್ರಿಕ್ಸ್ ಕಾರ್ಡ್‌ ಒಂದು ಅಗ್ಗದ ಹಾಗೂ ಅಂತಾರಾಷ್ಟ್ರೀಯ ಸಿಮ್ ಕಾರ್ಡ್‌ನ್ನು ಹೊರತಂದಿದ್ದು, ಅದನ್ನು ಪಡೆಯುವುದು ಹಾಗೂ ಉಪಯೋಗಿಸುವುದು ಅತ್ಯಂತ ಸರಳ.

ಇದೊಂದು ಪೋಸ್ಟ್ ಪೇಯ್ಡ್ ಕಾರ್ಡ್‌ ಆಗಿದ್ದು, ಇದನ್ನು ನಿಮ್ಮ ಕೆಲಸ ಮುಗಿದ ಬಳಿಕ ಸ್ವದೇಶಕ್ಕೆ ಬಂದು ಸುಲಭವಾಗಿ ಮರಳಿಸಬಹುದು. ಇದರ ಮುಖಾಂತರ ನೀವು ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸಬಹುದು. ಅದರಲ್ಲೂ ವಿಶೇಷವಾಗಿ ಲ್ಯಾಪ್‌ಟಾಪ್‌ನಲ್ಲಿ ಇದನ್ನು ಉಪಯೋಗಿಸುವುದು ಅತ್ಯಂತ ಸುಲಭ. ಈ ಕಾರ್ಡ್‌ ಹಲವು ಪ್ರಕಾರದ್ದಾಗಿರುತ್ತದೆ. ಅವೆಂದರೆ ಇಂಟರ್ ನ್ಯಾಷನಲ್ ಸಿಮ್ ಕಾರ್ಡ್‌ ಮ್ಯಾಟ್ರಿಕ್ಸ್ ಕಾಂಬಿಂಗ್‌ ಕಾರ್ಡ್‌. ಮ್ಯಾಟ್ರಿಕ್ಸ್ ಕಾಂಬಿಂಗ್‌ ಕಾರ್ಡ್‌ ಇಂಡಿಯಾ, ಮ್ಯಾಟ್ರಿಕ್ಸ್ ಕಾಂಬಿಂಗ್ ಕಾರ್ಡ್‌ ದುಬೈ, ಮ್ಯಾಟ್ರಿಕ್ಸ್ ಇಂಡಿಯಾ ಮುಂತಾದವು.

ಮ್ಯಾಟ್ರಿಕ್ಸ್ ಹೆಲ್ಪ್ ಸೆಂಟರ್‌ಗೆ ನೀವು ಕರೆ ಮಾಡಿ ನಿಮ್ಮ ಅವಶ್ಯಕತೆಯನ್ನು ವಿವರಿಸಿದರೆ ಅವರು ನಿಮ್ಮ  ಅಗತ್ಯಕ್ಕೆ ತಕ್ಕುದಾದ ಕಾರ್ಡನ್ನು ಪಡೆದುಕೊಳ್ಳುವ ಇಡೀ ಪ್ರಕ್ರಿಯೆಯನ್ನು ತಿಳಿಸುತ್ತಾರೆ. ಇದರ ಏಜೆಂಟರು ದೊಡ್ಡ ದೊಡ್ಡ ನಗರಗಳಲ್ಲಿದ್ದು ನಿಮ್ಮ ಅಗತ್ಯಕ್ಕನುಗುಣವಾಗಿ ನಿಮ್ಮ ಮನೆಗೆ ಬಂದು ನಿಮ್ಮಿಂದ ಸೂಕ್ತ ದಾಖಲೆ ಪಡೆದು 2 ದಿನದಲ್ಲಿ ಕಾರ್ಡನ್ನು ತಂದುಕೊಡುತ್ತಾರೆ.

ಇತರ ಉಪಯೋಗಗಳು

ಲೋಕಲ್ ಪೋಸ್ಟ್ ಪೇಯ್ಡ್ ಮೊಬೈಲ್ ‌ನಂಬರ್‌ ಒಂದು ಸೀಮಿತ ನಗರಕ್ಕಾಗಿ ಅಥವಾ ದೇಶಕ್ಕಾಗಿ ದೊರೆಯುತ್ತದೆ.

ರೋಮಿಂಗ್‌ ಕಾಲ್‌ಗಳ ಮೇಲೆ ಶೇ.60 ರಷ್ಟು ಉಳಿತಾಯ.

ಬಹಳಷ್ಟು ದೇಶಗಳಲ್ಲಿ ಉಚಿತ ಒಳಬರುವ ಕರೆಗಳ ಸೌಲಭ್ಯ.

ಆನ್‌ ಲೈನ್‌ ಉಚಿತ ಬಿಲ್ ‌ಸೌಲಭ್ಯ.

ಭಾರತ ಬಿಡುವ ಮುಂಚೆ ನಿಮಗೆ ಈ ಸಿಮ್ ಕಾರ್ಡ್‌ ದೊರೆಯುತ್ತದೆ.

ಇದರ ಪಾವತಿಯನ್ನು ಭಾರತೀಯ ರೂಪಾಯಿ ಮೌಲ್ಯದಲ್ಲಿ ಸಂದಾಯ ಮಾಡಬೇಕಿರುತ್ತದೆ.

ಭಾರತದ ಯಾವುದೇ ಮೂಲೆಯಲ್ಲಿ ಇದರ ಡೆಲಿವರಿಯ ಸೌಲಭ್ಯ.ದೆಹಲಿಯಲ್ಲಿ ಸ್ಥಾಪನೆಗೊಂಡಿರುವ ಈ ಕಂಪನಿಯ ಪ್ರತಿನಿಧಿಗಳು ದೇಶಾದ್ಯಂತ ಇದ್ದಾರೆ. ಅವರು ನಿಮ್ಮ ಒಂದು ಫೋನ್‌ ಕರೆಯಿಂದ ನಿಮ್ಮ ಮನೆ ಅಥವಾ ಆಫೀಸಿಗೆ ಭೇಟಿ ನೀಡುತ್ತಾರೆ. ಸಿಮ್ ಕಾರ್ಡ್‌ನ ಹೊರತಾಗಿ ತ್ರೀಜಿ ಡಾಟಾ ಕೂಡ ಇವರ ಪ್ರಚಲಿತ ಕಾರ್ಡಾಗಿದೆ. ಅದು ಇಂಟರ್‌ನೆಟ್‌ಗಾಗಿ ಕೆಲಸ ಮಾಡಲು ಉತ್ತಮವಾಗಿದೆ.

ಇದನ್ನು ದೊರಕಿಸಿಕೊಳ್ಳಲು ನಿಮಗೆ ಕ್ರೆಡಿಟ್‌ ಕಾರ್ಡ್‌, ಪಾಸ್‌ ಪೋರ್ಟ್‌, ವೀಸಾ ಕಾರ್ಡ್‌ನ ಝೆರಾಕ್ಸ್ ಪ್ರತಿ ಮತ್ತು 1 ಫೋಟೋದ ಅವಶ್ಯಕತೆ ಇರುತ್ತದೆ. ಕ್ರೆಡಿಟ್‌ ಕಾರ್ಡ್‌ ಇರದೇ ಇದ್ದರೆ 5,000 ರೂ.ಗಳ ಚೆಕ್‌ ಅಥವಾ ಕ್ಯಾಶ್‌ ಬ್ಲಾಕ್‌ ಮಾಡಲಾಗುತ್ತದೆ. ಸಿಮ್ ಕಾರ್ಡ್‌ ವಾಪಸ್‌ ಮಾಡಿದ ಬಳಿಕ ನಿಮಗೆ ಹಣ ವಾಪಸ್‌ ದೊರೆಯುತ್ತದೆ.

ಲೋಪದೋಷಗಳು

ಈ ಕಾರ್ಡಿನಲ್ಲಿ ಕೆಲವು ಲೋಪಗಳು ಇದ್ದು, ಅದನ್ನು ತಿಳಿದುಕೊಳ್ಳುವುದು ಅತ್ಯವಶ್ಯ :

ಒಂದು ಸಲಕ್ಕೆ ನಿಮಗೆ ಒಂದೇ ನಂಬರ್‌ ಸಿಗುತ್ತದೆ. ನೀವು ಮಲ್ಟಿ ಫೋನ್‌ ಲೈನ್‌ನ್ನು ಉಪಯೋಗಿಸಲು ಸಾಧ್ಯವಿಲ್ಲ.

ಯಾವುದೊ ಕಾರಣದಿಂದ ಸಿಮ್ ಕಾರ್ಡ್‌ ಹಾಳಾದರೆ, ಮತ್ತೊಮ್ಮೆ ಅದನ್ನು ಖರೀದಿಸಲು ಹಣ ಪಾವತಿಸಬೇಕಾಗುತ್ತದೆ. ಅದು ಅತ್ಯಂತ ದುಬಾರಿ.

ಒಂದು ವೇಳೆ ನೀವು ಫೋನ್‌ ಕಾರ್ಡ್‌ ಅಥವಾ ಸಿಮ್ ಕಾರ್ಡನ್ನು ಲಾಕ್‌ ಮಾಡಲು ಮರೆತುಬಿಟ್ಟರೆ ಯಾರಾದರೂ ಜಿಎಸ್‌ಎಂ ಗ್ರಾಹಕರು ನಿಮ್ಮ ಸಿಮ್ ಕಾರ್ಡ್‌ನ ದುರುಪಯೋಗ ಮಾಡಿಕೊಳ್ಳಬಹುದು.

ಅದರ ಎಲ್ಲ ಕಾಂಟ್ಯಾಕ್ಟ್ ನಂಬರ್‌ಗಳನ್ನು ಸಿಮ್ ಕಾರ್ಡ್‌ ಹಾಗೂ ಫೋನ್‌ ಎರಡರಲ್ಲೂ ಸೇವ್ ‌ಮಾಡಿಡಿ. ನಿಮ್ಮ ಫೋನ್‌ ಹಾಗೂ ಸಿಮ್ ಕಾರ್ಡನ್ನು ಯಾವಾಗಲೂ ಅವಶ್ಯವಾಗಿ ಲಾಕ್‌ ಮಾಡಿ.

ಈ ಸಿಮ್ ಕಾರ್ಡನ್ನು ನೀವು ಯಾವುದೇ ಮೊಬೈಲ್ ‌ಅಥವಾ ಫೋನ್‌ನಲ್ಲಿ ಹಾಕಿಕೊಳ್ಳಬಹುದು. ಅಮೆರಿಕದಲ್ಲಿ ಇದನ್ನು ಕೋಡ್ ಬ್ಯಾಕ್‌ ಸೆಟ್‌ನಲ್ಲಿ ಅಳವಡಿಸಬೇಕಾಗುತ್ತದೆ. ಅಮೆರಿಕ ಹೊರತುಪಡಿಸಿ ಬೇರೆಲ್ಲಾ ದೇಶಗಳಲ್ಲೂ ಇನ್‌ ಕಮಿಂಗ್‌ ಉಚಿತ.

ಪ್ರವಾಸದಲ್ಲಿ ಇದು ಎಲ್ಲಕ್ಕೂ ಉತ್ತಮ ಕಾರ್ಡ್‌ ಆಗಿದೆ.

ಯಾವುದೊ ಕಾರಣದಿಂದ ನಿಮ್ಮ ಕಾರ್ಡ್‌ ಕಳೆದುಹೋದರೆ ತಕ್ಷಣವೇ ಮ್ಯಾಟ್ರಿಕ್ಸ್ ಕಂಪನಿಗೆ ಫೋನ್‌ ಮಾಡಿ ತಿಳಿಸಿ. ಏಕೆಂದರೆ ಬೇರಾರೂ ಇದರ ಉಪಯೋಗ ಮಾಡಿಕೊಳ್ಳಬಾರದು. ಇದಕ್ಕಾಗಿ 750 ರೂ. ಶುಲ್ಕ ವಿಧಿಸಲಾಗುತ್ತದೆ. ಇತ್ತೀಚೆಗೆ ಭಾರತದಲ್ಲಿ ಇದರ ಬಳಕೆ ಹೆಚ್ಚುತ್ತ ಹೊರಟಿದೆ. ಏಕೆಂದರೆ ಬೇರೆಲ್ಲ ಸಿಮ್ ಕಾರ್ಡ್‌ಗಳು ಇದಕ್ಕಿಂತ ದುಬಾರಿಯಾಗಿವೆ.

– ಎಂ. ಸುಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ