R M K V  ರೇಷ್ಮೆ ನೇಯ್ಗೆ ಕ್ಷೇತ್ರದಲ್ಲಿ ತನ್ನ ನಾವೀನ್ಯತೆಗೆ ಹೆಸರುವಾಸಿಯಾಗಿದೆ. ಗ್ರಾಹಕರ ಅಗತ್ಯಗಳ ಪೂರೈಕೆ ಮಾಡುವುದೇ ಧ್ಯೇಯವಾಗಿಟ್ಟುಕೊಂಡು ಹಲವಾರು ತಾಂತ್ರಿಕ ಪ್ರಗತಿಗಳಿಗೆ ಪ್ರಸಿದ್ಧವಾಗಿದೆ. ಅದರಲ್ಲಿ 50,000 ಬಣ್ಣಗಳ ಸೀರೆ, ರಿವರ್ಸಬೆಲ್ ಸಿಲ್ಕ್ ಸೀರೆ, ಹಂಸ ದಮಯಂತಿ ಸೀರೆ ಮುಂತಾದವುಗಳು ತುಂಬ ಪ್ರಖ್ಯಾತವಾಗಿವೆ.

ಹಲವಾರು ನೈಸರ್ಗಿಕ ವಸ್ತುಗಳ ಬಣ್ಣಗಳಿಂದ, ವಸ್ತ್ರಗಳಿಗೆ ಬಣ್ಣ ಹಾಕುವುದು (ಡೈಯಿಂಗ್‌) ನಮ್ಮ ಸಂಪ್ರದಾಯದ ಅಭಿನ್ನ ಅಂಶವಾಗಿದ್ದು, ಹಲವಾರು ವರ್ಷಗಳಿಂದ ಈ ವಿಧಾನ ಮರೆತೇಹೋಯಿತು. R M K V  `ನ್ಯಾಚುರಲ್ಸ್' ಎಂಬ ರೇಷ್ಮೆ ವಸ್ತ್ರಗಳ ಸರಣಿಯ ಮೂಲಕ, ವಿಸ್ತೃತ ಸಂಶೋಧನೆ ಮತ್ತು ಪರಿಶ್ರಮದ ಪ್ರಯೋಗವನ್ನು ನಡೆಸಿ, ಈ ಅತ್ಯುತ್ತಮ ಸಂಪ್ರದಾಯವನ್ನು ಪುನಃ ಜೀವಿತಗೊಳಿಸಿತು. ನೈಸರ್ಗಿಕ ಮೂಲ ಪದಾರ್ಥಗಳು, ಉದಾಹರಣೆಗೆ ಅರಿಶಿನ, ದಾಳಿಂಬೆ ಬೀಜ, ಮಂಜಿಷ್ಟ ಗಿಡದ ಬೇರು, ಇಂಡಿಗೋ (ನೀಲಿ ಬಣ್ಣ ನೀಡುವ ಗಿಡ) ಇತ್ಯಾದಿಗಳಿಂದ ಬಣ್ಣವನ್ನು ಹೊರತೆಗೆದು, ಅದನ್ನು ನೂಲಿನಲ್ಲಿ ಅಥವಾ ಬಟ್ಟೆಗಳ ಮೇಲೆ ಲೇಪನ ಮಾಡುವ ಕ್ರಿಯೆಗೆ `ನ್ಯಾಚುರಲ್ ಡೈಯಿಂಗ್‌' ಎನ್ನುತ್ತಾರೆ.

ಹೀಗೆ ಮಾಡುವುದರಿಂದ ಹೆಚ್ಚು ಸಮಯವಾದರೂ ಕೂಡ, ಪರಿಸರದಲ್ಲಿ ಯಾವುದೇ ಹಾನಿಕಾರಕ ಉಪ ಉತ್ಪನ್ನಗಳನ್ನು ಹೊರಬಿಡುವುದಿಲ್ಲ ಮತ್ತು ಪರಿಸರಕ್ಕೆ ಒಂದಿಷ್ಟೂ ಹಾನಿ ಮಾಡುವುದಿಲ್ಲ. ಈ ವಿಷಯವನ್ನು ಮುಂದುವರಿಸಲು ಲ್ಜಖ, ಮೈಸೂರಿನಲ್ಲಿರುವ `ಸೆರಿಕಲ್ಚರ್‌ ರಿಸರ್ಚ್‌ ಅಂಡ್‌ ಟ್ರೇನಿಂಗ್‌,' ಸೆಂಟ್ರಲ್ ಸಿಲ್ಕ್ ಬೋರ್ಡ್‌, ರವರ ಜೊತೆಗೆ ಸಹಯೋಗದೊಂದಿಗೆ ನ್ಯಾಚುರಲ್ ಡೈಯಿಂಗ್‌ ಕ್ರಿಯೆಯನ್ನು ಮುಂದುವರಿಸುವ ಬಗ್ಗೆ ಇನ್ನೂ ಹೆಚ್ಚು ಅನ್ವೇಷಣೆ ನಡೆಸಿ, ಅಭಿವೃದ್ಧಿಗೊಳಿಸುತ್ತಿದೆ.

ರೇಷ್ಮೆಗೆ ಬಣ್ಣ ಸೇರಿಸುವ ಒಂದು ಅನನ್ಯ ಪ್ರಕ್ರಿಯೆಯನ್ನು R M K V , ಮೈಸೂರಿನಲ್ಲಿರುವ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ರೇಷ್ಮೆ ಹುಳುಗಳ ನೈಸರ್ಗಿಕ ಜೈವಿಕ ಕ್ರಿಯೆಗಳಿಂದ ಪ್ರಯೋಜನ ಪಡೆದು ಬಣ್ಣದ ರೇಷ್ಮೆ /ನೂಲನ್ನು ಈ ಸಿಲ್ಕ್ ವರ್ಮ್ ಗಳು ತಯಾರಿಸುವಂತೆ, ಪ್ರೇರೇಪಿಸುವುದು. ಬಣ್ಣ ಹಾಕಿರುವ ಎಲೆಗಳನ್ನು ರೇಷ್ಮೆ ಹುಳುಗಳಿಗೆ ಆಹಾರವಾಗಿ ಕೊಟ್ಟು ಒಮ್ಮೆ ಸೇವಿಸಿದಾಗ, ಈ ವರ್ಣ ದ್ರವ ಹುಳುಗಳ ಗ್ರಂಥಿಗಳನ್ನು (ಸಿಲ್ಕ್ ಗ್ಲಾಂಡ್‌) ಪ್ರವೇಶಿಸಿ, ರೇಷ್ಮೆಯ ಎಳೆಗಳನ್ನು ತಯಾರಿಸುತ್ತದೆ. ಈ ರೀತಿ, ರೇಷ್ಮೆಯನ್ನು ತಯಾರಿಸುವುದರಿಂದ, ಅದಕ್ಕೆ ಇನ್ನೂ ಹೆಚ್ಚು ಡೈಯಿಂಗ್‌ (ಬಣ್ಣ ಸೇರಿಸುವ ಕ್ರಿಯೆ)ನ ಅವಶ್ಯಕತೆ ಇಲ್ಲದೆ, ಹಲವಾರು ಪ್ರಕ್ರಿಯೆಗಳಿಗೆ ಒಳಗಾದರೂ, ಅದರಲ್ಲಿರುವ ಬಣ್ಣ ಹೋಗದೇ, ಅದು ನೇರ ನೇಯ್ಗೆಗೆ ಸಿದ್ಧವಾಗದು. ಈ ಕಾರ್ಯ ವಿಧಾನದಿಂದ ಯಾವುದೇ ಹಾನಿಕಾರಕ ತ್ಯಾಜ್ಯ ಉತ್ಪನ್ನಗಳು ಹೊರ ಬರುವುದಿಲ್ಲ. ಆದ್ದರಿಂದಲೇ ಇದನ್ನು ಪರಿಸರ ಸ್ನೇಹಿಯಾಗಿ ಪರಿಗಣಿಸಲಾಗುವುದು.

ಈ ತಂತ್ರಜ್ಞಾನವನ್ನು ವ್ಯಾವಹಾರಿಕ, ವಾಣಿಜ್ಯಕವಾಗಿ ಸಾಧ್ಯಗೊಳಿಸುವುದಕ್ಕೆ, R M K V, ಮೈಸೂರಿನಲ್ಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಜೊತೆಗೆ ಸಹಯೋಗ ಹೊಂದಿದೆ. R M K V , ತಮಿಳುನಾಡಿನ ಈರೋಡ್‌, ಗೋಪಿಚೆಟ್ಟಿಪಾಳ್ಯಂ ಮುಂತಾದ ಪ್ರದೇಶಗಳಲ್ಲಿ ರೇಷ್ಮೆ ಹುಳುಗಳ ಪಾಲನೆ ಮಾಡುವ ಕೃಷಿ ವಲಯ ದರವನ್ನು ಆಯ್ಕೆ ಮಾಡಿ, ಈ ಪ್ರಕ್ರಿಯೆಯನ್ನು ಅವಲಂಬಿಸಿ, ಹಲವಾರು ರಂಗು ರಂಗಿನ ಡೈಸ್‌ಗಳನ್ನು ಪ್ರಯೋಗಿಸಿ, ಸಂಶೋಧನೆಗಳನ್ನು ನಡೆಸಿ, ಈ ಪ್ರಕ್ರಿಯೆಗಳನ್ನು ಅವಲಂಬಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ