ಜೂಲಿಯಾ ಮಹಾನ್ಸೀತಾ ಮಹಾನ್

ಚೆನ್ನೈ ಮೂಲದ ಫ್ಯಾಷನ್‌ಡಿಸೈನರ್‌ಗಳಾದ ಸೀತಾ ಮಹಾನ್‌ಹಾಗೂ ಜೂಲಿಯಾ ಮಹಾನ್‌ಈಚೆಗೆ ತಮ್ಮ ಮಿಡ್‌ನೈಟ್‌ಕಲೆಕ್ಷನ್ಸ್ ಲಾಂಚ್‌ಮಾಡಿದ್ದಾರೆ. ಇದರಲ್ಲಿ ಪಾರ್ಟಿ ಹಾಗೂ ಕ್ಲಬ್‌ನಲ್ಲಿ ಧರಿಸಲಾಗುವ ಈವ್ನಿಂಗ್‌ ವೇರ್‌ ಡ್ರೆಸೆಸ್‌ ಪ್ರಸ್ತುತ ಪಡಿಸಿದ್ದಾರೆ.

ಜೂಲಿ ಹಾಗೂ ಸೀತಾ ಅವರೊಂದಿಗೆ ನಡೆಸಿದ ಮಾತುಕಥೆಯ ಸಂಕ್ಷಿಪ್ತ ವಿವರ :

ಮಗಳಿಗಾಗಿ ಬಟ್ಟೆಗಳನ್ನು ಆಯ್ಕೆ ಮಾಡುತ್ತಿದ್ದಲ್ಲಿ, ಅವಳ ಕಾಂಪ್ಲೆಕ್ಷನ್‌ಗೆ ಹೊಂದುವಂತಹ ಬಟ್ಟೆಗಳನ್ನೇ ಆಯ್ದುಕೊಳ್ಳಿ.

ಕಾಲರ್‌ ಹಾಗೂ ಹೈನೆಕ್‌ ಇರುವ ಡ್ರೆಸೆಸ್‌ ಹೆಚ್ಚು ಸ್ಮಾರ್ಟ್‌ ಎನಿಸುತ್ತವೆ.

ಡ್ರೆಸ್‌ನ ಜೊತೆಗೆ ಒಂದು ಸುಂದರ ಸ್ಕಾರ್ಫ್‌ ಅಥವಾ ಸ್ಟೋಲ್ ತೆಗೆದುಕೊಳ್ಳಿ.

ಹೈವೆಯರ್ಸ್ ಪ್ಯಾಂಟ್‌ ಮತ್ತು ಉದ್ದನೆಯ ಶರ್ಟ್‌ ಹೆಚ್ಚು ಸುಂದರವಾಗಿ ಕಂಡುಬರುತ್ತದೆ.

ಬಹಳಷ್ಟು ಆ್ಯಕ್ಸೆಸರೀಸ್‌ ಉಪಯೋಗಿಸಲು ಹೋಗಬೇಡಿ.

ಮನೆಯಿಂದ ಹೊರಗೆ ಹೋಗುವ ನೀವು ಧರಿಸುವ ಡ್ರೆಸ್‌ ಮೊದಲು ನಿಮಗೆ ಹೆಚ್ಚು ಹಿಡಿಸಬೇಕು.

ಕಡಿಮೆ ಹೀಲ್ಸ್ ನ ಸ್ಯಾಂಡಲ್ಸ್ ಹೆಚ್ಚು ಚೆನ್ನಾಗಿ ಕಾಣುತ್ತವೆ.

ಸಂಜೆಯ ಪಾರ್ಟಿಗೆ ಹೆಚ್ಚು ಗಾಢವಾಗಿರುವ ಬಣ್ಣ ಆಯ್ಕೆ ಮಾಡಿಕೊಳ್ಳಿ.

ಪಾರ್ಟಿಗಾಗಿ ಕ್ಲಚ್‌ ಬ್ಯಾಗ್‌ ಹೆಚ್ಚು ಉಪಯುಕ್ತ ಎನಿಸುತ್ತದೆ.

ಪಾರ್ಟಿಯಲ್ಲಿ ಕಿವಿಗಾಗಿ ಸುಂದರ ಬಾಲಿ ಸೆಟ್‌ ಅಥವಾ ಕೊರಳಿನ ಹಾರ ಆಯ್ದುಕೊಳ್ಳಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ