ಕಮ್ಯೂನಿಕೇಷನ್‌ ಡೀಲ್ ಪ್ರೋಗ್ರಾಮ್ ನವೆಂಬರ್‌ 2000ದಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಘಟಕವನ್ನು ಡಾ. ಪ್ರತಿಭಾ ಕಾರಂತ್‌ ಆರಂಭಿಸಿದ್ದು, ಈಗಾಗಲೇ ಇದು ಭಾರತದ 7 ನಗರಗಳಲ್ಲಿ 9 ಘಟಕಗಳಿಗೆ ವಿಸ್ತರಿಸಿದೆ.

ಮುಂದಿನ 2-3 ವರ್ಷಗಳಲ್ಲಿ ಸರ್‌ ರತನ್‌ ಟಾಟಾ ಟ್ರಸ್ಟ್ ಸಹಕಾರದಿಂದ ಯೂನಿಟ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.

ಕಳೆದ ಕೆಲವು ದಶಕಗಳಿಂದ ಡಯಾಗ್ನೋಸ್‌ ಮಾಡಿದ ಮತ್ತು ಅದಕ್ಕೆ ಸಂಬಂಧಿಸಿದ ಇತರ ವೃದ್ಧಿಸುವ ರೋಗಗಳಿಂದ ಪೀಡಿತರಾಗಿರುವ ಮಕ್ಕಳ ಸಂಖ್ಯೆ ಗಾಬರಿಗೊಳಿಸುವಷ್ಟು ಹೆಚ್ಚಾಗಿದೆ. ಬಹುಶಃ ಅದು ಬಹಳಷ್ಟು ಕಾರಣಗಳಿಂದಾದ ರೋಗವಾಗಿರುವುದರಿಂದ ಯಾರೂ ಸಹಾಯವನ್ನು ಅಪೇಕ್ಷಿಸುವುದಿಲ್ಲ. ಆದರೆ ರೋಗಕ್ಕೆ ಪ್ರತಿ ಮಗುವಿನಲ್ಲಿನ ಭಿನ್ನ ಪ್ರತಿಕ್ರಿಯೆಗಳಿಗೆ ಮಲ್ಟಿ ಡಿಸಿಪ್ಲಿನರಿ ಚಿಕಿತ್ಸಕರು ಚಿಕಿತ್ಸೆ ಒದಗಿಸುತ್ತಾರೆ. ಅಂತಹ ಮಕ್ಕಳಿಗೆ ಮೊದಲೇ ಸ್ಪಂದಿಸುವುದು ದೀರ್ಘಾವಧಿಯ ಪರಿಣಾಮ ಬೀರಲು ಅತ್ಯಂತ ಆಶಾದಾಯಕ ಮಾರ್ಗವಾಗಿದೆ. ಭಾರತದಲ್ಲಿ ಅಂತಹ ಸೇವೆಗಳ ಕೊರತೆಯಿರುವುದರಿಂದ ಈ ಸಂಸ್ಥೆ ಅದರ ಮೇಲೆ ಕೇಂದ್ರೀಕರಿಸಿತು.

ಕಾಮ್ ಡೀಲ್ ಕಾರ್ಯಕ್ರಮಗಳು

ಡಯಾಗ್ನೋಸ್‌ ಆಗಿರುವ ಮಕ್ಕಳಿಗೆ ಸಂಪರ್ಕ, ಮೋಟಾರ್‌, ಅರಿವು, ವರ್ತನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಮೊದಲೇ ಸ್ಪಂಧಿಸುತ್ತವೆ. ಪರಸ್ಪರರ ಉತ್ತಮ ವರ್ತನೆಗಳನ್ನು ಸದೃಢಗೊಳಿಸಲು ಮೇಲಿನ ಕೌಶಲ್ಯಗಳನ್ನು ಪ್ರತಿ ವ್ಯಕ್ತಿಗೆ, ಸಣ್ಣ ಹಾಗೂ ದೊಡ್ಡ ಗುಂಪುಗಳಿಗೆ ಈ ತಂಡ ಕಲಿಸುತ್ತದೆ.

fun-fete-2

ಕಾರ್ಯಕ್ರಮದ ಮುಖ್ಯ ಉದ್ದೇಶ, ಈ ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ರೆಗ್ಯುಲರ್‌ ಶಾಲೆಗಳಲ್ಲಿ ಮುಖ್ಯವಾಹಿನಿಗೆ ತರುವುದಾಗಿದೆ.

ವಿಶೇಷ ಕೊರತೆಗಳಿರುವ ಮಕ್ಕಳ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕಾದ ಕಾಲ ಬಂದಿದೆ. ವಿಶೇಷವಾಗಿ ಆಟಿಸಂ ಇರುವ ಮಕ್ಕಳು, ಅವರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ವಿಶೇಷ ಅಗತ್ಯಗಳಿಂದ ವಂಚಿತರಾಗುತ್ತಾರೆ.

ಅವರನ್ನು ಒಪ್ಪಿಕೊಂಡು, ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿ ಅಂತಹ ಮಕ್ಕಳ ಸಾಮರ್ಥ್ಯ ಮತ್ತು ಅಸ್ತಿತ್ವದ ಬಗ್ಗೆ ದೊಡ್ಡ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ದಿ ಕಾಮ್ ಡೀಲ್ ‌ಟ್ರಸ್ಟ್ ಮತ್ತು ಅದರ ಪೇರೆಂಟ್ಸ್ ಅಸೋಸಿಯೇಷನ್‌ ಬೆಂಗಳೂರಿನ ತಮ್ಮ ಪ್ರಧಾನ ಕಛೇರಿಯಾದ ರನ್ ವೇ ಔಟ್‌ ಆವರಣದಲ್ಲಿ ಇತ್ತೀಚೆಗೆ ವಿಶ್ವ ಆಟಿಸಂ ಜಾಗೃತಿ  ದಿನವನ್ನು ಆಚರಿಸಲು `ಫನ್‌ ಫೀಟ್‌ 2014′ ಕಾರ್ನಿವಾಲ್‌ನ್ನು ಆಯೋಜಿಸಿತ್ತು. ಅದು ಆಟಿಸಂ ಮಕ್ಕಳು, ಕುಟುಂಬ ಮತ್ತು ಸ್ನೇಹಿತರಿಗೆ ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯಾಗಿತ್ತು. ಅದನ್ನು  ಶಿಕ್ಷಣ ಮತ್ತು ಕ್ರೀಡಾ ಸಮಿತಿಯ ಚೇರ್‌ಮನ್‌ ಆದ ಕೋದಂಡರೆಡ್ಡಿ ಉದ್ಘಾಟಿಸಿದರು. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಆಟಿಸಂ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿತ್ತು.

ಹಿನ್ನೆಲೆ ಗಾಯಕಿ ಹಾಗೂ ಸಿನಿಮಾ ನಟಿ ವಸುಂಧರಾ ದಾಸ್‌ ಈ ಮಿನಿ ಕಾರ್ನಿವಾಲ್‌ನ ಮುಖ್ಯ ಆಕರ್ಷಣೆಯಾಗಿದ್ದು ಹಲವು ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಈ ಕಾರ್ನಿವಾಲ್‌ಗೆ ಸುಮಾರು 250 ಮಕ್ಕಳು ತಮ್ಮ ಪಾಲಕರೊಂದಿಗೆ ಬಂದು ಭಾಗವಹಿಸಿದ್ದರು. ವಿವಿಧ ಮನರಂಜನಾ ಕಾರ್ಯಕ್ರಮ, ಕುಂಬಾರಿಕೆ ಕಲೆ, ಆ ಮಣ್ಣಿನ ಮಡಕೆ ಕುಡಿಕೆಗಳ ಮೇಲೆ ಪೇಂಟಿಂಗ್‌, ಸಣ್ಣ ಹಾಸ್ಯ ನಾಟಕಗಳು, ಹೂವಾ ಹೂಪ್ಸ್, ಡಿಸ್ಕ್ ಥ್ರೋ ಆಟ, ರಸಪ್ರಶ್ನೆ, ಲಾಭ ಬಯಸದ ಸಂಸ್ಥೆಗಳಾದ ನಮ್ಮಂಗಡಿ, ಟ್ರಸ್ಟ್ ಹಾಗೂ ಗ್ರಾಮೀಣ ಮಹಿಳೆಯರ ಬೆಳಕು ಟ್ರಸ್ಟ್ ಮುಂತಾದ ಹಲವು ವಿಭಿನ್ನ ಸ್ಟಾಲ್ಸ್ ಏರ್ಪಡಿಸಿದ್ದವು.

ಪ್ರತಿಯೊಬ್ಬರಿಗೂ ಆಟಿಸಂನ ಬುಕ್‌ ಮಾರ್ಕ್‌ ಕೊಡಲಾಯಿತು. ಆಟಿಸಂ ಸಂಕೇತವಾಗಿ ಬಹಳಷ್ಟು ಮಂದಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ದಿ ಕಾಮ್ ಡೀಲ್ ‌ಟ್ರಸ್ಟ್ ಪ್ರಧಾನ ಕಛೇರಿ, ನಂ.24, 6ನೇ `ಎ’ ಮೇನ್‌, 2ನೇ ಬ್ಲಾಕ್‌, ಲೇಔಟ್‌, ಬೆಂಗಳೂರು-560 043. ಫೋನ್ ನಂ. 080 25800826/7/8

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ