ಈ ಶಸ್ತ್ರಚಿಕಿತ್ಸಾ ಕ್ರಮದಲ್ಲಿ ಎದೆಯವರೆಗೂ ಕ್ಷಾಸ್ಥಿ ಅಥವಾ ಎದೆಯ ಎಲುಬಿನ ಮೂಲಕ ದೊಡ್ಡ ಗಾತ್ರದ ಛೇದನವನ್ನು ಮಾಡಿ ಹೃದಯದ ರಕ್ತನಾಳಗಳಲ್ಲಿ ಉಂಟಾಗಿರುವ ತಡೆಗಳನ್ನು ಪತ್ತೆಹಚ್ಚಿ ತೆರವುಗೊಳಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ಪರಿಸ್ಥಿತಿಯನ್ನು ಚಿಕಿತ್ಸೆಗೊಳಪಡಿಸುವಲ್ಲಿ ಅತ್ಯುಚ್ಟ ಮಟ್ಟದ ಪ್ರಕ್ರಿಯೆ ಎಂದು ಪರಿಗಣಿಸಲ್ಪಟ್ಟಿದ್ದರೂ ಎದೆಯ ಗೂಡಿನ ಮೇಲೆ ಛೇದನವನ್ನು ಮಾಡಬೇಕಾಗಿ ಬರುವುದರಿಂದ ಗಣನೀಯ ಪ್ರಮಾಣದ ಅಸೌಖ್ಯಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯದಲ್ಲಿ ಕಂಡುಬರುವ ತಡೆಗಳ ಚಿಕಿತ್ಸೆಗಾಗಿ `ಕನಿಷ್ಠ ಗಾಯದ ಬೈಪಾಸ್ ಶಸ್ತ್ರಚಿಕಿತ್ಸೆ’ಯ ಆಯ್ಕೆಯನ್ನು ನೀಡುವ ಪರಿಪಾಠ ಕಂಡುಬರುತ್ತಿದೆ. ಲೆಫ್ಟ್ ಅ್ಯಂಟೀರಿಯರ್‌ಡಿಸೆಂಡಿಂಗ್ ಆರ್ಟರಿ ಎಂದು ಕರೆಯಲ್ಪಡುವ ಹೃದಯದ ಮುಂಭಾಗದ ಮೇಲ್ಮೈ ಮೇಲಿರುವ ಪರಿಧಮನಿಯಲ್ಲಿನ ತಡೆಗಳನ್ನು ನಿವಾರಿಸಲು ಇದು ಅತ್ಯುತ್ತಮ ವಿಧಾನವಾಗಿದೆ. ಆದಾಗ್ಯೂ, ಹಿಮ್ಮುಖ ಮೇಲ್ಮೈಯಲ್ಲಿರುವ ಹಾಗೂ ಕೆಳಮೇಲ್ಮೈಯಲ್ಲಿರುವ ಪರಿಧಮನಿಗಳಲ್ಲಿ ಕೈಗೊಳ್ಳಲಾಗುವ ತೆರೆದ ಬೈಪಾಸ್ ಶಸ್ತ್ರಚಿಕಿತ್ಸಾ ಕ್ರಮದಷ್ಟು ಉತ್ತಮವಾದ ಪರಿಣಾಮ ಕನಿಷ್ಠ ಗಾಯದ ಶಸ್ತ್ರಚಿಕಿತ್ಸಾ ನಡೆಯಲ್ಲಿ ಕಂಡುಬರಲಾರದು. ಆದ್ದರಿಂದ ವಿಶೇಷವಾಗಿ, ಭಾರತದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳ ಕುರಿತಾಗಿ ಅನುಭವ ಮತ್ತು ಮೂಲಭೂತ ಸೌಕರ್ಯಗಳ ಅಗತ್ಯ ಇನ್ನೂ ಹೆಚ್ಚಾಗಿ ಬೇಕಾಗಿರುವ ಸಂದರ್ಭದಲ್ಲಿ ಬಹುವಿಧ ರಕ್ತನಾಳ ತಡೆಗಳಿಂದ ಕೂಡಿದ ಉಪಶಮನ ಪ್ರಕ್ರಿಯೆಯಲ್ಲಿ ಕನಿಷ್ಠ ಗಾಯದ ಚಿಕಿತ್ಸೆಯ ಫಲಪ್ರದವಾಗುವಿಕೆ ಮತ್ತು ದೀರ್ಘಕಾಲೀನತೆಯ ಕುರಿತಾಗಿ ಇನ್ನೂ ಸಂಪೂರ್ಣವಾಗಿ ಅರಿತುಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ.
ಆದಾಗ್ಯೂ, ಜಾಗತಿಕವಾಗಿ ಈಗ ಹೆಚ್ಚಾಗಿ ಚಾಲನೆಯಲ್ಲಿರುವ ನವೀನ ಮಾದರಿಯ ಮತ್ತು ಪರಿವರ್ತನಕಾರಕ ಚಿಕಿತ್ಸಾ ನಡೆಯುವ ಹೈಬ್ರಿಡ್ ತಂತ್ರಗಳನ್ನು ಒಳಗೊಳ್ಳುತ್ತಲಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ವಿಜ್ಞಾನ ವಿಭಾಗಗಳ ಅಧ್ಯಕ್ಷ ಡಾ. ವಿವೇಕ್ ಜವಳಿ ಅವರು ಇತ್ತೀಚೆಗೆ ಡಾ. ಇಂಗ್ ಜೆ ಎಂಬವರು 62 ವರ್ಷದ ವ್ಯಾಪಾರಿಯೋರ್ವರಿಗೆ ಕನಿಷ್ಠ ಗಾಯದ ಹೈಬ್ರಿಡ್ ಕೊರೊನರಿ ರೀವ್ಯಾಸ್ಕುಲರೈಸೇಶನ್ ಎಂಬ ಹೈಬ್ರಿಡ್ ಶಸ್ತ್ರಚಿಕಿತ್ಸೆಯನ್ನು ಮಾಡಿ, ಅವರು ಶೀಘ್ರವಾಗಿ ತಮ್ಮನ್ನು ಕಾಡುತ್ತಿದ್ದ ತೊಂದರೆಗಳಿಂದ ಉಪಶಮನ ಹೊಂದಲು ಸಹಾಯ ಮಾಡಿದ್ದಾರೆ.
ಯಾವಾಗಲೂ ಕಾರ್ಯ ನಿಮಿತ್ತ ಪ್ರವಾಸಗಳಲ್ಲಿ ನಿರತರಾಗಿರುತ್ತಿದ್ದ ಈ ವ್ಯಾಪಾರಿ ಒಂದು ದಿನ ತಮ್ಮ ನಿಯಮಿತ ತಪಾಸಣೆಗಾಗಿ ವೈದ್ಯರಲ್ಲಿ ತೆರಳಿದಾಗ ಹೃದಯದ ಒಂದು ಅಪಧಮನಿಯಲ್ಲಿ ತಡೆಯಿರುವುದು ಪತ್ತೆಯಾಗಿ ಆಶ್ಚರ್ಯಚಕಿತರಾಗಿದ್ದರು. ದೀರ್ಘ ಪರೀಕ್ಷೆಗಳ ನಂತರದಲ್ಲಿ, ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳದಲ್ಲಿ ಬಹುವಿಧ ತಡೆಗಳಿದ್ದುದು ಪತ್ತೆಯಾಗಿತ್ತು. ಕಳೆದ 30 ವರ್ಷಗಳಿಂದಲೂ ತಮ್ಮ ಕುಟುಂಬ ವೈದ್ಯರಾಗಿರುವ ಡಾ. ಎಂ.ಆರ್. ಕೃಷ್ಣಮೂರ್ತಿ ಅವರ ಸಲಹೆಯ ಮೇರೆಗೆ ಅವರು ಫೋರ್ಟಿಸ್ ಆಸ್ಪತ್ರೆಯ ತಜ್ಞವೈದ್ಯ ಡಾ. ಜವಳಿ ಅವರನ್ನು ಭೇಟಿ ಮಾಡಿದರು.
`ಸಾಧಾರಣವಾಗಿ, ಕೊರೊನರಿ ಆರ್ಟರಿ ರೋಗಗಳಲ್ಲಿ, ರೋಗಿಯ ಹೃದಯದ ಮುಂಭಾಗದಲ್ಲಿರುವ ಅಪಧಮನಿಯಲ್ಲಿ ತಡೆಗಳಿರುವ ಸಂದರ್ಭಗಳಲ್ಲಿ ಬೈಪಾಸ್ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಸಾಮಾನ್ಯ ಪದ್ಧತಿ. ಏಕೆಂದರೆ, ಎದೆಯ ಎಲುಬಿನ ಹಿಂಭಾಗದಲ್ಲಿರುವ ಇನ್ನೊಂದು ಅಪಧಮನಿಯನ್ನು ಉಪಯೋಗಿಸಿಕೊಂಡು ಕಸಿ ಮಾಡಬಹುದು. ಎರಡು ಅಪಧಮನಿಗಳಿಗೆ ಮಾಡಲಾಗುವ ಕಸಿಯ ಪರಿಣಾಮ ಅತ್ಯಂತ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಇದಕ್ಕೆ ಸರಿಸಾಟಿಯಾದುದು ಇನ್ನೊಂದಿಲ್ಲ. ಇನ್ನಿತರ ತಡೆಗಳನ್ನು ಸ್ಟೆಂಟುಗಳನ್ನು ಉಪಯೋಗಿಸಿ ಪರಿಣಾಮಕಾರಿಯಾಗಿ ಚಿಕಿತ್ಸೆಗೊಳಪಡಿಸಬಹುದು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರಕ್ತನಾಳಗಳಲ್ಲಿ ಬಹುವಿಧ ತಡೆಗಳನ್ನು ಹೊಂದಿರುವ ರೋಗಿಗಳ ಧಮನಿಗೆ ಕನಿಷ್ಠ ಗಾಯದ ಫಾಸ್ಟ್ ಟ್ರ್ಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಇನ್ನುಳಿದ ತಡೆಗಳ ತೆರವಿಗೆ ಸ್ಟೆಂಟುಗಳನ್ನು ಉಪಯೋಗಿಸಿ ಹೈಬ್ರಿಡ್ ಚಿಕಿತ್ಸೆ ನೀಡುವುದು ತುಂಬ ಸುಲಭವಾದ, ಕಡಿಮೆ ಘಾಸಿಯಿಂದ ಕೂಡಿದ ಹಾಗೂ ಅತಿ ಶೀಘ್ರವಾಗಿ ಗುಣಮುಖರಾಗುವ ಚಿಕಿತ್ಸಾ ಯೋಜನೆಯಾಗಿದೆ,’ ಎಂದು ಡಾ. ಇಂಗ್ ಜೆ. ಅವರಿಗೆ ಹೈಬ್ರಿಡ್ ಶಸ್ತ್ರಚಿಕಿತ್ಸೆಯನ್ನು ಮಾಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ವಿಜ್ಞಾನ ವಿಭಾಗಗಳ ಅಧ್ಯಕ್ಷ ಡಾ. ವಿವೇಕ್ ಜವಳಿ ಹೇಳುತ್ತಾರೆ.
ಇದೇ ಪ್ರಕ್ರಿಯೆಯಲ್ಲಿ ಸ್ಟೆಂಟಿಂಗ್ ವಿಧಾನವನ್ನು ನೆರವೇರಿಸಿದ ಫೋರ್ಟಿಸ್ ಆಸ್ಪತ್ರೆಯ ಇನ್ನೋರ್ ಹೃದಯತಜ್ಞ ಡಾ. ವೆಂಕಟೇಶ್ ಹೇಳುವ ಪ್ರಕಾರ, `ಒಂದೊಮ್ಮೆ ಪಾರಂಪರಿಕ ರೀತಿಯಲ್ಲಿ ಎದೆಯ ಮೇಲೆ ವಿಸ್ತಾರವಾದ ಛೇದನವನ್ನು ಮಾಡಿ, ಎದೆಯ ಎಲುಬನ್ನು ತುಂಡರಿಸಿ ಶಸ್ತ್ರಚಿಕಿತ್ಸೆಯನ್ನು ಮಾಡದ್ದಿದ್ದರೆ, ರಕ್ತ ಹಾನಿಯ ಜೊತೆಗೆ ಹೆಚ್ಚಿನ ಸಂಕೀರ್ಣತೆಗಳ ಅಪಾಯ ಮತ್ತು ಉಪಶಮನಕ್ಕೆ ದೀರ್ಘಕಾಲ ತೆಗೆದುಕೊಳ್ಳುವ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. ಅದಕ್ಕೂ ಮಿಗಿಲಾಗಿ, ಧಮನಿಗಳನ್ನು ಹೊರತುಪಡಿಸಿ ಇನ್ನುಳಿದ ಅಪಧಮನಿಗಳಿಗೆ, ಪ್ರಸ್ತುತದಲ್ಲಿ ಲಭ್ಯವಿರುವ ಔಷಧ ಪ್ರದ್ಧಾನ ಸ್ಟೆಂಟುಗಳು ಅತ್ಯುತ್ತಮ ಫಲಿತಾಂಶವನ್ನು ನೀಡುತ್ತವೆ ಮತ್ತು ನಿಜವಾಗಿಯೂ ಸಾಂಪ್ರದಾಯಿಕ ಕಸಿಗಳಿಗಿಂತಲೂ ಅತ್ಯುತ್ತಮವಾದ ಪರಿಣಾಮವನ್ನು ನೀಡುತ್ತವೆ.’
ಡಾ. ಜವಳಿ ಮತ್ತವರ ವೈದ್ಯಕೀಯ ತಂಡ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೃದಯವನ್ನು ತಲುಪಲು ಎದೆಯ ಎಲುಬನ್ನು ತುಂಡರಿಸದೇ, ಪಕ್ಕೆಲುಬಿನ ನಡುವೆ ಕೇವಲ ಒಂದು ಇಂಚಿನಷ್ಟು ಗಾತ್ರದ ಛೇದನವನ್ನು ಮಾಡಿ ಕನಿಷ್ಠ ಗಾಯಗಳ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಆಂತರಿಕ ಮ್ಯಾಮರಿ ಅಪಧಮನಿಯಿಂದ ಸಂಗ್ರಹಿಸಲಾದ ಅಂಗಾಂಶಗಳಿಂದ ಧಮನಿಗಳ ಪರಿಧಮನಿಗೆ ಕಸಿಯನ್ನು ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯ ನಂತರದಲ್ಲಿ, ಇದೇ ಅರವಳಿಕೆಯ ನೆರವಿನೊಂದಿಗೆ, ಹೃದಯತಜ್ಞ ಡಾ. ವೆಂಕಟೇಶ್ ಔಷಧಯುಕ್ತ ಸ್ಟೆಂಟ್‌ನ್ನು ಅಳವಡಿಸುವ ಮೂಲಕ ಇನ್ನುಳಿದ ತಡೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೈಬ್ರಿಡ್ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ, ನವೀನ ಮತ್ತು ಅತ್ಯಾಧುನಿಕ ತಂತ್ರಗಳಾದ ಕನಿಷ್ಠ ಛೇದನ, ಕ್ಯಾಥೆಟರ್ ಆಧಾರಿತ ನಡೆಗಳೊಂದಿಗೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ಸಮ್ಮಿಳಿತಗೊಳಿಸಲಾಗುತ್ತದೆ. ಸಾಂಪ್ರದಾಯಿಕ ಬೈಪಾಸ್‌ಶಸ್ತ್ರಚಿಕಿತ್ಸೆಗಳೊಂದಿಗೆ ಹೋಲಿಸಿದಾಗ, ಇಲ್ಲಿ ಎಲುಬುಗಳನ್ನು ತುಂಡರಿಸುವ ಪ್ರಮೇಯವೇ ಇಲ್ಲವಾದ್ದರಿಂದ ಈ ವಿಧಾನದಲ್ಲಿ ರಕ್ತಹಾನಿಯ ಪ್ರಮಾಣ ತುಂಬ ಕಡಿಮೆಯಾಗಿರುತ್ತದೆ. ಅಲ್ಲದೇ, ಈ ವಿಧಾನದ ಚಿಕಿತ್ಸೆಗಳಿಂದಾಗಿ ಆಸ್ಪತ್ರೆ ವಾಸದ ಅವಧಿಯೂ ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ಶೀಘ್ರವಾಗಿ ಉಪಶಮನಹೊಂದಿ ದೈನಂದಿನ ಕೆಲಸ ಕಾರ್ಯಗಳಿಗೆ ಹಿಂದಿರುಗುವುದು ಸಾಧ್ಯವಾಗುತ್ತದೆ.
`ಈ ರೀತಿಯ ಶಸ್ತ್ರಚಿಕಿತ್ಸೆಗಳು, ವಿಶೇಷವಾಗಿ ವಿಶ್ರಾಂತಿ ರಹಿತವಾಗಿ ವೃತ್ತಿ ಜೀವನ ನಡೆಸುವ ಮತ್ತು ಅವಿರತವಾಗಿ ಪ್ರವಾಸ ಕಾರ್ಯಗಳಲ್ಲಿ ತೊಡಗಿರುವ ರೋಗಿಗಳಿಗೆ ತುಂಬ ಸಹಕಾರಿಯಾಗಿವೆ. ಈ ರೋಗಿಯನ್ನು ಶಸ್ತ್ರಚಿಕಿತ್ಸೆಯ ನಂತರ 72 ಗಂಟೆಗಳೊಳಗಾಗಿ ನಾವು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಿದ್ದೇವೆ. ಕೇವಲ ಒಂದು ವಾರದ ಅವಧಿಯಲ್ಲಿ ಅವರು ತಮ್ಮ ವೃತ್ತಿಜೀವನಕ್ಕೆ ಹಿಂದಿರುಗಿದ್ದಾರೆ. ಅತ್ಯಂತ ವಯಸ್ಸಾದ ಮತ್ತು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಮತ್ತು ಬಹುವಿಧ ತಡೆಗಳನ್ನು ಹೊಂದಿದ ರೋಗಿಗಳಿಗೆ ಕೂಡ ಹೈಬ್ರಿಡ್ ಶಸ್ತ್ರಚಿಕಿತ್ಸಾ ವಿಧಾನ ಅತ್ಯಂತ ಪ್ರಯೋಜನಕಾರಿಯಾಗಿದೆ. ನಾವು ಕೈಗೊಳ್ಳುವ ಎಲ್ಲ ಹೈಬ್ರಿಡ್ ಶಸ್ತ್ರಚಿಕಿತ್ಸೆಗಳನ್ನೂ ಕೇವಲ ಕೀಹೋಲ್ ಛೇದನಗಳ ಮೂಲಕ ಮಾಡಲಾಗುತ್ತದೆ. ಆದ್ದರಿಂದ ಶೀಘ್ರ ಉಪಶಮನ ಸಾಧ್ಯವಾಗುತ್ತದೆ,’ ಎಂದು ಡಾ. ಜವಳಿ ಹೇಳಿದರು.
`ನಾನು ಊಹಿಸಿರುವ ಅವಧಿಯಲ್ಲಿ ನನ್ನ ಕಾಲ ಮೇಲೆ ನಾನು ಪುನಃ ನಿಲ್ಲುವಂತಾಗಿ ವೃತ್ತಿ ಜೀವನಕ್ಕೆ ಹಿಂದಿರುಗುವಂತೆ ಮಾಡಿದ ಈ ಶಸ್ತ್ರಚಿಕಿತ್ಸೆ ನನಗೆ ಒಂದು ವರದಾನವಾಗಿದೆ. ಕೇವಲ ಮೂರು ವಾರಗಳ ಅವಧಿಯಲ್ಲಿ ನಾನು ಭಾರತದಾಚೆಗೆ ಪ್ರವಾಸ ಮಾಡುವುದನ್ನೂ ಒಳಗೊಂಡು ನನ್ನೆಲ್ಲ ಕೆಲಸಕಾರ್ಯಗಳನ್ನು ಹಿಂದಿನಂತೆಯೇ ಉತ್ಸಾಹದಿಂದ ಕೈಗೊಳ್ಳಲು ಸಾಧ್ಯವಾಗಿದೆ.
ಡಾ. ವೆಂಕಟೇಶ್ ಅವರ ಸಲಹೆಯನ್ನು ನಂಬಿ, ಮುಂದಿನದನ್ನು ಅವರ ನಿರ್ಧಾರಕ್ಕೆ ಬಿಟ್ಟು, ಅದಕ್ಕೆ ಪೂರಕವಾಗಿ ಡಾ. ಜವಳಿ ಅವರ ನೈಪುಣ್ಯತೆಯ ಚಿಕಿತ್ಸೆಯನ್ನು ಪಡೆಯುವಂತಾಗಿದ್ದು ನನಗೆ ಅತ್ಯುತ್ತಮ ಫಲಿತಾಂಶ ನೀಡಿದೆ. ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ನಾನು ಚೈನಾ ದೇಶಕ್ಕೆ ಹೋಗಿದ್ದಾಗ 400 ಮೆಟ್ಟಿಲುಗಳುಳ್ಳ ಬೆಟ್ಟವೊಂದನ್ನು ಯಾರ ಸಹಾಯವಿಲ್ಲದೇ ನಿರಾಯಾಸವಾಗಿ ಹತ್ತಿಳಿಯುವುದು ಸಾಧ್ಯವಾಗಿದೆ. ನಾನು ಹಿಂದಿಗಿಂತಲೂ ಹೆಚ್ಚು ಆರೋಗ್ಯವಾಗಿದ್ದೇನೆ ಎಂದು ನನ್ನ ಗೆಳೆಯರು ದೃಢಪಡಿಸಿದ್ದಾರೆ,’ ಎಂದು ಡಾ. ಇಂಗ್. ಜೆ ಹೇಳುತ್ತಾರೆ.
ಹೆಚ್ಚಿನ ವಿರಗಳಿಗೆಗಾಗಿ ಸಂಪರ್ಕಿಸಿ : ಫೋರ್ಟಿಸ್ ಹಾಸ್ಪಿಟಲ್ಸ್ ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560 076 ಫೋನ್ : 9538995523