ಇಂದಿನ ವೇಗದ ಜೀವನದಲ್ಲಿ ಮಹಿಳೆಯರಿಗೆ ತಮ್ಮ ಚರ್ಮ, ಮೈಕಾಂತಿಯ ಕಡೆ ವಿಶೇಷ ಗಮನ ನೀಡುವುದು ಕಷ್ಟಕರವಾಗಿದೆ. ಆದ್ದರಿಂದ ಇವರು ನೈಸರ್ಗಿಕ ವಸ್ತುಗಳಾದ ಅರಿಶಿನ, ಚಂದನ, ಕೇಸರಿ, ಹಾಲಿನಕೆನೆ, ಲೋಳೆಸರ (ಆ್ಯಲೋವೇರಾ), ಬಾದಾಮಿ, ವೈಟ್‌ ಲಿಲಿ, ಗುಲಾಬಿ ಜಲ ಮುಂತಾದವು ತುಂಬಿರುವಂಥ ಉತ್ಪನ್ನಗಳನ್ನೇ ಹುಡುಕುತ್ತಾರೆ. ಏಕೆಂದರೆ ಈ ಅಂಶಗಳು ತ್ವಚೆಗೆ ಅಮೂಲ್ಯ ಪೋಷಣೆ ನೀಡಿ, ಅವರ ಸೌಂದರ್ಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಬನ್ನಿ, ಅವುಗಳ ವೈಶಿಷ್ಟ್ಯ ಅರಿಯೋಣ.

ಅರಿಶಿನ : ಇದು ಅತಿ ಅಗ್ಗದ ಹಾಗೂ ಅತ್ಯುತ್ತಮ ಬಾಡಿ ಸ್ಕ್ರಬರ್‌. ಆ್ಯಂಟಿಸೆಪ್ಟಿಕ್‌, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್‌ಫ್ಲಮೇಟರಿ ಗುಣಗಳು ಧಾರಾಳವಾಗಿ ಅಡಗಿವೆ. ಇದರಲ್ಲಿ ಕರ್ಕ್ಯುಮಿನ್‌ ಅಂಶ ಅಡಗಿದ್ದು, ಅದು ಚರ್ಮಕ್ಕೆ ಅತಿ ಪ್ರಯೋಜನಕಾರಿ. ಇದರಿಂದ ಚರ್ಮದ ಕಾಂತಿ ಸಹಜವಾಗಿ ಹೊಮ್ಮುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ಚರ್ಮವನ್ನು ಫ್ರೀ ರಾಡಿಕ್ಸ್‌ನಿಂದ ರಕ್ಷಿಸುತ್ತದೆ.

ವೈಟ್‌ಲಿಲಿ : ಆ್ಯಂಟಿ ಪಿಗ್ಮೆಂಟೇಶನ್‌, ವೈಟ್‌ನಿಂಗ್‌ ಮತ್ತು ಬ್ಲೀಚಿಂಗ್‌ನಂಥ ಗುಣಗಳಿಂದ ಸಮೃದ್ಧವಾದ ವೈಟ್‌ಲಿಲಿಯಲ್ಲಿ ಗ್ಲೈಕಾಲಿಕ್‌ ಆಮ್ಲ ಅಡಗಿದೆ. ಇದು ಡೆಡ್‌ ಸ್ಕಿನ್‌ ಮತ್ತು ಏಜಿಂಗ್‌ ಸ್ಪಾಟ್ಸ್ ನ್ನು ತೆಳುಗೊಳಿಸುವಲ್ಲಿ ನೆರವಾಗುತ್ತದೆ. ಇದರ ಜೆಲ್ ‌ಬೇಸ್ಡ್ ಕ್ರೀಂ ಬಳಸುವುದರಿಂದ ಸೂರ್ಯನ UV ಕಿರಣಗಳು ಸಹ ಚರ್ಮಕ್ಕೆ ಹಾನಿ ಮಾಡಲಾರವು.

ಲೋಳೆಸರ : ಇದು ಪ್ರಕೃತಿಯ ಅಪ್ಪಟ ಮಾಯಿಶ್ಚರೈಸರ್‌ ಎನಿಸಿದೆ. ಇದು ನಾರ್ಮಲ್, ಡ್ರೈ, ಆಯ್ಲಿ ಎಲ್ಲಾ ಬಗೆಯ ಚರ್ಮಗಳಿಗೂ ಲಾಭದಾಯಕ. ಇದು ಚರ್ಮದ ಜೀವಕೋಶಗಳ ಪುನರುಜ್ಜೀನ (ಸೆಲ್ ‌ರಿನ್ಯೂಯ್‌ ಪ್ರೊಸೆಸ್‌)ಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಜೊತೆಗೆ ಇದರ ಹೀಲಿಂಗ್‌ ಗುಣ ಚರ್ಮವನ್ನು ಮೃದುವಾಗಿಸಿ, ಕಾಂತಿಯುತಗೊಳಿಸುತ್ತದೆ. ಇದರ ಜೆಲ್‌ನಲ್ಲಿ ಕೂಲಿಂಗ್‌ ಮತ್ತು ಆ್ಯಂಟಿ ಇನ್‌ಫ್ಲೆಮೇಟರಿ ಗುಣಗಳು ಚರ್ಮಕ್ಕೆ ಬಲು ಲಾಭದಾಯಕ. ಚರ್ಮವನ್ನು ಹೈಡ್ರೇಟ್‌ಗೊಳಿಸಲು ಇದರಲ್ಲಿನ ವಿಟಮಿನ್‌ `ಸಿ' ಮತ್ತು `ಈ' ಬಲು ಉಪಕಾರಿ.

ಚಂದನ : ಇದರಲ್ಲಿನ ವೈಟ್‌ನಿಂಗ್‌ ಮತ್ತು ಕೂಲಿಂಗ್‌ ಏಜೆಂಟ್ಸ್ ಚರ್ಮದ ಒಳಪದರ ತಲುಪಿ, ಅದರಲ್ಲಿ ಹೆಚ್ಚಿನ ಹೊಳಪು, ಕಾಂತಿ ತರುತ್ತದೆ. ಜೊತೆಗೆ ಇದು ಆ್ಯಂಟಿಸೆಪ್ಟಿಕ್‌ ಕೂಡ. ಹೀಗಾಗಿ ಯಾವುದೇ ಬಗೆಯ ಗಾಯ, ಹುಣ್ಣು, ಉರಿ ಇತ್ಯಾದಿಗಳಿಗೂ ಇದನ್ನು ಔಷಧವಾಗಿ ಬಳಸಬಹುದು. ಇದರ ಎಣ್ಣೆಯಿಂದ ಸುಗಂಧದ ಸುವಾಸನೆ ಹೆಚ್ಚುವುದು ಮಾತ್ರವಲ್ಲದೆ, ಬಾಡಿ ಮಸಾಜ್‌ನಿಂದ ರಕ್ತದ ಪರಿಚಲನೆ ಕೂಡ ಹೆಚ್ಚುತ್ತದೆ. ಹೀಗಾಗಿ ಚರ್ಮದ ಮೇಲೆ ಸುಕ್ಕು, ಡ್ರೈನೆಸ್‌ ಕಾಣಿಸುವುದಿಲ್ಲ.

ಕೇಸರಿ : ಚಂದನದ ತರಹವೇ ಕೇಸರಿಯಲ್ಲೂ ವೈಟ್‌ನಿಂಗ್‌ ಏಜೆಂಟ್ಸ್ ಇದ್ದು, ಚರ್ಮದ ಬಣ್ಣ ತೇಲಿಸುತ್ತದೆ ಹಾಗೂ ಅದರ ಕಾಂತಿ ವರ್ಧಿಸುತ್ತದೆ. ಪರಿಸರ ಮಾಲಿನ್ಯ, ಧೂಳು ಇತ್ಯಾದಿಗಳಿಂದಾಗುವ ಸ್ಕಿನ್‌ ಇನ್‌ಫೆಕ್ಷನ್‌ಗೆ ಇದು ರಾಮಬಾಣವಾಗಿ ಕೆಲಸ ಮಾಡಿ, ಸುರಕ್ಷಾ ಕವಚ ಒದಗಿಸುತ್ತದೆ. ಅದಕ್ಕೆ ಕಾರಣ ಇದರ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ.

ಹಾಲಿನ ಕೆನೆ : ಇದು ದೇಹದ ಆರೋಗ್ಯಕ್ಕೆ ಎಷ್ಟು ಮುಖ್ಯಿವೋ ಅಷ್ಟೇ ಚರ್ಮದ ಸೌಂದರ್ಯ ಸಂವರ್ಧನೆಗೂ ಮುಖ್ಯ. ಇದರಲ್ಲಿ ಧಾರಾಳವಾಗಿ ಪ್ರೋಟೀನ್‌ ಅಂಶ ತುಂಬಿದ್ದು, ಅದು ಚರ್ಮದ ಕಾಂತಿ ಹೆಚ್ಚಿಸುತ್ತದೆ. ಜೊತೆಗೆ ಗುಳ್ಳೆ, ದದ್ದು, ಮೊಡವೆಗಳಿಂದಲೂ ರಕ್ಷಿಸುತ್ತದೆ. ಇದರ ಜಿಡ್ಡಿನಿಂದ ಚರ್ಮದ ಶುಷ್ಕತೆ ದೂರಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ