ಹೆಣ್ಣಿನ ಸೌಂದರ್ಯದಲ್ಲಿ ಉಗುರಿನ ಅಂದಕ್ಕೆ ತನ್ನದೇ ಆದ ಮಹತ್ವವಿದೆ. ಈ ಮಹತ್ವವನ್ನು ನಮ್ಮ ಮಹಿಳೆಯರು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಕೇವಲ ಬ್ರ್ಯಾಂಡೆಡ್ ಹಾಗೂ ಕಲರ್ ಫುಲ್ ನೇಲ್ ಪೇಂಟ್ ಹಚ್ಚುವುದರಿಂದ ಏನೂ ಲಾಭವಿಲ್ಲ ಎಂಬುವವರೆಗೆ ಗೊತ್ತು. ಅಷ್ಟಕ್ಕೇ ಸಮಾಧಾನಪಡದ ಅವರು ಈಗ ಡಿಸೈನರ್ ನೇಲ್ ಆರ್ಟ್ ಮಾಡಿಸಿಕೊಂಡು, ತಮ್ಮ ಉಗುರುಗಳಿಗೆ ಅಪ್ ಡೇಟ್ ಲುಕ್ಸ್ ನೀಡಲು ಇಷ್ಟಪಡುತ್ತಾರೆ.
ಪಾರ್ಟಿ ಇರಲಿ ಅಥವಾ ಮನೆಯ ಸಣ್ಣಪುಟ್ಟ ಶುಭ ಸಮಾರಂಭವೇ ಇರಲಿ, ಪ್ರತಿಸಲ ಇವರು ಹೊಸ ನೇಲ್ ಆರ್ಟ್‌ನೊಂದಿಗೆ ಸಿದ್ಧರಾಗುತ್ತಾರೆ. ಈ ಕುರಿತಾಗಿ ರಾಷ್ಟ್ರೀಯ ಖ್ಯಾತಿವೆತ್ತ ಸೆಲೆಬ್ರಿಟಿ ನೇಲ್ ಆರ್ಟ್ ಎಕ್ಸ್ ಪರ್ಟ್ ಪಮ್ಮಿ ಪಾಲ್ ಓದುಗರಿಗೆ ಅನೇಕ ಸಲಹೆ ನೀಡಲು ಬಯಸುತ್ತಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನೇಲ್ ಆರ್ಟ್ ಪ್ರಕಾರಗಳಲ್ಲೇ ಹೊಚ್ಚ ಹೊಸತೆನಿಸುವ 3ಡಿ ಆರ್ಟ್‌ನ ಪ್ರಯೋಗ ಮಾಡಲಾಯಿತು. ಇದನ್ನು ವಾನ್ಯಾ ಬ್ಯೂಟಿ ಪ್ರಾಡಕ್ಟ್ಸ್, ಓರಿ ಫ್ಲೇಮ್ಸ್, ಆದ್ಯಾ ಬ್ಯೂಟಿ ಹಬ್ ಪ್ರಾಯೋಜಿಸಿತ್ತು.
1 ಗಂಟೆಯ ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳೂ ವಿಭಿನ್ನ ಬಗೆಯ ನೇಲ್ ಆರ್ಟ್ ಪ್ರದರ್ಶಿಸಿ ತಮ್ಮ ಪ್ರತಿಭೆ ಪರಿಚಯಿಸಿದರು. ಇದರಲ್ಲಿ ವಿಜೇತರಾದ ಪೂಜಾ ಕುಮಾರ್, ತಮ್ಮ ಮಾಡೆಲ್ ನ ಕೈಬೆರಳ ಉಗುರಿನ ಮೇಲೆ 3ಡಿ ಲುಕ್ಸ್ ನ ನೇಲ್ ಆರ್ಟ್ ಮೂಡಿಸಿ ಎಲ್ಲರನ್ನೂ ಚಕಿತಗೊಳಿಸಿದರು. ಉಗುರುಗಳಿಗೆ ವಿಭಿನ್ನ ಸ್ಟೈಲ್ ನೀಡಲು 3ಡಿ ನೇಲ್ ಆರ್ಟ್ ಬಳಸಬೇಕಾಗುತ್ತದೆ. ಈ ಆರ್ಟ್‌ನಲ್ಲಿ ಉಗುರಿನ ಮೇಲೆ 3-4 ಬಣ್ಣಗಳನ್ನು ಬ್ಲೆಂಡ್ ಮಾಡಲಾಗುತ್ತದೆ. ಜೊತೆಗೆ ಬಣ್ಣಗಳಿಂದ ಉಗುರಿನ ಮೇಲೆ ನಾಜೂಕು ಡಿಸೈನ್ ಬಿಡಿಸಿ, ವೀಕ್ಷಕರು ಆ ಆಕೃತಿಯನ್ನು ನೋಡಿದಾಗ, 3 ಭಾಗಗಳಿಂದಲೂ (3ಡಿ ಎಫೆಕ್ಟ್) ನೋಡುತ್ತಿದ್ದೇವೆ ಎಂದು ಭಾಸವಾಗುವಂತೆ ಇದನ್ನು ಮಾಡುತ್ತಾರೆ.
3 ಡಿ ನೇಲ್ ಆರ್ಟ್ ರಚಿಸುವ ವಿಧಾನ
ಈ ತರಹದ ಆರ್ಟ್‌ಗಾಗಿ ಎಲ್ಲಕ್ಕೂ ಮೊದಲು ಡಿಸೈನ್ ಫಿಕ್ಸ್ ಆಗಬೇಕು. ಇದಾದ ನಂತರ ಉಗುರಿನ ಮೇಲೆ ಕವರ್ ಬೇಸ್ ಹಾಕಬೇಕು. ನಂತರ 3-4 ಬಣ್ಣಗಳ ನೇಲ್ ಪೇಂಟ್‌ನಿಂದ ಉಗುರಿನ ಮೇಲೆ ಡಿಸೈನ್ ಮಾಡಲಾಗತ್ತದೆ. ಇದು ಎಂಥದೇ ಡಿಸೈನ್ ಇರಲಿ, ಬಣ್ಣಗಳ ಸೂಕ್ತ ಮ್ಯಾಚಿಂಗ್ ಹಾಗೂ ಬ್ಲೆಂಡಿಂಗ್‌ನಿಂದ 3ಡಿ ಲುಕ್ಸ್ ನೀಡಲಾಗುತ್ತದೆ.
3 ಡಿ ಡಿಸೈನ್ಸ್
ಇಂಥ ನೇಲ್ ಆರ್ಟ್‌ನಲ್ಲಿ ಹೆಚ್ಚಾಗಿ ಮಾರ್ಬಲ್, ರೇನ್ ಬೋ, ಫಾರೆಸ್ಟ್, ಸ್ಚ್ರೈಪ್ಸ್ ನಂಥ ಡಿಸೈನ್ ಆರಿಸಲಾಗುತ್ತದೆ. ಇದನ್ನು ಡ್ರೆಸ್‌ಗೆ ಹೊಂದುವಂತೆಯೂ ಮಾಡಬಹುದು. ಏಕೆಂದರೆ ಇದರಲ್ಲಿ ಹಲವಾರು ಬಣ್ಣಗಳನ್ನು ಒಟ್ಟಿಗೆ ಬಳಸಲಾಗುತ್ತದೆ.
ಇದರಲ್ಲಿ ಇನ್ನೊಂದು ವೈಶಿಷ್ಟ್ಯವೆಂದರೆ, ಸ್ಟಡ್‌ಸ್ಟೋನ್ ಬಳಸಿಯೂ ಡಿಸೈನ್‌ಗೊಳಿಸಬಹುದು. ಇದನ್ನು ತಿಲಕದ ಬಿಂದಿಗಳಲ್ಲಿ ಬಳಸಲಾಗುವ ಸ್ಟೋನ್, ಚಮಕಿಗಳಿಂದ ಇನ್ನಷ್ಟು ಸೊಗಸಾಗಿಸಬಹುದು.
ಸ್ಟಡ್‌ಸ್ಟೋನ್ ನೇಲ್ ಆರ್ಟ್ ಮಾಡುವ ಕ್ರಮ
ಈ ಆರ್ಟ್ ಮಾಡುವುದಕ್ಕಾಗಿ ಎಲ್ಲಕ್ಕೂ ಮೊದಲು, ಯಾವುದೇ ಬಗೆಯ ನೇಲ್ ಪೇಂಟ್‌ನ್ನು ನಿಮ್ಮ ಉಗುರಿಗೆ ಹಚ್ಚಿಕೊಳ್ಳಿ. ಅದನ್ನು ಕಾಂಪ್ಲಿಮೆಂಟ್‌ಗೊಳಿಸುತ್ತಾ, ಒಂದು ಸ್ಟೋನ್ ಅಥವಾ ಸ್ಟಡ್‌ನ್ನು ಉಗುರಿಗೆ ಅಂಟಿಸುವ ಗ್ಲೂ ನೆರವಿನಿಂದ ಅಂಟಿಸಿಬಿಡಿ. ಇದೇ ತರಹ ನೀವು ಟ್ರಾನ್ಸ್ ಪರೆಂಟ್ ಮತ್ತು ಸ್ಪಾರ್ಕ್ಸ್ ಕಾಂಬಿನೇಶನ್ನಿನ ನೇಲ್ ಪೇಂಟ್‌ಗೂ ಮಾಡಬಹುದು.