`ಒಬಿಸಿಟಿ’ ಎಂದು ಕರೆಯಲ್ಪಡುವ ಬೊಜ್ಜು ಒಂದು ರೋಗವೇ ಆಗಿದ್ದು, ಆ ಕಾರಣದಿಂದ ಬೇರೆ ಬೇರೆ ರೋಗಗಳು ಕೂಡ ಉಂಟಾಗುತ್ತವೆ. ಈ ಎರಡೂ ಪ್ರಕಾರದ ಬೊಜ್ಜು ಉಂಟಾಗುವ ವಿಶೇಷ ಕಾರಣಗಳೇನು ಹಾಗೂ ಅವಕ್ಕೆ ಪರಿಹಾರವೇನು ಎಂದು ತಿಳಿದುಕೊಳ್ಳುವುದು ಅತ್ಯಗತ್ಯ.

ಬೊಜ್ಜಿನ ಲಕ್ಷಣಗಳು

ನಿಖರ ಮಾನದಂಡಗಳ ಪ್ರಕಾರ ತೂಕ ಇರದೇ, ಎತ್ತರಕ್ಕೆ ಹೋಲಿಸಿದಲ್ಲಿ 120% ಹೆಚ್ಚಾಗಿದ್ದರೆ.

ಎಜಿ ರೇಶಿಯೊ (ಇದು ಹೊಟ್ಟೆಯ ಹೆಚ್ಚು ಸುತ್ತಳತೆ ಮತ್ತು ಸೊಂಟದ ಗರಿಷ್ಠ ಸುತ್ತಳತೆಯ ಅನುಪಾತ) ಪುರುಷರಲ್ಲಿ 0.9 ಮತ್ತು ಮಹಿಳೆಯರಲ್ಲಿ 0.8ಕ್ಕಿಂತ ಹೆಚ್ಚಾಗಿದ್ದರೆ.

ಬೊಜ್ಜಿನ ಪ್ರಕಾರಗಳು

ಒಬಿಸಿಟಿ : ಅಂದರೆ ದೇಹದ ಒಂದು ವಿಶಿಷ್ಟ ಭಾಗದಲ್ಲಿ ಬೊಜ್ಜು ಕೇಂದ್ರೀಕೃತಗೊಂಡಿರುವುದು.

ಸೆಂಟ್ರಲ್ ಒಬಿಸಿಟಿ : ಇದು ಕೇವಲ ಹೊಟ್ಟೆಯ ಬೊಜ್ಜು ಆಗಿರುತ್ತದೆ. ಅದು ಇಡೀ ದೇಹದ ಬೊಜ್ಜಿಗಿಂತ ಹೆಚ್ಚಾಗಿ ಹಾನಿಕಾರಕಾಗಿರುತ್ತದೆ.

ಜನರೈಸ್ಡ್  ಒಬಿಸಿಟಿ : ಇಡೀ ದೇಹದಲ್ಲಿ ಸಮಾನ ರೂಪದಲ್ಲಿರುವ ಬೊಜ್ಜು.ಕಾರಣ

ಹೈಪೊ ಥೈರಾಯಿಡಿಸಂ : ಈ ಸ್ಥಿತಿಯಲ್ಲಿ ಹಾರ್ಮೋನಿನ ಕೊರತೆಯ ಕಾರಣದಿಂದ ತೂಕ ಹೆಚ್ಚುವುದರ ಜೊತೆಗೆ ತ್ವಚೆಯ ಶುಷ್ಕತೆ ಮತ್ತು ಹೆಚ್ಚು ಋತುಸ್ರಾವವುಂಟಾಗುತ್ತದೆ.

ಪಾಲಿಸಿಸ್ಟಿಕ್‌ ಓವರಿ : ಇದು ಅಂಡಾಶಯದ ಒಂದು ಸಾಮಾನ್ಯ ರೋಗವಾಗಿದ್ದು, ಇದರಲ್ಲಿ ಬೊಜ್ಜಿನ ಜೊತೆಗೆ ಋತುಚಕ್ರದ ಅನಿಯಮಿತತೆ, ಬಂಜೆತನ, ಅತಿರಕ್ತದೊತ್ತಡ ಮತ್ತು ಬೇಡದ ಜಾಗದಲ್ಲಿ ಕೂದಲು ಬೆಳೆಯುವಂತಹ ಸಮಸ್ಯೆ ಉತ್ಪತ್ತಿಯಾಗುತ್ತದೆ.

ಆ್ಯಡ್ರಿನ್‌ ಗ್ರಂಥಿಯ ರೋಗಗಳು ಕೂಡ ಬೊಜ್ಜಿಗೆ ಕಾರಣವಾಗಿವೆ.

ಮೆದುಳಿನಲ್ಲಿರುವ ಪಿಟ್ಯೂಟರಿ ಗ್ಲ್ಯಾಂಡ್‌ಗೆ ಸಂಬಂಧಪಟ್ಟ ರೋಗಗಳು, ಮಧುಮೇಹ ಹಾಗೂ ಕೆಲವು ಔಷಧಿಗಳು ಅದರಲ್ಲೂ ಚರ್ಮ ಮತ್ತು ಶ್ವಾಸ ರೋಗಗಳಲ್ಲಿ ಉಪಯೋಗಿಸಲ್ಪಡುವ ಔಷಧಿಗಳು, ಮಾನಸಿಕ ರೋಗಗಳ ನಿವಾರಣೆಗಾಗಿ ಬಳಸುವ ಔಷಧಿಗಳು ಬೊಜ್ಜಿಗೆ ಕಾರಣವಾಗುತ್ತವೆ.

ಅನುವಂಶೀಯ ಅಥವಾ ಕ್ರೊಮೋಸೋಮ್ ಡಿಫೆಕ್ಟ್ಸ್. ಉದಾ : ಡೌನ್‌ ಸಿಂಡ್ರೋಮ್.

ಮೆದುಳು ರೋಗ : ಇದು ಮೆದುಳಿನಲ್ಲಿರುವ ಹೈಪೋಥೆಲೆಮಸ್‌ ಮೇಲೆ ತನ್ನ ಪ್ರಭಾವ ಬೀರುತ್ತದೆ.

ಓವರ್‌ ಈಟಿಂಗ್‌ : ಹಸಿವು ಇರಲಿ ಇಲ್ಲದಿರಲಿ ಬೊಜ್ಜು ದೇಹಿಗಳು ಈ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾರೆ.

ಹೆರಿಗೆ ಸಮಯದಲ್ಲಿ ಕೊಡುವ ಅತಿ ಹೆಚ್ಚಿನ ಪ್ರಮಾಣದ ಆಹಾರ ಮಹಿಳೆಯರಲ್ಲಿ ಬೊಜ್ಜಿಗೆ ಮುಖ್ಯ ಕಾರಣವಾಗಿದೆ.

ಶಕ್ತಿಗೂ ಬೊಜ್ಜಿಗೂ ಸಂಬಂಧ

7000 ಕಿಲೋ ಕ್ಯಾಲೋರಿ 1 ಕಿಲೋ ತೂಕಕ್ಕೆ ಸಮಾನ.

ದೇಹದಲ್ಲಿ ಎನರ್ಜಿ ಅಗತ್ಯಕ್ಕಿಂತ ಹೆಚ್ಚಾದರೆ ಅದು ಕೊಬ್ಬಿನಲ್ಲಿ ಪರಿವರ್ತನೆಗೊಳ್ಳುತ್ತದೆ.

ಈ ಕೊಬ್ಬು ಒಂದು ನಿಶ್ಚಿತ ಸ್ಥಳದಲ್ಲಿ ಕ್ರಮವಾಗಿ ಜಮೆಗೊಳ್ಳುತ್ತದೆ. ಉದಾಹರಣೆಗೆ ಪುರುಷರಲ್ಲಿ ಹೊಟ್ಟೆ, ಸೊಂಟ, ಬೆನ್ನು ಹಾಗೂ ಕುತ್ತಿಗೆಯ ಹಿಂಭಾಗ, ತೊಡೆ ಹಾಗೂ ಕೈಗಳ ಮೇಲೆ ಮತ್ತು ಸ್ತ್ರೀಯರಲ್ಲಿ ಹೊಟ್ಟೆ, ಕಿಬ್ಬೊಟ್ಟೆಯ ಕೆಳಭಾಗ, ಕುತ್ತಿಗೆ, ನಿತಂಬ, ತೊಡೆ ಮತ್ತು ಕೈಗಳಲ್ಲಿ ಜಮೆಗೊಂಡಿರುತ್ತದೆ.

ಎನರ್ಜಿ ಹೇಗೆ ಖರ್ಚಾಗುತ್ತದೆ?

70 ಕಿಲೋ ತೂಕದ ವ್ಯಕ್ತಿಯ ಎನರ್ಜಿ ಈ ರೀತಿಯಲ್ಲಿ ಖರ್ಚಾಗುತ್ತದೆ:

ವಿಶ್ರಾಂತಿಯ ಸ್ಥಿತಿಯಲ್ಲಿ : 1.3 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.ನಡೆಯುವಾಗ : (3.5 ಮೈಲಿ ಪ್ರತಿ ಗಂಟೆಗೆ) 5.2 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.

ಸೈಕಲ್ ಚಾಲನೆ : 8.2  ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.

ಈಜುವುದು : 11.2 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.

ಓಡುವುದು : 15.4 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.

ಬೊಜ್ಜಿಗೆ ಚಿಕಿತ್ಸೆ

motapa-sataye

ಎಲ್ಲಕ್ಕೂ ಮೊದಲು ಯಾರಾದರೂ ತಜ್ಞ ವೈದ್ಯರ ಬಳಿ ಬೊಜ್ಜಿನ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಎಷ್ಟೋ ಸಲ ಕೆಲವು ಗಂಭೀರ ರೋಗಗಳ ಏಕಮಾತ್ರ ಲಕ್ಷಣ ಬೊಜ್ಜು ಆಗಿರುತ್ತದೆ. ಇಂತಹ ಬೊಜ್ಜನ್ನು `ಸೆಕೆಂಡರಿ ಒಬಿಸಿಟಿ’ ಅಥವಾ `ಸಕಾರಣ ಬೊಜ್ಜು’ ಎಂದು ಕರೆಯುತ್ತಾರೆ. ಕಾರಣ ಅರಿತುಕೊಂಡ ಬಳಿಕವೇ ಇದಕ್ಕೆ ಚಿಕಿತ್ಸೆ ಸಾಧ್ಯ.`ಪ್ರೈಮರಿ ಒಬಿಸಿಟಿ’ ಅಥವಾ `ಸಾಮ್ಯಾನ್ಯ ಬೊಜ್ಜಿಗೆ’ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮತ್ತು ಕಡಿಮೆ ವ್ಯಾಯಾಮ ಅಂದರೆ ಶಕ್ತಿ ಹಾಗೂ ಅದರ ಉಪಯೋಗದಲ್ಲಿನ ಅಸಮತೋಲನವೇ ಕಾರಣವಾಗಿದೆ.

ಇಂತಹ ವೈಯಕ್ತಿಯ ದಿನಚರಿ ಮತ್ತು ಅವರ ಎನರ್ಜಿ ಖರ್ಚಾಗುವ ಪ್ರಮಾಣ ಕಂಡುಕೊಳ್ಳಿ.

ವ್ಯಕ್ತಿ ಯಾವ ಸಮಯದಲ್ಲಿ ಹೆಚ್ಚು ಆಹಾರ ಸೇವಿಸುತ್ತಾನೆ ಅಂದರೆ ತನ್ನ ಮನೆಯವರ ಜೊತೆ ಕುಳಿತುಕೊಂಡಾಗಲೋ ಅಥವಾ ಟಿವಿ ನೋಡುವಾಗಲೋ ಎಂಬುದನ್ನು ಕಂಡುಕೊಳ್ಳಿ. ಆ ವ್ಯಕ್ತಿಯ ಆಹಾರ ಸೇವನೆ ಮತ್ತು ಪರಿಸ್ಥಿತಿಗಳ 15 ದಿನದ ಪಟ್ಟಿ ಮಾಡಿ.

ಹೆಚ್ಚಿನ ಬೊಜ್ಜು ದೇಹಿಗಳು ತಾವು ಬಹಳ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದಾಗಿ ಹೇಳುತ್ತಾರೆ. ಅದು ಅಷ್ಟೇ ಸತ್ಯ ಕೂಡ ಆಗಿರುತ್ತದೆ. ಅವರ ಮಾತಿನ ಅರ್ಥ ಕೇವಲ ಊಟಕ್ಕೆ ಸಂಬಂಧಪಟ್ಟಿರುತ್ತದೆ. ಇದರ ಹೊರತಾಗಿ ಅವರು ಸಾಕಷ್ಟು ತಿಂಡಿಗಳನ್ನು ತಿನ್ನುತ್ತಾರೆ. ಉದಾಹರಣೆಗೆ ಟಿ.ವಿಯಲ್ಲಿ ಸಿನಿಮಾ ನೋಡುತ್ತ 4 ಕಪ್‌ ಚಹಾ ಹೀರುತ್ತಾರೆ. ಅದು ಕೂಡ ಶಕ್ತಿಯ ಮೂಲವಾಗಿದೆ. ಅದನ್ನು ನಿರ್ಲಕ್ಷಿಸಬೇಡಿ.

ಹೆಚ್ಚುವರಿಯಾಗಿ ಆಹಾರ ಸೇವಿಸುವ ಪರಿಸ್ಥಿತಿಗಳಿಂದ ದೂರ ಇರಿ. ಉದಾಹರಣೆಗೆ ಅಣ್ಣ ತಮ್ಮ, ಅಕ್ಕ ತಂಗಿಯರ ಜೊತೆ ಕುಳಿತಾಗ ಹೆಚ್ಚು ಆಹಾರ ಸೇವಿಸುತ್ತೀರಿ ಎಂದಾದರೆ, ಆಗ ಏನಾದರೊಂದು ನೆಪ ಹೇಳಿ ಸ್ವಲ್ಪ ಹೊತ್ತು ಬಿಟ್ಟು ಒಬ್ಬರೇ ಎಷ್ಟು ಬೇಕೊ ಅಷ್ಟೇ ಆಹಾರ ಸೇವಿಸಿ.

ಊಟಕ್ಕಿಂತ ಮುಂಚೆ ಸಲಾಡ್‌ ತಿನ್ನಿ ಹಾಗೂ ನೀರನ್ನು ಕುಡಿಯಿರಿ.

ಹೊಟ್ಟೆ ಹಾಗೂ ಸೊಂಟದ ಕೊಬ್ಬನ್ನು ನಿವಾರಿಸುವುದು ಎಲ್ಲಕ್ಕೂ ಕ್ಲಿಷ್ಟಕರ. ಅದಕ್ಕಾಗಿ ಮಸಾಜ್‌ ಮತ್ತು ಸೋನಾ ಬಾಥ್‌ಉಪಯುಕ್ತ.

ಬೊಜ್ಜಿಗೆ ಕಡಿವಾಣ ಹಾಕಲು ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ.

ಕಡಿಮೆ ಎನರ್ಜಿಯುಳ್ಳ ಆಹಾರ ಪದಾರ್ಥಗಳು ಅಂದರೆ ಮೆಂತ್ಯ, ಪಾಲಕ್‌, ಕ್ಯಾರೆಟ್‌, ಮೂಲಂಗಿ ಹಾಗೂ ಸೌತೆಕಾಯಿಯನ್ನು ಹೆಚ್ಚು ಬಳಸಿ.

ಔಷಧಿ

ಬೊಜ್ಜಿನ ಚಿಕಿತ್ಸೆಗಾಗಿ ಹಲವು ಬಗೆಯ ಔಷಧಿಗಳನ್ನು ಉಪಯೋಗಿಸಲಾಗುತ್ತದೆ.

ಕೆಲವು ಔಷಧಿಗಳು ಮೆದುಳಿನಲ್ಲಿರುವ ಕೇಂದ್ರವನ್ನು ಸಮತೋಲನಗೊಳಿಸುತ್ತದೆ. ಅದರಿಂದಾಗಿ ವ್ಯಕ್ತಿಗೆ ಹಸಿ ತಡವಾಗಿ ಆಗುತ್ತದೆ ಅಥವಾ ಬೇಗನೇ ಸಂತೃಪ್ತಿ ದೊರೆಯುತ್ತದೆ.

ಕೆಲವು ಔಷಧಿಗಳು ಆಹಾರವನ್ನು ತಡವಾಗಿ ಪಚನ ಮಾಡುತ್ತಲೇ ಮತ್ತೆ ಕೆಲವು ಪಚನವಾದ ಆಹಾರವನ್ನು ಕರುಳಿನ ಮುಖಾಂತರ ಹೀರಿಕೊಳ್ಳಲ್ಪಡುತ್ತವೆ.

ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆಯ ಮೂಲಕ ಬೊಜ್ಜನ್ನು ಕಡಿಮೆ ಮಾಡಬಹುದಾಗಿದೆ. ಆದರೆ ಎಲ್ಲಿಯವರೆಗೆ ಅವಶ್ಯಕತೆ ಇಲ್ಲವೋ ಅಲ್ಲಿಯವರೆಗೆ ಶಸ್ತ್ರಚಿಕಿತ್ಸೆ ಮಾಡಿಸಲೇಬಾರದು. ಶಸ್ತ್ರಚಿಕಿತ್ಸೆಗಳಲ್ಲಿ ಪ್ರಮುಖವಾದುದೆಂದರೆ ಗ್ಯಾಸ್ಟ್ರೋಪ್ಲ್ಯಾಸ್ಟಿ. ಇದರಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿ ಅದರ ಸಾಮರ್ಥ್ಯ ಕಡಿಮೆಗೊಳಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸ್ವಲ್ಪ ಆಹಾರ ತಿಂದ ಬಳಿಕ ಹೊಟ್ಟೆ ತುಂಬಿದಂತಾಗುತ್ತದೆ.

– ಡಾ. ರಾಜೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ