ಮೇಕಪ್‌ನಲ್ಲಿ ಹಲವು ಬಗೆ ಇವೆ. ಆದರೆ ಅರೇಬಿಯನ್‌ ಲುಕ್‌ನದ್ದೇ ಒಂದು ವಿಶೇಷವಾಗಿದೆ. ಈ ಮೇಕಪ್‌ನಲ್ಲಿ ಕಣ್ಣುಗಳನ್ನು ಹೆಚ್ಚು ಹೈಲೈಟ್‌ ಮಾಡಲಾಗುತ್ತದೆ. ಕಣ್ಣುಗಳಿಗೆ ಡಾರ್ಕ್‌, ಡ್ರಮಾಟಿಕ್‌ ಮತ್ತು ಸೆನ್ಶುಯಲ್ ಲುಕ್‌ ಕೊಡಲಾಗುತ್ತದೆ. ಅದರಿಂದ ಕಣ್ಣುಗಳ ಸೌಂದರ್ಯ ಹೆಚ್ಚುತ್ತದೆ. ಅರೇಬಿಯನ್‌ ಐ ಮೇಕಪ್‌ನಲ್ಲಿ ಗೋಲ್ಡನ್‌ ಐ ಶ್ಯಾಡೋ ಉಪಯೋಗಿಸಲಾಗುತ್ತದೆ. ಅದರೊಂದಿಗೆ ಬ್ಲೂ, ಗ್ರೀನ್‌, ಪರ್ಪಲ್, ಯೆಲ್ಲೋ, ಬ್ಲ್ಯಾಕ್‌ ಮತ್ತು ಡಾರ್ಕ್‌ ಗ್ರೇ ಕಲರ್‌ ಕೂಡ ಹೆಚ್ಚಾಗಿ ಉಪಯೋಗಿಸಲಾಗುತ್ತದೆ.

ಅರೇಬಿಯನ್‌ ಐ ಮೇಕಪ್‌ : ಮುಖವನ್ನು ಸ್ವಚ್ಛಗೊಳಿಸಿ ಬ್ರಶ್‌ನಿಂದ ಮುಖದ ಮೇಲೆ ಪ್ರೈಮರ್‌ ಹಚ್ಚಿ. ನಂತರ ಟಿಶ್ಶೂ ಪೇಪರ್‌ನ್ನು ಮುಖದ ಮೇಲಿಟ್ಟು ತಪತಪನೆ ಒತ್ತಿ. ಈಗ ಅಂಡರ್‌ ಐಸ್‌ ಮೇಲೆ ಯೆಲ್ಲೋ ಕನ್ಸೀಲರ್‌ ಹಚ್ಚಿ. ಐ ಮೇಕಪ್‌ ಶುರು ಮಾಡುವ ಮೊದಲು ಕಣ್ಣುಗಳ ಕೆಳಗಿನಿಂದ ಹಿಡಿದು ಗಂಡ ಸ್ಥಳದವರೆಗೆ ಸೆಲೋಟೇಪ್‌ ಹಚ್ಚಿ. ಬೆರಳುಗಳಿಂದ ತಪತಪನೆ ತಟ್ಟುತ್ತಾ ಶಿಮರ್ ಜೆಲ್ ‌ಅಥವಾ ಐ ಪ್ರೈಮರ್‌ ಹಚ್ಚಿ. ಈಗ ಐ ಲಿಡ್‌ನ ಮೇಲೆ ಗೋಲ್ಡನ್‌ ಹೈಲೈಟರ್‌ ಹಚ್ಚಿ. ನಂತರ ಐ ಲಿಡ್‌ ಮೇಲೆ ಗ್ರೀನ್‌ ಕಲರ್‌ನ ಐ ಶ್ಯಾಡೋ ಹಚ್ಚಿ. ಕಣ್ಣುಗಳ ಮೇಲ್ಭಾಗದಲ್ಲಿ ಕಾಜಲ್ ಪೆನ್ಸಿಲ್‌ನಿಂದ ಲೈನರ್‌ ಎಳೆಯಿರಿ. ಲೈನರ್‌ ಉದ್ದವಿರಬೇಕು, ಅಂದರೆ ಕಣ್ಣುಗಳ ಹೊರಭಾಗದವರೆಗೂ. ನಂತರ ಇದನ್ನು ಬ್ರಶ್‌ನಿಂದ ಮರ್ಜ್‌ ಮಾಡಿ.

ಈಗ ಐ ಲಿಡ್‌ನ ಮಧ್ಯಭಾಗದಲ್ಲಿ ಪಿಂಕ್‌ ಶ್ಯಾಡೋ ಹಚ್ಚಿ. ಅದನ್ನು ಬ್ರಶ್‌ನಿಂದ ಮರ್ಜ್‌ ಮಾಡಿ. ನಂತರ ಕ್ರೀಮೀ ಬ್ಲ್ಯಾಕ್‌ ಐ ಲೈನರ್‌ ಹಚ್ಚಿ. ವಾಟರ್‌ ಲೈನ್‌ ಏರಿಯಾದಲ್ಲಿ ಕಾಜಲ್ ಹಚ್ಚಿ ಮತ್ತು ಅದರ ಕೆಳಗೆ ಕಲರ್‌ ಐ ಲೈನರ್‌ ಹಚ್ಚಿ.ಈಗ ರೆಪ್ಪೆಗಳ ಮೇಲೆ ಆರ್ಟಿಫಿಶಿಯ್‌ ಐ ಲ್ಯಾಶಸ್‌ನ್ನು ಗಮ್ ನಿಂದ ಅಂಟಿಸಿ. ಸ್ವಲ್ಪ ಹೊತ್ತಿನ ನಂತರ ಅವು ಸೆಟ್‌ ಆದ ಮೇಲೆ ರೆಪ್ಪೆಗಳ ಮೇಲೆ ಮತ್ತು ಕೆಳಗೆ ಮಸ್ಕರಾ ಹಚ್ಚಿ. ನಂತರ ಬ್ರಶ್‌ನಲ್ಲಿ ಬ್ಲ್ಯಾಕ್‌ ಅಥವಾ ಬ್ರೌನ್‌ ಶ್ಯಾಡೋ ತೆಗೆದುಕೊಂಡು ಐ ಬ್ರೋಸ್‌ ಮೇಲೆ ಹಚ್ಚಿ.

ಈಗ ಕಣ್ಣುಗಳ ಕೆಳಗಿನಿಂದ ಸೆಲೋಟೇಪ್‌ ತೆಗೆದುಬಿಡಿ. ನಂತರ ಕಣ್ಣುಗಳ ಕೆಳಭಾಗದಲ್ಲಿ ವೈಟ್‌ ಐ ಶ್ಯಾಡೋನ್ನು ಬ್ರಶ್‌ನ ಸಹಾಯದಿಂದ ಹಚ್ಚಿ. ಕಾಜಲ್ ಬದಲು ವೈಟ್‌ ವೈನರ್‌ ಹಚ್ಚಿ. ಈಗ ಐ ಮೇಕಪ್‌ ಕಂಪ್ಲೀಟ್‌ ಆಗುತ್ತದೆ.

ಫೇಸ್‌ ಮೇಕಪ್‌ : ಮುಖದಿಂದ ಕತ್ತಿನವರೆಗೆ ಬೇಸ್‌ನ್ನು ಬೆರಳುಗಳಿಂದ ಡಾಟ್‌ ಡಾಟ್‌ ಮಾಡಿ ಹಚ್ಚಿ. ನಂತರ ಪಾಲಿಶಿಂಗ್‌ ಬ್ರಶ್‌ನಿಂದ ಮತ್ತು ಪೌಡರ್‌ ಬ್ರಶ್‌ನಿಂದ ಅದನ್ನು ಮುಖ ಮತ್ತು ಕತ್ತಿನ ಮೇಲೆ ಗುಂಡಗೆ ತಿರುಗಿಸುತ್ತಾ ಮರ್ಜ್‌ ಮಾಡಿ. ನಂತರ ಫೈನ್ ಬ್ರಶ್‌ನಿಂದ ಪಿಂಕ್‌ ಕಲರ್‌ನ ಬ್ಲಶರ್‌ ಮತ್ತು ಚೀಕ್ಸ್ ಮೇಲೆ ತೆಳುವಾಗಿ ಶೈನರ್‌ ಹಚ್ಚಿ. ಇದರಿಂದ ಚೀಕ್ಸ್ ಹೊಳೆಯುತ್ತವೆ. ಈಗ ಬ್ರೌನ್‌ ಕಲರ್‌ನಿಂದ ನೋಸ್‌ ಕಟ್‌ ಮಾಡಿ. ಲಿಪ್ಸ್ ಮೇಲೆ ಪಿಂಕ್‌ ಕಲರ್‌ನ ಲಿಪ್‌ಸ್ಟಿಕ್‌ ಹಚ್ಚಿ. ಈಗ ಫೇಸ್‌ ಮೇಕಪ್‌ ಕಂಪ್ಲೀಟ್ ಆಯ್ತು.

arabian-eye-makeup-1

ಅರೇಬಿಯನ್‌ ಹೇರ್‌ ಸ್ಟೈಲ್ : ಕೂದಲನ್ನು ಬಾಚಿಕೊಂಡು ಇಯರ್‌ ಟು ಇಯರ್‌ ಪಾರ್ಟಿಂಗ್‌ ಮಾಡಿ. ಹಿಂದಿನ ಕೂದಲಿನಲ್ಲಿ ಎತ್ತರದ ಪೋನಿ ಮಾಡಿಕೊಳ್ಳಿ. ಮುಂದಿನ ಕೂದಲನ್ನು ಸೈಡ್‌ ಪಾರ್ಟಿಂಗ್‌ ಮಾಡಿ ಅದನ್ನು ಹಿಂದೆ ತೆಗೆದುಕೊಂಡು ಪಿನ್‌ನಿಂದ ಸೆಟ್‌ ಮಾಡಿ. ಈಗ ಆರ್ಟಿಫಿಶಿಯ್‌ ಸ್ಟಫ್‌ ಪೋನಿಯ ಕೆಳಗೆ ಹಚ್ಚಿ ಅದನ್ನು ಪಿನ್‌ನಿಂದ ಸೆಟ್‌ ಮಾಡಿ. ಪೋನಿ ಕೂದಲನ್ನು ಬ್ಯಾಕ್ ಕೂಂಬಿಂಗ್‌ ಮಾಡುತ್ತಾ ಅದನ್ನು ಜಡೆಯ ಮೇಲ್ಭಾಗದಲ್ಲಿಡಿ ಮತ್ತು ಸ್ಪ್ರೇ ಮಾಡಿ.ಈಗ ಪೋನಿಯ ಕೂದಲನ್ನು ಜಡೆಯ ಮೇಲಿನಿಂದ ಕೆಳಗೆ ತಂದು ಪಿನ್‌ನಿಂದ ಚೆನ್ನಾಗಿ ಸೆಟ್‌ ಮಾಡಿ ಮತ್ತು ಬಿಳಿಯ ಮುತ್ತಿನ ಹಾರವನ್ನು ಜಡೆಯ ಮೇಲ್ಭಾಗದಲ್ಲಿ ಹಾಕಿ.

ಬ್ರೈಡಲ್ ಮೇಕಪ್‌ : ಮುಖವನ್ನು ಸ್ವಚ್ಛಗೊಳಿಸಿ ಆರೆಂಜ್‌ ಕನ್ಸೀಲರ್‌ ಹಚ್ಚಿ. ನಂತರ ಇಡೀ ಮುಖದ ಮೇಲೆ ಸ್ಕಿನ್‌ಗೆ ಮ್ಯಾಚ್‌ ಆಗುವ ಬೇಸ್‌ ಹಚ್ಚಿ. ಅದನ್ನು ಬ್ರಶ್‌ನಿಂದ ಚೆನ್ನಾಗಿ ಮರ್ಜ್‌ ಮಾಡಿ. ಈಗ ಕೊಂಚ ಕ್ರೀಮೀ ವೈಟ್‌ ಫೌಂಡೇಶನ್‌ ತೆಗೆದುಕೊಂಡು ಬ್ರಶ್‌ನಿಂದ ಇಡೀ ಮುಖದ ಮೇಲೆ ಹಚ್ಚಿ. ಅದರಿಂದ ವಧು ಬೆಳ್ಳಗೆ ಕಾಣುತ್ತಾಳೆ. ಅದೇ ವೈಟ್‌ ಫೌಂಡೇಶನ್‌ನಿಂದ ಹೈಲೈಟ್‌ಏರಿಯಾವನ್ನು ಹೈಲೈಟ್‌ ಮಾಡಿ. ಶೈನಿ ಎಫೆಕ್ಟ್ ಗಾಗಿ ಪೀಚ್‌ ಕಲರ್‌ ಮತ್ತು ಪೌಡರ್‌ನ್ನು ಮುಖಕ್ಕೆ ಹಚ್ಚಿ. ಈಗ ಫೈನ್‌ ಬ್ರಶ್‌ನಿಂದ ಬ್ಲಶರ್‌ ಹಚ್ಚಿ. ನಂತರ ಪಾಲಿಶಿಂಗ್‌ ಬ್ರಶ್‌ನ್ನು ಇಡೀ ಮುಖದ ಮೇಲೆ ಗುಂಡಗೆ ಸುತ್ತುತ್ತಾ ಮುಖದ ಪಾಲಿಶಿಂಗ್‌ ಮಾಡಿ. ಈಗ ಬೌನ್ಸರ್‌ನಿಂದ ಮುಖ ಹಾಗೂ ಮೂಗಿನ ಕಾಂಟೂರಿಂಗ್‌ ಮಾಡಿ. ಮುಖದ ಮೇಕಪ್‌ ಕಂಪ್ಲೀಟ್‌ ಆಯ್ತು. ಈಗ ಹೇರ್‌ ಸ್ಟೈಲ್ ಮಾಡಿ.

ಅರೇಬಿಯನ್‌ ಮೇಕಪ್‌ನ ಸೂಕ್ಷ್ಮತೆಗಳ ಬಗ್ಗೆ ಹೇಳುತ್ತಾ, ಬ್ಯೂಟೀಷಿಯನ್‌ ಸೋನಿಯಾ ಬಾತ್ರಾ ತಮ್ಮ ಆಸಕ್ತಿ, ಕುಟುಂಬ ಹಾಗೂ ಬಿಸ್‌ನೆಸ್‌ ಬಗ್ಗೆ ಮಾತಾಡಿದರು.

ಮೇಕಪ್‌ ಆರ್ಟಿಸ್ಟ್ ಮತ್ತು ಹೇರ್‌ ಸ್ಟೈಲಿಸ್ಟ್ ಸೋನಿಯಾ ಬಾಲಿವುಡ್‌, ಹಾಲಿವುಡ್‌ ಮತ್ತು ಟಿವಿ ಸೀರಿಯಲ್‌ಗಳಲ್ಲಿ ತಮ್ಮ ಕೌಶಲ್ಯ ತೋರಿದ್ದಾರೆ. ಅವರು ಬಹಳಷ್ಟು ಸೆಲೆಬ್ರಿಟಿಗಳ ಮುಖಗಳನ್ನು ಅಲಂಕರಿಸಿದ್ದಾರೆ. ಈಗ ಅವರು ದೆಹಲಿಯಲ್ಲಿ ಮೇಕಪ್‌ ಸ್ಕೂಲ್‌ತೆರೆದು ಆಸಕ್ತರಿಗೆ ಟ್ರೇನಿಂಗ್‌ ಕೊಡುತ್ತಿದ್ದಾರೆ. ಅವರೊಡನೆ ನಡೆಸಿದ ಮಾತುಕತೆಯ ಕೆಲವು ಅಂಶಗಳು ಹೀಗಿವೆ?:

ಸೌಂದರ್ಯ ಕ್ಷೇತ್ರದಲ್ಲಿ ನಿಮಗೆ ಯಾವಾಗ ಒಲವು ಉಂಟಾಯಿತು?

arabian-eye-makeup-2

ಸೌಂದರ್ಯ ಕ್ಷೇತ್ರದಲ್ಲಿ ನನಗೆ ಚಿಕ್ಕಂದಿನಿಂದೀ ಒಲವಿತ್ತು. ನಾನು ಚಿಕ್ಕವಳಾಗಿದ್ದಾಗ ನನ್ನ ಗೊಂಬೆಗಳನ್ನು ಅಲಂಕರಿಸುತ್ತಿದ್ದೆ. ನನ್ನ ಈ ಅಭಿರುಚಿ ಹೆಚ್ಚುತ್ತಾ ಹೋಯಿತು. ನಾನು 10ನೇ ತರಗತಿಯಲ್ಲಿ ಓದುತ್ತಿದ್ದಾಗ ಅಂಕುರ್‌ ಬ್ಯೂಟಿ ಪಾರ್ಲರ್‌ನಿಂದ ಬ್ಯೂಟೀಷಿಯನ್‌ ಟ್ರೇನಿಂಗ್‌ ಪಡೆಯಲು ನ್ಯೂಯಾರ್ಕ್‌ಗೆ ಹೋದೆ.

ಈ ಕ್ಷೇತ್ರದಲ್ಲಿ ಬರಲು ಯಾರಿಂದ ಪ್ರೇರಣೆ ಸಿಕ್ಕಿತು?

ನಮ್ಮ ತಾಯಿ ಮೊದಲಿನಿಂದಲೂ ನನಗೆ ಸಪೋರ್ಟ್‌ ಮಾಡಿದರು. ನಮ್ಮ  ತಂದೆಗೆ ಇಷ್ಟವಿರಲಿಲ್ಲ. ಆದರೆ ನನ್ನ ಒಲವು ಮತ್ತು ಅಮ್ಮನ ಬೆಂಬಲದಿಂದಾಗಿ ನಾನು ಇಂದು ಈ ಹಂತ ತಲುಪಿದ್ದೇನೆ.

ನೀವು ಇದುವರೆಗೆ ಯಾವ ಯಾವ ಚಿತ್ರಗಳಿಗೆ ಹಾಗೂ ಟಿವಿ ಸೀರಿಯಲ್ ಮೇಕಪ್‌ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೀರಿ?

ಬಾಲಿವುಡ್‌ನ 3 ಚಿತ್ರಗಳು `ಲಕ್ಷ್ಯ್,’ `ಖೋಸಾ ಕಾ ಗೋಸಾ,’ ಅಮಾವಾಸ್‌ ಕೀ ಏಕ್‌ ರಾತ್‌’ ಮತ್ತು ಹಾಲಿವುಡ್‌ನ `ಕುಕಿಂಗ್‌ ವಿತ್‌ ಸ್ಟೆಲಾ,’ `ಹಾರ್ಟ್‌ ಲ್ಯಾಂಡ್‌’ ಚಿತ್ರಗಳಿಗೆ ಕೆಲಸ ಮಾಡಿದೆ. `ಕರೋಲ್ ಬಾಗ್‌ ಕೀ ಗಲಿಯಾಂ’ ನಾನು ಕೆಲಸ ಮಾಡಿದ ಟಿವಿ ಸೀರಿಯಲ್.

ಮದುವೆಯ ನಂತರ ನಿಮ್ಮ ಪತಿಯ ಸಪೋರ್ಟ್‌ ಹೇಗಿದೆ?

ನನ್ನ ಪತಿ ಆರಂಭದಿಂದ ಇದುವರೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇಲ್ಲದಿದ್ದರೆ ನಾನು ಈ ಹಂತ ತಲುಪುತ್ತಿರಲಿಲ್ಲ.

ಇಂಡಿಯನ್‌ ಬ್ಯೂಟಿಯಲ್ಲಿ ನಿಮಗೆ ಅತ್ಯಂತ ಇಷ್ಟವಾದದ್ದು ಯಾವುದು?

ಇಂಡಿಯನ್‌ ಬ್ಯೂಟಿಯಲ್ಲಿ ನನಗೆ ಅತ್ಯಂತ ಇಷ್ಟವಾದದ್ದು ಕಣ್ಣುಗಳು. ಅವು ನನ್ನನ್ನು ಮಾತ್ರ ಅಲ್ಲ ಎಲ್ಲರನ್ನೂ  ಆಕರ್ಷಿಸುತ್ತವೆ!

ಈಗ ನೀವು ಏನು ಮಾಡುತ್ತಿದ್ದೀರಿ?

ನಾನು ದೆಹಲಿಯಲ್ಲಿ `ದೆಹಲಿ ಸ್ಕೂಲ್ ‌ಆಫ್‌ ಮೇಕಪ್‌’ ತೆರೆದಿದ್ದೇನೆ. ಅಲ್ಲಿ ಆಸಕ್ತರಿಗೆ ಮೇಕಪ್‌ ತರಬೇತಿ ನೀಡುತ್ತೇನೆ.

ಮೇಕಪ್‌ ಮತ್ತು ಹೇರ್‌ ಸ್ಚೈಲ್‌ಗಳಲ್ಲಿ ಯಾ ಟ್ರೆಂಡ್‌ ಈಗ ಫ್ಯಾಷನ್‌ನಲ್ಲಿದೆ?

ಮೇಕಪ್‌ನಲ್ಲಿ ಸ್ಮೋಕಿ ಲುಕ್‌ ಹೆಚ್ಚು ಇಷ್ಟಪಡಲಾಗುತ್ತದೆ ಮತ್ತು ಸ್ಟ್ರೇಟ್‌ ಹೇರ್‌ ಜಾಗದಲ್ಲಿ ಕರ್ಲಿ ಹೇರ್‌ ಫ್ಯಾಷನ್‌ ಬಂದಿದೆ.

ಬ್ರೈಡಲ್ ಮೇಕಪ್‌ಗೆ ಏನು ಸಲಹೆ ಕೊಡುತ್ತೀರಿ? ಯಾವುದಾದರೂ ಬ್ಯೂಟಿ ಟ್ರೀಟ್‌ಮೆಂಟ್‌ನ್ನು ಮದುವೆಗೆ ಎಷ್ಟು ದಿನ ಮುಂಚೆ ಪಡೆಯಬೇಕು?

ವಧುವಿಗೆ ಸಮಯವಿದ್ದರೆ 3 ತಿಂಗಳು ಮೊದಲಿಂದಲೇ ಟ್ರೀಟ್‌ಮೆಂಟ್‌ ಪಡೆಯಬಹುದು. ಇಲ್ಲದಿದ್ದರೆ 10 ದಿನಗಳ ಕಾಲ ಮನೆಯಲ್ಲೇ ಬ್ಯೂಟಿ ಪ್ಯಾಕ್‌ ಉಪಯೋಗಿಸಬಹುದು ಮತ್ತು ನ್ಯಾಚುರಲ್ ಥೆರಪಿ ಪಡೆಯಬಹುದು.

ಕುಟುಂಬ ಹಾಗೂ ಕೆರಿಯರ್‌ ನಡುವೆ ಹೇಗೆ ಹೊಂದಿಸಿಕೊಳ್ಳುತ್ತೀರಿ?

ನಾನು ಎರಡನ್ನೂ ಒಟ್ಟಿಗೆ ಸಂಭಾಳಿಸುತ್ತೇನೆ. ಒಂದು ವೇಳೆ ಎಂದಾದರೂ ಎರಡರಲ್ಲಿ  ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದರೆ ನಾನು ಕುಟುಂಬವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ.

– ಕೆ. ಪ್ರಮೀಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ