ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಫೇಶಿಯಲ್‌ನ್ನು ಕ್ರೀಮ್ ಮಸಾಜ್ ಮುಖಾಂತರ ಕೈಗೊಳ್ಳಲಾಗುತ್ತದೆ. ಆದರೆ ಪ್ರಾಚೀನ ಮಸಾಜ್ ಥೆರಪೀಸ್‌ನಲ್ಲಿ ತೈಲಗಳ ಬಳಕೆ ಮಾಡಲಾಗುತ್ತದೆ. ಇವೆರಡರಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಸುಕ್ಕುಗಳನ್ನು ನಿವಾರಿಸಲು ತೈಲ ಹೆಚ್ಚು ಉಪಯುಕ್ತವಾಗಿದೆ.
ಬಾಡಿ ಮಸಾಜ್ ಮತ್ತು ಸ್ಪಾ
ಬಿಸಿ ನೀರಿನಲ್ಲಿ ರೋಸ್ ಟೋನರ್, ಕ್ಲೋನ್ ಆಯಿಲ್ ಹಾಗೂ ಪಂಚಗಂಧಾ ಆಯಿಲ್ ಹಾಕಿ. ನಂತರ ಆ ನೀರಿನಿಂದ ದೇಹ ಸ್ವಚ್ಛಗೊಳಿಸಿಕೊಳ್ಳಿ.
ಕೈಯಲ್ಲಿ ಸ್ವಲ್ಪ `ಯು ಅಂಡ್ ಮಿ’ ಪೌಡರ್ ಹಾಕಿಕೊಂಡು, ಅದನ್ನು ರೋಸ್ ಟೋನರ್‌ನ ನೀರಿನಿಂದ ಒದ್ದೆಯಾದ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.
ಬಳಿಕ ಕಾಯಾ ಲೇಪನದ ಕ್ರೀಮ್ ನ್ನು ದೇಹದ ಮೇಲೆ ಲೇಪಿಸಿಕೊಳ್ಳಿ.
ಇದಾದ ಬಳಿಕ ಈ ಕ್ರೀಮ್ ನ ಮೇಲ್ಭಾಗದಲ್ಲಿಯೇ ಮೇರಿಗೋಲ್ಡ್ ಸ್ಕ್ರಬ್‌ನಿಂದ ಸ್ಕ್ರಬಿಂಗ್ ಮಾಡಿ, ಮೊದಲು ಶುಷ್ಕ ಟಿಶ್ಯೂ ಪೇಪರ್‌ನಿಂದ ಬಳಿಕ ಒದ್ದೆ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.
ಈ ಪ್ರಕ್ರಿಯೆಯ ಬಳಿಕ ಇಂಗ್ಲಿಷ್ ಬ್ಲೀಚ್ ಕ್ರೀಮಿನಲ್ಲಿ ಸಮಾನ ಪ್ರಮಾಣದಲ್ಲಿ ಲೋಟಸ್ ಆಯಿಲ್ ಮಿಶ್ರಣ ಮಾಡಿಕೊಂಡು 1೦-15 ನಿಮಿಷಗಳ ಬಳಿಕ ಮಸಾಜ್ ಮಾಡಿಕೊಳ್ಳಿ. ಏಕೆಂದರೆ ಟ್ಯಾನ್‌ನ್ನು ನಿವಾರಿಸಬೇಕು. ನಂತರ ಅದನ್ನು ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.
ಈಗ ಆ ಭಾಗದಲ್ಲಿ ಮೊಸರನ್ನು ಲೇಪಿಸಿ.
ಒಂದು ಬಟ್ಟಲಿನಲ್ಲಿ ಸ್ವಲ್ಪ ಲೋಟಸ್ ಆಯಿಲ್, ಹರ್ಬಲ್ ಜ್ಯೂಸ್, 2-3 ಹನಿ ಶೈನ್ ಲೋಶನ್ ಹಾಗೂ ಸ್ವಲ್ಪ ಎಂಜೈಮ್ ಕ್ರೀಮ್ ಇನ್ ಆಯಿಲ್ ಮಿಶ್ರಣ ಮಾಡಿ ಪೋಟಲಿ ಮಸಾಜ್ ಮಾಡಲು ಹರ್ಬಲ್ ಪೋಟಲಿಗಳು ಕೂಡ ಸಿಗುತ್ತವೆ. ಪೋಟಲಿ ಅಂದರೆ ಹರ್ಬ್ಸ್ ತುಂಬಿದ ಬಟ್ಟೆ ಗಂಟನ್ನು ಈ ಬಟ್ಟಲಿನಲ್ಲಿ ಅದ್ದಿ ಮೊಸರಿನ ಮೇಲೆ ಚಲಿಸಿ ಹಾಗೂ ಅದರಿಂದ ಮಸಾಜ್ ಮಾಡಿ.
ಈಗ ರೋಸ್ ಟೋನರ್‌ನಿಂದ ಮುಖಕ್ಕೆ ಹೊಳಪು ಕೊಡಿ. ಇದಕ್ಕಾಗಿ ಟಿಶ್ಯೂ ಪೇಪರ್‌ನ್ನು ಹಿಂಡಿ ಬೆರಳಿನಿಂದ ಉಜ್ಜಿ. ಪೋಟಲಿಯಿಂದ ಮಸಾಜ್ ಮಾಡಿದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ.
ಕಾಯಾ ಲೇಪನದಲ್ಲಿ ರೋಸ್ ಟೋನ್ ಮಿಶ್ರಣ ಮಾಡಿ ದೇಹಕ್ಕ ಲೇಪಿಸಿ ಹಾಗೂ ಅದು ಒಣಗಲು ಬಿಡಿ. ನಂತರ ಪೋಟಲಿಯಿಂದ ಮಸಾಜ್ ಮಾಡಿ ಲೇಪನವನ್ನು ನಿವಾರಿಸಿ. ಬಳಿಕ ಶುಷ್ಕ ಹಾಗೂ ಒದ್ದೆ ಟಿಶ್ಯೂವಿನಿಂದ ಸ್ವಚ್ಛಗೊಳಿಸಿ.
ಸುಕ್ಕು ನಿವಾರಿಸಲು ಮುಖ ಲೇಪನ
ಒಂದು ಚಿಕ್ಕ ಟಬ್‌ನಲ್ಲಿ ಬಿಸಿ ನೀರಿನಲ್ಲಿ ರೋಸ್ ಟೋನರ್ ಮಿಶ್ರಣಗೊಳಿಸಿ. ಈ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ.
ಮುಖಕ್ಕೆ ರೋಸ್ ಫೇಸ್ ವಾಶ್ ಹಾಕಿ. ಮೊದಲು ಶುಷ್ಕ ಟಿಶ್ಯೂ ಪೇಪರಿನಿಂದ ಮತ್ತು ನಂತರ ನೀರಿನಿಂದ ಒದ್ದೆಯಾದ ಟಿಶ್ಯು ಪೇಪರ್‌ನಿಂದ ಸ್ವಚ್ಚಗೊಳಿಸಿಕೊಳ್ಳಿ.
ಮೇರಿ ಗೋಲ್ಡ್ ಸ್ಕ್ರಬ್‌ನಿಂದ ಮುಖದ ಸ್ಕ್ರಬಿಂಗ್ ಮಾಡಿಕೊಳ್ಳಿ. ಬೆರಳಿನಿಂದ ಕೆಳಭಾಗದಿಂದ ಮೇಲ್ಭಾಗದತ್ತ ಮಸಾಜ್ ಮಾಡಿ.
ಮೊದಲು ಶುಷ್ಕ ಟಿಶ್ಯೂ ಪೇಪರಿನಿಂದ ಬಳಿಕ ಒದ್ದೆ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.
ಎಂಜೈಮ್ ಕ್ರೀಮ್ ಇನ್ ಆಯಿಲ್‌ನಿಂದ ಕೆಳಭಾಗದಿಂದ ಕ್ರೀಮ್ ತೆಗೆದು ಕಾಯಾ ಲೇಪನದಲ್ಲಿ ಮಿಶ್ರಣ ಮಾಡಿಕೊಂಡು ಮುಖದ ಮಸಾಜ್ ಮಾಡಿಕೊಳ್ಳಿ. ಅದರ ಮೇಲ್ಭಾಗದಲ್ಲಿ ಮೊಸರು ಲೇಪಿಸಿ.
ಮೊಸರಿನಲ್ಲಿ ಪೋಟಲಿಯಿಂದ ಮಸಾಜ್ ಮಾಡಿಕೊಳ್ಳಿ.
ಈ ಎಂಜೈಮ್ ಕ್ರೀವ್ ಇನ್ ಆಯಿಲ್‌ನಿಂದ ಕೇವಲ ಎಣ್ಣೆಯನ್ನು ಟಿಶ್ಯೂ ಪೇಪರಿನಲ್ಲಿ ತೆಗೆದುಕೊಳ್ಳಿ ಹಾಗೂ ತೈಲಧಾರೆ ಕೊಡಿ.
ಸ್ವಚ್ಛವಾದ ಟಿಶ್ಯೂ ಪೇಪರ್‌ನಿಂದ ಮೊದಲು ಕಣ್ಣುಗಳನ್ನು ನಂತರ ಇಡೀ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ.
ಈಗ ಮುಖವನ್ನು ಸ್ವಲ್ಪ ಒದ್ದೆ ಮಾಡಿಕೊಂಡು, `ಕ್ಲೇ ಡೂ’ ಪ್ಯಾಕ್ ಲೇಪಿಸಿ. ನಂತರ ಅದರ ಮೇಲೆ ಗುಲಾಬಿ ಹೂಗಳನ್ನು ಇಡಿ. ಅವನ್ನು ಕೈಗಳಿಂದ ಚೆನ್ನಾಗಿ ಒತ್ತಿ, ಏಕೆಂದರೆ ಇವುಗಳ ಸುವಾಸನೆ ಹಾಗೂ ಜಲ ಒಳಭಾಗದತ್ತ ತಲುಪಲಿ.
10 ನಿಮಿಷಗಳ ಬಳಿಕ ಅದನ್ನು ಸ್ವಚ್ಛಗೊಳಿಸಿಕೊಳ್ಳಿ.
ಹೇರ್ ಸ್ಪಾ
ಇದು ಕೂದಲಿಗೆ ಹೊಳಪನ್ನಂತೂ ನೀಡಿಯೇ ನೀಡುತ್ತದೆ. ಜೊತೆಗೆ ಇದನ್ನು 3 ತಿಂಗಳ ಕಾಲ ಪ್ರತಿ ವಾರ ಮಾಡಿಸುತ್ತಿದ್ದರೆ ಬಕ್ಕತನದ ಸಮಸ್ಯೆ ಉದ್ಭವಿಸುವುದೇ ಇಲ್ಲ.
ಹೇಗೆ ಮಾಡಬೇಕು?
ಬಿಸಿ ನೀರಿನಲ್ಲಿ ಕ್ಲೋನ್ ಆಯಿಲ್ ಹಾಕಿ ಹಾಗೂ ಕೂದಲನ್ನು ಮುಳುಗಿಸಿ, ಬಳಿಕ ಟವೆಲ್‌ನಿಂದ ತಲೆ ಕಟ್ಟಿಕೊಳ್ಳಿ.
ಈಗ ಒಂದು ಲೋಟದಲ್ಲಿ ರೋಸ್ ವಾಟರ್ ಹಾಕಿಕೊಂಡು ಕೂದಲಿಗೆ ಶಿರೋಧಾರಾ ಕೊಡಿ, ಅಂದರೆ ಲೋಟದಿಂದ ನಿಧಾನವಾಗಿ ಸುರಿಯಿರಿ. ಈ ಪ್ರಕ್ರಿಯೆಯನ್ನು 3-4 ಸಲ ಪುನರಾವರ್ತಿಸಿ. ಇದರಿಂದ ಹೊಟ್ಟಂತೂ ಹೋಗುತ್ತದೆ. ಜೊತೆಗೆ ಕೇಶವರ್ಣ ಸ್ಥಿರವಾಗುತ್ತದೆ. ಈ ನೀರನ್ನು ಕ್ಲೋನ್ ಆಯಿಲ್‌ನ ಟಬ್‌ನಲ್ಲಿ ಬೀಳಿಸಿ.
ಒಂದು ಕಪ್ ಬಿಸಿ ಹಾಲನ್ನು ಲೋಟದಲ್ಲಿ ಹಾಕಿಕೊಳ್ಳಿ ಮತ್ತು ಕೂದಲಿಗೆ ಶಿರೋಧಾರ ಕೊಡಿ, ನಂತರ ಟಬ್‌ನಿಂದ ನೀರು ಹಾಕಿಕೊಳ್ಳಿ. ಈ ಪ್ರಕ್ರಿಯೆಯನ್ನು 3-4 ಬಾರಿ ಮಾಡಿ. ತಲೆ ಕೆಳಗೆ ನೀರಿನ ಟಬ್ ಇಟ್ಟಿರಬೇಕು. ಏಕೆಂದರೆ ಹಾಲು ಕೂಡ ಅದೇ ನೀರಿನಲ್ಲಿ ಮಿಶ್ರಣಗೊಳ್ಳಬೇಕು. ಈ ರೀತಿ ಕೂದಲಿಗೆ ನೀರು ಹಾಗೂ ಹಾಲಿನ ಧಾರೆಯನ್ನು 3-4 ಸಲ ಕೊಡಿ.
ಕೂದಲಿಗೆ ಹೇರ್ ರಿಪೇರ್ ಕ್ರೀಮ್ ಲೇಪಿಸಿ. ಇದು ತುಂಡಾದ ಕೂದಲು ಮತ್ತು ಹೊಟ್ಟು ಉಂಟಾಗದಂತೆ ತಡೆಯುತ್ತದೆ.
ನೀರಿನಿಂದ 2-3 ಚಮಚ ಹೇರ್ ಟಾನಿಕ್ ಹಾಗೂ ಅಷ್ಟೇ ಪ್ರಮಾಣದಲ್ಲಿ ಕುದಿಸಿ ಆರಿಸಿದ ಹೇರ್ ಆಯಿಲ್ ಹಾಕಿ.
ಈಗ ಪಾತ್ರೆಯೊಂದರಲ್ಲಿ ಟಬ್‌ನಲ್ಲಿನ ನೀರನ್ನು ತುಂಬಿಕೊಂಡು ಸುಮಾರು 20 ನಿಮಿಷಗಳ ಕಾಲ ತಲೆ ಮೇಲೆ (ಕೂದಲನ್ನು ಅತ್ತಿತ್ತ ಸರಿಸುತ್ತ) ಸುರಿಯುತ್ತಾ ಇರಿ.
ಮೊಸರು
ಇಲ್ಲಿ ಟೋನರ್‌ನಲ್ಲಿ ಹೇರ್ ಪ್ಯಾಕ್ ಮಿಶ್ರಣ ಮಾಡಿಕೊಂಡು ಅದರಿಂದ 10-15 ನಿಮಿಷಗಳ ಕಾಲ ತಲೆಯ ಮಸಾಜ್ ಮಾಡಿಕೊಳ್ಳಿ. ಸಾಧ್ಯವಾದರೆ ಮೊಸರಿನಲ್ಲಿ ಪಂಚಗಂಧಾ ಆಯಿಲ್‌ಹಾಕಿಕೊಳ್ಳಿ.
ಈಗ ಶ್ಯಾಂಪೂವಿನಿಂದ ಕೂದಲು ತೊಳೆದುಕೊಳ್ಳಿ.
– ಮಾಧವಿ.