ಆಸ್ಕರ್‌ ಚಲನ ಚಿತ್ರೋತ್ಸವದಲ್ಲಿ ಮಾಧ್ಯಮದವರು ಚೆಲುವೆಯರ ಛಾಯಾಚಿತ್ರಗಳನ್ನು ಸೆರಿಹಿಡಿಯುವ ಭಂಗಿಯೇ ಬಹಳ ವಿಶೇಷ ಮುದ ನೀಡುತ್ತದೆ. ಇಷ್ಟೊಂದು ಉತ್ಸುಕತೆ ಬಹುಶಃ ಬೇರೆಲ್ಲೂ ನೋಡಲು ಸಿಗುವುದಿಲ್ಲ ಅನಿಸುತ್ತೆ.

ಅದರ ಏಕೈಕ ಕಾರಣವೇನೆಂದರೆ ಆಸ್ಕರ್‌ ಚಲನಚಿತ್ರೋತ್ಸವಕ್ಕೆ ಬರುವ ತಾರೆಯರು ಹಾಗೂ ಇತರೆ ಪ್ರತಿಷ್ಠಿತ ಸೆಲೆಬ್ರಿಟಿಗಳು ಧರಿಸಿರುವ ಗೌನ್‌.

ಈಗಂತೂ ಕಾನ್ಸ್ ಚಿತ್ರೋತ್ಸವ, ಮೋಶನ್‌ ಪಿಕ್ಚರ್ಸ್‌ ಅಕಾಡೆಮಿ ಅವಾರ್ಡ್‌ (ಆಸ್ಕರ್‌ ಪ್ರಶಸ್ತಿ ವಿತರಣಾ ಸಮಾರಂಭ) ಮತ್ತು ಅಮೆರಿಕದ ರಾಷ್ಟ್ರಪತಿ ಭವನ ಅಂದರೆ ವೈಟ್‌ ಹೌಸ್‌ನಲ್ಲಿ ನಡೆಯುವ ಅಮೆರಿಕ ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭದ ಗೌನ್‌ಗಳು ಅತಿ ಹೆಚ್ಚು ಚಿರಪರಿಚಿತ ಎನಿಸಿವೆ. ಈ ಎಲ್ಲ ಸಮಾರಂಭಗಳಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಜಗತ್ತಿನ ಮಹಾಸುಂದರಿಯರು ಸೊಂಟ ಬಳುಕಿಸುತ್ತ ನಡೆಯುವ ಪರಿ ಆಕರ್ಷಣೆಗೆ ಪಾತ್ರವಾಗುತ್ತದೆ.

ಅಮೆರಿಕ ರಾಷ್ಟ್ರಾಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ವಿಶ್ವ ಪ್ರಸಿದ್ಧ ರಾಜಕೀಯ ಮುಖಂಡರು, ಹೆಸರಾಂತ ಉದ್ಯಮಿಗಳು, ಮಹಾನ್‌ ಕ್ರೀಡಾಪಟುಗಳು, ಸುಪ್ರಸಿದ್ಧ ನಟನಟಿಯರು ಹಾಗೂ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಾರೆ.

IMG_0419option (1)

ಕೋಡಕ್‌ ಥಿಯೇಟರಿನ ಕೆಂಪು ಕಾರ್ಪೆಟ್‌ನ ಮೇಲೆ ಹೆಜ್ಜೆ ಹಾಕುವ ಚೆಲುವೆಯರು ಚಲನ ಚಿತ್ರರಂಗದ ಅತಿಗಣ್ಯ ತಾರೆಯರಾಗಿರುತ್ತಾರೆ. ಕಾನ್ಸ್ ಚಿತ್ರೋತ್ಸವದಲ್ಲೂ ಇದೇ ಪರಿಪಾಠ ಇದೆ.

ಸಾಮಾನ್ಯವಾಗಿ ಕಾನ್ಸ್ ಹಾಗೂ ಆಸ್ಕರ್‌ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಮ್ಮ ಸೌಂದರ್ಯದಿಂದ ಇಡೀ ಜಗತ್ತಿನ ನಿದ್ದೆಗೆಡಿಸಿದ ಸ್ವಪ್ನ ಸುಂದರಿಯರು ಅತ್ಯಂತ ಆಕರ್ಷಕ ಎನ್ನಬಹುದಾದ ಗೌನ್‌ನಲ್ಲಿಯೇ ಕಂಡುಬರುತ್ತಾರೆ. ಮರ್ಲಿನ್‌ ಮನ್ರೊ ಆಗಿರಬಹುದು, ಗ್ರೇಟಾ ಗಾರ್ಬೋ ಇರಬಹುದು, ಎಲಿಜಬೆತ್‌ ಟೇಲರ್‌, ಜೂಲಿಯಾ ರಾಬರ್ಟ್ಸ್ ಅಥವಾ ಇಂದಿನ ಏಂಜಲಿನಾ ಜೋಲಿ, ಪ್ಯಾರಿಸ್‌ ಹಿಲ್ಟನ್‌ ಕ್ಯಾಂಟ್‌ ಬಿಸ್ಲೆಟ್‌, ಐಶ್ವರ್ಯಾ ರೈ, ಕಾಯ್ಲಿ ಮೆನಾಗ್‌ ಅಥವಾ ಮಲ್ಲಿಕಾ ಶೆರಾವತ್‌…. ಈ ಎಲ್ಲ ಸ್ವಪ್ನ ಸುಂದರಿಯರೂ ಕೆಂಪು ಕಾರ್ಪೆಟ್‌ನ ಮೇಲೆ ಬಳುಕುತ್ತ ಸಾಗಲು ಆಕರ್ಷಕ ಗೌನ್‌ ಆಯ್ಕೆ ಮಾಡಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಇಬ್ಬರು ತಾರೆಯರಾದ ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್‌ ಕಾನ್ಸ್ ಚಿತ್ರೋತ್ಸವದಲ್ಲಿ ತಮ್ಮ ನಿಯಮಿತ ಉಪಸ್ಥಿತಿಯನ್ನು ನೀಡುವುದರ ಜೊತೆ ಜೊತೆಗೆ ಕಣ್ಣು ಕೋರೈಸುವ ಗೌನ್‌ನಲ್ಲಿ ಭಾರತದ ಗ್ಲಾಮರ್‌ನ್ನು ಚರ್ಚೆಯಲ್ಲಿಡುವಂತಹ ಕೆಲಸ ಮಾಡಿದ್ದಾರೆ. 4 ವರ್ಷಗಳ ಹಿಂದೆ ಕಾನ್ಸ್ ಚಿತ್ರೋತ್ಸದಲ್ಲಿ ಐಶ್ವರ್ಯಾ ರೈ ಈವಾ ಲಾಂಗೋರಿಯಾ ಜೊತೆಗೆ ಕೆಂಪು ಕಾರ್ಪೆಟ್‌ ಮೇಲೆ ಬಳುಕುತ್ತಾ ಸಾಗುವಾಗಿನ ದೃಶ್ಯ ಮನಸ್ಸನ್ನು ತಡೆದು ನಿಲ್ಲಿಸುವಂತಿತ್ತು. ಅವರ ಈ ಸೌಂದರ್ಯದ ಜಾದೂವಿಗೆ ಕಾರಣವಾದದ್ದು ಅವರು ತೊಟ್ಟಿದ್ದ ಆಕರ್ಷಕ ಗೌನ್‌.

ಮಲ್ಲಿಕಾ ಶೆರಾವತ್‌, ಸಲ್ಮಾ ಹಯಾತ್‌ ಹಾಗೂ ಕೆಂಟ್‌ ಅವರು ಧರಿಸಿದ ಡಿಸೈನರ್‌ ಗೌನ್‌ಗಳ ಬಗೆಗೂ ಆಗ ಸಾಕಷ್ಟು ಚರ್ಚೆಯಾಗಿತ್ತು.

ಸಮಾರಂಭದ ಮೆರುಗು

496684-01-02 (1)

ಅಂದಹಾಗೆ ಅದು ದೊಡ್ಡ ಸಿನಿಮಾ ಉತ್ಸವವೇ ಆಗಿರಬಹುದು ಅಥವಾ ವಿಶ್ವಪ್ರಸಿದ್ಧ ಸೆಲೆಬ್ರಿಟಿಯೊಬ್ಬರ ಮದುವೆ ಸಮಾರಂಭ. ಪಾಶ್ಚಿಮಾತ್ಯ ದೇಶಗಳ ರಾಜ್ಯಾಭಿಷೇಕ ಸಮಾರಂಭವಿರಬಹುದು ಅಥವಾ ವಿಶ್ವವಿದ್ಯಾಲಯವೊಂದರ ಪದವಿ ಪ್ರದಾನ ಸಮಾರಂಭ. ವ್ಯಾಯಾಟಿಕನ್‌ ಸಿಟಿಯಲ್ಲಿ ವರ್ಷಕ್ಕೊಮ್ಮೆ ಪೋಪ್‌ ಮಾಡುವ ವಿಶೇಷ ಭಾಷಣ ಸಮಾರಂಭ ಅಥವಾ ಕ್ರೈಸ್ತರ ಪಾರಂಪರಿಕ ಮದುವೆ ಸಮಾರಂಭಗಳಲ್ಲಿ ಗೌನ್‌ಗೆ ಅತ್ಯಂತ ಪ್ರಮುಖ ಸ್ಥಾನವಿರುತ್ತದೆ.

ಗೌನ್‌ ಪಾಶ್ಚಿಮಾತ್ಯ ಅಥವಾ ಅದರಲ್ಲೂ ಅದು ಯೂರೋಪಿಯನ್‌ ಸಂಸ್ಕೃತಿಯ ಒಂದು ಅಪ್ರತಿಮ ಕೊಡುಗೆ. ಆದರೆ ಅದೀಗ ವಿಶ್ವರೂಪ ಪಡೆದುಕೊಂಡಿದೆ. ಪಾರಂಪರಿಕ ಹಿಂದೂ ಮದುವೆ ಸಮಾರಂಭಗಳಲ್ಲೂ ಒಮ್ಮೊಮ್ಮೆ ಹುಡುಗಿ ಗೌನ್‌ನಲ್ಲಿ ಪ್ರತ್ಯಕ್ಷವಾಗುತ್ತಾಳೆ. ಅಂದರೆ ಇದರರ್ಥ ಗೌನ್‌ ಕೇವಲ ಪಾರಂಪರಿಕ ಪೋಷಾಕು ಅಲ್ಲ.

ಅದು ಹಲವು ಬಗೆಯ ವೃತ್ತಿ, ಹಲವು ಬಗೆಯ ಸಮಾರಂಭಗಳ, ಬೇರೆ ಬೇರೆ ಸಮಯಕ್ಕೂ ಹೊಂದುವಂತಹ ಪೋಷಾಕು ಕೂಡ ಆಗಿದೆ. ಗೌನ್‌ ಕೇವಲ ಮಹಿಳೆಯರ ಪೋಷಾಕು ಅಲ್ಲ. ಅದು ಹಿಂದೆಯೂ ರಿಸರ್ಚ್‌ ಸ್ಕಾಲರ್‌, ಪಾದ್ರಿ, ಡಾಕ್ಟರ್‌, ನ್ಯಾಯಾಧೀಶರು, ವಕೀಲರು ಅಂದರೆ ಪುರುಷ ವೃತ್ತಿಪರರು ಕೂಡ ಧರಿಸುವುದು ಕಂಡುಬರುತ್ತದೆ. ಇದು ಬಹಳ ಮೊದಲೇ ರಾಜಮಹಾರಾಜರಿಂದ ಹಿಡಿದು, ಸೇನಾಪತಿಗಳು ಮತ್ತು ಪುರೋಹಿತರ ದೇಹಕ್ಕೆ ಹೊಂದುವಂತಹ ಆಕರ್ಷಕ ಪೋಷಾಕು ಆಗಿತ್ತು.

SF1132168

`ಗೌನ್‌’ ಶಬ್ದ ವ್ಯಾಟಿನ್‌ ಭಾಷೆಯ `ಗುನ್ನಾ’ ಶಬ್ದದಿಂದ ಬಂದಿದೆ. ಇದರ ಸಾಮಾನ್ಯ ಅರ್ಥ ಸಡಿಲವಾದ ಪೋಷಾಕು ಕುತ್ತಿಗೆ ಭಾಗದಿಂದ ಮೊಣಕಾಲಿನ ತನಕ ಇರಬಹುದಾಗಿದೆ. ಎದೆಭಾಗದಿಂದ ಹಿಡಿದು ಉಗುರಿನ ತುದಿಯ ತನಕ ಹೊದಿಸಲ್ಪಟ್ಟಿರುತ್ತದೆ. ಇದು ಮಹಿಳೆ ಹಾಗೂ ಪುರುಷರಿಬ್ಬರ ಪೋಷಾಕು ಹಾಗೂ 17ನೇ ಶತಮಾನದ ಆದಿಭಾಗದಿಂದಲೂ ಇದನ್ನು ಧರಿಸಲಾಗುತ್ತಿದೆ.

ಭಾರತದ ಸಾಧುಸಂತರು, ಫಕೀರರು ಧರಿಸುವ ಪೋಷಾಕು ಕೂಡ ಹೆಚ್ಚು ಕಡಿಮೆ ಗೌನ್‌ನ ಒಂದು ರೂಪವೇ ಆಗಿದೆ. ಸಾಧುಸಂತರ ಪಂಚೆಯನ್ನು ಗೌನ್‌ನ ಒಂದು ರೂಪ ಎನ್ನುವುದಾದರೆ, ನಮ್ಮ ಈ ಗೌನ್‌ ಪರಂಪರೆ ಯೂರೋಪಿನ ಗೌನ್ ಪರಂಪರೆಗಿಂತ ಅತ್ಯಂತ ಹಳೆಯದಾಗಿದೆ ಎಂದೂ ನಾವು ಹೇಳಬಹುದು. ಆದರೆ ಇದು ಒಂದು ವಿಶಿಷ್ಟ ಸಮಾಜ ಹಾಗೂ ವರ್ಗಕ್ಕೆ ಮಾತ್ರ ಸೀಮಿತವಾಗಿದೆ.

ಬಹುತೇಕ ಭಗವಾ ಪೋಷಾಕು ಧರಿಸುವ ಸಾಧುಗಳು ಇಡೀ ಪೋಷಾಕು ಒಂದೇ ಬಟ್ಟೆಯಿಂದ ಮಾಡಿರಬೇಕು ಎನ್ನುತ್ತಾರೆ. ಅದಕ್ಕೇ ಅವರು ಪ್ರಾಧಾನ್ಯತೆ ಕೊಡುತ್ತಾರೆ. ಭಾರತದಲ್ಲಿ ಅದೆಷ್ಟೋ ಸಂಪ್ರದಾಯಗಳಿದ್ದು, ಅವರು ಈ ಪಂಚೆಯನ್ನೇ ಅಧಿಕೃತ ಪೋಷಾಕು ಎಂದು ಭಾವಿಸುತ್ತಾರೆ.

ಒಂದು ವೇಳೆ ಬಾಲಿವುಡ್‌ನಲ್ಲಿ ಯಾರಿಗಾದರೂ `ಗೌನ್‌ ಕ್ವೀನ್‌’ನ ಪುರಸ್ಕಾರ ಕೊಡಬೇಕೆಂದರೆ, ಅದನ್ನು ಕಣ್ಣುಮುಚ್ಚಿಕೊಂಡು ಐಶ್ವರ್ಯಾ ರೈ ಬಚ್ಚನ್‌ಗೆ ಕೊಡಬಹುದು. ಐಶ್ವರ್ಯಾ 2000 ರಿಂದ 2010ರ ತನಕ ನಿರಂತರವಾಗಿ ಕಾನ್‌್ಸ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿವರ್ಷ ಅವರು ಒಂದು ವಿಶಿಷ್ಟ ಗೌನ್‌ನಲ್ಲಿ ಕಂಡುಬಂದಿದ್ದಾರೆ. ಅವರ ಗೌನ್ ಎಷ್ಟೊಂದು ಮಾದಕವಾಗಿರುತ್ತಿತ್ತೆಂದರೆ, ಪಾರಂಪರಿಕ ಭಾರತದ ಮಾಧ್ಯಮಗಳು ಅವರನ್ನು ಟೀಕಿಸುವುದು ಬಿಡಿ, ವಿದೇಶಿ ಮಾಧ್ಯಮಗಳು ಕೂಡ ಅವರನ್ನು ಟೀಕಿಸಿದ್ದವು!

ಗೌನ್‌ ಮಹಿಳೆ ಮತ್ತು ಪುರುಷ ಇಬ್ಬರ ಪೋಷಾಕು ಆಗಿರಬಹುದು. ಆದರೆ ಇದು ಪುರುಷರಿಗೆ ವಿಶೇಷ ಸಂದರ್ಭದ ಪೋಷಾಕು ಮಾತ್ರ ಎಂದಾಗಿದ್ದರೆ, ಮಹಿಳೆಯರಿಗೆ ಮಾತ್ರ ಇದು ವಿಶೇಷ ಸಂದರ್ಭದ ಪೋಷಾಕವಾಗಿ ಉಳಿದಿಲ್ಲ. ಇದನ್ನು ಆಕೆ ಯಾವಾಗ ಬೇಕೆಂದಾಗ, ಎಲ್ಲೆಂದರಲ್ಲಿ ಧರಿಸಬಹುದಾಗಿದೆ. ಆದರೆ ಆಕೆ ಹೀಗೆ ಮಾಡುವುದು ತನ್ನ ಸೌಂದರ್ಯದ ಜಾದೂ ತೋರಿಸಬೇಕೆಂದು ಮನಸ್ಸು ಮಾಡಿದಾಗ ಮಾತ್ರ.

ಸೆಕ್ಸ್ ಸಿಂಬಲ್ ಡ್ರೆಸ್

G5P7482

ಗೌನ್‌ ಇಂದಿನ ದಿನಗಳಲ್ಲಿ ಮಹಿಳೆಯರ ಅತ್ಯಂತ ಮನಸೆಳೆಯುವ ಹಾಗೂ ಅವರಿಗೆ ಎಕ್ಸ್ ಪೋಶರ್‌ನ ಖಾತ್ರಿ ಕೊಡುವ ಸೆಕ್ಸಿ ಡ್ರೆಸ್‌ ಎಂದೂ ಹೇಳಲಾಗುತ್ತದೆ. ಇದು ಉದ್ದನೆಯ ಹಾಗೂ ಫಿಟೆಡ್‌ ಅಂದರೆ ದೇಹದ ಆಕಾರಕ್ಕನುಗುಣವಾಗಿ ಫಿಟ್‌ ಆಗಿರುವ ಡ್ರೆಸ್‌ ಆಗಿರುತ್ತದೆ.

18ನೇ ಶತಮಾನದಲ್ಲಿ ಗೌನ್‌ನ್ನು ಒಂದು ಇನ್‌ಫಾರ್ಮಲ್ ಕೋಟಿನ ರೂಪದಲ್ಲಿ ಧರಿಸಲಾಗುತ್ತಿತ್ತು. ಯೂರೋಪ್‌ನಲ್ಲಿ ಕ್ರೌನ್‌ ಪ್ರಿನ್ಸ್ ರಿಂದ ಹಿಡಿದು ಚಿಕ್ಕ ಚಿಕ್ಕ ಶ್ರೀಮಂತರು ಹಾಗೂ ನವಾಬರು ತಮ್ಮ ಪ್ರತಿಷ್ಠೆ ಪ್ರದರ್ಶಿಸಲು ಇದನ್ನು ಧರಿಸುತ್ತಿದ್ದರು.

ಇಂದು ಇದು ನ್ಯಾಯಾಧೀಶರು, ಧರ್ಮಗುರು, ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಆಹಾರ ತಯಾರಿಸುವ ಕೆಫೆಗಳ ಪೋಷಾಕಾಗಿದೆ. ಇದು ಒಂದು ರೀತಿಯಲ್ಲಿ ಅವರಿಗೆ ಸಮವಸ್ತ್ರವೇ ಹೌದು. ಆಗ ಇದು ಮಹಿಳೆ ಹಾಗೂ ಪುರುಷರ ಈವ್ನಿಂಗ್‌ ಡ್ರೆಸ್‌, ಮಾರ್ನಿಂಗ್ ಡ್ರೆಸ್‌, ಟ್ರಾವೆಲಿಂಗ್‌ ಡ್ರೆಸ್‌ ಹಾಗೂ ಫುಲ್ ಡ್ರೆಸ್‌ನ ರೂಪದಲ್ಲಿ ವರ್ಗೀಕರಣ ಮಾಡಲಾಗಿತ್ತು.

18ನೇ ಶತಮಾನದ ಮಧ್ಯಭಾಗದತನಕ ಗೌನ್‌ ಹಾಗೂ ಫ್ರಾಕ್‌ಗಳು ಒಂದಕ್ಕೊಂದು ಪರ್ಯಾಯವಾಗಿದ್ದವು. ಎರಡಕ್ಕೂ ಒಂದೇ ಶಬ್ದ ಬಳಸಲಾಗುತ್ತಿತ್ತು. ಎರಡರಲ್ಲಿನ ಒಂದೇ ವ್ಯಾತ್ಯಾಸವೆಂದರೆ ಗೌನ್‌ನ ಬಟ್ಟೆ ತುಸು ದಪ್ಪಗೆ ಇರುತ್ತಿತ್ತು ಹಾಗೂ ಫ್ರಾಕ್‌ನ ಬಟ್ಟೆ ತುಸು ತೆಳ್ಳಗೆ ಇರುತ್ತಿತ್ತು. ಈಚೆಗೆ ಹಳೆಯ ವಸ್ತುಗಳು ಹೊಸ ಸೌಂದರ್ಯ ಹಾಗೂ ತಾಜಾತನ ಪಡೆದುಕೊಂಡಿವೆ. ಈ ಹೊಸ ವಿಶಿಷ್ಟ ಪ್ರಯೋಗವನ್ನು `ಫ್ಯೂಷನ್‌’ ಹೆಸರಿನಿಂದ ಕರೆಯಲಾಗುತ್ತದೆ. ಗೌನ್‌ ಕೂಡ ಈ ಫ್ಯೂಷನ್‌ನಿಂದಾಗಿ ಸಾಕಷ್ಟು ಸಮೃದ್ಧವಾಗಿದೆ. ಅದೀಗ ಕಲಾತ್ಮಕ ಸೌಂದರ್ಯ, ಜ್ಯಾಮಿತೀಯ ಕೌಶಲದ ಜೊತೆಗೆ ಅತ್ಯಂತ ಸುಂದರ ಹಾಗೂ ಮಹಿಳೆಯರ ಗ್ಲಾಮರ್‌, ವ್ಯಕ್ತಿತ್ವ ದರ್ಶಿಸುವ ಸಾಧನವಾಗಿದೆ. ಹಾಗೆಂದೇ ಸಮಸ್ತ ಸುಂದರ ಮಹಿಳೆಯರು ಹಾಗೂ ಸೆಲೆಬ್ರಿಟಿಗಳು ವಿಶೇಷ ಸಂದರ್ಭಕ್ಕೆ ಇದೇ ಉಡುಗೆ ತೊಡಲು ಕಾತುರದಿಂದಿರುತ್ತಾರೆ.

– ವೀಣಾ ಸುಹಾಸ್‌

ಬಗೆಬಗೆಯ ಗೌನ್‌ಗಳು

hospital-gown (1)

ಅಕಾಡಿಮಿಕ್‌ ಗೌನ್‌ : ಇದನ್ನು `ಅಕಾಡೆಮಿಕ್‌ ಡ್ರೆಸ್‌’ ಅಥವಾ `ಅಕಾಡೆಮಿಕ್‌ ಡ್ರೆಸ್‌’ ಎಂದೂ ಹೇಳಲಾಗುತ್ತದೆ. ಈ ಪೋಷಾಕಿಗೆ ಪರಿಪೂರ್ಣ ಪಾರಂಪರಿಕ ರೂಪ ಇದೆ. ಇದನ್ನು ಧರಿಸಿ ಸ್ಕಾಲರ್‌ಗಳು ಪದವಿ ಪಡೆದುಕೊಳ್ಳುತ್ತಾರೆ. ವಿದ್ವಾಂಸರು ಅಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಅಂದಹಾಗೆ ಅಕಾಡೆಮಿಕ್‌ ಗೌನ್‌ನ್ನು ಪದವಿ ಪ್ರದಾನ ಸಮಾರಂಭದಲ್ಲಷ್ಟೇ ಧರಿಸುತ್ತಾರೆ. ಹೀಗಾಗಿ ಈ ಡ್ರೆಸ್‌ಗೆ `ಡಿಗ್ರಿ ಡ್ರೆಸ್‌’ ಎಂದೂ ಕರೆಯುತ್ತಾರೆ. ಆದರೆ ಲಿಖಿತವಾಗಿ ಇದನ್ನು `ಅಕಾಡೆಮಿಕ್‌ ಡ್ರೆಸ್‌’ ಎಂದೇ ಉಲ್ಲೇಖಿಸುತ್ತಾರೆ. ಅಮೆರಿಕದಲ್ಲಿ ಇದನ್ನು `ಅಕಾಡೆಮಿಕ್‌ ರಿಗಲಿಯಾ’ ಎಂದು ಕರೆಯುತ್ತಾರೆ.

ಬಾಲ ಗೌನ್‌ : ಇದು ಎಂತಹ ಗೌನ್‌ ಎಂದರೆ ಕಿಶೋರಿಯರು, ತರುಣಿಯರು ತಮ್ಮ ಸೌಂದರ್ಯವನ್ನು ಬಿಂಬಿಸಲು ವಿಶಿಷ್ಟ ಸಮಾರಂಭಗಳಲ್ಲಿ ಇದನ್ನು ಧರಿಸುತ್ತಾರೆ. ಶಿಷ್ಟಾಚಾರದ ಪ್ರಕಾರ, ಈ ಗೌನ್‌ ಬಿಳಿ ಬಣ್ಣದ್ದು ಅಥವಾ ಈವ್ನಿಂಗ್‌ ಡ್ರೆಸ್‌ನ ಬಣ್ಣದ್ದಾಗಿರಬೇಕು. ಇದರಲ್ಲಿ ಬಿಳಿ ಬಣ್ಣದ ಟೈ ಅಥವಾ ಹೂವನ್ನು ಬಳಸಬೇಕು. ಅದು ನೈಸರ್ಗಿಕವಾಗಿ ಇದರ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ವೈಶಿಷ್ಟ್ಯತೆಯ ಅನುಭೂತಿಯನ್ನು ದೊರಕಿಸಿಕೊಡುತ್ತದೆ. ಬಾಲ ಗೌನ್‌ ಫುಲ್ ಸ್ಕರ್ಟ್‌ನದ್ದಾಗಿದ್ದರೆ, ಅದು ಹಿಮ್ಮಡಿಯ ತನಕ ತಲುಪಬೇಕು. ಅಷ್ಟೇ ಅಲ್ಲ, ಅದು ಲಗ್ಶುರಿಯಸ್‌ ಫ್ಯಾಬ್ರಿಕ್‌ನಿಂದ ತಯಾರಾಗಿದ್ದು, ಆಕರ್ಷಕ ಡಿಸೈನ್‌ನದ್ದಾಗಿರಬೇಕು. ಒಂದು ವೇಳೆ ಇದು ಯುವತಿಯರ ಈವ್ನಿಂಗ್‌ ಡ್ರೆಸ್‌ ಆಗಿದ್ದರೆ ಭುಜಗಳು ಮುಕ್ತವಾಗಿರಬೇಕು. ನೆಕ್‌ ಲೈನ್ ಅಂದರೆ ಕುತ್ತಿಗೆಯ ಜೊತೆಗೆ ಕರ್ವ್ ಮಾಡುವ ರೇಖೆ ಆಕರ್ಷಕ ರೀತಿಯಲ್ಲಿ ಎದ್ದು ಕಾಣಬೇಕು.

ನೈಟ್‌ ಗೌನ್‌ : ಇದನ್ನು `ನೈಟ್‌ ಡ್ರೆಸ್‌’ ಎಂದೂ ಕೂಡ ಹೇಳಲಾಗುತ್ತದೆ. ಅತ್ಯಂತ ಸಡಿಲವಾದ ಈ ಡ್ರೆಸ್‌ ರಾತ್ರಿ ಹೊತ್ತಿನಲ್ಲಿ ಧರಿಸುವ ಪೋಷಾಕು ಆಗಿದೆ. ನೈಟ್‌ ಡ್ರೆಸ್‌ನ್ನು ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಧರಿಸುತ್ತಾರೆ.

ಸಾಮಾನ್ಯವಾಗಿ ನೈಟ್‌ ಗೌನ್‌ಗಳು ಹತ್ತಿ, ರೇಷ್ಮೆ, ಸ್ಯಾಟಿನ್‌, ನೈಲಾನ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಅದು ಹೆಣಿಗೆ ಮಾಡಲ್ಪಟ್ಟಿರಬಹುದು ಅಥವಾ ಮಾಡದೇ ಇರುವಂಥದು ಕೂಡ ದೊರೆಯುತ್ತವೆ. ನೈಟ್‌ ಗೌನ್‌ಗಳು ಸಾಮಾನ್ಯವಾಗಿ ಸ್ಲೀವ್ ಲೆಸ್ ಆಗಿರುತ್ತವೆ. ಆದರೆ ಹಲವು ನೈಟ್‌ ಗೌನ್‌ಗಳು ಫುಲ್ ಸ್ಲೀವ್‌ನದ್ದು ಕೂಡ ಆಗಿರುತ್ತವೆ.

ನೈಟ್‌ ಗೌನ್‌ಗೆ ಯಾವುದೇ ಒಂದು ನಿಶ್ಚಿತ ಡಿಸೈನ್‌ ಎನ್ನುವುದು ಇರುವುದಿಲ್ಲ. ಇದು ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯದ್ದಾಗಿರಬಹುದು. ಅದರಲ್ಲೂ ವಿಶೇಷವಾಗಿ ಅಗತ್ಯ ಹಾಗೂ ಸೌಲಭ್ಯಕ್ಕನುಗುಣವಾಗಿ ಇದನ್ನು ಸಿದ್ಧಪಡಿಸಲಾಗುತ್ತದೆ. ಇದು ಹಿಪ್‌ ಲೆಂಥ್‌ ಅಂದರೆ ಬೇಬಿ ಡಾಲ್ ‌ಸೈಜ್‌ನದ್ದೂ ಆಗಿರಬಹುದು, ಫ್ಲೋರ್‌ ಲೆಂಥ್‌ ಅಂದರೆ ಮೊಣಕಾಲಿನ ತನಕ ಇರಬಹುದು. ಅದನ್ನು ನೈಟಿ ಎಂದೂ ಹೇಳಲಾಗುತ್ತದೆ.

ಬ್ಯಾಡ್‌ ಗೌನ್‌ : ಬ್ಯಾಡ್‌ ಗೌನ್‌ನ್ನು ಬ್ಯಾಡ್‌ ಜಾಕೇಟ್‌ ಅಥವಾ ಶಾರ್ಟ್‌ ಗೌನ್‌ ಎಂದೂ ಹೇಳಲಾಗುತ್ತದೆ. ಇದು ಮಹಿಳೆಯರು ಧರಿಸುವ ಸಾಮಾನ್ಯ ಪೋಷಾಕಾಗಿದೆ. ಬಹುತೇಕ ಇದು ಮಹಿಳೆಯರ ದೇಹದ ಮೇಲ್ಭಾಗದ ಪೋಷಾಕವಾಗಿದ್ದು, ಇದರ ಉದ್ದ ಸಮರ್ಪಕವಾಗಿಯೇ ಇರುತ್ತದೆ.

mera-gaon

ಸಾಮಾನ್ಯವಾಗಿ ಇದು ದೇಹದ ಮುಖ್ಯ ಭಾಗವನ್ನು ಕವರ್‌ ಮಾಡಿ, ಆ ಭಾಗವನ್ನು ಎದ್ದು ಕಾಣುವಂತೆ ಮಾಡುತ್ತದೆ. ಬ್ಯಾಡ್‌ ಗೌನ್‌ ಯಾವಾಗಲೂ ಹತ್ತಿ ಬಟ್ಟೆಯಿಂದ ಮಾಡಲ್ಪಟ್ಟಿರಬೇಕು. 18ನೇ ಶತಮಾನದಲ್ಲಿ ಇದು ಯೂರೋಪ್‌ನಲ್ಲಿ ಮನೆಮನೆಯಲ್ಲೂ ಅತ್ಯಂತ ಜನಪ್ರಿಯವಾಗಿತ್ತು. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಇದನ್ನು ಧರಿಸುತ್ತಿದ್ದರು. ಆಗ ಉಣ್ಣೆ ಹಾಗೂ ಲಿನೆನ್‌ನಲ್ಲಿ ಇಂತಹ ಗೌನ್‌ಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಹಳೆಯ ಕಾಲದ ಬ್ಯಾಡ್‌ ಗೌನ್‌ಗಳು ಈಚೆಗೆ ನೋಡಲು ಸಿಗುವುದಿಲ್ಲ.

ಹಾಸ್ಪಿಟಲ್ ಗೌನ್‌ : ಇದನ್ನು `ಪೇಶಂಟ್‌ ಗೌನ್‌’ ಅಥವಾ ಎಗ್ಸಾಮ್ ಗೌನ್‌ ಎಂದೂ, ಜಾನಿ ಶರ್ಟ್‌ ಅಥವಾ `ಜಾನಿ ಗೌನ್‌’ ಎಂದು ಇದು ಶಾರ್ಟ್‌ ಸ್ಲೀವ್ಡ್ ಆಗಿರುತ್ತದೆ. ಇದನ್ನು ಸಾಮಾನ್ಯವಾಗಿ ರೋಗಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಧರಿಸುತ್ತಾರೆ. ಇದು ಹತ್ತಿ ಬಟ್ಟೆಯಿಂದ ತಯಾರಿಸಲ್ಪಟ್ಟಿರುತ್ತದೆ. ಸೊಂಟದ ಭಾಗದಲ್ಲಿ ಪಟ್ಟಿ ಕಟ್ಟಲ್ಪಟ್ಟಿರುತ್ತದೆ. ಅಗತ್ಯಬಿದ್ದಾಗ ಇದನ್ನು ಹೊಟ್ಟೆಯ ಭಾಗದಲ್ಲಿ ಕಟ್ಟಲು ಸಾಧ್ಯವಾಗಲಿ ಎನ್ನುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ.

`ಹಾಸ್ಪಿಟಲ್ ಗೌನ್‌’ನ್ನು ಕೇವಲ ಆಸ್ಪತ್ರೆಯಲ್ಲಷ್ಟೇ ಧರಿಸಲು ಸಿದ್ಧಪಡಿಸಲಾಗುತ್ತದೆ. ಇದನ್ನು ಮನೆಯಲ್ಲಿ ಧರಿಸುವುದಿಲ್ಲ. ಎಷ್ಟೋ ಸಲ ಇದನ್ನು ಡಿಸ್ಪೋಸಬಲ್ ಪ್ಲಾಸ್ಟಿಕ್‌ ಅಥವಾ ಒಂದು ಬಗೆಯ ತೆಳ್ಳನೆಯ ಕಾಗದದಂತಹ ಪ್ಲಾಸ್ಟಿಕ್‌ನಿಂದಲೂ ಸಿದ್ಧಪಡಿಸಲಾಗುತ್ತದೆ.

ವೈದ್ಯರು ಗೌನ್‌ ಧರಿಸಿದ ಬಳಿಕವೇ ತಮ್ಮೆಲ್ಲ ಕಾರ್ಯ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಎಷ್ಟೋ ಗೌನ್‌ಗಳನ್ನು ಹೇಗೆ ಸಿದ್ಧಪಡಿಸಲಾಗಿರುತ್ತದೆಂದರೆ, ಅದನ್ನು ಧರಿಸಿದ ಬಳಿಕ ವೈದ್ಯರಿಗೆ ರೋಗಿಯ ಹೃದಯ ಗತಿ ಹಾಗೂ ಶ್ವಾಸಕೋಶಗಳ ಚಲನವಲನವನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ರೋಗಿಯ ಎಲ್ಲ ಬಟ್ಟೆಗಳನ್ನು ತೆಗೆಸಿ ಇದನ್ನು ಧರಿಸಲು ಹೇಳಲಾಗುತ್ತದೆ. ಏಕೆಂದರೆ ವೈದ್ಯರು ರೋಗಿಯ ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಲು ಸಾಧ್ಯವಾಗುತ್ತದೆ.

ಇಂತಹ ಸಂದರ್ಭದಲ್ಲಿ ರೋಗಿ ತೊಡುವ ಗೌನ್‌ನ್ನು ವಿಶೇಷ ಬಗೆಯ ಔಷಧಿಗಳಿಂದ ಸಜ್ಜುಗೊಳಿಸಲಾಗುತ್ತದೆ. ಅದರಿಂದ ರೋಗಿಗೆ ಸಾಕಷ್ಟು ಉಪಯೋಗವಾಗುತ್ತದೆ. ಇದನ್ನು ಪೇಪರ್‌ ಥಿನ್‌ ಪ್ಲಾಸ್ಟಿಕ್‌ ಗೌನ್‌ ಎಂದೂ ಕರೆಯಲಾಗುತ್ತದೆ. ಇದರ ಮೇಲ್ಭಾಗದಿಂದ ಚುಚ್ಚುಮದ್ದು ಕೊಡಲು ಸಾಧ್ಯವಿದೆ. ಆದರೆ ಅನೇಕ ಮಹಿಳೆಯರು ಈ ತೆರನಾದ ಗೌನ್‌ ತೊಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಇದು ಅಷ್ಟೇನೂ ಜನಪ್ರಿಯವಾಗಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ