ಆಸ್ಕರ್‌ ಚಲನ ಚಿತ್ರೋತ್ಸವದಲ್ಲಿ ಮಾಧ್ಯಮದವರು ಚೆಲುವೆಯರ ಛಾಯಾಚಿತ್ರಗಳನ್ನು ಸೆರಿಹಿಡಿಯುವ ಭಂಗಿಯೇ ಬಹಳ ವಿಶೇಷ ಮುದ ನೀಡುತ್ತದೆ. ಇಷ್ಟೊಂದು ಉತ್ಸುಕತೆ ಬಹುಶಃ ಬೇರೆಲ್ಲೂ ನೋಡಲು ಸಿಗುವುದಿಲ್ಲ ಅನಿಸುತ್ತೆ.

ಅದರ ಏಕೈಕ ಕಾರಣವೇನೆಂದರೆ ಆಸ್ಕರ್‌ ಚಲನಚಿತ್ರೋತ್ಸವಕ್ಕೆ ಬರುವ ತಾರೆಯರು ಹಾಗೂ ಇತರೆ ಪ್ರತಿಷ್ಠಿತ ಸೆಲೆಬ್ರಿಟಿಗಳು ಧರಿಸಿರುವ ಗೌನ್‌.

ಈಗಂತೂ ಕಾನ್ಸ್ ಚಿತ್ರೋತ್ಸವ, ಮೋಶನ್‌ ಪಿಕ್ಚರ್ಸ್‌ ಅಕಾಡೆಮಿ ಅವಾರ್ಡ್‌ (ಆಸ್ಕರ್‌ ಪ್ರಶಸ್ತಿ ವಿತರಣಾ ಸಮಾರಂಭ) ಮತ್ತು ಅಮೆರಿಕದ ರಾಷ್ಟ್ರಪತಿ ಭವನ ಅಂದರೆ ವೈಟ್‌ ಹೌಸ್‌ನಲ್ಲಿ ನಡೆಯುವ ಅಮೆರಿಕ ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭದ ಗೌನ್‌ಗಳು ಅತಿ ಹೆಚ್ಚು ಚಿರಪರಿಚಿತ ಎನಿಸಿವೆ. ಈ ಎಲ್ಲ ಸಮಾರಂಭಗಳಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಜಗತ್ತಿನ ಮಹಾಸುಂದರಿಯರು ಸೊಂಟ ಬಳುಕಿಸುತ್ತ ನಡೆಯುವ ಪರಿ ಆಕರ್ಷಣೆಗೆ ಪಾತ್ರವಾಗುತ್ತದೆ.

ಅಮೆರಿಕ ರಾಷ್ಟ್ರಾಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ವಿಶ್ವ ಪ್ರಸಿದ್ಧ ರಾಜಕೀಯ ಮುಖಂಡರು, ಹೆಸರಾಂತ ಉದ್ಯಮಿಗಳು, ಮಹಾನ್‌ ಕ್ರೀಡಾಪಟುಗಳು, ಸುಪ್ರಸಿದ್ಧ ನಟನಟಿಯರು ಹಾಗೂ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಾರೆ.

IMG_0419option (1)

ಕೋಡಕ್‌ ಥಿಯೇಟರಿನ ಕೆಂಪು ಕಾರ್ಪೆಟ್‌ನ ಮೇಲೆ ಹೆಜ್ಜೆ ಹಾಕುವ ಚೆಲುವೆಯರು ಚಲನ ಚಿತ್ರರಂಗದ ಅತಿಗಣ್ಯ ತಾರೆಯರಾಗಿರುತ್ತಾರೆ. ಕಾನ್ಸ್ ಚಿತ್ರೋತ್ಸವದಲ್ಲೂ ಇದೇ ಪರಿಪಾಠ ಇದೆ.

ಸಾಮಾನ್ಯವಾಗಿ ಕಾನ್ಸ್ ಹಾಗೂ ಆಸ್ಕರ್‌ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಮ್ಮ ಸೌಂದರ್ಯದಿಂದ ಇಡೀ ಜಗತ್ತಿನ ನಿದ್ದೆಗೆಡಿಸಿದ ಸ್ವಪ್ನ ಸುಂದರಿಯರು ಅತ್ಯಂತ ಆಕರ್ಷಕ ಎನ್ನಬಹುದಾದ ಗೌನ್‌ನಲ್ಲಿಯೇ ಕಂಡುಬರುತ್ತಾರೆ. ಮರ್ಲಿನ್‌ ಮನ್ರೊ ಆಗಿರಬಹುದು, ಗ್ರೇಟಾ ಗಾರ್ಬೋ ಇರಬಹುದು, ಎಲಿಜಬೆತ್‌ ಟೇಲರ್‌, ಜೂಲಿಯಾ ರಾಬರ್ಟ್ಸ್ ಅಥವಾ ಇಂದಿನ ಏಂಜಲಿನಾ ಜೋಲಿ, ಪ್ಯಾರಿಸ್‌ ಹಿಲ್ಟನ್‌ ಕ್ಯಾಂಟ್‌ ಬಿಸ್ಲೆಟ್‌, ಐಶ್ವರ್ಯಾ ರೈ, ಕಾಯ್ಲಿ ಮೆನಾಗ್‌ ಅಥವಾ ಮಲ್ಲಿಕಾ ಶೆರಾವತ್‌.... ಈ ಎಲ್ಲ ಸ್ವಪ್ನ ಸುಂದರಿಯರೂ ಕೆಂಪು ಕಾರ್ಪೆಟ್‌ನ ಮೇಲೆ ಬಳುಕುತ್ತ ಸಾಗಲು ಆಕರ್ಷಕ ಗೌನ್‌ ಆಯ್ಕೆ ಮಾಡಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಇಬ್ಬರು ತಾರೆಯರಾದ ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್‌ ಕಾನ್ಸ್ ಚಿತ್ರೋತ್ಸವದಲ್ಲಿ ತಮ್ಮ ನಿಯಮಿತ ಉಪಸ್ಥಿತಿಯನ್ನು ನೀಡುವುದರ ಜೊತೆ ಜೊತೆಗೆ ಕಣ್ಣು ಕೋರೈಸುವ ಗೌನ್‌ನಲ್ಲಿ ಭಾರತದ ಗ್ಲಾಮರ್‌ನ್ನು ಚರ್ಚೆಯಲ್ಲಿಡುವಂತಹ ಕೆಲಸ ಮಾಡಿದ್ದಾರೆ. 4 ವರ್ಷಗಳ ಹಿಂದೆ ಕಾನ್ಸ್ ಚಿತ್ರೋತ್ಸದಲ್ಲಿ ಐಶ್ವರ್ಯಾ ರೈ ಈವಾ ಲಾಂಗೋರಿಯಾ ಜೊತೆಗೆ ಕೆಂಪು ಕಾರ್ಪೆಟ್‌ ಮೇಲೆ ಬಳುಕುತ್ತಾ ಸಾಗುವಾಗಿನ ದೃಶ್ಯ ಮನಸ್ಸನ್ನು ತಡೆದು ನಿಲ್ಲಿಸುವಂತಿತ್ತು. ಅವರ ಈ ಸೌಂದರ್ಯದ ಜಾದೂವಿಗೆ ಕಾರಣವಾದದ್ದು ಅವರು ತೊಟ್ಟಿದ್ದ ಆಕರ್ಷಕ ಗೌನ್‌.

ಮಲ್ಲಿಕಾ ಶೆರಾವತ್‌, ಸಲ್ಮಾ ಹಯಾತ್‌ ಹಾಗೂ ಕೆಂಟ್‌ ಅವರು ಧರಿಸಿದ ಡಿಸೈನರ್‌ ಗೌನ್‌ಗಳ ಬಗೆಗೂ ಆಗ ಸಾಕಷ್ಟು ಚರ್ಚೆಯಾಗಿತ್ತು.

ಸಮಾರಂಭದ ಮೆರುಗು

496684-01-02 (1)

ಅಂದಹಾಗೆ ಅದು ದೊಡ್ಡ ಸಿನಿಮಾ ಉತ್ಸವವೇ ಆಗಿರಬಹುದು ಅಥವಾ ವಿಶ್ವಪ್ರಸಿದ್ಧ ಸೆಲೆಬ್ರಿಟಿಯೊಬ್ಬರ ಮದುವೆ ಸಮಾರಂಭ. ಪಾಶ್ಚಿಮಾತ್ಯ ದೇಶಗಳ ರಾಜ್ಯಾಭಿಷೇಕ ಸಮಾರಂಭವಿರಬಹುದು ಅಥವಾ ವಿಶ್ವವಿದ್ಯಾಲಯವೊಂದರ ಪದವಿ ಪ್ರದಾನ ಸಮಾರಂಭ. ವ್ಯಾಯಾಟಿಕನ್‌ ಸಿಟಿಯಲ್ಲಿ ವರ್ಷಕ್ಕೊಮ್ಮೆ ಪೋಪ್‌ ಮಾಡುವ ವಿಶೇಷ ಭಾಷಣ ಸಮಾರಂಭ ಅಥವಾ ಕ್ರೈಸ್ತರ ಪಾರಂಪರಿಕ ಮದುವೆ ಸಮಾರಂಭಗಳಲ್ಲಿ ಗೌನ್‌ಗೆ ಅತ್ಯಂತ ಪ್ರಮುಖ ಸ್ಥಾನವಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ