ಫ್ಯಾಷನ್‌ನ ಪ್ರಭಾವ ಯುವತಿಯರಿಂದ ಹಿಡಿದು ವಯಸ್ಕರವರೆಗೆ ಇರುತ್ತದೆ. ಯಾವುದೇ ಹೊಸ ಟ್ರೆಂಡ್‌ ಮಾರುಕಟ್ಟೆಗೆ ಬಂದ ಕೂಡಲೇ ಜನ ಥಟ್ಟನೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಏಕೆಂದರೆ ಎಲ್ಲರೂ ಸದಾ ಸ್ಮಾರ್ಟ್‌ ಆಗಿ ಕಾಣಲು ಬಯಸುತ್ತಾರೆ.

ಫ್ಯಾಷನ್‌ ಯಾವಾಗಲೂ ಸಿನಿಮಾಗಳಿಂದ ಬರುತ್ತದೆ. ಪ್ರತಿ ವ್ಯಕ್ತಿಯೂ ತಮ್ಮ ಕಾಲದ ಜನಪ್ರಿಯ ನಾಯಕ ನಾಯಕಿಯರನ್ನು ಅನುಕರಿಸುತ್ತಾರೆ. ಚಿತ್ರ ಹಿಟ್‌ ಆದ ಕೂಡಲೇ ಫ್ಯಾಷನ್‌ ಟ್ರೆಂಡ್‌ ಕೂಡ ಹಿಟ್‌ ಆಗುತ್ತದೆ.

ಇದರ ಬಗ್ಗೆ ಮುಂಬೈನ ಫ್ಯಾಷನ್‌ ಡಿಸೈನರ್‌ ಶೃತಿ ಸಂಚಾಲಕಿ ಹೀಗೆ ಹೇಳುತ್ತಾರೆ, ``ಫ್ಯಾಷನ್‌ ಹಾಗೂ ಸ್ಟೈಲ್‌ನ್ನು ತಮ್ಮದಾಗಿಸಿಕೊಳ್ಳುವಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ.'' ಗ್ಲೋಬಲೈಸೇಷನ್‌ನಿಂದಾಗಿ ಫ್ಯಾಷನ್‌ ಹಾಗೂ ಸ್ಟೈಲ್‌ನ ಕ್ರೇಝ್ ಹೆಚ್ಚಾಗಿದೆ. ನೀವು ನಿಮಗೆ ಅನುರೂಪವಾದ ಉಡುಪು ಧರಿಸಿದರೆ ನಿಮ್ಮ ವ್ಯಕ್ತಿತ್ವದಲ್ಲಿ ಕಾಂತಿ ಬರುತ್ತದೆ. ಅದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.''

ಆದರೆ ಟ್ರೆಂಡ್‌ ಬದಲಾಗುತ್ತಿರುತ್ತದೆ. 20 ವರ್ಷಗಳ ಹಿಂದಿದ್ದ ಟ್ರೆಂಡ್‌ ಇಂದಿಲ್ಲ. ಆದರೂ ಒಂದು ಟ್ರೆಂಡ್‌ 20 ವರ್ಷಗಳ ನಂತರ ಹೊಸ ರೂಪದಲ್ಲಿ ವಾಪಸ್‌ ಬರುತ್ತದೆ.

ವ್ಯಕ್ತಿಗೆ ತನ್ನ ಪ್ರೊಫೆಷನಲ್, ಕಲ್ಚರ್‌ ಮತ್ತು ಪರ್ಸನಾಲಿಟಿಗೆ ಅನುಗುಣವಾಗಿ ಕಾಲಕ್ಕೆ ತಕ್ಕಂಥ ಸ್ಟೈಲ್ ಇರಬೇಕು. ಯಾವಾಗಲೂ ಸ್ಟೈಲ್‌ನ್ನು ಫಾಲೋ ಮಾಡಿ ಟ್ರೆಂಡ್‌ನ್ನು ಅಲ್ಲ. ಸ್ಟೈಲ್ ಮತ್ತು ಟ್ರೆಂಡ್‌ನ ನಡುವೆ ಒಂದು ಸೂಕ್ಷ್ಮ ರೇಖೆ ಇದ್ದೇ ಇರುತ್ತದೆ. ಅದನ್ನು ತಿಳಿದುಕೊಳ್ಳುವುದು ಅಗತ್ಯ. ವ್ಯಕ್ತಿ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ತನಗೆ ಯಾವುದು ಒಪ್ಪುತ್ತದೆ ಎಂದು ತಿಳಿದುಕೊಳ್ಳಬೇಕು. ಸ್ಟೈಲಿಶ್‌ ವ್ಯಕ್ತಿ ಯಾವಾಗಲೂ ಎಲ್ಲರ ಪ್ರಶಂಸೆ ಪಡೆಯುತ್ತಾನೆ.

2015ರಲ್ಲಿ ನೆರಿಗೆಗಳ ಬಗ್ಗೆ ಹೆಚ್ಚು ಒತ್ತು ಬೀಳುತ್ತದೆಂದು ಫ್ಯಾಷನ್‌ ಡಿಸೈನರ್‌ಗಳು ಹೇಳುತ್ತಾರೆ. ಪ್ಲಾಜೋ ಪ್ಯಾಂಟ್‌, ನೀಲೆಂತ್ ಪ್ಯಾಂಟ್‌, ಸ್ಕರ್ಟ್‌, ಸ್ಟ್ರೇಟ್‌ ಸೂಟ್‌ ಇತ್ಯಾದಿ ಹೆಚ್ಚು ಚಾಲ್ತಿಯಲ್ಲಿವೆ. ಬ್ರೈಟ್‌ ಕಲರ್‌ ಹೆಚ್ಚು ಚೆನ್ನಾಗಿರುತ್ತದೆ. ಅದರಲ್ಲಿ ಎಮರಾಲ್ಡ್, ಬರ್ನ್‌ ಆರೆಂಜ್‌, ಚೆರಿ ಮತ್ತು ಟೀಲ್ ‌ಕಲರ್‌, ನ್ಯಾಚುರಲ್ ಪ್ರಿಂಟ್ಸ್, ಟ್ರೈಬಲ್ ಪ್ರಿಂಟ್ಸ್ ಇತ್ಯಾದಿ ಹೆಚ್ಚು ಚಾಲ್ತಿಯಲ್ಲಿವೆ. ನೀವು ಯಾವುದೇ ಉಡುಪು ಧರಿಸಿದರೂ ಒಂದು ವೇಳೆ ಅದನ್ನು ಆತ್ಮವಿಶ್ವಾಸದಿಂದ ಕ್ಯಾರಿ ಮಾಡದಿದ್ದರೆ ಚೆನ್ನಾಗಿರುವುದಿಲ್ಲ. ಅದರೊಂದಿಗೆ ನಿಮ್ಮ ಸ್ಟೈಲ್ ‌ಕೂಡ ಬಹಳ ಅಗತ್ಯ. ಅದು ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಶೋಭೆ ನೀಡುತ್ತದೆ. ತಿಳಿದೋ ತಿಳಿಯದೆಯೋ ನೀವ ಎಲ್ಲರಿಗೂ ಅತ್ಯಂತ ಪ್ರೀತಿಪಾತ್ರರಾಗುವಿರಿ.

- ಜಿ. ಸುಮಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ