ಸುಂದರಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ನಿಮ್ಮ ಸೌಂದರ್ಯಕ್ಕೆ ಮೆರುಗು ಕೊಡಲು ಬ್ಯಾಕ್ ಲೆಸ್ ಮತ್ತು ಕಟ್ ಸ್ಲೀವ್ ಡ್ರೆಸೆಸ್ ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತವೆ.
ಹಾಲಿವುಡ್‌ನ ಮೇಕಪ್ ಮತ್ತು ಬ್ಯೂಟಿ ಎಕ್ಸ್ ಪರ್ಟ್ ಒಬ್ಬರು ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಮಹಿಳೆಯರು ಬ್ಯಾಕ್ ಲೆಸ್ ಮತ್ತು ಕಟ್ ಸ್ಲೀವ್ ಡ್ರೆಸ್‌ಗಳಲ್ಲಿ ಬಹಳ ಸುಂದರವಾಗಿ ಕಂಡುಬರುತ್ತಾರೆ. ಏಕೆಂದರೆ ಅವರ ಬಾಹುಗಳು ಹಾಗೂ ದೇಹದ ಮೇಲ್ಭಾಗ ಹೆಚ್ಚು ಕಡಿಮೆ ಮುಚ್ಚಲ್ಪಟ್ಟಿರುತ್ತದೆ. ``ಇಡೀ ದೇಹಕ್ಕೆ ಹೋಲಿಸಿದರೆ ಆ ಭಾಗ ಹೆಚ್ಚು ಬೆಳ್ಳಗೆ ಇರುತ್ತದೆ. ಸುಂದರವಾದ ಡ್ರೆಸ್‌ಗಳನ್ನು ಧರಿಸಿದಾಗ ಆ ಭಾಗ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತದೆ. ಇದರಿಂದ ಇಡೀ ವ್ಯಕ್ತಿತ್ವಕ್ಕೆ ಹೊಸ ಆಕರ್ಷಣೆ ಬರುತ್ತದೆ. ಅದರಲ್ಲೂ ಬಾಹುಗಳು ದಷ್ಟಪುಷ್ಟ ಮತ್ತು ಹೊಳಪುಳ್ಳದ್ದಾಗಿದ್ದರೆ ಆಕರ್ಷಣೆಗೆ ಮತ್ತಷ್ಟು ಮೆರುಗು ಬರುತ್ತದೆ.''
ಹವಾಮಾನ ಬದಲಾದಾಗ ಮಹಿಳೆಯರು ಬ್ಯಾಕ್ ಲೆಸ್ ಮತ್ತು ಕಟ್ ಸ್ಲೀವ್ ಡ್ರೆಸ್‌ಗಳನ್ನು ಧರಿಸಲು ಹಿಂದೇಟು ಹಾಕುತ್ತಾರೆ. ಇನ್ನು ಕೆಲವರು ವೈಯಕ್ತಿಕ ಕಾರಣಗಳಿಂದಾಗಿ ಹೀಗೆ ಮಾಡುವುದರಿಂದ ದೂರ ಉಳಿಯುತ್ತಾರೆ. ಇಂತಹ ಡ್ರೆಸ್‌ಗಳನ್ನು ಧರಿಸಿದರಷ್ಟೇ ಸಾಲದು, ಅತ್ಯಂತ ಆತ್ಮವಿಶ್ವಾಸದಿಂದ ಧರಿಸುವುದು ಅತ್ಯವಶ್ಯಕ.
ಹೊಳಪುಳ್ಳ ಕಲೆರಹಿತ ತ್ವಚೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಇರದೇ ಇದ್ದರೆ ನೀವು ಅಸಹಜತೆಯ ಅನುಭೂತಿ ಹೊಂದುವಿರಿ. ನಿಮ್ಮಲ್ಲಿ ಆತ್ಮವಿಶ್ವಾಸ ಯಾವಾಗ ಬರುತ್ತದೆಂದರೆ, ನಿಮ್ಮ ಬಾಡಿ ಟೋನ್ಡ್ ಆಗಿರಬೇಕು. ತ್ವಚೆಯ ಬಣ್ಣ ಏಕರೀತಿಯಲ್ಲಿರಬೇಕು. ಹೀಗಾಗಿ ಕಟ್ ಸ್ಲೀವ್ ಮತ್ತು ಬ್ಯಾಕ್ ಲೆಸ್ ಪೋಷಾಕುಗಳನ್ನು ಧರಿಸಿ ಯಾವಾಗಾದರೂ ಹೊರಗೆ ಹೊರಟರೆ ಸನ್ ಸ್ಕ್ರೀನ್‌ನ್ನು ಅವಶ್ಯವಾಗಿ ಲೇಪಿಸಿಕೊಳ್ಳಿ.
ಸೌಂದರ್ಯ ತಜ್ಞೆಯೊಬ್ಬರು ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಇಂತಹ ಸ್ಕಿನ್ ಫ್ಲಾಂಟಿಂಗ್ ಡ್ರೆಸೆಸ್ ಧರಿಸುವ ಸಂದರ್ಭದಲ್ಲಿ ಟ್ಯಾನಿಂಗ್‌ನಿಂದ ರಕ್ಷಿಸಿಕೊಳ್ಳಲು 30 ರಿಂದ 40ರವರೆಗಿನ ಎಸ್‌ಪಿಎಫ್ ಇರುವ ಸನ್ ಸ್ಕ್ರೀನ್‌ನ್ನು ಅವಶ್ಯವಾಗಿ ಲೇಪಿಸಿಕೊಳ್ಳಿ. ಅದನ್ನು ಬಿಸಿಲಿನಲ್ಲಿ ಹೊರಡುವ 15-20 ನಿಮಿಷ ಮುಂಚೆ ಹಚ್ಚಿಕೊಳ್ಳಿ ಹಾಗೂ 4 ಗಂಟೆಯ ಬಳಿಕ ಪುನಃ ಉಪಯೋಗಿಸಿ.''
ಅಂದಹಾಗೆ ಕಟ್ ಸ್ಲೀವ್ ಮತ್ತು ಬ್ಯಾಕ್ ಲೆಸ್ ಪೋಷಾಕುಗಳಲ್ಲಿ ನಿಮ್ಮ ತ್ವಚೆ ಹೆಚ್ಚು ಎಕ್ಸ್ ಪೋಸ್ ಆಗುತ್ತದೆ. ಹೀಗಾಗಿ ನಿಮ್ಮ ತ್ವಚೆ ಚೆನ್ನಾಗಿ ಮಾಯಿಶ್ಚರೈಸ್ಡ್ ಆಗಿರಬೇಕು, ಅದರಲ್ಲಿ ಯಾವುದೇ ಕಲೆಗಳಾಗಲಿ, ಮೊಡವೆಗಳಾಗಲಿ ಇರಬಾರದು. ತ್ವಚೆಯ ಮೇಲಿನ ಮೊಡವೆ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಲು ಎಂತಹ ಕ್ರೀಮ್ ನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ, ಅದರಲ್ಲಿ ಸ್ಯಾಲಿಸಿಲಿಕ್ ಆ್ಯಸಿಡ್‌ನ ಸೂಕ್ತ ಪ್ರಮಾಣ ಇರಬೇಕು. ಅಂದಹಾಗೆ ಶುಭ್ರ ಕಲೆರಹಿತ ತ್ವಚೆಯನ್ನು ಒಂದೇ ರಾತ್ರಿಯಲ್ಲಿ ಪಡೆದುಕೊಳ್ಳಲು ಆಗದು. ಹೀಗಾಗಿ ಆತುರ ತೋರಿಸಬೇಡಿ. ನೀವು ಯಾವುದೇ ವಿಶೇಷ ಸಂದರ್ಭಕ್ಕಾಗಿ ಸಿಂಗರಿಸಿಕೊಳ್ಳಬೇಕೆಂದಿದ್ದರೆ, ಒಂದು ವಾರದ ಮುಂಚಿನಿಂದಲೇ ಸಿದ್ಧತೆ ಆರಂಭಿಸಿ. ಆ ದಿನ ಡ್ರೆಸ್ ಧರಿಸುವ ಮುನ್ನ ಸ್ಲೀವ್ ಲೆಸ್ ಮತ್ತು ಬ್ಯಾಕ್‌ನಲ್ಲಿ ಬಾಡಿ ಲೋಶನ್‌ನ್ನು ಚೆನ್ನಾಗಿ ಲೇಪಿಸಿಕೊಳ್ಳಿ. ಬಳಿಕ ಅದರ ಮೇಲೆ ಸ್ವಲ್ಪ ಗ್ಲಿಟರ್ ಕೂಡ ಹಚ್ಚಿ. ನಳನಳಿಸುವ ತ್ವಚೆಯ ಮೇಲೆ ಬ್ಯಾಕ್ ಲೆಸ್ ಮತ್ತು ಕಟ್ ಸ್ಲೀವ್ ಡ್ರೆಸ್‌ಗಳು ಶೋಭೆ ಕೊಡುವುದು ನಿಮ್ಮ ದೇಹ ಹೇರ್‌ಫ್ರೀ ಆಗಿದ್ದಾಗ ಮಾತ್ರ. ಅದರಲ್ಲೂ ವಿಶೇಷವಾಗಿ ಬಾಹು ಮತ್ತು ಕಂಕುಳ ಭಾಗದಲ್ಲಿನ ಕೂದಲನ್ನು ಅವಶ್ಯವಾಗಿ ಸ್ವಚ್ಛಗೊಳಿಸಿ. ಅದಕ್ಕಾಗಿ ರೇಜರ್‌ನ್ನು ಬಳಸಬೇಡಿ. ಏಕೆಂದರೆ ಅದರಿಂದ ತ್ವಚೆ ಕಪ್ಪಗಾಗಬಹುದು. ನೀವು ನಿಯಮಿತವಾಗಿ ಯಾವುದಾದರೂ ಒಳ್ಳೆಯ ಪಾರ್ಲರ್‌ಗೆ ಹೋಗಿ ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾ ಇರಿ.