ಹೇರ್ ಸ್ಟೈಲಿಂಗ್‌ನಲ್ಲಿ ಫ್ರೆಂಚ್ ಬ್ರೆಡ್, ಡೌನ್ ವರ್ಡ್ ಬ್ರೆಡ್, ಟೂ ಸೈಡ್ ಬ್ರೆಡ್, ರಿವರ್ಸ್ ಫ್ರೆಂಚ್ ಬ್ರೆಡ್, ಮರ್‌ಮೈಡ್ ಬ್ರೆಡ್ ಇತ್ಯಾದಿ ಬೇರೆ ಬೇರೆ ಸ್ಟೈಲಿಶ್ ಬ್ರೆಡ್‌ಗಳ ಫ್ಯಾಷನ್ ಮತ್ತೆ ಬಂದಿದೆ. ಈ ಲೇಟೆಸ್ಟ್ ಫ್ಯಾಷನ್ ಗಮನದಲ್ಲಿಟ್ಟುಕೊಂಡು ಕೆಲವು ಹೇರ್ ಸ್ಟೈಲ್‌ಗಳು ಹಾಗೂ ಮೇಕಪ್‌ಗಳ ವಿಶೇಷ ಲುಕ್ಸ್ ಬಗ್ಗೆ ತಿಳಿಯೋಣ ಬನ್ನಿ.
60ರ ಮಾಡರ್ನ್ ಲುಕ್ ಇಂಟರ್ ನ್ಯಾಷನಲ್ ಬ್ರೆಡ್‌ಗೆ ಇಂಡಿಯನ್ ಲುಕ್ ಕೊಡುವ ಈ ಹೇರ್ ಸ್ಟೈಲ್‌ನಲ್ಲಿ ಲೂಪ್ ಬ್ರೆಡ್‌ನ ಟೆಕ್ನಿಕ್‌ನ್ನು ಸುಂದರವಾಗಿ ಪ್ರಯೋಗಿಸಿ. ಸೆಂಟರ್‌ನಲ್ಲಿ ಸ್ಟಫಿಂಗ್ ಮಾಡಿ ಕೂದಲಿಗೆ ಹೈಲೈಟ್ ಕೊಟ್ಟು ಅದನ್ನು ಒರಿಜಿನ್ ಕೂದಲಿನಿಂದ ಕವರ್ ಮಾಡಿ. ಫ್ರಂಟ್‌ನಿಂದ ಸೈಡ್ ಪಾರ್ಟಿಂಗ್ ಮಾಡಿ, ಬ್ಯಾಕ್ ಕೂಂಬ್ ಮೂಲಕ ಹಿಂದೆ ಸೆಟ್ ಮಾಡಿ. ಮುಂದೆ ಉಳಿದಿರುವ ಕೂದಲನ್ನು ಬಲೆ ಹೆಣೆಯಲು ಕೊಂಚ ಬಿಟ್ಟು ಬ್ಯಾಕ್ ಕೂಂಬಿಂಗ್ ಮೂಲಕವೇ ಕೂದಲಿನಲ್ಲಿ ಇಳಿಜಾರು ಅಥವಾ ಗ್ರೇಡೇಶನ್ ಬರುವಂತೆ ಹಿಂದೆ ಸೆಟ್ ಮಾಡಿ. ಮುಂದೆ ಉಳಿದ ಕೂದಲನ್ನು ಬಲೆಯಂತೆ ಹೆಣೆಯಿರಿ ಮತ್ತು ಕೂದಲಿನ ಮೇಲ್ಭಾಗದಲ್ಲಿ ಫಂಕಿ ಲುಕ್ ಕೊಡಲು ಸಣ್ಣ ಲೂಪ್ ಮತ್ತು ದೊಡ್ಡ ಬ್ರೆಡ್ ಮತ್ತು ಹಾಫ್ ಬ್ರೆಡ್ ಮಾಡಿ. ಹಿಂದೆ ಉಳಿದ ಉದ್ದನೆಯ ಕೂದಲಿಗೆ ಆಕರ್ಷಕ ರೂಪ ಕೊಡಲು ಎರಡೂ ಕಡೆ ಲೂಪ್ ಇರುವ ಬ್ರೆಡ್ ಮಾಡಿ. ಅದರಲ್ಲಿ ಲೂಪ್ ದೊಡ್ಡದಾಗಿರಬೇಕು ಮತ್ತು ಬ್ರೆಡ್ ಚಿಕ್ಕದಾಗಿರಬೇಕು.
ಮ್ಯಾಟ್ ಬ್ರೆಡ್‌ನ ಸ್ಟೈಲಿಶ್ ಡಿಸೈನ್
ಈ ಸ್ಟೈಲ್‌ಗೆ ಕೂದಲನ್ನು 3 ಭಾಗಗಳಲ್ಲಿ ವಿಂಗಡಿಸಿ ಮಧ್ಯದ ಭಾಗವನ್ನು ಮೇಲಿನ ಕಡೆಗೆ ಸೀದಾ ಅರ್ಧ ಇಂಚು ತೆಗೆದುಕೊಂಡು ಮಧ್ಯದಲ್ಲಿ 2 ಭಾಗ ಮಾಡಿ. ಅದನ್ನು ಮತ್ತೆ 4 ಭಾಗಗಳಲ್ಲಿ ವಿಂಗಡಿಸಿ ಒಂದು ಬ್ಲ್ಯಾಕ್ ಅಂಡ್ ಲೈಟ್ ರಿಬ್ಬನ್ ಸಹಾಯದಿಂದ ಮ್ಯಾಟ್‌ನಂತೆ ಹೆಣೆಯಿರಿ. ಕೂದಲಿನ ಎಡಭಾಗವನ್ನು ರೋಪ್ ಟೆಕ್ನಿಕ್ ಮತ್ತು ಬಲಭಾಗವನ್ನು ಫ್ರೆಂಚ್ ಬ್ರೆಡ್ ಮೂಲಕ ಅಲಂಕರಿಸಿ. ನೀಟ್ ಮತ್ತು ಕ್ಲೀನ್ ಲುಕ್‌ನ ಈ ಹೇರ್‌ಸ್ಟೈಲ್ ಬಹಳ ಆಕರ್ಷಕವಾಗಿರುತ್ತದೆ.
ಕ್ರಿಯೇಟಿವ್ ಹೇರ್ ಡೂ
ಫೇರಿ ಅಂದರೆ ಅಪ್ಸರೆಯ ಲುಕ್‌ನ ಈ ಹೇರ್ ಡೂನಲ್ಲಿ ಬಣ್ಣದ ಬಳೆಗಳೊಂದಿಗೆ ಕೂದಲನ್ನು ಯಾವುದೇ ಪಿನ್ ಉಪಯೋಗಿಸದೆ ಪೋಣಿಸಿ. ಫ್ರಂಟ್‌ನಿಂದ 2 ಲೇಯರ್‌ನಲ್ಲಿ ಫ್ರೆಂಚ್ ಬ್ರೆಡ್ ಮಾಡಿ. ಹಿಂದಿನ ಕೂದಲಿನಲ್ಲಿ ಜಡೆ ಹೆಣೆಯಿರಿ. ಜಡೆಯನ್ನು ಕಲರ್ ಫುಲ್ ಬೀಡ್ಸ್ ಗಳಿಂದ ಅಲಂಕರಿಸಿ. ಈ ಆಕರ್ಷಕ ಫೇರಿಯ ಐ ಮೇಕಪ್ ಕೂಡ ಗುಲಾಬಿ ಬಣ್ಣದ ಡ್ರೆಸ್ ಮತ್ತು ರೆಕ್ಕೆಗಳಿಗೆ ಅನುಗುಣವಾಗಿ ಪಿಂಕ್ ಮಾಡಿ.
ಪೀಕಾಕ್ ಬೇಸ್ಡ್ ಥೀಮ್ ಹೇರ್ ಡೂ
ನವಿಲಿನ ಥೀವ್ ಗಮನದಲ್ಲಿಟ್ಟು ಕೊಂಡು ಈ ಹೇರ್ ಡೂನಲ್ಲಿ ನವಿಲಿನ ಎಲ್ಲ ಬಣ್ಣಗಳನ್ನು ಉಪಯೋಗಿಸಿ. ಹೆಲೋವೀನ್ ಸ್ಪೈರ್ ಬ್ರೆಡ್‌ನಿಂದ ಕೂದಲಿಗೆ ಕ್ರಿಯೇಟಿವ್ ಲುಕ್ಸ್ ಕೊಡುತ್ತಾ 3 ಬಣ್ಣಗಳ ಹೂಗಳನ್ನು ಮಾಡಿ. ಕೂದಲಿಗೆ ಸ್ಪ್ರೇ ಮೂಲಕ 3 ಬೇರೆ ಬೇರೆ ಬಣ್ಣಗಳನ್ನು ಹಾಕಿ. ಫ್ರಂಟ್‌ನಿಂದ ಕೂದಲಿನಲ್ಲಿ ಶಿಖೆಯ ಮೂಲಕ ಪಫ್ ಮಾಡಿ ಮತ್ತು ಸೈಡ್‌ನಲ್ಲಿ ನಾಟ್‌ನಿಂದ ಕ್ರಿಯೇಟಿವ್ ಲುಕ್ ಕೊಡಿ. ಈ ಹೇರ್ ಸ್ಟೈಲ್‌ನೊಂದಿಗೆ ಮ್ಯಾಚ್ ಮಾಡುವ ಇದರ ಐ ಮೇಕಪ್ ಕೂಡ ನವಿಲಿನ ಥೀವ್ ಆಧರಿಸಿದೆ.
ರೋಸ್ ಬ್ರೈಡಲ್ ಲುಕ್
ನ್ಯೂ ಜನರೇಶನ್ ಇಷ್ಟನ್ನು ಗಮನದಲ್ಲಿಟ್ಟುಕೊಂಡೇ ಈ ಹೇರ್ ಸ್ಟೈಲ್‌ನಲ್ಲಿ ಎಂಗೇಜ್‌ಮೆಂಟ್ ಬ್ರೈಡಲ್‌ಗೆ ಸ್ಮಾರ್ಟ್ ಹಾಗೂ ಎಲಿಗೆಂಟ್ ಲುಕ್ಸ್ ಕೊಡಬೇಕು. 3 ಕಡೆಯ ಫಿಶ್ ಟೇಲ್ ಬ್ರೆಡ್‌ನೊಂದಿಗೆ 3 ಗುಲಾಬಿ ಹೂಗಳನ್ನೂ ಅಲಂಕರಿಸಬೇಕು. ಈ ಹೇರ್‌ಸ್ಟೈಲ್‌ನಲ್ಲಿ ಬ್ರೆಡ್ ಮತ್ತು ಜಡೆ ಎರಡರ ಕಾಂಬಿನೇಶನ್ ಇದೆ. ಅದನ್ನು 3 ಹೈ ಬನ್ ಮಾಡಿ ಇದಕ್ಕೆ ಇಂಟರ್ ನ್ಯಾಷನಲ್ ಲುಕ್ಸ್ ಕೊಡಲಾಗಿದೆ. ಮುಂದೆ ಬರುವ ಮೇಕಪ್ 3ಡಿ ಆಗಿದ್ದು ಇಂದಿನ ಜನರೇಶನ್‌ಗೆ ಇಷ್ಟವಾದ ಮೇಕಪ್ ಆಗಿದೆ.
ಫಿಶ್ ಐ ಲುಕ್
ಫಿಶ್ ಥೀಮ್ ಬೇಸ್ಡ್ ಆಗಿರುವ ಈ ಐ ಮೇಕಪ್‌ನಲ್ಲಿ ಗೋಲ್ಡನ್ ಐ ಶ್ಯಾಡೊ ಉಪಯೋಗಿಸಿ. ಐ ಲಿಡ್ ಎದುರಿನ ಅರ್ಧ ಭಾಗದಲ್ಲಿ ಹಳದಿ ಮತ್ತು ಹಿಂದಿನ ಭಾಗದಲ್ಲಿ ಆರೆಂಜ್ ಬಣ್ಣ ಉಪಯೋಗಿಸಿ. ಎರಡೂ ಬಣ್ಣಗಳನ್ನು ಮರ್ಜ್ ಮಾಡುತ್ತ ಅದರ ಮೇಲೆ ಗೋಲ್ಡನ್ ಕಲರ್‌ನಿಂದ ಹೈಲೈಟ್ ಮಾಡಿ. ಬ್ಲ್ಯಾಕ್ ಐ ಲೈನರ್ ಸಹಾಯದಿಂದ ಕಣ್ಣುಗಳ ತುದಿಗಳಲ್ಲಿ ನೀರಿನ ಹನಿಗಳನ್ನು ಮಾಡಲಾಗಿದೆ. ಈ ನೀರಿನ ಬಿಂದುಗಳನ್ನು ಸಿಲ್ವರ್ ಗ್ರೀನ್ ಸ್ಟೋನ್ ಮತ್ತು ಗೋಲ್ಡನ್ ಕಲರ್‌ನ ಐ ಲೈನರ್ ಮೂಲಕ ಅಲಂಕರಿಸಿ. ನೀರಿನ ಹನಿಗಳ ಮಧ್ಯೆ ಫಿಶ್ ಲುಕ್‌ನ ಈ ಐ ಮೇಕಪ್ ಬಹಳ ಯೂನಿಕ್ ಮತ್ತು ಆಕರ್ಷಕವಾಗಿರುತ್ತದೆ.
– ಪಿ. ವತ್ಸಲಾ
ಬ್ರೆಡಲ್ ಸ್ಟೈಲಿಂಗ್ ಟಿಪ್ಸ್
ಬ್ರೆಡಿಂಗ್ ಎಂತಹ ಸ್ಟೈಲ್ ಎಂದರೆ ಅದರಲ್ಲಿ ಕ್ಲೀನ್ ಲುಕ್ ಮತ್ತು ಸ್ಕಿಲ್‌ನ ಅಗತ್ಯವಿದೆ. ಈ ವೀನಿಂಗ್ ಟೆಕ್ನಾಲಜಿಯಲ್ಲಿ `ಹೌ ಟು ಫಿಕ್ಸ್ ಅಂಡ್ ಹೌ ಟು ಗ್ರಿಪ್’ನ ಟೆಕ್ನಿಕ್ ಕೆಲಸ ಮಾಡುತ್ತದೆ. ಬ್ರೆಡ್ ಯಾವಾಗಲೂ ಕ್ಲೀನ್ ಮತ್ತು ಟೈಟ್ ಆಗಿರಬೇಕು.
ಬ್ರೆಡಿಂಗ್ ಮಾಡುವಾಗ ಕೂದಲು ಹಾರಾಡುವಂತೆ ಕಾಣಿಸಬಾರದು. ಆದ್ದರಿಂದ ಬ್ರೆಡಿಂಗ್ ಮಾಡುವಾಗ ಬೆರಳುಗಳಲ್ಲಿ ಸೀರಮ್ ಹಚ್ಚಿ.
ಯಾವುದೇ ಹೇರ್ ಸ್ಟೈಲ್ ಮಾಡುವಾಗ ಬ್ರೆಡಿಂಗ್ ಟೆಕ್ನಿಕ್ ಹುಡುಕುವಂತೆ ಹೆಚ್ಚು ಆ್ಯಕ್ಸೆಸರೀಸ್ ಉಪಯೋಗಿಸಬೇಡಿ.
ಪಿನ್‌ಗಳು ಕಾಣಿಸದಂತಿರುವುದೇ ಒಳ್ಳೆಯ ಬ್ರೆಡಿಂಗ್ ಸ್ಟೈಲ್ ಆಗಿದೆ.
ಹೇರ್ ಸ್ಟೈಲ್‌ನಲ್ಲಿ ಕ್ಲಟರ್ ಮಾಡಬೇಡಿ. ಒಂದು ಬಾರಿಗೇ ಹೆಚ್ಚು ಸ್ಕಿಲ್ ಪ್ರಯೋಗಿಸಬೇಡಿ.
ಹೊಸದನ್ನು ಕ್ರಿಯೇಟ್ ಮಾಡುವ ಬಗ್ಗೆ ಯೋಚಿಸಿ. ಹೇರ್ ಸ್ಟೈಲ್ ಮತ್ತು ಮೇಕಪ್ ಪರಸ್ಪರ ಕಾಂಪ್ಲಿಮೆಂಟ್ ಮಾಡುವಂತಿರಬೇಕು. ಕಣ್ಣುಗಳು ಹಾಗೂ ತುಟಿಗಳಲ್ಲಿ ಯಾವುದಾದರೂ ಒಂದನ್ನು ಹೈಲೈಟ್ ಮಾಡಿ.
ಫ್ರಂಟ್ ಬ್ಯಾಲೆನ್ಸ್ ಸರಿಯಾಗಿರಬೇಕು. ಹೇರ್ ಸ್ಟೈಲ್‌ನಲ್ಲಿ ಗಾರ್ಜಿಯಸ್ ಲುಕ್ ಬೇಕೆಂದಿದ್ದರೆ ಹೆಚ್ಚು ಆ್ಯಕ್ಸೆಸರೀಸ್ ಉಪಯೋಗಿಸಬೇಡಿ.