ಹೇರ್‌ ಸ್ಟೈಲಿಂಗ್‌ನಲ್ಲಿ ಫ್ರೆಂಚ್‌ ಬ್ರೆಡ್‌, ಡೌನ್‌ ವರ್ಡ್‌ ಬ್ರೆಡ್‌, ಟೂ ಸೈಡ್‌ ಬ್ರೆಡ್‌, ರಿವರ್ಸ್‌ ಫ್ರೆಂಚ್‌ ಬ್ರೆಡ್‌, ಮರ್‌ಮೈಡ್‌ ಬ್ರೆಡ್‌ ಇತ್ಯಾದಿ ಬೇರೆ ಬೇರೆ ಸ್ಟೈಲಿಶ್‌ ಬ್ರೆಡ್‌ಗಳ ಫ್ಯಾಷನ್‌ ಮತ್ತೆ ಬಂದಿದೆ. ಈ ಲೇಟೆಸ್ಟ್ ಫ್ಯಾಷನ್‌ ಗಮನದಲ್ಲಿಟ್ಟುಕೊಂಡು ಕೆಲವು ಹೇರ್‌ ಸ್ಟೈಲ್‌ಗಳು ಹಾಗೂ ಮೇಕಪ್‌ಗಳ ವಿಶೇಷ ಲುಕ್ಸ್ ಬಗ್ಗೆ ತಿಳಿಯೋಣ ಬನ್ನಿ.

60ರ ಮಾಡರ್ನ್‌ ಲುಕ್‌ ಇಂಟರ್‌ ನ್ಯಾಷನಲ್ ಬ್ರೆಡ್‌ಗೆ ಇಂಡಿಯನ್‌ ಲುಕ್‌ ಕೊಡುವ ಈ ಹೇರ್‌ ಸ್ಟೈಲ್‌‌ನಲ್ಲಿ ಲೂಪ್‌ ಬ್ರೆಡ್‌ನ ಟೆಕ್ನಿಕ್‌ನ್ನು ಸುಂದರವಾಗಿ ಪ್ರಯೋಗಿಸಿ. ಸೆಂಟರ್‌ನಲ್ಲಿ ಸ್ಟಫಿಂಗ್‌ ಮಾಡಿ ಕೂದಲಿಗೆ ಹೈಲೈಟ್‌ ಕೊಟ್ಟು ಅದನ್ನು ಒರಿಜಿನ್ ಕೂದಲಿನಿಂದ ಕವರ್‌ ಮಾಡಿ. ಫ್ರಂಟ್‌ನಿಂದ ಸೈಡ್‌ ಪಾರ್ಟಿಂಗ್‌ ಮಾಡಿ, ಬ್ಯಾಕ್‌ ಕೂಂಬ್‌ ಮೂಲಕ ಹಿಂದೆ ಸೆಟ್‌ ಮಾಡಿ. ಮುಂದೆ ಉಳಿದಿರುವ ಕೂದಲನ್ನು ಬಲೆ ಹೆಣೆಯಲು ಕೊಂಚ ಬಿಟ್ಟು ಬ್ಯಾಕ್‌ ಕೂಂಬಿಂಗ್‌ ಮೂಲಕವೇ ಕೂದಲಿನಲ್ಲಿ ಇಳಿಜಾರು ಅಥವಾ ಗ್ರೇಡೇಶನ್‌ ಬರುವಂತೆ ಹಿಂದೆ ಸೆಟ್‌ ಮಾಡಿ. ಮುಂದೆ ಉಳಿದ ಕೂದಲನ್ನು ಬಲೆಯಂತೆ ಹೆಣೆಯಿರಿ ಮತ್ತು ಕೂದಲಿನ ಮೇಲ್ಭಾಗದಲ್ಲಿ ಫಂಕಿ ಲುಕ್‌ ಕೊಡಲು ಸಣ್ಣ ಲೂಪ್‌ ಮತ್ತು ದೊಡ್ಡ ಬ್ರೆಡ್‌ ಮತ್ತು ಹಾಫ್‌ ಬ್ರೆಡ್‌ ಮಾಡಿ. ಹಿಂದೆ ಉಳಿದ ಉದ್ದನೆಯ ಕೂದಲಿಗೆ ಆಕರ್ಷಕ ರೂಪ ಕೊಡಲು ಎರಡೂ ಕಡೆ ಲೂಪ್‌ ಇರುವ ಬ್ರೆಡ್‌ ಮಾಡಿ. ಅದರಲ್ಲಿ ಲೂಪ್‌ ದೊಡ್ಡದಾಗಿರಬೇಕು ಮತ್ತು ಬ್ರೆಡ್‌ ಚಿಕ್ಕದಾಗಿರಬೇಕು.

ಮ್ಯಾಟ್‌ ಬ್ರೆಡ್‌ನ ಸ್ಟೈಲಿಶ್‌ ಡಿಸೈನ್‌

4

ಈ ಸ್ಟೈಲ್‌ಗೆ ಕೂದಲನ್ನು 3 ಭಾಗಗಳಲ್ಲಿ ವಿಂಗಡಿಸಿ ಮಧ್ಯದ ಭಾಗವನ್ನು ಮೇಲಿನ ಕಡೆಗೆ ಸೀದಾ ಅರ್ಧ ಇಂಚು ತೆಗೆದುಕೊಂಡು ಮಧ್ಯದಲ್ಲಿ 2 ಭಾಗ ಮಾಡಿ. ಅದನ್ನು ಮತ್ತೆ 4 ಭಾಗಗಳಲ್ಲಿ ವಿಂಗಡಿಸಿ ಒಂದು ಬ್ಲ್ಯಾಕ್‌ ಅಂಡ್‌ ಲೈಟ್‌ ರಿಬ್ಬನ್‌ ಸಹಾಯದಿಂದ ಮ್ಯಾಟ್‌ನಂತೆ ಹೆಣೆಯಿರಿ. ಕೂದಲಿನ ಎಡಭಾಗವನ್ನು ರೋಪ್‌ ಟೆಕ್ನಿಕ್‌ ಮತ್ತು ಬಲಭಾಗವನ್ನು ಫ್ರೆಂಚ್‌ ಬ್ರೆಡ್‌ ಮೂಲಕ ಅಲಂಕರಿಸಿ. ನೀಟ್‌ ಮತ್ತು ಕ್ಲೀನ್‌ ಲುಕ್‌ನ ಈ ಹೇರ್‌ಸ್ಟೈಲ್ ‌ಬಹಳ ಆಕರ್ಷಕವಾಗಿರುತ್ತದೆ.

ಕ್ರಿಯೇಟಿವ್ ‌ಹೇರ್‌ ಡೂ

rose-bride-look

ಫೇರಿ ಅಂದರೆ ಅಪ್ಸರೆಯ ಲುಕ್‌ನ ಈ ಹೇರ್‌ ಡೂನಲ್ಲಿ ಬಣ್ಣದ ಬಳೆಗಳೊಂದಿಗೆ ಕೂದಲನ್ನು ಯಾವುದೇ ಪಿನ್‌ ಉಪಯೋಗಿಸದೆ ಪೋಣಿಸಿ. ಫ್ರಂಟ್‌ನಿಂದ 2 ಲೇಯರ್‌ನಲ್ಲಿ ಫ್ರೆಂಚ್‌ ಬ್ರೆಡ್‌ ಮಾಡಿ. ಹಿಂದಿನ ಕೂದಲಿನಲ್ಲಿ ಜಡೆ ಹೆಣೆಯಿರಿ. ಜಡೆಯನ್ನು ಕಲರ್‌ ಫುಲ್ ಬೀಡ್ಸ್ ಗಳಿಂದ ಅಲಂಕರಿಸಿ. ಈ ಆಕರ್ಷಕ ಫೇರಿಯ ಐ ಮೇಕಪ್‌ ಕೂಡ ಗುಲಾಬಿ ಬಣ್ಣದ ಡ್ರೆಸ್‌ ಮತ್ತು ರೆಕ್ಕೆಗಳಿಗೆ ಅನುಗುಣವಾಗಿ ಪಿಂಕ್‌ ಮಾಡಿ.

ಪೀಕಾಕ್‌ ಬೇಸ್ಡ್ ಥೀಮ್ ಹೇರ್‌ ಡೂ

mat-brad-look

ನವಿಲಿನ ಥೀವ್‌ ಗಮನದಲ್ಲಿಟ್ಟು ಕೊಂಡು ಈ ಹೇರ್‌ ಡೂನಲ್ಲಿ ನವಿಲಿನ ಎಲ್ಲ ಬಣ್ಣಗಳನ್ನು ಉಪಯೋಗಿಸಿ. ಹೆಲೋವೀನ್‌ ಸ್ಪೈರ್ ಬ್ರೆಡ್‌ನಿಂದ ಕೂದಲಿಗೆ ಕ್ರಿಯೇಟಿವ್ ‌ಲುಕ್ಸ್ ಕೊಡುತ್ತಾ 3 ಬಣ್ಣಗಳ ಹೂಗಳನ್ನು ಮಾಡಿ. ಕೂದಲಿಗೆ ಸ್ಪ್ರೇ ಮೂಲಕ 3 ಬೇರೆ ಬೇರೆ ಬಣ್ಣಗಳನ್ನು ಹಾಕಿ. ಫ್ರಂಟ್‌ನಿಂದ ಕೂದಲಿನಲ್ಲಿ ಶಿಖೆಯ ಮೂಲಕ ಪಫ್‌ ಮಾಡಿ ಮತ್ತು ಸೈಡ್‌ನಲ್ಲಿ ನಾಟ್‌ನಿಂದ ಕ್ರಿಯೇಟಿವ್ ಲುಕ್ ಕೊಡಿ. ಈ ಹೇರ್‌ ಸ್ಟೈಲ್‌‌ನೊಂದಿಗೆ ಮ್ಯಾಚ್‌ ಮಾಡುವ ಇದರ ಐ ಮೇಕಪ್‌ ಕೂಡ ನವಿಲಿನ ಥೀವ್‌ ಆಧರಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ