ಕೂದಲು ನಮ್ಮ ಸ್ಟೈಲ್ ‌ಸ್ಟೇಟ್‌ಮೆಂಟ್‌ ಆಗಿರುತ್ತದೆ. ಹೀಗಿರುವಾಗ ಅವು ಉದುರುವುದೆಂದರೆ ಆಪತ್ತಿನಂತೆ ತೋರುತ್ತದೆ. ಲೈಫ್ ಸ್ಟೈಲ್ ಮತ್ತು ಆಹಾರ ಕ್ರಮಗಳಿಂದ ಕೂದಲಿಗೆ ಯೋಗ್ಯ ಪೋಷಣೆ ಸಿಗದಿದ್ದರೆ ಅವು ಸಮಯಕ್ಕೆ ಮೊದಲೇ ಉದುರಲು ಶುರುವಾಗುತ್ತವೆ. ಸುಂದರ ಹಾಗೂ ಸದೃಢ ಕೂದಲು ಸೌಂದರ್ಯವನ್ನು ವೃದ್ಧಿ ಮಾಡುವುದಲ್ಲದೆ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಕಾಸ್ಮೆಟಾಲಜಿಸ್ಟ್ ವಿನೀತಾ ಉದುರುವ ಕೂದಲನ್ನು ಸದೃಢಗೊಳಿಸುವ ಕೆರಾ ಥೆರಪಿಯ ಬಗ್ಗೆ ಮಾಹಿತಿ ನೀಡಿದರು. ಕೆರಾ ಥೆರಪಿ ಎಂದರೇನು, ಅದನ್ನು ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ.

kera-thraipy

ಕೆರಾ ಥೆರಪಿ

ಕೆರಾ ಥೆರಪಿ ಸ್ಪಾಗೆ ಹೊರತಾದ ಸ್ಕಾಲ್ಪ್ ಟ್ರೀಟ್‌ಮೆಂಟ್‌ ಆಗಿದ್ದು, ಬುಡದಿಂದ ಉದುರು ಕೂದಲಿಗೆ ಅದು ಒಂದು ವರದಾನವಾಗಿದೆ. ಇದರಲ್ಲಿ ಉಪಯೋಗಿಸುವ ಎಲ್ಲ ಉತ್ಪನ್ನಗಳೂ ನ್ಯಾಚುರಲ್ ಫುಡ್‌ ಫಾರ್‌ ಹೇರ್‌ ಆಗಿವೆ. ಉದಾಹರಣೆಗೆ ಲೆಮನ್‌ ಗ್ರಾಸ್‌ ಆಯಿಲ್‌, ಆ್ಯರೋಮ್ಯಾಟಿಕ್‌ ಆಯಿಲ್‌, ಮೆಂತ್ಯದ ಕಾಳು, ನೆಲ್ಲಿಕಾಯಿ, ಸೀಗೆಪುಡಿ, ಚೈನೀಸ್‌ ಹರ್ಬ್‌ ಇತ್ಯಾದಿ. ಈ ಉತ್ಪನ್ನಗಳು ಕೂದಲಿಗೆ ಸದೃಢತೆ ಕೊಡುವ ಜೊತೆಗೆ ಶೈನಿಂಗ್‌ ಹಾಗೂ ಆರ್ದ್ರತೆಯನ್ನೂ ಕೊಡುತ್ತವೆ. ಧಾವಂತದ ಲೈಫ್‌ಸ್ಟೈಲ್, ಪರಿಸರ ಮಾಲಿನ್ಯ, ಸ್ಟ್ರೆಸ್‌ ಇತ್ಯಾದಿಗಳಿಂದ ಉದುರುವ ಕೂದಲಿಗೂ ಈ ಥೆರಪಿ ಬಹಳ ಲಾಭದಾಯಕ.

ಕೆರಾ ಥೆರಪಿ ಪ್ರಕ್ರಿಯೆ

cleanser-(1)

ಹೇರ್‌ ಫಾಲ್ ಟ್ರೀಟ್‌ಮೆಂಟ್‌ನ ಈ ಥೆರಪಿ ಶುರು ಮಾಡುವ ಮೊದಲು ಗ್ರಾಹಕರ ಕೂದಲಿಗೆ ಶ್ಯಾಂಪೂ ಮಾಡಲಾಗುತ್ತದೆ. ಕೂದಲಿನಲ್ಲಿ ಡ್ಯಾಂಡ್ರಫ್‌ ಇದ್ದರೆ ಆ್ಯಂಟಿಡ್ಯಾಂಡ್ರಫ್‌ ಶ್ಯಾಂಪೂ ಮತ್ತು ಕೂದಲು ಉದುರುತ್ತಿದ್ದರೆ ಆ್ಯಂಟಿ ಹೇರ್‌ ಫಾಲ್ ‌ಶ್ಯಾಂಪೂ ಉಪಯೋಗಿಸಿ. ಶ್ಯಾಂಪೂ ಬಳಿಕ ಕಂಡೀಶನರ್‌ ಉಪಯೋಗಿಸಬೇಡಿ. ಕೂದಲು ಚೆನ್ನಾಗಿ ಒಣಗಿದ ಬಳಿಕ ಓಝೋನ್‌ ಟ್ರೀಟ್‌ಮೆಂಟ್‌ ಕೊಡಿ. ಈ ಟ್ರೀಟ್‌ಮೆಂಟ್‌ನ ಉದ್ದೇಶ ಕ್ರಿಮಿ ಕೀಟ ಹಾಗೂ ಬ್ಯಾಕ್ಟೀರಿಯ ಸಾಯಿಸಿ ಸ್ಕಾಲ್ಪ್ ನ್ನು ಹೇರ್‌ ಫಾಲ್ ‌ಟ್ರೀಟ್‌ಮೆಂಟ್‌ಗೆ ಸಿದ್ಧಪಡಿಸುವುದು. ಈ ಟ್ರೀಟ್‌ಮೆಂಟ್‌ನಿಂದ ಸ್ಕಾಲ್ಪ್ ನ ರೋಮ ರಂಧ್ರಗಳು ತೆರೆಯುತ್ತವೆ. ಈ ಟ್ರೀಟ್‌ಮೆಂಟ್‌ನ್ನು 5 ರಿಂದ 10 ನಿಮಿಷಗಳವರೆಗೆ ಕೊಡಬೇಕು.

ಅನಂತರ ಕೂದಲನ್ನು ಬೇರೆ ಬೇರೆ ಭಾಗಗಳಲ್ಲಿ ವಿಂಗಡಿಸಿ ಎಲ್ಲಕ್ಕೂ ಮೊದಲು ಅಮೈನೋ ಪ್ರೋಟೀನ್‌ಯುಕ್ತ ಜೆಲ್‌ನ್ನು ಬೆರಳುಗಳಿಂದ ಸ್ಕಾಲ್ಪ್ ಮೇಲೆ ಮಸಾಜ್‌ ಮಾಡುತ್ತಾ ಹಚ್ಚಿ. ಹಗುರವಾಗಿ ಮಸಾಜ್‌ ಮಾಡಿ ಹಾಗೂ ಜೆಲ್‌ನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿ.

2.toning

ಒಂದು ಕಿಟ್‌ನಿಂದ ಜೆಲ್‌ನ್ನು 10 ಬಾರಿ ಉಪಯೋಗಿಸಬಹುದು. ಅದನ್ನು ಕೂದಲಿಗೆ ಹಚ್ಚಬೇಡಿ. ಈ ಮಸಾಜ್‌ನಿಂದ ಸ್ಕಾಲ್ಪ್ ರಿಲ್ಯಾಕ್ಸ್ ಆಗುತ್ತದೆ ಹಾಗೂ ಕೂದಲಿನ ಬುಡವನ್ನು ಸದೃಢಗೊಳಿಸುತ್ತದೆ. ಆಯಿಲ್ ‌ಜೆಲ್‌ನಿಂದ ಮಸಾಜ್‌ ಮಾಡಿದ ನಂತರ ತಲೆಯಲ್ಲಿ ಉಳಿದ ಆಯಿಲ್‌ನಿಂದ ಕೂದಲು ಮತ್ತು ಸ್ಕ್ಲಾಲ್ಪ್ ನ್ನು ಮಸಾಜ್‌ ಮಾಡಿ. ಈ ಮಸಾಜ್‌ನಿಂದ ಕೂದಲಿಗೆ ಸಾಫ್ಟ್ ನೆಸ್ ಮತ್ತು ದೃಢತೆ ಸಿಗುತ್ತದೆ. ಅ ಸರಿಯಾಗಿ ಬೆಳೆಯುತ್ತವೆ. ಆಯಿಲ್ ‌ಸಂಪೂರ್ಣವಾಗಿ ಸ್ಕಾಲ್ಪ್ ಹಾಗೂ ಕೂದಲಿನಲ್ಲಿ ಬೆರೆಸಿ. ಒಂದು ವೇಳೆ ನೀವು ಕಲರಿಂಗ್‌ ಅಥವಾ ರೀಬಾಂಡಿಂಗ್‌ ಮಾಡಿಸಿದ್ದರೂ ಈ ಥೆರಪಿ ನಿಮಗೆ ಲಾಭಕಾರಿಯಾಗಿರುತ್ತದೆ.

ಪ್ರತಿ ಸಿಟಿಂಗ್‌ನಲ್ಲಿ 10 ಎಂಎಲ್ ಆಯಿಲ್ ‌ಉಪಯೋಗಿಸಿ. ಮಸಾಜ್‌ ನಂತರ ಕೂದಲಿಗೆ 6-7 ನಿಮಿಷ ಸ್ಟೀಮ್ ಕೊಡಿ. ಅದರಿಂದ ಕೂದಲು ಹಾಗೂ ಸ್ಕಾಲ್ಪ್ನಲ್ಲಿ ಎಣ್ಣೆ ಚೆನ್ನಾಗಿ ಸೇರಿಕೊಳ್ಳುವುದು.

3..scrubing

ಪ್ಯಾಕ್‌ ಮೆಂತ್ಯದ ಕಾಳು, ನೆಲ್ಲಿಕಾಯಿ, ಸೀಗೆಪುಡಿ, ಚೈನೀಸ್‌ ಹರ್ಬಲ್ಯುಕ್ತ ಪ್ಯಾಕ್‌ ಕೂದಲಿಗೆ ದೃಢತೆ ಕೊಡುವುದರ ಜೊತೆ ಜೊತೆಗೆ ಆರ್ದ್ರತೆಯನ್ನೂ ಕೊಡುತ್ತದೆ. ಈ ಪ್ಯಾಕ್‌ನ ಉದ್ದೇಶ ತಲೆಯ ತ್ವಚೆಯ ತೆರೆದ ರೋಮ ರಂಧ್ರಗಳನ್ನು ಮುಚ್ಚುವುದೂ ಆಗಿದೆ. ಪ್ಯಾಕ್‌ನ್ನು ತಲೆಯ ಚರ್ಮದ ಮೇಲೆ ಮಾತ್ರ 20 ನಿಮಿಷಗಳವರೆಗೆ ಹಚ್ಚಿ.

ಕ್ಲೆನ್ಸರ್‌ ಪ್ಯಾಕ್‌ ಹಚ್ಚಿದ 20 ನಿಮಿಷಗಳ ನಂತರ ಕಿಟ್‌ನಲ್ಲಿ ಇರುವ ಕ್ಲೆನ್ಸರ್‌ನಿಂದ ಕೂದಲನ್ನು ತೊಳೆಯಿರಿ. ಈ ಕ್ಲೆನ್ಸರ್‌ನಲ್ಲಿ ಹಾನಿಕಾರಕ ಕೆಮಿಕಲ್ಸ್ ಇರುವುದಿಲ್ಲ. ಈ ಥೆರಪಿ ನಿಮ್ಮ ಕೂದಲನ್ನು ಕೋಮಲವಾಗಿ ಮತ್ತು ಸದೃಢವಾಗಿ ಮಾಡುವುದಲ್ಲದೆ, ನಿಮ್ಮನ್ನು ರಿಲ್ಯಾಕ್ಸ್ ಕೂಡ ಮಾಡುತ್ತದೆ.

– ಪಿ. ಜಾನಕಿ

ಫೇಶಿಯಲ್ ಫಾರ್‌ ಗ್ಲೋಯಿಂಗ್‌ ಸ್ಕಿನ್‌ ಹೊಳೆಯುವ ಹಾಗೂ ಹೆಲ್ದಿ ತ್ವಚೆ ಎಲ್ಲರನ್ನೂ ಆಕರ್ಷಿಸುತ್ತದೆ. ಸ್ಕಿನ್‌ ಟ್ರೇನರ್‌ ರವೀನಾ ಬಟರ್‌ ಮಾಯಿಸ್ಟ್ ಫೇಶಿಯಲ್ ಫಾರ್‌ ಹೈಡ್ರೇಟಿಂಗ್‌ ಸ್ಕಿನ್‌ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಈ ಫೇಶಿಯಲ್‌ನಿಂದ ನೀವು ಹೇಗೆ ತ್ವಚೆಯ ಕಳೆದುಹೋದ ಆರ್ದ್ರತೆ ಮತ್ತು ಹೊಳಪನ್ನು ವಾಪಸ್‌ ತರಬಹುದುದೆಂದು ತಿಳಿಯೋಣ ಬನ್ನಿ.

4.kheera-juice

ಬಟರ್‌ ಮಾಯಿಸ್ಟ್ ಫೇಶಿಯಲ್ ಫಾರ್‌ ಹೈಡ್ರೇಟಿಂಗ್‌ ಸ್ಕಿನ್‌ ಈ ಫೇಶಿಯಲ್‌ನ ಆರಂಭವನ್ನು ಹಾರ್ಮೋನೈಸೇಷನ್‌ನಿಂದ ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಉದ್ದೇಶ ಕ್ಲೈಂಟ್‌ಗೆ ಫೇಶಿಯಲ್‌ಗೆ ಮುಂಚೆ ರಿಲ್ಯಾಕ್ಸ್ ಮಾಡುವುದಾಗಿರುತ್ತದೆ. ಫೇಶಿಯಲ್‌ನ್ನು ಬ್ರೇಕ್‌ ಫಾಸ್ಟ್ ಅಥವಾ ಲಂಚ್‌ನ ಅರ್ಧ ಗಂಟೆ ನಂತರವೇ ಮಾಡಿ.

ಫೇಶಿಯಲ್‌ಗೆ ಮೊದಲು ಕೈಗಳನ್ನು ಹ್ಯಾಂಡ್‌ ಸ್ಯಾನಿಟೈಸರ್‌ ಮೂಲಕ ಸ್ವಚ್ಛಗೊಳಿಸಿ ಮತ್ತು ಬೇಬಿ ಆಯಿಲ್‌‌ನಿಂದ ಮೇಕಪ್ ರಿಮೂವ್ ‌ಮಾಡಿ. ನಂತರ ಕ್ಲೆನ್ಸರ್‌ ಹಚ್ಚಿ ಕಾಟನ್‌ ಬಟ್ಟೆಯಿಂದ ಸ್ವಚ್ಛಗೊಳಿಸಿ. ಕ್ಲೆನ್ಸಿಂಗ್‌ ನಂತರ ಟೋನಿಂಗ್‌ ಮಾಡಿ. ಟೋನಿಂಗ್‌ಗೆ ಎಳನೀರು ಉಪಯೋಗಿಸಿ. ಎಳನೀರು ತ್ವಚೆಯನ್ನು ಮಾಯಿಶ್ಚರೈಸ್‌ ಹಾಗೂ ಹೈಡ್ರೇಟ್‌ ಮಾಡುತ್ತದೆ. ಟೋನಿಂಗ್‌ ನಂತರ ಬಟರ್‌ ಮಾಯಿಸ್ಟ್ ಸ್ಕ್ರಬ್‌ನಿಂದ ಸ್ಕ್ರಬಿಂಗ್‌ ಮಾಡಿ. ನಂತರ ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ ಮತ್ತು ಸೌತೆಕಾಯಿ ರಸ ಹಚ್ಚಿ. ಸೌತೆ ರಸ ಕಣ್ಣುಗಳ ಕೆಳಗಿನ ಕಲೆಯನ್ನು ದೂರ ಮಾಡುತ್ತದೆ. ನಂತರ 4 ರಿಂದ 5 ನಿಮಿಷಗಳವರೆಗೆ ತ್ವಚೆಯನ್ನು ಗ್ಯಾಲ್ವನೈಸ್‌ಮಾಡಿ. ಗ್ಯಾಲ್ವನೈಸ್‌ನ್ನು ಯಾವುದೇ ಜ್ಯೂಸ್‌ನಿಂದ ಮಾಡಬಹುದು. ನೀವು ಆಯಾ ಋತುವಿಗೆ ತಕ್ಕ ಜ್ಯೂಸ್ ಉಪಯೋಗಿಸಬಹುದು. ಇದು ಅತ್ಯಂತ ಸುರಕ್ಷಿತವಾಗಿರುತ್ತದೆ. ಬಳಿಕ ಬಟರ್‌ ಮಾಯಿಸ್ಟ್ ಲೋಶನ್‌ ಹಚ್ಚಿ ಮತ್ತು ಅಲ್ಟ್ರಾಸೋನಿಕ್‌ ಮೆಶಿನ್‌ ಮೂಲಕ ಲೋಶನ್‌ನ್ನು ತ್ವಚೆಯಲ್ಲಿ ಸೇರಿಸಿ. ಅಲ್ಟ್ರಾಸೋನಿಕ್‌ ಮೆಶಿನ್‌ನ್ನು ಯಾವಾಗಲೂ ಕೆಳಗಿನಿಂದ ಮೇಲಿನತ್ತ ಮತ್ತು ಸರ್ಕ್ಯುಲರ್‌ ಮೋಷನ್‌ನಲ್ಲಿ ಓಡಿಸಿ.

DSC_7833

 

ಅಲ್ಟ್ರಾಸೋನಿಕ್‌ ಮೆಶಿನ್‌ನ್ನು 45 ನಿಮಿಷಗಳವರೆಗೆ ಉಪಯೋಗಿಸಿ. ನಂತರ ಬಟರ್‌ ಮಾಯಿಸ್ಟ್ ಕ್ರೀಮ್ ಹಚ್ಚಿ. ಮಸಾಜ್ ಮೂಲಕ ಎಲ್ಲ ಕ್ರೀ ನ್ನು ಶರೀರದಲ್ಲಿ ಸೇರಿಸಿ. ನಂತರ ಬಟರ್‌ ಮಾಯಿಸ್ಟ್ ರಾಪ್‌ ಹಾಕಿ. ಪ್ಯಾಕ್‌ ಬದಲು ರಾಪ್‌ ಯಾವಾಗಲೂ ತ್ವಚೆಗೆ ಪ್ರಾಕೃತಿಕ ಆರ್ದ್ರತೆ ಒದಗಿಸುತ್ತಿರುತ್ತದೆ. ತ್ವಚೆಯ ಮೇಲೆ ರಾಪ್‌ನ್ನು 15 ನಿಮಿಷದವರೆಗೆ ಹಚ್ಚಿ. ಕಣ್ಣುಗಳ ಮೇಲೆ ಸೌತೆಕಾಯಿಯ ತುಂಡು ಇಡಿ. ರಾಪ್‌ನ ಮೇಲೆ ಪರಂಗಿಹಣ್ಣಿನ ತಿರುಳನ್ನೂ ಇಡಬಹುದು.

ಅದು ತ್ವಚೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಅದಕ್ಕೆ ನರಿಶ್‌ಮೆಂಟ್‌ ಕೂಡ ಮಾಡುತ್ತದೆ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಕೊನೆಯಲ್ಲಿ ಮಾಯಿಶ್ಚರೈಸರ್‌ ಹಚ್ಚಲು ಮರೆಯಬೇಡಿ. ಡೀಹೈಡ್ರೇಟೆಡ್‌ ತ್ವಚೆಗೆ ಈ ಫೇಶಿಯಲ್ ನೂತನ ಶೋಭೆ ನೀಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ