ಕೂದಲು ನಮ್ಮ ಸ್ಟೈಲ್ ‌ಸ್ಟೇಟ್‌ಮೆಂಟ್‌ ಆಗಿರುತ್ತದೆ. ಹೀಗಿರುವಾಗ ಅವು ಉದುರುವುದೆಂದರೆ ಆಪತ್ತಿನಂತೆ ತೋರುತ್ತದೆ. ಲೈಫ್ ಸ್ಟೈಲ್ ಮತ್ತು ಆಹಾರ ಕ್ರಮಗಳಿಂದ ಕೂದಲಿಗೆ ಯೋಗ್ಯ ಪೋಷಣೆ ಸಿಗದಿದ್ದರೆ ಅವು ಸಮಯಕ್ಕೆ ಮೊದಲೇ ಉದುರಲು ಶುರುವಾಗುತ್ತವೆ. ಸುಂದರ ಹಾಗೂ ಸದೃಢ ಕೂದಲು ಸೌಂದರ್ಯವನ್ನು ವೃದ್ಧಿ ಮಾಡುವುದಲ್ಲದೆ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಕಾಸ್ಮೆಟಾಲಜಿಸ್ಟ್ ವಿನೀತಾ ಉದುರುವ ಕೂದಲನ್ನು ಸದೃಢಗೊಳಿಸುವ ಕೆರಾ ಥೆರಪಿಯ ಬಗ್ಗೆ ಮಾಹಿತಿ ನೀಡಿದರು. ಕೆರಾ ಥೆರಪಿ ಎಂದರೇನು, ಅದನ್ನು ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ.

kera-thraipy

ಕೆರಾ ಥೆರಪಿ

ಕೆರಾ ಥೆರಪಿ ಸ್ಪಾಗೆ ಹೊರತಾದ ಸ್ಕಾಲ್ಪ್ ಟ್ರೀಟ್‌ಮೆಂಟ್‌ ಆಗಿದ್ದು, ಬುಡದಿಂದ ಉದುರು ಕೂದಲಿಗೆ ಅದು ಒಂದು ವರದಾನವಾಗಿದೆ. ಇದರಲ್ಲಿ ಉಪಯೋಗಿಸುವ ಎಲ್ಲ ಉತ್ಪನ್ನಗಳೂ ನ್ಯಾಚುರಲ್ ಫುಡ್‌ ಫಾರ್‌ ಹೇರ್‌ ಆಗಿವೆ. ಉದಾಹರಣೆಗೆ ಲೆಮನ್‌ ಗ್ರಾಸ್‌ ಆಯಿಲ್‌, ಆ್ಯರೋಮ್ಯಾಟಿಕ್‌ ಆಯಿಲ್‌, ಮೆಂತ್ಯದ ಕಾಳು, ನೆಲ್ಲಿಕಾಯಿ, ಸೀಗೆಪುಡಿ, ಚೈನೀಸ್‌ ಹರ್ಬ್‌ ಇತ್ಯಾದಿ. ಈ ಉತ್ಪನ್ನಗಳು ಕೂದಲಿಗೆ ಸದೃಢತೆ ಕೊಡುವ ಜೊತೆಗೆ ಶೈನಿಂಗ್‌ ಹಾಗೂ ಆರ್ದ್ರತೆಯನ್ನೂ ಕೊಡುತ್ತವೆ. ಧಾವಂತದ ಲೈಫ್‌ಸ್ಟೈಲ್, ಪರಿಸರ ಮಾಲಿನ್ಯ, ಸ್ಟ್ರೆಸ್‌ ಇತ್ಯಾದಿಗಳಿಂದ ಉದುರುವ ಕೂದಲಿಗೂ ಈ ಥೆರಪಿ ಬಹಳ ಲಾಭದಾಯಕ.

ಕೆರಾ ಥೆರಪಿ ಪ್ರಕ್ರಿಯೆ

cleanser-(1)

ಹೇರ್‌ ಫಾಲ್ ಟ್ರೀಟ್‌ಮೆಂಟ್‌ನ ಈ ಥೆರಪಿ ಶುರು ಮಾಡುವ ಮೊದಲು ಗ್ರಾಹಕರ ಕೂದಲಿಗೆ ಶ್ಯಾಂಪೂ ಮಾಡಲಾಗುತ್ತದೆ. ಕೂದಲಿನಲ್ಲಿ ಡ್ಯಾಂಡ್ರಫ್‌ ಇದ್ದರೆ ಆ್ಯಂಟಿಡ್ಯಾಂಡ್ರಫ್‌ ಶ್ಯಾಂಪೂ ಮತ್ತು ಕೂದಲು ಉದುರುತ್ತಿದ್ದರೆ ಆ್ಯಂಟಿ ಹೇರ್‌ ಫಾಲ್ ‌ಶ್ಯಾಂಪೂ ಉಪಯೋಗಿಸಿ. ಶ್ಯಾಂಪೂ ಬಳಿಕ ಕಂಡೀಶನರ್‌ ಉಪಯೋಗಿಸಬೇಡಿ. ಕೂದಲು ಚೆನ್ನಾಗಿ ಒಣಗಿದ ಬಳಿಕ ಓಝೋನ್‌ ಟ್ರೀಟ್‌ಮೆಂಟ್‌ ಕೊಡಿ. ಈ ಟ್ರೀಟ್‌ಮೆಂಟ್‌ನ ಉದ್ದೇಶ ಕ್ರಿಮಿ ಕೀಟ ಹಾಗೂ ಬ್ಯಾಕ್ಟೀರಿಯ ಸಾಯಿಸಿ ಸ್ಕಾಲ್ಪ್ ನ್ನು ಹೇರ್‌ ಫಾಲ್ ‌ಟ್ರೀಟ್‌ಮೆಂಟ್‌ಗೆ ಸಿದ್ಧಪಡಿಸುವುದು. ಈ ಟ್ರೀಟ್‌ಮೆಂಟ್‌ನಿಂದ ಸ್ಕಾಲ್ಪ್ ನ ರೋಮ ರಂಧ್ರಗಳು ತೆರೆಯುತ್ತವೆ. ಈ ಟ್ರೀಟ್‌ಮೆಂಟ್‌ನ್ನು 5 ರಿಂದ 10 ನಿಮಿಷಗಳವರೆಗೆ ಕೊಡಬೇಕು.

ಅನಂತರ ಕೂದಲನ್ನು ಬೇರೆ ಬೇರೆ ಭಾಗಗಳಲ್ಲಿ ವಿಂಗಡಿಸಿ ಎಲ್ಲಕ್ಕೂ ಮೊದಲು ಅಮೈನೋ ಪ್ರೋಟೀನ್‌ಯುಕ್ತ ಜೆಲ್‌ನ್ನು ಬೆರಳುಗಳಿಂದ ಸ್ಕಾಲ್ಪ್ ಮೇಲೆ ಮಸಾಜ್‌ ಮಾಡುತ್ತಾ ಹಚ್ಚಿ. ಹಗುರವಾಗಿ ಮಸಾಜ್‌ ಮಾಡಿ ಹಾಗೂ ಜೆಲ್‌ನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿ.

2.toning

ಒಂದು ಕಿಟ್‌ನಿಂದ ಜೆಲ್‌ನ್ನು 10 ಬಾರಿ ಉಪಯೋಗಿಸಬಹುದು. ಅದನ್ನು ಕೂದಲಿಗೆ ಹಚ್ಚಬೇಡಿ. ಈ ಮಸಾಜ್‌ನಿಂದ ಸ್ಕಾಲ್ಪ್ ರಿಲ್ಯಾಕ್ಸ್ ಆಗುತ್ತದೆ ಹಾಗೂ ಕೂದಲಿನ ಬುಡವನ್ನು ಸದೃಢಗೊಳಿಸುತ್ತದೆ. ಆಯಿಲ್ ‌ಜೆಲ್‌ನಿಂದ ಮಸಾಜ್‌ ಮಾಡಿದ ನಂತರ ತಲೆಯಲ್ಲಿ ಉಳಿದ ಆಯಿಲ್‌ನಿಂದ ಕೂದಲು ಮತ್ತು ಸ್ಕ್ಲಾಲ್ಪ್ ನ್ನು ಮಸಾಜ್‌ ಮಾಡಿ. ಈ ಮಸಾಜ್‌ನಿಂದ ಕೂದಲಿಗೆ ಸಾಫ್ಟ್ ನೆಸ್ ಮತ್ತು ದೃಢತೆ ಸಿಗುತ್ತದೆ. ಅ ಸರಿಯಾಗಿ ಬೆಳೆಯುತ್ತವೆ. ಆಯಿಲ್ ‌ಸಂಪೂರ್ಣವಾಗಿ ಸ್ಕಾಲ್ಪ್ ಹಾಗೂ ಕೂದಲಿನಲ್ಲಿ ಬೆರೆಸಿ. ಒಂದು ವೇಳೆ ನೀವು ಕಲರಿಂಗ್‌ ಅಥವಾ ರೀಬಾಂಡಿಂಗ್‌ ಮಾಡಿಸಿದ್ದರೂ ಈ ಥೆರಪಿ ನಿಮಗೆ ಲಾಭಕಾರಿಯಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ