ಆಂಗ್ಲದಲ್ಲಿ ಒಂದು ಪ್ರಸಿದ್ಧ ನಾಣ್ಣುಡಿ ಇದೆ, `ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್!’ ಇದು ಖಂಡಿತಾ ನಿಜ, ಏಕೆಂದರೆ ವಿಷಯ ಇಂಟರ್‌ವ್ಯೂ ಅಥವಾ ಡೇಟಿಂಗ್ ಅಥವಾ ಬಿಸ್‌ನೆಸ್ ಕ್ಲೈಂಟ್ ಮೀಟಿಂಗ್ ಇರಲಿ, ನಮ್ಮ ಫಸ್ಟ್ ಇಂಪ್ರೆಶನ್ ಹೇಗಿರುತ್ತದೆ ಎಂಬುದರ ಮೇಲೆ ನಮ್ಮ ಯಶಸ್ಸು ನಿಂತಿದೆ. ಮೊದಲ ಭೇಟಿಯಲ್ಲೇ ಯಾರನ್ನಾದರೂ ಪ್ರಭಾವಿತಗೊಳಿಸಲು ಪಾಸಿಟಿವ್ ಆ್ಯಟಿಟ್ಯೂಡ್, ಆತ್ಮವಿಶ್ವಾಸದ ಜೊತೆ ಜೊತೆ, ಮುಖದ ಮೇಲೆ ಒಂದು ಹೊಸ ಕಾಂತಿ ಹಾಗೂ ಬ್ಯೂಟಿಫುಲ್ ಸ್ಮೈಲ್ ಇರಬೇಕಾದುದು ಅತ್ಯಗತ್ಯ.
ಒಂದು ಸಂಶೋಧನೆಯ ಪ್ರಕಾರ ನಸುನಗುತ್ತಾ, ಯಾವುದೇ ವ್ಯಕ್ತಿಯನ್ನು ಏನಾದರೂ ಕೆಲಸ ಮಾಡಿಕೊಡಿ ಎಂದು ವಿನಂತಿಸಿಕೊಂಡರೆ, ಶೇ.65ರಷ್ಟು ಆ ಕೆಲಸ ಆಯಿತೆಂದೇ ಭಾವಿಸಬಹುದು. ಒಂದು ಬ್ಯೂಟಿಫುಲ್ ಹಾಗೂ ಕಾನ್ಛಿಡೆಂಟ್ ಮುಗುಳ್ನಗು, ಯಾರ ಎದುರೇ ಆಗಲಿ, ನಿಮ್ಮ ಸಕಾರಾತ್ಮಕ ಧೋರಣೆಯನ್ನು ಎತ್ತಿಹಿಡಿಯುತ್ತದೆ. ಮೊದಲ ಡೇಟಿಂಗ್ ಅಥವಾ ಇಂಟರ್‌ವ್ಯೂಗಾಗಿ ಯಾವುದೋ ಕಾರಣಕ್ಕಾಗಿ ನೀವು ಹೋಗಲು ತುಸು ತಡವಾದರೆ, ಖಂಡಿತಾ ಎದುರಿಗಿರುವವರಿಗೆ ನಿಮ್ಮ ಮೇಲೆ ಉತ್ತಮ ಅಭಿಪ್ರಾಯ ಇರುವುದಿಲ್ಲ. ಇದಕ್ಕೆ ಬದಲಾಗಿ, ನೀವು ಅಲ್ಲಿಗೆ ಹೋದ ತಕ್ಷಣವೇ ಸೌಮ್ಯವಾಗಿ ಸುಂದರ ಮಂದಹಾಸ ಬೀರಿದರೆ, ತುಸು ತಡವಾಯಿತೆಂದು ಸಕಾರಣ ನೀಡಿದರೆ, ನಿಮ್ಮ ಮುಂದಿನ ದಾರಿ ಸುಗಮವಾದೀತು.
ಮನೋವಿಜ್ಞಾನಿಗಳ ಪ್ರಕಾರ, ನೀವು ಬೆಳಗಿನ ಹೊತ್ತು ನಸುನಗುತ್ತಾ ನಿಮ್ಮ ಕೆಲಸ ಕಾರ್ಯ ಶುರು ಮಾಡಿದರೆ, ಆ ಕೆಲಸದಲ್ಲಿ ನಿಮ್ಮ ಮನಸ್ಸು ನೆಡುತ್ತದೆ. ಆ ಕಾರಣದಿಂದ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಿ ಸುಸೂತ್ರವಾಗಿ ಕೆಲಸ ನಡೆಯುತ್ತದೆ. ಆಫೀಸ್ ಅಥವಾ ಮನೆಯ ವಾತಾವರಣವಿರಲಿ, ಎಲ್ಲಾ ಕಡೆ ನಸುನಗುತ್ತಾ ನಿಮ್ಮ ಪ್ರಭಾವ ಬೀರುವುದರಿಂದ ಜನರ ಮನದಲ್ಲಿ ನಿಮ್ಮ `ಸ್ಮೈಲಿಂಗ್ ಫೇಸ್’ ಸದಾ ಅಚ್ಚಳಿಯದೆ ಉಳಿಯುತ್ತದೆ.
ಸಕಾರಾತ್ಮಕ ಪರಿಣಾಮ
ನೀವು ಯಾರನ್ನಾದರೂ ಮೊದಲ ಸಲ ಭೇಟಿಯಾದರೆ, ಮುಖದ ಮೇಲೆ ತೆಳು ಮಂದಹಾಸ ಉಳಿಸಿಕೊಳ್ಳುತ್ತಾ ನಿಮ್ಮ ಪರಿಚಯ ನೀಡಿ. ಹೀಗೆ ಆರಂಭಗೊಳ್ಳುವ ಸಂಭಾಷಣೆ ಉತ್ತಮ ಎಂದು ತಿಳಿಯಲ್ಪಡುತ್ತದೆ. ಮೊದಲ ಡೇಟಿಂಗ್, ಹೊಸ ಕೆಲಸದ ಮೊದಲ ದಿನ, ಮದುವೆಯಾದ ಮೊದಲ ರಾತ್ರಿ, ಪ್ರತಿ ಕಡೆಯೂ ನಿಮ್ಮ ಸುಂದರ ಮುಗುಳ್ನಗು ನಿಮ್ಮ ಐಡೆಂಟಿಟಿಯನ್ನು ಎತ್ತಿ ಹಿಡಿಯುತ್ತದೆ. ಇದನ್ನು `ಕ್ಲೋಸ್ ಅಪ್ ಡೈಮಂಡ್ ಅಟ್ರಾಕ್ಷನ್’ ಸದಾ ಉಳಿಸಿಕೊಡುತ್ತದೆ. ಇದರ ಸತತ ಬಳಕೆಯಿಂದ ಸಿಗುವ ಶೈನಿಂಗ್ ಸ್ಮೈಲ್‌ನಿಂದ ಕೇವಲ ಆತ್ಮತೃಪ್ತಿ ಮಾತ್ರವಲ್ಲದೆ, ನಿಮ್ಮ ಆರೋಗ್ಯದ ಮೇಲೂ ಇದರ ಗಾಢ ಸಕಾರಾತ್ಮಕ ಪರಿಣಾಮವನ್ನು ಗಮನಿಸಬಹುದು.
ಬೆಳಗುವ ಉನ್ನತ ವ್ಯಕ್ತಿತ್ವ
ಅನಾಯಾಸವಾಗಿ ಬೀರುವ ಮುಗುಳ್ನಗುವಿನ ಉದ್ದೇಶ ಸದಾ ಒಳ್ಳೆಯದಿರುತ್ತದೆ. ಪ್ರಭಾವಶಾಲಿ ಮುಗುಳ್ನಗುವಿನಿಂದ ನಿಮ್ಮ ವ್ಯಕ್ತಿತ್ವದ ಔನ್ನತ್ಯ ಬೆಳಗುತ್ತದೆ. ಇಷ್ಟು ಮಾತ್ರವಲ್ಲ, ನೀವು ಚಿಂತೆಗೊಳಗಾಗಿದ್ದರೆ ದೊಡ್ಡ ನಿಲುವುಗನ್ನಡಿ ಮುಂದೆ ನಿಂತು, ತುಸು ಮುಗುಳ್ನಗಲು ಪ್ರಯತ್ನಿಸಿ. ಆಗ ನಿಮ್ಮ ಟೆನ್ಶನ್ಸ್ ತಂತಾನೇ ದೂರವಾಗುತ್ತದೆ. ಹೀಗಾಗಿ ಸದಾ ನಿಮ್ಮ ದಿನಚರಿಯನ್ನು ಒಂದು ಸುಂದರ ಮಂದಹಾಸದಿಂದ ಕಿಲಕಿಲ ನಗುತ್ತಾ ಆರಂಭಿಸಿ, ಆಗ ಇಡೀ ದಿನ ಸಂತಸಮಯವಾಗಿ ಕಳೆಯುತ್ತದೆ. ಹೀಗಾಗಿ ಮನಬಿಚ್ಚಿ ಮುಗುಳ್ನಗಲು ಪ್ರಯತ್ನಿಸಿ, ಆಗ ಮಾತ್ರ ಯಶಸ್ಸಿನ ಶಿಖರವೇರಲು ಸಾಧ್ಯ ಎಂದು ಮನಗಾಣುವಿರಿ.
– ಶಾಲಿನಿ.