ಜೀವನಕ್ಕೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ಹಬ್ಬಗಳು ಮೇಲುಗೈ ಸಾಧಿಸುತ್ತವೆ. ಇದರಿಂದ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಿ ಹಬ್ಬ ಮಹತ್ವಪೂರ್ಣ ಎನಿಸುತ್ತದೆ. ಇದರಿಂದ ಎಲ್ಲರೂ ಪರಸ್ಪರ ಅರಿತು ಒಂದಾಗಲು, ದಿನನಿತ್ಯದ ಜಂಜಾಟದಿಂದ ದೂರವಾಗಲು ಹಬ್ಬಗಳು ಹೊಸ ಹೊಸ ಅನುಭೂತಿ ನೀಡುತ್ತವೆ.
ಹಬ್ಬಗಳಲ್ಲಿ ಮನೆಯನ್ನು ಎಷ್ಟು ಸಿಂಗರಿಸಿದರೂ ಸಾಲದು. ಅದೇ ತರಹ ಇನೋವೇಟಿವ್ ವಿಧಾನಗಳಿಂದ ಪಾರ್ಟಿಗಳನ್ನು ಆಯೋಜಿಸಿ ಅತಿಥಿಗಳ ಮೆಚ್ಚುಗೆ ಗಳಿಸಬಹುದು.
ಬನ್ನಿ, ಇಂಥ ಥೀಮ್ ಪಾರ್ಟಿಗಳ ಹೊಸ ಹೊಸ ಐಡಿಯಾಗಳ ಬಗ್ಗೆ ತಿಳಿದುಕೊಂಡು ನಿಮ್ಮ ಫೆಸ್ಟಿವಲ್ ಪಾರ್ಟಿಯನ್ನು ಹಿಟ್ ಆಗಿಸೋಣ.
ರಾಜಾಸ್ಥಾನಿ ಥೀಮ್ ಪಾರ್ಟಿ ಡೆಕೋರೇಶನ್ : ರಾಜಾಸ್ಥಾನಿ ಥೀಮ್ ಡೆಕೋರೇಶನ್ ಅಂದರೆ ಬಣ್ಣಬಣ್ಣಗಳ ರಾಜಾಸ್ಥಾನಿ ಶೈಲಿಯ ಪಡಿಯಚ್ಚಾಗಿರುತ್ತದೆ. ಗ್ರಾಂಡ್ ವುಡ್‌ನ ಫರ್ನೀಚರ್, ಎಲ್ಲೆಲ್ಲೂ ತೋರಣಗಳು, ರಾಜಾಸ್ಥಾನಿ ಕಸೂತಿ, ಕನ್ನಡಿ ಕೆಲಸಗಳುಳ್ಳ ಕುಶನ್ಸ್ ಬಣ್ಣಬಣ್ಣದ ಪೇಂಟಿಂಗ್ಸ್, ಬಾಜಾ ಭಜಂತ್ರಿಗಳ ಡ್ಯಾನ್ಸರ್ಸ್ ಪ್ರತಿಮೆಗಳು, ಕೋಲುಕಡ್ಡಿ ಗಾಢ ಬಣ್ಣಗಳ ಉಡುಗೆಯ ಬೊಂಬೆಗಳು, ಹ್ಯಾಂಡ್ ಬ್ಲಾಕ್ ಪೇಟಿಂಗ್, ಕಸೂತಿಗೊಳಿಸಲಾದ ಪರದೆಗಳು ಇತ್ಯಾದಿಗಳಿರಬೇಕು. ಇಲ್ಲಿ ವುಡನ್ ಚೆಸ್ಟ್ನ್ನು ಸೆಂಟರ್ ಅಥವಾ ಸೈಡ್ ಟೇಬಲ್ ತರಹ ಬಳಸಿದರೆ ಪಾರ್ಟಿಯ ಸೊಗಸು ಹೆಚ್ಚಿಸುತ್ತದೆ.
ಡ್ರೆಸ್ ಕೋಡ್ : ಈ ಪಾರ್ಟಿಗಾಗಿ ನಿಮ್ಮ ಅತಿಥಿಗಳಲ್ಲಿ ಪುರುಷರಿಗೆ ಧೋತಿ ಕುರ್ತಾ, ಬಣ್ಣದ ರುಮಾಲು, ಮುಂಡಾಸುಗಳನ್ನು ಧರಿಸುವಂತೆ ಹಾಗೂ ಮಹಿಳೆಯರಲ್ಲಿ ಬಂಧೇಜ್, ಟೈ ಡೈನ ಲಹಂಗಾಚೋಲಿ, ರಾಜಾಸ್ಥಾನಿ ಒಡವೆಗಳನ್ನು ಧರಿಸಿ ಬರಲು ಹೇಳಿ. ಆಗ ಸಹಜವಾಗಿ ಎಲ್ಲೆಲ್ಲೂ ರಾಜಾಸ್ಥಾನೀ ಕಳೆ ಮಿಂಚುತ್ತದೆ.
ಮೆನು : ರಾಜಾಸ್ಥಾನಿ ಪಾರ್ಟಿಗಳಲ್ಲಿ ಅತಿಥಿಗಳಿಗೆ ಗ್ರ್ಯಾಂಡ್ ರುಚಿ ಒದಗಿಸಲು ಸ್ಟಾರ್ಟರ್‌ನಲ್ಲಿ ಕಾಂಚಿವಡೆ, ಹೆಸರುಬೇಳೆ ಹೂರಣದ ದೋಸೆ, ಸ್ಟಫ್ಡ್ ಕಚೋಡಿಗಳನ್ನು ಸವಿಯಲು ಕೊಡಿ. ಮೆಯ್ನ್ ಕೋರ್ಸ್‌ನಲ್ಲಿ ಬಗೆಬಗೆಯ ರೊಟ್ಟಿ, ದಾಲ್, ಡ್ರೈ ಪಲ್ಯಗಳು, ಗಟ್ಟಿ ಮಜ್ಜಿಗೆ ಒದಗಿಸಿ. ಸಿಹಿಗಾಗಿ ಮೋತಿಚೂರ್ ಲಡ್ಡು, ಬಿಸಿಬಿಸಿ ಜಿಲೇಬಿ ನೀಡಬಹುದು. 10-15 ಜನರ ಈ ಪಾರ್ಟಿಯ ಒಟ್ಟಾರೆ ಖರ್ಚು ಸುಮಾರು 3-4 ಸಾವಿರ ಆಗಬಹುದು, ಇದು ಸದಾ ನೆನಪಿನಲ್ಲಿ ಉಳಿಯುವ ಪಾರ್ಟಿ ಆಗುತ್ತದೆ.
ಪಂಜಾಬಿ ಥೀಮ್ : ಯಾವುದೇ ಹಬ್ಬದ ಸಂದರ್ಭದಲ್ಲಿ ಪಂಜಾಬಿ ಥೀಮ್ ಪಾರ್ಟಿಯ ಅರ್ಥವೆಂದರೆ ವಿಲೇಜ್ ಲುಕ್ಸ್ ಹಾಗೂ ವೈಬ್ರೆಂಟ್ ಕಲರ್ಸ್. ಈ ಥೀಮಿನ ಡೆಕೋರೇಶನ್‌ಗಾಗಿ ನೀವು ಹಳೆಯ ದುಪಟ್ಟಾ, ಬಣ್ಣ ಬಣ್ಣದ ಸೀರೆಗಳು, ಮಣ್ಣಿನ ಮಡಕೆ, ಹಿತ್ತಾಳೆಯ ಸಣ್ಣ ದೊಡ್ಡ ಪಾತ್ರೆಗಳು, ಕೊಳಗ, ಟೇಪಿನ ಮಂಚ, ಪಂಜಾಬಿ ಕುಶನ್ ಇತ್ಯಾದಿಗಳಿಂದ ಗ್ರಾಮೀಣ ಪರಿಸರ ಒದಗಿಸಬಹುದು. ಮನೆಯ ಎಂಟ್ರೆನ್ಸ್ ನಲ್ಲಿ ಬಣ್ಣಬಣ್ಣದ ಬಳೆಗಳ ತೋರಣ, ಜಾಲಂಧ್ರಗಳನ್ನು ಇಳಿಬಿಡಬಹುದು. ಕೋಣೆಯ ಮೂಲೆಗಳಲ್ಲಿ ಸಂಗೀತದ ವಾದ್ಯ ಯಂತ್ರಗಳನ್ನಿರಿಸಿ ಟ್ರೆಡಿಷನ್ ಫೀಲ್ ನೀಡಬಹುದು.
ಡ್ರೆಸ್ ಕೋಡ್ : ಇಂಥ ಥೀಮ್ ಪಾರ್ಟಿಗಾಗಿ ನೀವು ನಿಮ್ಮ ಅತಿಥಿಗಳಲ್ಲಿ ಪುರುಷರಿಗೆ ಬ್ರೈಟ್ ಕಲರ್‌ನ ಲುಂಗಿ ಕುರ್ತಾ ಮತ್ತು ತಲೆಗೆ ಪಗಡಿ ಧರಿಸುವಂತೆ ಹಾಗೂ ಹೆಂಗಸರಲ್ಲಿ ಪಟಿಯಾಲಾ ಸಲ್ವಾರ್ ಕಮೀಜ್ ಜೊತೆಗೆ ಪರಾಂದಾ ಹಾಗೂ ಕೈಗಳ ತುಂಬಾ ಗಾಜಿನ ಬಳೆ ತೊಡಲು ಹೇಳಿ. ಮ್ಯೂಸಿಕ್‌ಗಾಗಿ ನೀವು ಭಾಂಗ್ರಾ ಗೀತೆಗಳನ್ನು ಆರಿಸಿಕೊಳ್ಳಬಹುದು.
ಮೆನು : ಪಂಜಾಬಿ ರೆಸಿಪೀಸ್‌ಗಾಗಿ ನೀವು ಅತಿಥಿಗಳಿಗೆ ಸ್ಟಾರ್ಟರ್ ಆಗಿ ತಂದೂರಿ ಚಿಕನ್ ಅಥವಾ ತಂದೂರಿ ಪನೀರ್, ಹೆಚ್ಚಿದ ಈರುಳ್ಳಿ, ಪುದೀನಾ ಚಟ್ನಿ, ನಿಂಬೆ ಹೋಳಿನೊಂದಿಗೆ ಸರ್ವ್ ಮಾಡಿ. ಮೇಯ್ನ್ ಕೋರ್ಸ್‌ನಲ್ಲಿ ನೀವು ಚಿಕನ್ ಟಿಕ್ಕಾ, ಚಿಕನ್‌ಪಟಿಯಾಲಾ, ಅಮೃತಸರಿ ಆಲೂಕುಲ್ಚಾ, ತಂದೂರಿ ರೊಟ್ಟಿಗಳು, ಮಕ್ಕಿ ಕಾ ರೋಟಿ ಸರ್ಯೋಂಕಾ ಸಾಗ್, ಸಿಹಿ ಲಸ್ಸಿ ಸರ್ವ್ ಮಾಡಬಹುದು. ಡೆಸರ್ಟ್‌ಗಾಗಿ ಪಂಜಾಬಿ ಫಿರ್‌ನಿ ನೀಡಬಹುದು. ಈ ಪಾರ್ಟಿಗೆ 15-20 ಜನರನ್ನು ಕರೆದರೆ ನಿಮ್ಮ ಬಜೆಟ್ 3-4 ಸಾವಿರ ಆಗಬಹುದು.
ದಕ್ಷಿಣ ಭಾರತೀಯ ಥೀಮ್ : ಹಬ್ಬಗಳಿಗೆ ಸುಸಂಸ್ಕೃತ ಲುಕ್ ನೀಡಲು ನೀವು ದಕ್ಷಿಣ ಭಾರತೀಯ ಸಂಪ್ರದಾಯ ಪಾಲಿಸಿ ಅತಿಥಿಗಳನ್ನು ಸ್ವಾಗತಿಸಬಹುದು. ಇದಕ್ಕಾಗಿ ಎಂಟ್ರೆನ್ಸ್ ನಲ್ಲಿ ಮಾವಿನ ತಳಿರುತೋರಣ, ಬಾಳೆಕಂಬಗಳು ಸಿದ್ಧವಿರಲಿ. ಮನೆ ಬಾಗಿಲ ಮುಂದೆ ಸುಂದರ ರಂಗೋಲಿ, ಕೆಂಪು ಸುದ್ದೆ ಮಣ್ಣಿನ ಅಲಂಕಾರ ಹೆಚ್ಚಿನ ಕಳೆ ತರುತ್ತದೆ. ರಂಗುರಂಗಿನ ಪುಡಿಗಳಿಂದ ರಂಗೋಲಿ ತುಂಬಿಸಿ. ಜೊತೆಗೆ ಹೂಗಳ ಅಲಂಕಾರ ಇರಲಿ. ಬ್ಯಾಕ್ ಗ್ರೌಂಡ್‌ಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಲಹರಿ ಇರಲಿ. ಡೆಕೋರೇಶನ್‌ಗಾಗಿ ಬ್ರಾಸ್, ಬ್ರಾನ್ಝ್, ಐಟಮ್ಸ್ ಇರಲಿ. ಲೈಟಿಂಗ್‌ಗಾಗಿ ದೀಪಾಲಂಕಾರ ಹಣತೆಗಳಿರಲಿ.
ಡ್ರೆಸ್ ಕೋಡ್ : ಈ ಥೀಮ್ ಪಾರ್ಟಿಗಾಗಿ ನಿಮ್ಮ ಅತಿಥಿಗಳಲ್ಲಿ ಗಂಡಸರಿಗೆ ಶುಭ್ರ ಬಿಳಿಯ ಪಂಚೆ ಕುರ್ತಾ, ಮಹಿಳೆಯರಿಗೆ ಅಂಚು ಸೆರಗುಳ್ಳ ಕಾಂಜೀವರಂ, ಮೈಸೂರು ಸಿಲ್ಕ್ ಸೀರೆಗಳು, ಹಣೆಗೆ ಕುಂಕುಮ ಅಥವಾ ಬಿಂದಿ, ಜಡೆಗೆ ಮಲ್ಲಿಗೆ ಹೂ, ಕೈಗಳಿಗೆ ಬಳೆ ಧರಿಸಿ ಬರಲು ಹೇಳಿ.
ಮೆನು : ವೆಲ್ ಕಮ್ ಡ್ರಿಂಕ್ ಆಗಿ ತಂಪು ಪಾನಕ ಅಥವಾ ಬಾದಾಮಿ ಹಾಲು, ಬಿಸಿಬಿಸಿ ಸೂಪ್ ಅಥವಾ ತಿಳಿಸಾರನ್ನು ಸರ್ವ್ ಮಾಡಬಹುದು. ಮೇಯ್ನ್ ಕೋರ್ಸ್‌ನಲ್ಲಿ ವೆಜಿಟೆಬಲ್ ಪಲಾವ್, ಬಿಸಿಬೇಳೆ ಭಾತ್, ಅನ್ನ ಸಾಂಬಾರು, ರಸಂ, ಪಲ್ಯ, ಕೋಸಂಬರಿ, ಹಪ್ಪಳ ಸಂಡಿಗೆ ನೀಡಬಹುದು. ಡೆಸರ್ಟ್‌ಗೆ ಶ್ಯಾವಿಗೆ ಪಾಯಸ, ಮೈಸೂರು ಪಾಕು, ಹೋಳಿಗೆ ಆಗಬಹುದು.
10-12 ಜನರ ಈ ಥೀಮ್ ಪಾರ್ಟಿಗೆ ನಿಮಗೆ 2-3 ಸಾವಿರ ಖರ್ಚಾಗಬಹುದು.
ಚೈನೀಸ್ ಥೀಮ್ : ಈ ಥೀಮ್ ಡೆಕೋರೇಶನ್‌ನಲ್ಲಿ ಮುಖ್ಯ ಆಕರ್ಷಣೆ ಇದರ ಬಣ್ಣ. ಇಲ್ಲಿ ಪ್ರತಿ ಡೆಕೋರೇಶನ್‌ನ ಪೀಸ್ ಕೆಂಪು ಬಣ್ಣ ಆಗಿರುತ್ತದೆ. ಅಂದರೆ ರೆಡ್ ನ್ಯಾಪ್‌ಕಿನ್ ಫೋಲ್ ಡಿಡ್ ಇನ್ ಶೇಪ್ ಡ್ರ್ಯಾಗನ್ ಪ್ರಿಂಟ್, ಚೈನೀಸ್ ಪೇಪರ್ ಲ್ಯಾಂಟರ್ನ್, ಚೈನೀಸ್ ಬ್ರಾಸ್, ಪೇಪರ್ ಡ್ರ್ಯಾಗನ್‌ಗಳಿಂದ ನಿಮ್ಮ ಮನೆಗೆ ಚೈನೀಸ್ ಡೆಕೋದ ಗೆಟಪ್ ನೀಡಬಹುದು.
ಡ್ರೆಸ್ ಕೋಡ್ : ನೀವು ಅತಿಥಿಗಳಲ್ಲಿ ಮಹಿಳೆಯರಿಗೆ ರೆಡ್ ಗೌನ್ ಅಥವಾ ಸ್ಕರ್ಟ್ ಟಾಪ್ ಧರಿಸಲು ಹೇಳಿ, ಹಾಗೇ ಗಂಡಸರಿಗೆ ಫಾರ್ಮಲ್ ಸೂಟ್ ಇರಬೇಕು.
ಮೆನು : ಈ ಥೀಮ್ನಲ್ಲಿ ಮೆನುಗಾಗಿ ನೀವು ಸ್ಟಾರ್ಟರ್‌ನಲ್ಲಿ ಅತಿಥಿಗಳಿಗೆ ಮೋಮೋಸ್, ಡಂಪ್ಲಿಂಗ್ಸ್ ಒದಗಿಸಿ. ಡ್ರಿಂಕ್ಸ್ ನಲ್ಲಿ ಆರೆಂಜ್ ಮಾರ್ಟಿನಿ, ಹಾಟ್‌ಸಾರ್ ಮತ್ತು ಸ್ವೀಟ್ ಕಾರ್ನ್ ಸೂಪ್ ಜೊತೆ ಸ್ಪ್ರಿಂಗ್ ರೋಲ್ಸ್ ಸರ್ವ್ ಮಾಡಿ. ಮೇಯ್ನ್ ಕೋರ್ಸ್ ನಲ್ಲಿ ಫ್ರೈಡ್ ರೈಸ್, ಮಂಚೂರಿಯನ್, ರೆಡ್ ಕುಕ್ಡ್ ಚಿಕನ್ ಹಾಗೂ ಡೆಸರ್ಟ್‌ಗಾಗಿ ಹನೀ ನೂಡಲ್ಸ್ ಐಸ್ ಕ್ರೀಂ ಸರ್ವ್ ಮಾಡಿ.
ಸಲಹೆಗಳು
ಮೆನು ನಿರ್ಧರಿಸುವಾಗ ವೆಜ್‌ನಾನ್ ವೆಜ್ ಎರಡೂ ಬಗೆಯ ಡಿಶೆಸ್ ಇರಲಿ. ಕೆಲವರು ನಾನ್ ವೆಜ್ ಪ್ರಿಫರ್ ಮಾಡದೇ ಇರಬಹುದು.
ಫಿಂಗರ್‌ಫುಡ್ ಜೊತೆ ಅಗತ್ಯವಾಗಿ ಟೂಥ್‌ಪಿಕ್‌ನ್ಯಾಪ್‌ಕಿನ್ ಇರಿಸಲು ಮರೆಯಬೇಡಿ.
ಪೋರ್ಕ್‌ಸ್ಪೂನ್ ಧಾರಾಳವಾಗಿರಲಿ.
ಮಕ್ಕಳಿಗಾಗಿ ಕಿಡ್ಸ್ ಪಾರ್ಟಿ : ಹಿರಿಯರಿಗಾಗಿ ಇಷ್ಟೊಂದು ಪಾರ್ಟಿಗಳು ತಯಾರಾದ ನಂತರ, ಮಕ್ಕಳನ್ನು ಹೇಗೆ ಮರೆಯಲು ಸಾಧ್ಯ? ಅವರ ಪಾರ್ಟಿ ಅರೇಂಜ್ ಮಾಡುವುದಕ್ಕಾಗಿ ಹೆಚ್ಚಿನ ಸಮಯ ಇಟ್ಟುಕೊಳ್ಳಿ. ಪಾರ್ಟಿ ಖಚಿತಪಡಿಸಿಕೊಂಡ ಬಳಿಕ ಅದರ ಥೀಮ್ ಬಗ್ಗೆ ನಿರ್ಧರಿಸಿ.
ಕಿಡ್ಸ್ ಥೀಮ್ ಪಾರ್ಟಿ : ಮಕ್ಕಳ ಪಾರ್ಟಿಗಳಲ್ಲಿ ಇತ್ತೀಚೆಗೆ ಮಿಕ್ಕಿ ಮೌಸ್, ಟಾಮ್ ಜೆರಿ, ಡೈನೋಸಾರ್, ಅನಿಮೇಟೆಡ್ ಮೂವಿ, ಫೇರಿಟೇಲ್ ಥೀಮ್ಸ್ ಅಥವಾ ಫ್ರೂಟ್ಸ್ ಪಾರ್ಟಿ ಥೀಮ್ ಚಾಲ್ತಿಯಲ್ಲಿದೆ. ನೀವು ಪಾರ್ಟಿಯ ಥೀಮ್ ಬಟರ್ ಫ್ಲೈ ಇರಿಸಿಕೊಂಡರೆ, ಇನ್ವಿಟೇಶನ್ ಕಾರ್ಡ್ ಸಹ ಚಿಟ್ಟೆಯ ಆಕಾರದಲ್ಲೇ ಇರಬೇಕು. ಅದಕ್ಕೆ ಚಿಟ್ಟೆಯ ಸ್ಟಿಕರ್ ಅಂಟಿಸಿರಬೇಕು. ಪಾರ್ಟಿಯ ಡ್ರೆಸ್ ಕೋಡ್ ಅದರ ಅನುಸಾರವೇ ಇರಲಿ. ಪಾರ್ಟಿಯ ಥೀಮ್ ಫ್ರೂಟ್ಸ್ ಆಗಿದ್ದರೆ, ಮಕ್ಕಳನ್ನು ವಿವಿಧ ಬಗೆಯ ಹಣ್ಣುಗಳ ತರಹ ಡ್ರೆಸ್ ಮಾಡಿಕೊಂಡು ಬರಲು ಹೇಳಿ. ಹೆಚ್ಚು ಹೆಚ್ಚು ಫ್ರೂಟ್ಸ್ ಡಿಶೆಸ್ ಇರಲಿ. ಫ್ರೂಟ್ ಶೇಕ್, ಫ್ರೂಟ್ ಕೇಕ್, ಫ್ರೂಟ್ ಸ್ಯಾಂಡ್‌ವಿಚ್, ಫ್ರೂಟ್ ಐಸ್‌ಕ್ರೀಂ ಇತ್ಯಾದಿಗಳಿರಲಿ. ಪಾರ್ಟಿಯ ಗೇಮ್ಸ್ ಸಹ ಫ್ರೂಟ್ಸ್ ಆಧಾರಿತವಾಗಿರಲಿ. ಹಣ್ಣುಗಳ ಮಾಹಿತಿ ನೀಡುವ ಕಾರ್ಯಕ್ರಮ, ಕ್ವಿಜ್ ಇತ್ಯಾದಿಗಳಿರಲಿ.
ಮೆನು : ಮಕ್ಕಳ ಪಾರ್ಟಿಗಳ ಮೆನುವಿನಲ್ಲಿ ಮುಖ್ಯವಾಗಿ ಕೇಕ್, ಪೇಸ್ಟ್ರಿ, ಐಸ್‌ಕ್ರೀಂ, ಸ್ವೀಟ್ಸ್, ಚಿಪ್ಸ್, ಲೇಸ್ ಕುರ್‌ಕುರೆಯಂಥ ಕುರುಕಲು ತಿಂಡಿ, ಬಗೆಬಗೆಯ ಟಾಫಿ ಚಾಕಲೇಟ್, ವೇಫರ್ಸ್, ಕಟ್‌ಲೆಟ್, ಡೋನಟ್, ಕುಕೀಸ್ ಇತ್ಯಾದಿ ಇರಲಿ. ಟೇಬಲ್ ವೇರ್, ಕಪ್‌ಸಾಸರ್, ಪ್ಲೇಟ್ಸ್ ಎಲ್ಲ ಥೀಮಿಗೆ ತಕ್ಕಂತಿರಲಿ. ಸಾಧ್ಯವಾದಷ್ಟೂ ಡಿಸ್ಪೋಸೆಬಲ್ ವಸ್ತುಗಳನ್ನೇ ಬಳಸಿರಿ.
ಗೇಮ್ಸ್ ಗಿಫ್ಟ್ : ಈ ಪಾರ್ಟಿಯ ಮನರಂಜನೆ ಹೆಚ್ಚಿಸಲು ಪಾರ್ಟಿ ಗೇಮ್ಸ್, ಕ್ವಿಜ್, ಅಂತ್ಯಾಕ್ಷರಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಇತ್ಯಾದಿಗಳಿರಲಿ. ಮಕ್ಕಳು ಯಾವುದೇ ಸ್ಪರ್ಧೆಯಲ್ಲಿ ವಿಜೇತರಾದರೂ, ಅವರಿಗೆ ಗಿಫ್ಟ್ ಕೊಡಲು ಮರೆಯದಿರಿ. ಈಗೆಲ್ಲ 40-50 ರೂ.ಗಳ ಬಗೆಬಗೆಯ ಉಡುಗೊರೆಗಳು ದೊರಕುತ್ತವೆ. ಇಂಥವನ್ನು ಮಕ್ಕಳಿಗೆ ನೀಡಿ ಅವರ ಉತ್ಸಾಹ ಹೆಚ್ಚಿಸಿ, ಮುಖ್ಯವಾಗಿ ಎಲ್ಲಾ ಮಕ್ಕಳಿಗೂ ರಿಟರ್ನ್ ಗಿಫ್ಟ್ ಕೊಡಲೇಬೇಕೆಂಬುದನ್ನು ನೆನಪಿಡಿ.
– ಶಾರದಾ ಸ್ವಾಮಿ