ಕಳೆದ ಬಾರಿ `ಕಾನ್ಸ್ ಫಿಲ್ಮ್ ಫೆಸ್ಟಿವಲ್‌'ನಲ್ಲಿ ವಿದ್ಯಾ ಬಾಲನ್‌, ಸೋನಂ ಕಪೂರ್‌ರಂತಹ ನಟಿಯರು ಮೂಗುತಿ ಧರಿಸಿ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ರೆಡ್‌ ಕಾರ್ಪೆಟ್‌ ಮೇಲೆ ಲಾಸ್ಯವಾಡಿದರು. ವಿದ್ಯಾ ಬಾಲನ್‌ ಭಾರತೀಯ ಸೀರೆಯುಟ್ಟು ಮೂಗುತಿ ಧರಿಸಿದ್ದರು. ಸೋನಂ ಕಪೂರ್‌ ಯುವತಿಯರನ್ನು ಪ್ರತಿನಿಧಿಸುವ ನಟಿಯಾಗಿದ್ದು ಪಾರ್ಟಿ ಗೌನ್‌ ಮತ್ತು ಡೈಮಂಡ್‌ ಮೂಗುತಿ ಧರಿಸಿ ಕ್ಯಾಮೆರಾ ಎದುರಿಗೆ ಬಿಂದಾಸ್‌ ಆಗಿ ನಲಿಯುತ್ತಿದ್ದರು. ಹಳೆಯ ಫ್ಯಾಷನ್‌ ಯಾವಾಗಲೂ ಮರಳುತ್ತಿರುತ್ತದೆ. ಅವು ಬಟ್ಟೆಯಾಗಲೀ, ಹೇರ್‌ ಸ್ಟೈಲ್ ‌ಆಗಲೀ ಅಥವಾ ಒಡವೆಗಳಾಗಲೀ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಹೊಸ ರೂಪದಲ್ಲಿ ಮತ್ತೆ ಬರುತ್ತವೆ.

ಪಾರಂಪರಿಕ ಒಡವೆಗಳು

ಧಕ್‌ ಧಕ್‌ ಹುಡುಗಿ ಮಾಧುರಿ ದೀಕ್ಷಿತ್‌ ಹೀಗೆ ಹೇಳುತ್ತಾರೆ, ನಮ್ಮ ಅತ್ತೆ ಕೊಟ್ಟ ಪಾಟಲಿ ಬಳೆಗಳೊಂದಿಗೆ ಯಾವುದೇ ಒಡವೆಗಳನ್ನು ಹೋಲಿಸಲಾಗುವುದಿಲ್ಲ. ಚಂದ್ರಹಾರ, ಬೋರ್‌ ಮಾಳ ಮತ್ತು ಶಾಹೀಸರಗಳಂತಹ ಪಾರಂಪರಿಕ ಮಹಾರಾಷ್ಟ್ರದ ಒಡವೆಗಳೂ ನನಗೆ ಬಹಳ ಇಷ್ಟ. ಹಿಂದೆ ಜನ ತಮ್ಮ ಶ್ರೀಮಂತಿಕೆ ಹಾಗೂ ವೈಭವ ತೋರಿಸಿಕೊಳ್ಳಲು ತೂಕವಿರುವ ಚಿನ್ನದ ಒಡವೆಗಳನ್ನು ಧರಿಸಿ ಓಡಾಡುತ್ತಿದ್ದರು. ಶ್ರೀಮಂತ ಮಹಿಳೆಯರಂತೂ ಮೈಪೂರ್ತಿ ಒಡವೆಗಳನ್ನು ಹೇರಿಕೊಂಡಿರುತ್ತಿದ್ದರು.

ಮಹಾರಾಷ್ಟ್ರದ ಹಳೆಯ ಪಾರಂಪರಿಕ ಒಡವೆಗಳಲ್ಲಿ ವಿವಿಧ ಬಗೆಯ ಅನೇಕ ಡಿಸೈನ್‌ಗಳ ಸರಗಳು ಸಿಗುತ್ತಿದ್ದವು. ಅವುಗಳಲ್ಲಿ ಲಕ್ಷ್ಮೀ ಸರ, ಚಂಪಾ ಸರ, ಪೋಹಾ ಸರ, ಶಾಹೀಸರ, ಹೆಸರುಕಾಳಿನ ಸರ, ಗಲಸರೀ, ರುದ್ರಾಕ್ಷಿ ಸರ, ಪುತಲಿ ಸರ, ಚಿಂಚಪೇಟಿ, ತನಮಣಿ, ಕೊಲ್ಹಾಪುರ ಸಾಜ್‌ ಠುಶೀ, ಮೋಹನ್‌ ಮಾಲಾ, ಜ್ರಟೀಕ್‌, ಸೂರ್ಯಹಾರ ಇತ್ಯಾದಿ ಬಹಳ ಪ್ರಚಲಿತವಾಗಿದ್ದವು. ಆದರೆ ಕಿವಿಗಳಲ್ಲಿ ಕೇವಲ ಕರ್ಣಪ್ ಮತ್ತು ಜುಮಕಿಗಳನ್ನೇ ಧರಿಸುತ್ತಿದ್ದರು. ಅವು ಚಿನ್ನ ಅಥವಾ ವಜ್ರದ್ದಾಗಿರುತ್ತಿದ್ದವು.

ಹಗುರ ಆಭರಣಗಳು

 

ಮೂಗುತಿಗಳೂ ಸಹ ಮಹಾರಾಷ್ಟ್ರದ ವಿವಿಧ ಜಾತಿ ಮತ್ತು ಸಮಾಜದ ನಿಯಮಗಳಿಗನುಸಾರವಾಗಿ ವಿವಿಧ ಪ್ರಕಾರಗಳನ್ನು ತಯಾರಿಸಲಾಗಿರುತ್ತವೆ. ಅವುಗಳಲ್ಲಿ ಬ್ರಾಹ್ಮಣಿ ಮೂಗುತಿ, ಕೋಲಿ ಮೂಗುತಿ, ಕರ್ನಾಟಕಿ ಮೂಗುತಿ, ಬೆಳಗಾವಿ ಮೂಗುತಿ ಇತ್ಯಾದಿ ಬಹಳ ಪ್ರಚಲಿತಾಗಿದ್ದವು. ಮಂಗಳಸೂತ್ರ ಸಹ ಕರಿ ಮುತ್ತುಗಳಿಂದಲೇ ಪೋಣಿಸಲ್ಪಟ್ಟಿರುತ್ತಿದ್ದವು. ಅವುಗಳಲ್ಲಿ ಚಿನ್ನದ ಪೆಂಡೆಂಟ್‌ಅಥವಾ ಮೂಗಾರತ್ನ ಅಳವಡಿಸಲಾಗುತ್ತಿರುತ್ತಿತ್ತು. ಹಿಂದಿನ ಕಾಲದ ಮಹಾರಾಷ್ಟ್ರದ ಮೂಗುತಿ ದೊಡ್ಡದಾಗಿ ತೂಕದ್ದಾಗಿರುತ್ತಿದ್ದವು.

ಊಟ ಮಾಡುವಾಗ ಅದನ್ನು ಮೇಲಕ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು. ಈ ಮೂಗುತಿಗಳನ್ನು ಆಯಾ ಜಾತಿಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತಿತ್ತು. ಆದರೆ ಈಗ ಮೂಗುತಿಗಳು ಸಣ್ಣದಾಗಿ, ಆಕರ್ಷಕವಾಗಿ ಸಿಗತೊಡಗಿವೆ.

ಬಳೆಗಳಲ್ಲಿ ಗೋಠ್‌, ಪಾಟ್ಯಾ, ಜಿಲೇಬಿ ತೋಡು, ಪಿಛೋಡಿ, ಶಿಂಧೆ ಶಾಹಿ ತೋಡು ಇತ್ಯಾದಿ ಜನಪ್ರಿಯಾಗಿವೆ. ಕಾಲುಗಳಲ್ಲಿ ಬೆಳ್ಳಿಯ ಗೆಜ್ಜೆಗಳು ಅಥವಾ ಕಡಗಗಳನ್ನು ಧರಿಸಲಾಗುತ್ತಿತ್ತು. ಹಿಂದೆ ಚಿನ್ನ ಸಾಕಷ್ಟು ಅಗ್ಗವಾಗಿ ಸಿಗುತ್ತಿತ್ತು. 9 ಗಜದ ಸೀರೆಯುಟ್ಟು ಆಭರಣಗಳನ್ನು ತೊಟ್ಟ ಮಹಿಳೆಯರನ್ನು ನೋಡುವುದೇ ಚೆಂದವಾಗಿತ್ತು. ಈಗ ಮಹಾರಾಷ್ಟ್ರದ ಪಾರಂಪರಿಕ ಒಡವೆಗಳನ್ನು ನೋಡುವುದೇ ಕಡಿಮೆಯಾಗಿದೆ.

ಯಾವುದು ಉತ್ತಮ?

modern-jwerlery-7

ಅನೇಕ ಉದ್ಯೋಗಸ್ಥ ಮಹಿಳೆಯರು ಮದುವೆ, ಮುಂಜಿ, ನಾಮಕರಣ, ಅರಿಶಿನ, ಕುಂಕುಮ ಇತ್ಯಾದಿ ಪಾರಂಪರಿಕ ಕಾರ್ಯಕ್ರಮಗಳಲ್ಲಿ ಮಾತ್ರ ಇಂತಹ ಒಡವೆಗಳನ್ನು ಧರಿಸುತ್ತಾರೆ. ಈಗಿನ ಯುವಪೀಳಿಗೆ ಹೆಚ್ಚಾಗಿ ಸೀರೆ ಉಡುವುದಿಲ್ಲ. ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಲಹಂಗಾ, ಬ್ಲೌಸ್‌ ಅಥವಾ ಪಂಜಾಬಿ ಡ್ರೆಸ್‌ನ್ನೇ ಹೆಚ್ಚಾಗಿ ಧರಿಸುತ್ತಾರೆ. ಸಂಜೆಯ ರಿಸೆಪ್ಶನ್‌, ಆಫೀಸ್‌ ಪಾರ್ಟಿ, ಬರ್ಥ್‌ಡೇ ಪಾರ್ಟಿ ಅಥವಾ ಬೇರೆ ಯಾವುದಾದರೂ ಫಂಕ್ಷನ್‌ ಇದ್ದರೆ ಗೌನ್‌ ಅಥವಾ ಫ್ರಾಕ್ ಧರಿಸುತ್ತಾರೆ. ಈ ಉಡುಪುಗಳೊಂದಿಗೆ ಪಾರಂಪರಿಕ ಒಡವೆಗಳು ಚೆನ್ನಾಗಿ ಕಾಣಿಸುವುದಿಲ್ಲ. ಇಂತಹ ಉಡುಪುಗಳ ಮೇಲೆ ಯಾವ ರೀತಿಯ ಒಡವೆಗಳನ್ನು ಧರಿಸಬೇಕು ಮತ್ತು ಪಾರಂಪರಿಕ ಒಡವೆಗಳಿಗೆ ಯಾವ ಪರ್ಯಾಯ ಲಭ್ಯವಿವೆ ಎಂಬ ಪ್ರಶ್ನೆಗಳನ್ನು ಮುಂಬೈನ ಜ್ಯೂವೆಲರ್ಸ್‌ಧವನ್ ಮತ್ತು ರೇವತಿಯರನ್ನು ಕೇಳಿದಾಗ ಅವರು ಹಳೆಯ ಮತ್ತು ಹೊಸ ಒಡವೆಗಳ ರಾಶಿ ತೋರಿಸಿ ಪ್ರತಿ ಒಡವೆಯ ಸಂಪೂರ್ಣ ಮಾಹಿತಿ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ