ಜೀವನಕ್ಕೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ಹಬ್ಬಗಳು ಮೇಲುಗೈ ಸಾಧಿಸುತ್ತವೆ. ಇದರಿಂದ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಿ ಹಬ್ಬ ಮಹತ್ವಪೂರ್ಣ ಎನಿಸುತ್ತದೆ. ಇದರಿಂದ ಎಲ್ಲರೂ ಪರಸ್ಪರ ಅರಿತು ಒಂದಾಗಲು, ದಿನನಿತ್ಯದ ಜಂಜಾಟದಿಂದ ದೂರವಾಗಲು ಹಬ್ಬಗಳು ಹೊಸ ಹೊಸ ಅನುಭೂತಿ ನೀಡುತ್ತವೆ.

ಹಬ್ಬಗಳಲ್ಲಿ ಮನೆಯನ್ನು ಎಷ್ಟು ಸಿಂಗರಿಸಿದರೂ ಸಾಲದು. ಅದೇ ತರಹ ಇನೋವೇಟಿವ್ ‌ವಿಧಾನಗಳಿಂದ ಪಾರ್ಟಿಗಳನ್ನು ಆಯೋಜಿಸಿ ಅತಿಥಿಗಳ ಮೆಚ್ಚುಗೆ ಗಳಿಸಬಹುದು.

ಬನ್ನಿ, ಇಂಥ ಥೀಮ್ ಪಾರ್ಟಿಗಳ ಹೊಸ ಹೊಸ ಐಡಿಯಾಗಳ ಬಗ್ಗೆ ತಿಳಿದುಕೊಂಡು ನಿಮ್ಮ ಫೆಸ್ಟಿವಲ್ ‌ಪಾರ್ಟಿಯನ್ನು ಹಿಟ್ ಆಗಿಸೋಣ.

ರಾಜಾಸ್ಥಾನಿ ಥೀಮ್ ಪಾರ್ಟಿ ಡೆಕೋರೇಶನ್‌ : ರಾಜಾಸ್ಥಾನಿ ಥೀಮ್ ಡೆಕೋರೇಶನ್‌ ಅಂದರೆ ಬಣ್ಣಬಣ್ಣಗಳ ರಾಜಾಸ್ಥಾನಿ ಶೈಲಿಯ ಪಡಿಯಚ್ಚಾಗಿರುತ್ತದೆ. ಗ್ರಾಂಡ್‌ ವುಡ್‌ನ ಫರ್ನೀಚರ್‌, ಎಲ್ಲೆಲ್ಲೂ ತೋರಣಗಳು, ರಾಜಾಸ್ಥಾನಿ ಕಸೂತಿ, ಕನ್ನಡಿ ಕೆಲಸಗಳುಳ್ಳ ಕುಶನ್ಸ್ ಬಣ್ಣಬಣ್ಣದ ಪೇಂಟಿಂಗ್ಸ್, ಬಾಜಾ ಭಜಂತ್ರಿಗಳ ಡ್ಯಾನ್ಸರ್ಸ್ ಪ್ರತಿಮೆಗಳು, ಕೋಲುಕಡ್ಡಿ ಗಾಢ ಬಣ್ಣಗಳ ಉಡುಗೆಯ ಬೊಂಬೆಗಳು, ಹ್ಯಾಂಡ್‌ ಬ್ಲಾಕ್‌ ಪೇಟಿಂಗ್‌, ಕಸೂತಿಗೊಳಿಸಲಾದ ಪರದೆಗಳು ಇತ್ಯಾದಿಗಳಿರಬೇಕು. ಇಲ್ಲಿ ವುಡನ್‌ ಚೆಸ್ಟ್ನ್ನು ಸೆಂಟರ್‌ ಅಥವಾ ಸೈಡ್‌ ಟೇಬಲ್ ತರಹ ಬಳಸಿದರೆ ಪಾರ್ಟಿಯ ಸೊಗಸು ಹೆಚ್ಚಿಸುತ್ತದೆ.

ಡ್ರೆಸ್‌ ಕೋಡ್‌ : ಈ ಪಾರ್ಟಿಗಾಗಿ ನಿಮ್ಮ ಅತಿಥಿಗಳಲ್ಲಿ ಪುರುಷರಿಗೆ ಧೋತಿ ಕುರ್ತಾ, ಬಣ್ಣದ ರುಮಾಲು, ಮುಂಡಾಸುಗಳನ್ನು ಧರಿಸುವಂತೆ ಹಾಗೂ ಮಹಿಳೆಯರಲ್ಲಿ ಬಂಧೇಜ್‌, ಟೈ ಡೈನ ಲಹಂಗಾಚೋಲಿ, ರಾಜಾಸ್ಥಾನಿ ಒಡವೆಗಳನ್ನು ಧರಿಸಿ ಬರಲು ಹೇಳಿ. ಆಗ ಸಹಜವಾಗಿ ಎಲ್ಲೆಲ್ಲೂ ರಾಜಾಸ್ಥಾನೀ ಕಳೆ ಮಿಂಚುತ್ತದೆ.

ಮೆನು : ರಾಜಾಸ್ಥಾನಿ ಪಾರ್ಟಿಗಳಲ್ಲಿ ಅತಿಥಿಗಳಿಗೆ ಗ್ರ್ಯಾಂಡ್‌ ರುಚಿ ಒದಗಿಸಲು ಸ್ಟಾರ್ಟರ್‌ನಲ್ಲಿ ಕಾಂಚಿವಡೆ, ಹೆಸರುಬೇಳೆ ಹೂರಣದ ದೋಸೆ, ಸ್ಟಫ್ಡ್ ಕಚೋಡಿಗಳನ್ನು ಸವಿಯಲು ಕೊಡಿ. ಮೆಯ್ನ್ ಕೋರ್ಸ್‌ನಲ್ಲಿ ಬಗೆಬಗೆಯ ರೊಟ್ಟಿ, ದಾಲ್, ಡ್ರೈ ಪಲ್ಯಗಳು, ಗಟ್ಟಿ ಮಜ್ಜಿಗೆ ಒದಗಿಸಿ. ಸಿಹಿಗಾಗಿ ಮೋತಿಚೂರ್‌ ಲಡ್ಡು, ಬಿಸಿಬಿಸಿ ಜಿಲೇಬಿ ನೀಡಬಹುದು. 10-15 ಜನರ ಈ ಪಾರ್ಟಿಯ ಒಟ್ಟಾರೆ ಖರ್ಚು ಸುಮಾರು 3-4 ಸಾವಿರ ಆಗಬಹುದು, ಇದು ಸದಾ ನೆನಪಿನಲ್ಲಿ ಉಳಿಯುವ ಪಾರ್ಟಿ ಆಗುತ್ತದೆ.

ಪಂಜಾಬಿ ಥೀಮ್ : ಯಾವುದೇ ಹಬ್ಬದ ಸಂದರ್ಭದಲ್ಲಿ ಪಂಜಾಬಿ ಥೀಮ್ ಪಾರ್ಟಿಯ ಅರ್ಥವೆಂದರೆ ವಿಲೇಜ್‌ ಲುಕ್ಸ್ ಹಾಗೂ ವೈಬ್ರೆಂಟ್‌ ಕಲರ್ಸ್‌. ಈ ಥೀಮಿನ ಡೆಕೋರೇಶನ್‌ಗಾಗಿ ನೀವು ಹಳೆಯ ದುಪಟ್ಟಾ, ಬಣ್ಣ ಬಣ್ಣದ ಸೀರೆಗಳು, ಮಣ್ಣಿನ ಮಡಕೆ, ಹಿತ್ತಾಳೆಯ ಸಣ್ಣ ದೊಡ್ಡ ಪಾತ್ರೆಗಳು, ಕೊಳಗ, ಟೇಪಿನ ಮಂಚ, ಪಂಜಾಬಿ ಕುಶನ್‌ ಇತ್ಯಾದಿಗಳಿಂದ ಗ್ರಾಮೀಣ ಪರಿಸರ ಒದಗಿಸಬಹುದು.  ಮನೆಯ ಎಂಟ್ರೆನ್ಸ್ ನಲ್ಲಿ ಬಣ್ಣಬಣ್ಣದ ಬಳೆಗಳ ತೋರಣ, ಜಾಲಂಧ್ರಗಳನ್ನು ಇಳಿಬಿಡಬಹುದು. ಕೋಣೆಯ ಮೂಲೆಗಳಲ್ಲಿ ಸಂಗೀತದ ವಾದ್ಯ ಯಂತ್ರಗಳನ್ನಿರಿಸಿ ಟ್ರೆಡಿಷನ್‌ ಫೀಲ್ ‌ನೀಡಬಹುದು.

ಡ್ರೆಸ್‌ ಕೋಡ್‌ : ಇಂಥ ಥೀಮ್ ಪಾರ್ಟಿಗಾಗಿ ನೀವು ನಿಮ್ಮ ಅತಿಥಿಗಳಲ್ಲಿ ಪುರುಷರಿಗೆ ಬ್ರೈಟ್‌ ಕಲರ್‌ನ ಲುಂಗಿ ಕುರ್ತಾ ಮತ್ತು ತಲೆಗೆ ಪಗಡಿ ಧರಿಸುವಂತೆ ಹಾಗೂ ಹೆಂಗಸರಲ್ಲಿ ಪಟಿಯಾಲಾ ಸಲ್ವಾರ್‌ ಕಮೀಜ್‌ ಜೊತೆಗೆ ಪರಾಂದಾ ಹಾಗೂ ಕೈಗಳ ತುಂಬಾ ಗಾಜಿನ ಬಳೆ ತೊಡಲು ಹೇಳಿ. ಮ್ಯೂಸಿಕ್‌ಗಾಗಿ ನೀವು ಭಾಂಗ್ರಾ ಗೀತೆಗಳನ್ನು ಆರಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ