ಪ್ರೇಕ್ಷಕರ ಮನಸ್ಸಿನ ಮೇಲೆ ಸ್ಟಾರ್‌ಗಳ ಪ್ರಭಾವ ಹೆಚ್ಚಾಗಿ ಬೀಳುತ್ತದೆ. ಅವರು ಮಲಗುವಾಗ, ಏಳುವಾಗ, ನಿಲ್ಲುವಾಗ, ಕೂರುವಾಗ ಇವರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಅವರ ಫ್ಯಾಷನ್‌ ಸ್ಟೈಲ್‌, ಹೇರ್‌ ಸ್ಟೈಲ್‌, ಪರ್ಫೆಕ್ಟ್ ಬ್ಲೆಂಡ್‌ ಎಮೋಶನ್ಸ್ ಮತ್ತು ಅವರ ಪ್ರತಿ ಮಾತನ್ನೂ ತಮ್ಮೊಂದಿಗೆ ಹೊಂದಿಸಿಕೊಳ್ಳುತ್ತಾರೆ.

ನಾವೀಗ ಹೇಳುತ್ತಿರುವುದು ಟಿವಿ ಸೀರಿಯಲ್‌ನ ಪಾತ್ರಗಳ ಬಗ್ಗೆ, ಅವರುಗಳ ಫ್ಯಾಷನ್‌ ಸ್ಟೈಲ್‌‌ನ್ನು ದಿನನಿತ್ಯದ ಬದುಕಿನಲ್ಲಿ ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುತ್ತಾರೆ ಹಾಗೂ ಅವರಂತೆಯೇ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಕಾಲ ಬದಲಾದಂತೆ ಹಿರಿ ತೆರೆ ಹಾಗೂ ಕಿರು ತೆರೆಗಳ ನಡುವಿನ ಅಂತರ ಸಾಕಷ್ಟು ಕಡಿಮೆಯಾಗಿದೆ. ಅದರಿಂದಾಗಿ ಟಿವಿ ಸ್ಟಾರ್ ಗಳೂ ಸಹ ಬಾಲಿವುಡ್‌ ಸ್ಟಾರ್‌ಗಳಂತೆ ಪಾಪ್ಯುಲರ್‌ ಆಗುತ್ತಿದ್ದಾರೆ. ಪ್ರೇಕ್ಷಕರು ಇವರ ಪ್ರತಿ ಸ್ಟೈಲ್‌ನ್ನು ಫಾಲೋ ಮಾಡುತ್ತಿದ್ದಾರೆ. ಅದು ``ಯಹ್‌ ರಿಶ್ತಾ ಕ್ಯಾ ಕಹಾತಾ ಹೈ''ನಲ್ಲಿನ ಅಕ್ಷರಾಳ ಚೂಡಿದಾರ್‌, ಅನಾರ್ಕಲಿ ಸೂಟ್‌ ಅಥವಾ `ಬಾಲಿಕಾ ವಧು'ನಲ್ಲಿನ ಆನಂದಿಯ ವೈಬ್ರೆಂಟ್‌ ಲಹಂಗಾ ಚೋಲಿ ಮತ್ತು ಜಡಾ ಜ್ಯೂವೆಲರಿಯೇ ಆಗಿರಬಹುದು.

ಟಿವಿ ಸೀರಿಯಲ್‌ಗಳಲ್ಲಿ ಲೇಟೆಸ್ಟ್ ಡ್ರೆಸಿಂಗ್‌ ಸ್ಟೈಲ್‌ನಲ್ಲಿ ಇಂದು ಯಾರು ಜನಪ್ರಿಯರಾಗಿದ್ದಾರೆಂದು ತಿಳಿಯೋಣ ಬನ್ನಿ.

ಪಾಪ್ಯುಲರ್‌ ಡ್ರೆಸಿಂಗ್‌ ಸ್ಟೈಲ್

ಏರ್‌ ಹೋಸ್ಟೆಸ್‌ ಆಗಿದ್ದು ಈಗ ಸ್ಕ್ರೀನ್‌ನ ಜನಪ್ರಿಯ ಮುಖವಾಗಿರುವ ಸಿಮೆರ್‌ ಅಂದರೆ ದೀಪಿಕಾ ಸ್ಯಾಮ್ ಸನ್‌ ಈಗ ಕಲರ್ಸ್‌ನ `ಸಸುರಾಲ್ ಸಿಮರ್‌ ಕಾ' ಧಾರಾವಾಹಿಯಲ್ಲಿ ಕಂಡುಬರುತ್ತಿದ್ದಾರೆ. ಅವರು ಫ್ಯಾಷನ್‌ ಟ್ರೆಂಡ್‌ನ್ನು ಜನಪ್ರಿಯಗೊಳಿಸಲು ಟಿವಿ ಸೀರಿಯಲ್‌ಗಳು ಮಹತ್ವದ ಪಾತ್ರ ನಿಭಾಯಿಸುತ್ತವೆ ಎನ್ನುತ್ತಾರೆ. ಅದರಲ್ಲಿನ ಮುಖ್ಯ ಪಾತ್ರಧಾರಿಗಳು ಧರಿಸುವ ಡ್ರೆಸ್‌ಗಳನ್ನು ಯುವಕ ಯುವತಿಯರು ತಮ್ಮದಾಗಿಸಿಕೊಳ್ಳುತ್ತಾರೆ. ಅವು ಮಾಡರ್ನ್‌ ಡ್ರೆಸ್‌ ಅಥವಾ ಟ್ರೆಡಿಶನ್‌ ಆಗಿರಬಹುದು. `ಪ್ಯಾರ್‌ ಕಾ ದರ್ದ್‌ ಹೈ ಮೀಠಾ ಮೀಠಾ' ಧಾರಾವಾಹಿಯ ಆವಂತಿಕಾ ತಮ್ಮ ಸೀರೆಯ ಡ್ರೇಪಿಂಗ್‌ ಸ್ಟೈಲ್ ಮತ್ತು ಸ್ಟೈಲಿಶ್‌ ಬ್ಲೌಸ್‌ನಿಂದ ಗ್ಲಾಮರಸ್‌ ಲುಕ್‌ನಲ್ಲಿ ಆಧುನಿಕ ಯುವತಿಯರನ್ನು ಆಕರ್ಷಿಸುತ್ತಿದ್ದಾರೆ. ಅದೇ `ಏಕ್‌ ಹಸೀನಾ ಥೀ' ಧಾರಾವಾಹಿಯ ದುರ್ಗಾ ಠಾಕುರ್‌ ತಮ್ಮ ವೈಬ್ರೆಂಟ್‌ ಕಲರ್‌ನ ಚೂಡಿದಾರ್‌ ಸ್ಲೀವ್ ಲೆ‌ಸ್‌ ಮತ್ತು ಫುಲ್ ಸ್ಲೀವ್ ‌ಫ್ಲೋರ್‌ ಲೆಂಗ್ತ್ ಅನಾರ್ಕಲಿ ಸೂಟ್‌ನಿಂದ ಯುವತಿಯರನ್ನು ಆಕರ್ಷಿಸುತ್ತಿದ್ದಾರೆ.

ಹೀಗೆಯೇ ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿರುವ `ಬಾಲಿಕಾ ವಧು'ನ ಆನಂದಿಯ ಲಹಂಗಾ ಚೋಲಿ, ಗೋಟಾಪಟ್ಟಿ ವರ್ಕ್‌ನ ದುಪಟ್ಟಾ, ಜಡಾ ವರ್ಕ್‌ನ ಹೆವಿ ಜ್ಯೂವೆಲರಿ, ರತ್ನಖಚಿತ ಉಂಗುರಗಳು ಮತ್ತು ಕಲರ್‌ ಫುಲ್ ಸ್ಟೋನ್‌ ಸ್ಪಡೆಡ್‌ ಜ್ಯೂವೆಲರಿಯೂ ನೋಡುವವರ ಹೃದಯದಲ್ಲಿ ತಮ್ಮ ಸ್ಥಾನ ಪಡೆಯುತ್ತಿವೆ. ಸ್ಟಾರ್‌ ಫ್ಲಸ್‌ನ `ಮಧುಬಾಲಾ ಏಕ್‌ ಇಶ್ಕ್ ಏಕ್‌ ಜನೂನ್‌' ಧಾರಾವಾಹಿಯ ದೃಷ್ಟಿಧಾಮಿ ಅಂದರೆ ಮಧುಬಾಲಾರ ಮದುವೆಯ ಸಂದರ್ಭದ ಲಹಂಗಾವನ್ನು ಪ್ರಸಿದ್ಧ ಫ್ಯಾಷನ್‌ ಡಿಸೈನರ್‌ನೀತಾ ಲುಲ್ಲಾ ಡಿಸೈನ್‌ ಮಾಡಿದ್ದರು.

ಸ್ಟಾರ್‌ ಪ್ಲಸ್‌ನ `ಏಕ್‌ ಹಸೀನಾ ಥೀ'ನಲ್ಲಿ ನಟಿ ಸಿಮೋನ್‌ ಸಿಂಗ್‌ ಶಿಫಾನ್‌ ಸೀರೆಗಳೊಂದಿಗೆ ತ್ರಿಪೋರ್ಥ್‌ ಬ್ಲೌಸ್‌ ಮತ್ತು ಪರ್ಲ್‌ನ ನೆಕ್ಲೇಸ್‌ನೊಂದಿಗೆ ಹಳೆಯ ಫ್ಯಾಷನ್‌ನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿ ಮಧ್ಯ ವಯಸ್ಸಿನ ಮಹಿಳೆಯರಿಗೆ ತಮ್ಮದಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ