ಬಣ್ಣಗಳು ನಮ್ಮ ಜೀವನದಲ್ಲಿ ಶಕ್ತಿ, ಸ್ಛೂರ್ತಿ ಮತ್ತು ಸಕಾರಾತ್ಮಕ ಎನರ್ಜಿಯನ್ನು ತುಂಬುತ್ತವೆ. ಇವನ್ನು ಭಾರತೀಯ ಹಬ್ಬಗಳ ಬಗ್ಗೆ ಹೇಳಬೇಕೆಂದರೆ, ಬಣ್ಣಗಳ ಮೆರುಗಿಲ್ಲದೆ, ಮನೆಯಷ್ಟೇ ಅಲ್ಲ, ಹಬ್ಬ ಕೂಡ ಸಪ್ಪೆ ಎನಿಸುತ್ತದೆ.

ಹಬ್ಬಗಳ ಆನಂದಮಯ ವಾತಾವರಣವನ್ನು ಇನ್ನಷ್ಟು ಖುಷಿಯಿಂದ ತುಂಬಲು ಹೊಸ ಯುಗದ ಫ್ಯಾಷನ್‌. ಪರಂಪರೆ, ಬಣ್ಣ ಮುಂತಾದವುಗಳನ್ನು ವಿಶಿಷ್ಟ ರೀತಿಯಲ್ಲಿ ಭಾವನಾತ್ಮಕವಾಗಿ ಆಯ್ಕೆ ಮಾಡುವುದರಿಂದ ಖುಷಿ ಮತ್ತಷ್ಟು ಹೆಚ್ಚುತ್ತದೆ.

ಹಬ್ಬಗಳ ಸಂದರ್ಭದಲ್ಲಿ ಮನೆಗೆ ಸಾಂಪ್ರದಾಯಿಕತೆ ಜೊತೆಗೆ ಆಧುನಿಕ ರೀತಿಯ ಲುಕ್‌ ಕೊಡಲು ಏನೇನು ಮಾಡಬೇಕು ನೋಡಿ.

ಗೋಡೆಗಳಿಗೆ ಮೆರುಗು

ಮನೆಯ ಗೋಡೆಗಳಿಗೆ ಬಣ್ಣ ಹೊಡೆಯುವುದು ಸಾಮಾನ್ಯ ಸಂಗತಿ. ಆದರೆ ಅದು ಅತ್ಯಂತ ಪರಿಣಾಮಕಾರಿ. ಭಾರತೀಯ ಹಬ್ಬಗಳು ಕೆಂಪು ಮತ್ತು ಕಿತ್ತಳೆ ಬಣ್ಣದಿಂದ ಕಂಗೊಳಿಸುತ್ತವೆ. ಹೀಗಾಗಿ ಈ ಬಣ್ಣಗಳು ನಿಮಗೆ ಸಮರ್ಪಿತ ಲುಕ್‌ ಕೊಡುತ್ತವೆ. ಗೋಡೆಗಳಿಗೆ ಹೊಸ ಬಣ್ಣದ ಮೆರುಗು ಕೊಡುವುದರಿಂದ ಕೇವಲ ಲುಕ್‌ ಅಷ್ಟೇ ದೊರೆಯುವುದಿಲ್ಲ, ಅದರ ಆಯುಷ್ಯ ಕೂಡ ಹೆಚ್ಚುತ್ತದೆ.

ಫರ್ನೀಚರ್‌ಗಳ ವ್ಯವಸ್ಥೆ

ಮನೆಯ ರೂಪ ಬದಲಿಸಲು ಸೋಫಾ, ಸೈಡ್‌ ಟೇಬಲ್ ಶೋಕೇಸ್‌ ಮತ್ತು ಎಲ್ಲಾ ಅಲಂಕಾರಿಕ ಕಲಾತ್ಮಕ ವಸ್ತುಗಳ ಅಷ್ಟಿಷ್ಟು ಬದಲಾವಣೆಗಳ ಬಳಿಕವೇ ಮನೆಗೆ ಹೊಸ ಲುಕ್‌ ಬರುತ್ತದೆ.

ಕೋಣೆಯ ಗೋಡೆಗಳಿಗೆ ಬಣ್ಣಗಳ ವೈವಿದ್ಯತೆಯ ಮೆರುಗು ಕೊಡಿ. ಕೋಣೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪೀಠೋಪಕರಣಗಳನ್ನು ಇಡಲು ಪ್ರಯತ್ನಿಸಿ. ನಿಮ್ಮ ಬಳಿ ಚಾಕ್ಲೇಟ್‌ ಬಣ್ಣದ, ತಿಳಿ ಕ್ರೀಮ್ ಬಣ್ಣದ ಅಥವಾ ಗಾಢ ಹಳದಿ ಬಣ್ಣದ ಫರ್ನೀಚರ್‌ಗಳಿದ್ದರೆ ಗುಲಾಬಿ ಅಥವಾ ಕಿತ್ತಳೆ ಬಣ್ಣದ ಗೋಡೆಗಳಿಗೆ ಚೆನ್ನಾಗಿ ಒಪ್ಪುತ್ತವೆ.

ಕೈತೋಟ ಮತ್ತು ಮರಗಳು

ನಿಮ್ಮ ಮನೆಯಂಗಳದಲ್ಲಿ ಬೆಳೆದ ಹುಲ್ಲನ್ನು ಚೆನ್ನಾಗಿ ಕತ್ತರಿಸಿ, ಹೂಕುಂಡಗಳಿಗೆ ಆಗಾಗ ಬೇರೆ ಬೇರೆ ಬಣ್ಣಗಳ ರೂಪ ಕೊಡಿ. ಹುಲ್ಲನ್ನು ಟ್ರಿಮ್ ಮಾಡುವುದರಿಂದ ಮತ್ತು ಅಲಂಕಾರಿಕ ಕಲ್ಲುಗಳ ರಚನೆ ಬದಲಿಸುವುದರಿಂದ ನಿಮ್ಮ ತೋಟದ ರೂಪುರೇಷೆಯೇ ಬದಲಾಗಿಬಿಡುತ್ತದೆ. ಮನೆಯಲ್ಲಿ ಅಲಂಕಾರಿಕ ಮರಗಳನ್ನು ಬಿಳಿ ಬಣ್ಣದ ಕುಂಡದಲ್ಲಿ ನೆಟ್ಟರೆ, ಕಿತ್ತಳೆ ಬಣ್ಣದ ಗೋಡೆಗಳ ಮೇಲೆ ಬಹಳ ಚೆನ್ನಾಗಿ ಒಪ್ಪುತ್ತದೆ.

ನಿಮ್ಮ ಗೋಡೆಗಳ ಬಣ್ಣ ಬೇರೆಯಾಗಿದ್ದರೆ, ಆಗ ಸೆರಾಮಿಕ್‌ನ ಬೇರೆ ಬೇರೆ ಡಿಸೈನ್‌ ಮತ್ತು ಆಕಾರವನ್ನು ಬಳಸಿಕೊಂಡು ಅವುಗಳ ಬಳಿ ಶಿಲ್ಪಗಳನ್ನು ಇಟ್ಟರೆ ಆ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬರುತ್ತದೆ.

ಅಲಂಕಾರಿಕ ಪುಟ್ಟ ವಸ್ತುಗಳು ಡಿಸೈನರ್‌ ಆಗಿರದೇ ಇದ್ದರೆ, ಕವರ್ಸ್‌ ಮತ್ತು ಪರದೆಗಳನ್ನು ಡಿಸೈನ್‌ನಲ್ಲಿ ತೆಗೆದುಕೊಳ್ಳಬೇಕು. ಇವುಗಳಲ್ಲಿ ಗಾಢವರ್ಣ ಸಮತೋಲನದಲ್ಲಿಡುವುದು ಅತ್ಯವಶ್ಯಕ. ಹೀಗೆ ಮಾಡದೇ ಇದ್ದರೆ ಕೋಣೆ ಬಹಳ ಗಾಢವರ್ಣವಿರುವಂತೆ ಗೋಚರಿಸುತ್ತದೆ.

ಪರದೆ ಮತ್ತು ಕವರ್ಸ್

ಹೊಳೆಯುವ ಕೇಸರಿ ಬಣ್ಣದ ಗೋಡೆಗಳ ಬಾಗಿಲುಗಳು ಮತ್ತು ಕಿಟಕಿಗಳು, ತಿಳಿ ಕೇಸರಿ ವರ್ಣದ ಪರದೆಗಳು ಬಹಳ ಸುಂದರವಾಗಿ ಕಾಣುತ್ತವೆ. ಇಂತಹ ಸೋಫಾದ ಕವರ್ಸ್‌ ನೇರಳೆ ಅಥವಾ ಗಾಢ ಗುಲಾಬಿ ವರ್ಣದ ಕಾಂಟ್ರಾಸ್ಟ್ ತುಂಬಾ ಚೆನ್ನಾಗಿ ಗೋಚರಿಸುತ್ತವೆ.

ಪಡಸಾಲೆ ಬಣ್ಣ ಬಣ್ಣದ್ದಾಗಿ ಕಾಣಲು ಕಪ್ಪು ಬಣ್ಣ ಮಿಶ್ರಿತ ಹಸಿರು ಬಣ್ಣದ ಪರದೆಗಳು ಮತ್ತು ಹಳದಿ ಬಣ್ಣದ ಕವರ್‌ಗಳಿಂದ ತಾಜಾತನದ ಅನುಭೂತಿ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ