ಅಲಂಕೃತ ಮನೆ ಯಾವಾಗಲೂ ಮನಸ್ಸಿಗೆ ಖುಷಿ ಕೊಡುತ್ತದೆ. ಅಂತಹ ಮನೆಯ ಒಳಭಾಗದಲ್ಲಿ ಪ್ರವೇಶ ಪಡೆಯುತ್ತಿದ್ದಂತೆಯೇ ಸುವಾಸನೆಯುಕ್ತ ಸ್ವಾಗತ ದೊರೆಯಬೇಕೆಂದು ಬಹಳಷ್ಟು ಜನರು ಬಯಸುತ್ತಾರೆ.

ಅದಕ್ಕಾಗಿ ಮಹಿಳೆಯರು ಮಾಡದ ಉಪಾಯಗಳೇ ಇಲ್ಲ ಎನ್ನಬಹುದು. ಕೆಲವರು ತಮ್ಮ ಡ್ರಾಯಿಂಗ್‌ ರೂಮಿನಲ್ಲಿ ಸುಗಂಧಿತ ಹೂಗಳ ಗೊಂಚಲು ತಂದಿಡುತ್ತಿದ್ದರು. ಮತ್ತೆ ಕೆಲವರು ಸುವಾಸಿತ ಅಗರಬತ್ತಿ ಉರಿಸುತ್ತಿದ್ದರು. ಬೇರೆ ಕೆಲವರು ಸುಗಂಧದ ಕ್ಯಾಂಡಲ್ಸ್ ಹಚ್ಚಿಡುತ್ತಿದ್ದರು.

ಈಗ ಮಾರುಕಟ್ಟೆಯಲ್ಲಿ ಪರಿಮಳ ಬೀರುವ ಅನೇಕ ತೆರನಾದ ಎಲೆಕ್ಟ್ರಾನಿಕ್‌ ಏರ್‌ ಫ್ರೆಶ್‌ನರ್‌ಗಳು ಲಭ್ಯವಿದ್ದು, ಅವನ್ನು ತಂದು ನೀವು ಮನೆಯನ್ನು ಸುವಾಸನೆ ಬೀರುವಂತೆ ಮಾಡಬಹುದಾಗಿದೆ. ಅವುಗಳ ಬಟನ್‌ ಒತ್ತುತ್ತಿದ್ದಂತೆಯೇ ಪರಿಮಳ ಪಸರಿಸುವುದರ ಜೊತೆಜೊತೆಗೆ ಮನಸ್ಸು ಖುಷಿಯಲ್ಲಿ ತೇಲುತ್ತದೆ. ಅಂದಹಾಗೆ, ಎಲೆಕ್ಟ್ರಾನಿಕ್‌ ಏರ್‌ ಫ್ರೆಶ್‌ನರ್‌ಗಳು ಭಾರತೀಯ ಮಾರುಕಟ್ಟೆಗೆ ಹೊಸದೇ ಆಗಿವೆ. ಆದರೆ ಬದಲಾಗುತ್ತಿರುವ ಜೀವನಶೈಲಿಯ ಕಾರಣದಿಂದಾಗಿ ಇನ್ನು ಹೆಚ್ಚೆಚ್ಚು ಉಪಯೋಗಕ್ಕೆ ತರಲಾಗುತ್ತಿದೆ.

ಈಚೆಗೆ ಚಿಕ್ಕ ಕುಟುಂಬಗಳು ಹೆಚ್ಚಾಗುತ್ತ ಹೊರಟಂತೆ ಮನೆಗಳು ಕೂಡ ಚಿಕ್ಕದಾಗುತ್ತ ಹೊರಟಿವೆ. ಅಲ್ಲಿ ಬಿಸಿಲಿನ ಆಗಮನ ಕಡಿಮೆ ಹಾಗೂ ಗಾಳಿಯ ಚಲನವಲನ ಕೂಡ ಅಷ್ಟಕ್ಕಷ್ಟೆ. ಒಮ್ಮೊಮ್ಮೆ ಹೊರಗಿನಿಂದ ದುರ್ವಾಸನೆ ಕೂಡ ಬರುತ್ತಿರುತ್ತದೆ.

ಜಾಗದ ಕೊರತೆಯಿಂದ ಬಟ್ಟೆಗಳನ್ನು ಮನೆಯಲ್ಲಿಯೇ ಒಣಗಿಸುತ್ತಿದ್ದರೆ, ಮನೆಯಲ್ಲಿನ ವಾತಾವರಣವನ್ನು ಸುಗಂಧಯುಕ್ತಗೊಳಿಸುವುದು ಅತ್ಯವಶ್ಯಕ.

ಪ್ರಸ್ತುತ ಮಾರುಕಟ್ಟೆಯಲ್ಲಿ 200ಕ್ಕೂ ಹೆಚ್ಚು ಬಗೆಯ ಏರ್‌ ಫ್ರೆಶ್‌ನರ್‌ಗಳಿದ್ದು, ನಿಮ್ಮ ಆಸಕ್ತಿಗನುಗುಣವಾಗಿ ಅವನ್ನು ಆಯ್ಕೆ ಮಾಡಿಕೊಳ್ಳಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ :

ಎಲೆಕ್ಟ್ರಾನಿಕ್‌ ಏರ್‌ ಪ್ಯೂರಿ ಫೈಯರ್‌ ಫ್ರೆಶ್‌ನರ್‌ ಇದು ಆ್ಯಂಟಿ ವೈರಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಎರಡೂ ರೀತಿಯಲ್ಲಿ ದೊರೆಯುತ್ತದೆ. ಇವೆರಡೂ ಬಟನ್‌ ಒತ್ತುತ್ತಿದ್ದಂತೆಯೇ ಕೋಣೆಯ ದುರ್ವಾಸನೆಯನ್ನು ಹೊರಗೋಡಿಸಿ ಒಳ್ಳೆಯ ಸುವಾಸನೆಯನ್ನು ಪಸರಿಸುತ್ತವೆ.

ಎಸೆನ್ಶಿಯಲ್ ಆಯಿಲ್ ಎಲೆಕ್ಟ್ರಿಕ್‌ ಡಿಫ್ಯೂಸರ್‌ ಇದು ನಿರಂತರವಾಗಿ ಸುಗಂಧ ಬೀರುತ್ತಿರುತ್ತದೆ. ಇದರಲ್ಲಿ ಎಂತಹ ಪರಿಮಳ ದ್ರವ್ಯಗಳಿರುತ್ತವೆಯೆಂದರೆ, ಅವು ನಿಮಗೆ ತಾಜಾತನದ ಅನುಭೂತಿ ನೀಡುತ್ತಲ್ಲದೆ, ನಿಮ್ಮ ಮೂಡನ್ನು ಕೂಡ ಸರಿಪಡಿಸುತ್ತವೆ.

ನೀವು ರಿಲ್ಯಾಕ್ಸಿಂಗ್‌ ಲ್ಯಾವೆಂಡರ್‌ನ ಅದ್ಭುತ ಸುವಾಸನೆಯ ಜೊತೆಜೊತೆಗೆ ವಿಶ್ರಾಂತಿ ಮಾಡಿ ಅಥವಾ ಫ್ಲೋರಿಡಾ ಸನ್‌ ಶೈನ್‌ನಿಂದ ಅಪ್‌ ಲಿಫ್ಟೆಡ್‌ ಅನುಭೂತಿ ಮಾಡಿಕೊಳ್ಳಿ. ಅವಾ ಅಕ್ವಾ ಫ್ಲೋರ್‌ನಿಂದ ತಾಜಾತನ ಪಡೆದುಕೊಳ್ಳಿ. ಇದನ್ನು ನೀವು ವಿದ್ಯುತ್‌ಸಾಕೆಟ್‌ನಲ್ಲಿ ಹಾಕಿ ಹಾಗೂ ಅತ್ಯುತ್ತಮ ಸುವಾಸನೆ ಪಡೆಯಿರಿ.

ಕ್ಯಾಂಡಲ್ ಎಲೆಕ್ಟ್ರಿಕ್‌ ಪ್ಲಗ್‌ ಏರ್‌ ಫ್ರೆಶ್‌ನರ್‌ ಇದು ಕ್ಯಾಂಡಲ್ ಆಕಾರದ ಎಲೆಕ್ಟ್ರಿಕ್‌ ಏರ್‌ ಫ್ರೆಶ್‌ನರ್‌ ಆಗಿದೆ. ಬಟನ್‌ ಅದುಮುತ್ತಲೇ ಅದು ವಾತಾವರಣದಲ್ಲಿ ಸುವಾಸನೆ ಪಸರಿಸುತ್ತದೆ.

ಏರೋಸೋಲ್‌ ಸ್ಪ್ರೇ ಫ್ರೆಶ್‌ನರ್‌ ಇದರಲ್ಲಿ ಎರಡು ಬಗೆಯ ಲಾಭಗಳಿವೆ. ಮೊದಲನೆಯದು, ದುರ್ಗಂಧ ನಿವಾರಣೆಯಾಗುತ್ತದೆ ಮತ್ತು ಒಳ್ಳೆಯ ಸುವಾಸನೆ ಪಸರಿಸುತ್ತದೆ. ಇದರ ಸುವಾಸನೆಗಳೆಂದರೆ, ಸ್ಪಾರ್ಕ್‌ ಲಿಂಗ್‌, ಸೈಟ್ರಸ್‌, ಪಿಯಾನೋ, ರೋಸ್‌ಮಿಸ್ಟಿಕ್‌, ಸ್ಯಾಂಡಲ್, ಜಾಸ್ಮಿನ್‌, ಲ್ಯಾವೆಂಡರ್‌ ಪೆಡಲ್ಸ್ ‌ಮತ್ತು ಫ್ರೆಶ್‌ ಆ್ಯಕ್ವಾ.

ಫ್ರೆಶ್‌ ಆಟೋಮ್ಯಾಟಿಕ್‌ ಫ್ರೆಶ್‌ನರ್‌ ಸುಮಾರು 2 ತಿಂಗಳ ಕಾಲ ಸುಗಂಧ ಪಸರಿಸುತ್ತಿರುವ ಇದು ಬ್ಯಾಟರಿಯಿಂದ ನಡೆಯುವಂಥದು. ಇದನ್ನು 9, 15 ಅಥವಾ 36 ನಿಮಿಷಗಳ ಅಂತರದಲ್ಲಿ ಸ್ಪ್ರೇ ಮಾಡಿ ಹಾಗೆ ಸೆಟ್‌ ಮಾಡಬಹುದು. ಅದು 2 ತೆರನಾದ ಸುವಾಸನೆಗಳಲ್ಲಿ ದೊರೆಯುತ್ತದೆ. ಅದರಲ್ಲಿ ಲ್ಯಾವೆಂಡರ್‌ನ ರಿಲ್ಯಾಕ್ಸಿಂಗ್‌ ನೋಟ್‌ ಅಥವಾ ಸೈಟ್ರಸ್‌ನ ತಾಜಾತನ ನೀಡುವ ಸುಗಂಧವನ್ನು ಆಯ್ದುಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ