ನಿಯಮಿತ ಸ್ವಚ್ಛತೆ ಹಾಗೂ ಉತ್ತಮ ಪ್ಯಾಕಿಂಗ್ ನಿಂದ ಆಭರಣಗಳ ಬಾಳಿಕೆ ಹೆಚ್ಚಿಸಬಹುದು. ಅವುಗಳ ಹೊಳಪು ಮೊದಲು ಹೇಗಿತ್ತೊ ಹಾಗೆಯೇ ಆಗುತ್ತದೆ.  ನೀವು ಆಭರಣ ಖರೀದಿಸಲು ಇಚ್ಛಿಸುತ್ತಿದ್ದು, ಅವುಗಳ ನಿರ್ವಹಣೆ ಬಗ್ಗೆ ಚಿಂತಿತರಾಗಿದ್ದಲ್ಲಿ, ಆ ಬಗ್ಗೆ ಕಾಳಜಿ ಮಾಡಬೇಕಾದ ಅಗತ್ಯವಿಲ್ಲ. ಆಭರಣಗಳ ಹೊಳಪು ಕಾಯ್ದುಕೊಂಡು ಹೋಗಲು ಇಲ್ಲಿ ಕೆಲವು ಕಿವಿಮಾತುಗಳಿವೆ :

ಬಹುಮೂಲ್ಯ ಹರಳುಗಳ ಸ್ವಚ್ಛತೆ

ಡೈಮಂಡ್‌, ಎಮರಾಲ್ಡ್, ಟೋಪಾಜ್‌ ಮತ್ತು ಸಫೈರ್‌ಗಳನ್ನು ನೀವು ಯಾವುದೇ ಬಗೆಯ ವಾಶಿಂಗ್‌ ಪೌಡರ್‌ನಲ್ಲಿ ಹಳೆಯ ಮೃದು ಬ್ರಶ್‌ನಿಂದ ಸ್ವಚ್ಛಗೊಳಿಸಬಹುದು. ಆದರೆ ಟರ್ಕ್ವಾಯ್ಸ್, ಓಪ್‌ ಹಾಗೂ ಮೂನ್‌ ಸ್ಟೋನ್‌ ನಂತಹ ಹರಳುಗಳನ್ನು ಒಳ್ಳೆಯ ಗುಣಮಟ್ಟದ ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಅದನ್ನು ಬಿಟ್ಟು ನೀವು ಕೋರ್‌ ಹಾಗೂ ಪರ್ಲ್ ನ್ನು ಸೋಪ್‌ ಹಾಗೂ ಬಿಸಿನೀರಿನಿಂದ ಸ್ವಚ್ಛಗೊಳಿಸಲು ಆಗದು. ಅದರ ಬದಲು ಮೈಲ್ಡ್ ಆಲ್ಕೋಹಾಲ್ ‌ಹಾಗೂ ನೀರನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದರಿಂದ ಸ್ವಚ್ಛಗೊಳಿಸಿ ಹಾಗೂ ತಕ್ಷಣವೇ ಒಣಗಿಸಿ ಇಡಿ.

ಡೈಮಂಡ್‌ ಜ್ಯೂವೆಲರಿ

ವಜ್ರಾಭರಣಗಳ ಸ್ವಚ್ಛತೆಗಾಗಿ ನೀವು ಮೃದು ಬ್ರಶ್‌,  ಸೋಪ್‌ ಮತ್ತು ನೀರನ್ನು ಉಪಯೋಗಿಸಿ. ಇದಕ್ಕಾಗಿ ನಿಮ್ಮ ಬಳಿ ಯಾವುದೇ ಸ್ಪೆಶಲ್ ಬ್ರಶ್‌ ಇರದೇ ಇದ್ದರೆ ನಿಮ್ಮ ಐಬ್ರೋ ಅಥವಾ ಲಿಪ್‌ಸ್ಟಿಕ್‌ ಬ್ರಶ್‌ ಉಪಯೋಗಿಸಬಹುದು.

ಪರ್ಲ್ ಜ್ಯೂವೆಲರಿ

ಅಮೋನಿಯಾ ಅಥವಾ ಗಡಸು ಡಿಟರ್ಜಂಟ್‌ ದ್ರಾವಣದಿಂದ ಪರ್ಲ್ ಜ್ಯೂವೆಲರಿ ಸ್ವಚ್ಛಗೊಳಿಸಬೇಡಿ. ಅಲ್ಟ್ರಾ ಸಾನಿಕ್‌ ಕ್ಲೀನರ್‌, ಗಡಸಾದ ಕ್ಲೀನರ್‌ ಅಥವಾ ಒರಟು ಬಟ್ಟೆಯಿಂದಲೂ ಸ್ವಚ್ಛಗೊಳಿಸಬೇಡಿ.

ಬಳಸಿದ ಬಳಿಕ ಪರ್ಲ್ ಜ್ಯೂವೆಲರಿಯನ್ನು ಮೃದು ಬಟ್ಟೆಯ ನೆರವಿನಿಂದ ತೆಗೆದಿಡಿ. ಆ ಬಟ್ಟೆ ಸಾಧಾರಣ ಒದ್ದೆ ಅಥವಾ ಪೂರ್ತಿ ಒಣಗಿರಬೇಕು. ಒಂದು ವೇಳೆ ಬಟ್ಟೆ ಸಾಧಾರಣ ಮೃದುವಾಗಿದ್ದರೆ ಪರ್ಲ್ ಜ್ಯೂವೆಲರಿಯನ್ನು ಗಾಳಿಯಲ್ಲಿಯೇ ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ಅದನ್ನು ಬಾಕ್ಸ್ ನಲ್ಲಿ ಹಾಕಿ.

ಮೆಟಲ್ ಜ್ಯೂವೆಲರಿ

ಮೆಟಲ್ ಜ್ಯೂವೆಲರಿಗಳ ಸ್ವಚ್ಛತೆಗಾಗಿ ವಿಶೇಷ ಬಗೆಯ ವಾಶಿಂಗ್‌ ಪೌಡರ್‌ ಸಿಗುತ್ತದೆ. ಅದನ್ನು ಉಪಯೋಗಿಸಿ ಅಂತಹ ಆಭರಣಗಳಿಗೆ ಹೊಳಪು ಕೊಡಬಹುದು.

ಚಿನ್ನಾಭರಣಗಳು

ab3

ಚಿನ್ನಾಭರಣಗಳನ್ನು ಹೊಳೆ ಹೊಳೆಯುವಂತೆ ಮಾಡಲು ಪಾತ್ರೆ ತೊಳೆಯುವ ಲಿಕ್ವಿಡ್‌ನ್ನು ಉಪಯೋಗಿಸಬಹುದು. ಮೊದಲು ನೊರೆ ಸೃಷ್ಟಿಸಿಕೊಳ್ಳಿ, ನಂತರ ಬ್ರಶ್‌ನ ಸಹಾಯದಿಂದ ಆಭರಣಗಳನ್ನು ಸ್ವಚ್ಛ ಮಾಡಿಕೊಳ್ಳಿ. ಬಳಿಕ ಸ್ವಚ್ಛವಾದ ಸಾಧಾರಣ ಬಿಸಿ ನೀರಿನಲ್ಲಿ ಆಭರಣಗಳನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇಡಿ. ಉಗುರು ಬೆಚ್ಚಗಿನ ನೀರು ಆಭರಣದ ಮೇಲಿನ ಕೊಳೆಯನ್ನು ನಿವಾರಿಸುತ್ತದೆ. ಆ ಬಳಿಕ ಆಭರಣಗಳನ್ನು ಹೊರತೆಗೆದು ಮೃದು ಬಟ್ಟೆಯಿಂದ ಒರೆಸಿ. ಚೆನ್ನಾಗಿ ಒಣಗಿಸಿದ ಬಳಿಕ ಮೃದು ಬಟ್ಟೆಯಲ್ಲಿ ಸುತ್ತಿ ಇಟ್ಟುಬಿಡಿ.

ಹೀಗೆ ಮಾಡಿದಾಗ್ಯೂ ಆಭರಣಕ್ಕೆ ಹೊಳಪು ಬಂದಿಲ್ಲವೆದರೆ, ನೀವು ಜ್ಯೂವೆಲರಿ ಕ್ಲೀನರ್‌ನ್ನು ಉಪಯೋಗಿಸಬಹುದು.

ಚಿನ್ನಾಭರಣಗಳನ್ನು ಕ್ಲೋರಿನ್‌ನಿಂದ ದೂರವೇ ಇಡಬೇಕು. ಅದರ ಸಂಪರ್ಕದಿಂದ ಚಿನ್ನಾಭರಣಗಳು ದುರ್ಬಲಗೊಳ್ಳುತ್ತವೆ ಹಾಗೂ ಅವು ತುಂಡರಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈಜುಗೊಳದಲ್ಲಿ ಅವನ್ನು ಹಾಕಿಕೊಂಡು ಹೋಗಬಾರದೆಂದು ಹೇಳಲಾಗುತ್ತದೆ. ಏಕೆಂದರೆ ಈಜುಗೊಳದಲ್ಲಿ ಕ್ಲೋರಿನ್‌ ಮಿಶ್ರಣಗೊಂಡಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ