``ಈ ಸಲದ ಬರ್ಥ್‌ ಡೇ ಕಾರ್ಯಕ್ರಮಕ್ಕೆ ನಾನು ಇಂತಿಂಥ ಗಿಫ್ಟ್ ತೆಗೆದುಕೊಂಡು ಬರ್ತೀನಿ ಎಂದು ಪತಿ ನನಗೆ ಹೇಳುತ್ತಾರೆ, ಇಲ್ಲವೇ ಈ ಸಲ ನಾನು ನಿನಗೆ ಏನು ಗಿಫ್ಟ್ ತರಲಿ ಎಂದು ಅವರು ನನ್ನನ್ನೇ ಕೇಳುತ್ತಾರೆ,'' ಹೀಗೆ ಹೇಳಿದ್ದು ಅರ್ಚನಾ. ಪತಿಯ ಈ ಸ್ವಭಾವ ಆಕೆಗೆ ಖಂಡಿತ ಇಷ್ಟವಾಗುವುದಿಲ್ಲ. ಏನೇ ಕೊಟ್ಟರೂ ಅದು ಸರ್‌ಪ್ರೈಸ್‌ ಆಗಿ ಇರಬೇಕು ಎನ್ನುವುದು ಅವಳ ಅಪೇಕ್ಷೆ. ಆಕೆ ತನ್ನ ಪತಿಗೆ ನೀವು ಹೀಗೆಲ್ಲ ಮೊದಲೇ ಹೇಳಿ ಅಥವಾ ಕೇಳಿಕೊಂಡು ಗಿಫ್ಟ್ ಕೊಡಬಾರದು ಎಂದು ಹೇಳಿದ್ದಳು. ಕಳೆದ ವರ್ಷ ಮದುವೆಯ ವಾರ್ಷಿಕೋತ್ಸವಕ್ಕೆ ಇನ್ನೂ 4-5 ದಿನಗಳು ಉಳಿದಿದ್ದವು. ಆದರೆ ಪತಿ ಈ ಬಗ್ಗೆ ಆಕೆಗೆ ಏನೇನೂ ಕೇಳಿರಲಿಲ್ಲ....

ಅರ್ಚನಾಳ ಮನಸ್ಸಿನಲ್ಲಿ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲವೇ ನಡೆದುಹೋಗಿತ್ತು. ಅವರು ಈಗ ಕೇಳಬಹುದು, ನಾಳೆ ಕೇಳಬಹುದು ಎಂದು ಯೋಚಿಸುತ್ತಲೇ ಇದ್ದಳು. ಕೊನೆಗೆ ಅವಳು ಮದುವೆ ವಾರ್ಷಿಕೋತ್ಸವದ ನೆನಪಾದರೂ ಇವರಿಗೆ ಇದೆಯೋ ಇಲ್ಲವೋ ಎಂದು ಯೋಚಿಸತೊಡಗಿದಳು.

gift-7

ಮುಂಜಾನೆ ಪತಿ ಮುಗುಳ್ನಕ್ಕು `ಹ್ಯಾಪಿ ಆ್ಯನಿರ್ಸರಿ ಡೇ' ಹೇಳಿ, ಸಂಜೆಯ ಪಾರ್ಟಿಯ ಬಗ್ಗೆ ನೆನಪು ಮಾಡಿ ಆಫೀಸಿಗೆ ಹೊರಟು ಹೋದರು. ಸಂಜೆ ಬರಬೇಕಾದ ಅತಿಥಿಗಳೆಲ್ಲ ಆಗಮಿಸಿದರು. ಪತಿ ಕೂಡ ಬಂದರು. ಗಿಫ್ಟ್ ಬಗ್ಗೆ ಏನೂ ಕೇಳದೇ ಇರುವುದರಿಂದ ಆಕೆಯ ಮನಸ್ಸು ಉದಾಸತನಕ್ಕೆ ಸಿಲುಕುತ್ತ ಹೊರಟಿತ್ತು. ಆದರೆ ಕೇಕ್‌ ಕತ್ತರಿಸಲು ಟೇಬಲ್ ಬಳಿ ಹೋದಾಗ ಅಲ್ಲಿ ಒಂದು ಪುಟ್ಟ ಗಿಫ್ಟ್ ಪ್ಯಾಕ್‌ ಇಡಲಾಗಿತ್ತು.

``ಪ್ಯಾಕ್‌ ತೆರೆದು ನೋಡು, ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತೆ,'' ಎಂದು ಪತಿ ಆಕೆಯತ್ತ ದೃಷ್ಟಿಹರಿಸಿ ಹೇಳಿದರು. ಆ ಪ್ಯಾಕೆಟ್‌ನಲ್ಲಿ ಒಂದು ಡೈಮಂಡ್‌ ರಿಂಗ್‌ ಇತ್ತು. ಆಕೆಯ ಖುಷಿಗೆ ಪಾರವೇ ಇರಲಿಲ್ಲ. ಪತಿ ಡೈಮಂಡ್‌ ರಿಂಗ್‌ ಕೊಟ್ಟಿದ್ದಾನೆಂದು ಅಕೆಗೆ ಖುಷಿಯಾಗಿರಲಿಲ್ಲ, 12 ವರ್ಷದಲ್ಲಿ ಮೊದಲ ಬಾರಿ ಸರ್‌ಪ್ರೈಸ್‌ ಗಿಫ್ಟ್ ಕೊಟ್ಟಿದ್ದಾನೆಂದು ಆಕೆಗೆ ಪರಮ ಖುಷಿಯಾಗಿತ್ತು.

ಎಲ್ಲಕ್ಕೂ ವಿಭಿನ್ನ

gift-2

ಸಾಮಾನ್ಯವಾಗಿ ಜನರು ಗಿಫ್ಟ್ ತೆಗೆದುಕೊಳ್ಳುವ ಬಗ್ಗೆ ಹಾಗೂ ಗಿಫ್ಟ್ ಕೊಡುವ ಕುರಿತಂತೆ ಸಾಕಷ್ಟು ಗೊಂದಲದಲ್ಲಿರುತ್ತಾರೆ. ಯಾರಿಗಾದರೂ ಮದುವೆ ಸಮಾರಂಭಕ್ಕೆ ಹೋಗಬೇಕಾದಾಗ ಗಿಫ್ಟ್ ಏನು ಕೊಡುವುದು ಎಂದು ಯೋಚನೆ ಶುರುವಾಗುತ್ತದೆ. ನೀವು ಕೊಡುವ ಗಿಫ್ಟ್ ಹೇಗಿರಬೇಕೆಂದರೆ,  ಅದು ಎಲ್ಲಕ್ಕಿಂತಲೂ ವಿಶಿಷ್ಟವಾಗಿರಬೇಕು. ಹಾಗೆಂದು ಅದು ದುಬಾರಿ ಆಗಿರಬೇಕೆಂದೇನೂ ಅಲ್ಲ. ಎಷ್ಟೋ ಪತಿಯಂದಿರು ತಮ್ಮ ಪತ್ನಿಯ ಹುಟ್ಟುಹಬ್ಬ ಅಥವಾ ಮದುವೆ ವಾರ್ಷಿಕೋತ್ಸವಕ್ಕೆ ಏನು ಗಿಫ್ಟ್ ಕೊಡಬೇಕೆಂದು ತಲೆ ಕೆಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲ, ಸಂಬಂಧಿಕರ ಅಥವಾ ಸ್ನೇಹಿತರ ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬ, ಗೃಹಪ್ರವೇಶ, ಹೊಸ ಉದ್ಯೋಗ ದೊರೆತಾಗ, ಪ್ರಮೋಶನ್‌ ಸಿಕ್ಕಾಗ ಹೀಗೆ ಅನೇಕ ಸಲ ಯೋಚನೆ ಕಾಡುತ್ತಿರುತ್ತದೆ. ಪ್ರತಿಯೊಬ್ಬರು ಕಡಿಮೆ ಮೊತ್ತದಲ್ಲಿ ಒಳ್ಳೆಯ ಗಿಫ್ಟ್ ಕೊಡಲು ಯೋಚಿಸುತ್ತಿರುತ್ತಾರೆ.

ಈ ಕುರಿತಂತೆ ಪ್ರೊ. ರಾಜಲಕ್ಷ್ಮಿ ಹೀಗೆ ಹೇಳುತ್ತಾರೆ, ``ನೀವು ಕೊಡುವ ಗಿಫ್ಟ್ ಹೇಗಿರಬೇಕೆಂದರೆ, ಅದು ತೆಗೆದುಕೊಳ್ಳುವವರಿಗೆ ಸ್ಮರಣಾರ್ಹ ಎನಿಸಿಕೊಳ್ಳಬೇಕು. ಗಿಫ್ಟ್ ಗೆ ಯಾವುದೇ ಬೆಲೆ ಕಟ್ಟಲಾಗದು. ಆದರೆ ಕೆಲವರು ಹೇಗಿರುತ್ತಾರೆಂದರೆ, ಗಿಫ್ಟ್ ಕೈಗೆ ಬಂದಾಗ ಅದರ ಮೇಲೆ ಬರೆದಿರುವ ಬೆಲೆ ಹುಡಕುತ್ತಿರುತ್ತಾರೆ. ಕಡಿಮೆ ಬೆಲೆಯ ಗಿಫ್ಟ್ ಆಗಿದ್ದರೆ ಮುಖ ಸಿಂಡರಿಸುತ್ತಾರೆ. ಆಗ ಅವರ ಪ್ರತಿಕ್ರಿಯೆ ಹೇಗಿರುತ್ತದೆಂದರೆ, `ನಮ್ಮ ಮನೆಯ ಕೆಲಸದವನಿಗೆ ನಾವು ಇದಕ್ಕಿಂತಲೂ ಒಳ್ಳೆಯ ಗಿಫ್ಟ್ ಕೊಡುತ್ತೇವೆ,' ಎಂಬಂತೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ