2012ರಲ್ಲಿ ಅತ್ಯಂತ ಪ್ರಸಿದ್ಧ ಜೋಡಿ ಕರೀನಾ ಕಪೂರ್‌ ಮತ್ತು ಸೈಫ್‌ ಆಲಿಖಾನ್‌ರ ಮದುವೆ ಬಹಳ ಕಾಲದಿಂದ ಅವರ ಅಭಿಮಾನಿಗಳು ಕಾದಿದ್ದರು. ಅಂತೂ ಮದುವೆಯ ದಿನ ಅವರಿಬ್ಬರನ್ನು ನೋಡಿದವರು ವಧೂವರರ ಆಕರ್ಷಣೆ ಕಂಡು ಚಕಿತರಾದರು. ವಿಶೇಷವಾಗಿ ಕರೀನಾ ಕಪೂರ್‌ ತನ್ನನ್ನು ಪ್ರಸ್ತುತಪಡಿಸಿಕೊಂಡ ರೀತಿ, ನಿಶ್ಚಿತಾರ್ಥ, ಮೆಹೆಂದಿ, ಮದುವೆ, ರಿಸೆಪ್ಶನ್‌ನಲ್ಲಿ ಕರೀನಾಳ ಮೇಕಪ್‌ ಜನರನ್ನು ಹುಚ್ಚರನ್ನಾಗಿಸಿತು. ಅವರ ಉಡುಪುಗಳು, ಹೇರ್‌ ಸ್ಟೈಲ್‌, ಜ್ಯೂವೆಲರಿ ಅಷ್ಟೇ ಅಲ್ಲ ಅವರ ಬ್ರೈಡಲ್ ಮೇಕಪ್‌ ಬಹಳಷ್ಟು ವಿಶೇಷವಾಗಿತ್ತು.

ಆ ಮದುವೆಯನ್ನು ಕಂಡು ಯುವತಿಯರಲ್ಲಿ ಮದುವೆ ದಿನದಂದು ವಿಶೇಷವಾಗಿ ಕರೀನಾಳಂತೆ ಕಾಣಿಸಿಕೊಳ್ಳಲು ಉತ್ಸಾಹ ಮೊಳೆಯಿತು. ಹುಡುಗಿಯರಿಗೆ ತಮ್ಮ ಮದುವೆಯ ದಿನ ಅತ್ಯಂತ ವಿಶೇಷವಾಗಿರುತ್ತದೆ. ಅಂದು ಎಲ್ಲರ ದೃಷ್ಟಿ ವಧುವಿನ ಮೇಲೆಯೇ ಇರುತ್ತದೆ. ವಧುವಾಗುವ ಸಿದ್ಧತೆ ಒಂದೆರಡು ದಿನಗಳ ಕೆಲಸ ಅಲ್ಲ. ಆದ್ದರಿಂದ ಮದುವೆ ನಿಶ್ಚಯವಾದ ಕೂಡಲೇ ತಮ್ಮ ಸೌಂದರ್ಯ ಹಾಗೂ ಶರೀರವನ್ನು ಗಮನಿಸಿಕೊಳ್ಳಲು ಹುಡುಗಿಯರು ಶುರು ಮಾಡಬೇಕು. ವಧುವಿನ ಸೌಂದರ್ಯದಲ್ಲಿ ಬರೀ ಮುಖವಷ್ಟೇ ಅಲ್ಲ, ತಲೆಯಿಂದ ಹಿಡಿದು ಕಾಲಿನವರೆಗೂ ಮಹತ್ವವಿದೆ. ಆದ್ದರಿಂದ ಇವೆಲ್ಲಕ್ಕೂ ವಿಶೇಷ ಗಮನ ನೀಡಬೇಕು. ಬ್ರೈಡಲ್ ಮೇಕಪ್‌ನಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಅದರಲ್ಲಿ ಕೊಂಚ ತಪ್ಪಾದರೂ ಅಥವಾ ನಿರ್ಲಕ್ಷ್ಯ ವಹಿಸಿದರೂ ವಧು ಅಪಹಾಸ್ಯಕ್ಕೆ ಗುರಿಯಾಗುತ್ತಾಳೆ. ಮೇಕಪ್‌ ಶುರು ಮಾಡುವ ಮೊದಲು ವಧುವಿನ ತ್ವಚೆ ಹೇಗಿದೆ ನಾರ್ಮಲ್, ಡ್ರೈ ಅಥವಾ ಆಯ್ಲಿಯೇ ಎಂದು ಗಮನಿಸಬೇಕು. ನಂತರ ತ್ವಚೆಗೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಬೇಕು. ಏಕೆಂದರೆ ತಪ್ಪು ಮೇಕಪ್‌ನಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮೇಕಪ್‌ಗೆ ಮೊದಲು ಫೇಶಿಯಲ್ ಬಗ್ಗೆ ಮಾತಾಡುವುದಾದರೆ ತ್ವಚೆಯನ್ನು ಪರೀಕ್ಷಿಸದೆ ಫೇಶಿಯಲ್ ಮಾಡಿಸಿಕೊಂಡರೆ, ತ್ವಚೆ ಸುಂದರವಾಗುವ ಬದಲು ಗುಳ್ಳೆಗಳಿಂದ ತುಂಬಿಹೋಗುತ್ತದೆ. ಆದ್ದರಿಂದ ತ್ವಚೆಗೆ ತ್ಕಂತೆ ಫೇಶಿಯಲ್, ಮೆನಿಕ್ಯೂರ್‌, ಪೆಡಿಕ್ಯೂರ್‌, ಮಸಾಜ್‌ ಇತ್ಯಾದಿ ಮಾಡಿದಾಗ ಮುಖಕ್ಕೆ ಹೊಳಪು ಬರುತ್ತದೆ. ತ್ವಚೆಯ ಭಿನ್ನ ಪ್ರಕಾರಗಳಿಗೆ ಮೇಕಪ್ ಗೆ ಮುಂಚೆ ಯಾವ ರೀತಿಯ ಟ್ರೀಟ್‌ಮೆಂಟ್‌ ಕೊಡಬೇಕೆಂದು ಗಮನಿಸೋಣ ಬನ್ನಿ.

blusher

ಡ್ರೈ ಸ್ಕಿನ್‌ : ಡ್ರೈ ಸ್ಕಿನ್‌ ಪರಿಶೀಲಿಸದೆ ಮೇಕಪ್‌ ಮಾಡಿಕೊಂಡರೆ ರಿಂಕಲ್ಸ್ ಉಂಟಾಗಿ ಮುಖ ಕೆಟ್ಟದಾಗಿ ಕಾಣುತ್ತದೆ. ಅದರಿಂದ ಮೇಕಪ್‌ನ ಗೆಟಪ್‌ ಕೂಡ ಇರುವುದಿಲ್ಲ. ಆದ್ದರಿಂದ ಮದುವೆಗೆ ಕೆಲವು ವಾರಗಳ ಮೊದಲಿಂದಲೇ ತ್ವಚೆಗೆ ಟ್ರೀಟ್‌ ಮೆಂಟ್‌ಕೊಡಬೇಕು. ಅದಕ್ಕೆ ಫೇಶಿಯಲ್ ಮಾಡಿಸಿ ಹಾಗೂ ತ್ವಚೆಯನ್ನು ಟೋನ್‌ ಅಪ್‌ ಮಾಡಿಸಿ. ಅದರಿಂದ ಶುಷ್ಕ ಹಾಗೂ ನಿರ್ಜೀವ ತ್ವಚೆಯೂ ಹೊಳೆಯತೊಡಗುತ್ತದೆ.

bridal-hair-(3)

ಆಯ್ಲಿ ಸ್ಕಿನ್‌ : ಅಂತಹ ಸ್ಕಿನ್‌ ಇರುವವರು ತಮ್ಮ ಆಹಾರದಲ್ಲಿ ಆಯ್ಲಿ ಪದಾರ್ಥಗಳನ್ನು ಕಡಿಮೆ ಉಪಯೋಗಿಸಬೇಕು ಮತ್ತು ವಾರಕ್ಕೆ 3 ಬಾರಿ ಸ್ಕಿನ್‌ ಮೇಲೆ ಯಾವುದಾದರೂ ಒಳ್ಳೆಯ ಬ್ರೈಡಲ್ ಪ್ಯಾಕ್‌ ಉಪಯೋಗಿಸಬೇಕು. ಮೇಕಪ್‌ಗೆ ಮೊದಲು ಬ್ಯೂಟಿ ಟ್ರೀಟ್‌ ಮೆಂಟ್‌ ಅಗತ್ಯವಾಗಿ ತೆಗೆದುಕೊಳ್ಳಿ. ಒಂದು ವೇಳೆ ತ್ವಚೆಯ ಮೇಲೆ ಕಲೆಗಳಿದ್ದರೆ 4-5 ವಾರಗಳ ಮೊದಲಿನಿಂದಲೇ ಅದರ ಟ್ರೀಟ್‌ ಮೆಂಟ್‌ ಮಾಡಿಸಿದರೆ ತ್ವಚೆಯ ತೆರೆದ ರೋಮ ರಂಧ್ರಗಳು ಮುಚ್ಚಿ ತ್ವಚೆಯ ಮೇಲಿರುವ ಕಲೆಗಳ ಗುರುತು ಮಾಯಾಗುತ್ತವೆ.

bridal-hair-(8)

ರಿಮೂವ್ ಆಫ್‌ ಡೆಡ್‌ ಸ್ಕಿನ್‌ : ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಮುಖದಲ್ಲಿ ಸಾಕಷ್ಟು ಡೆಡ್‌ ಸ್ಕಿನ್‌ ಸೇರಿಕೊಳ್ಳುತ್ತದೆ. ಅದರಿಂದ ತ್ವಚೆ ಒಣಗಿದಂತಿರುತ್ತದೆ. ತ್ವಚೆಯಲ್ಲಿ ಹೊಳಪಿರುವುದಿಲ್ಲ. ಡೆಡ್‌ ಸ್ಕಿನ್‌ ತೆಗೆಯಲು ರಿಮೂವ್ ಆಫ್‌ ಡೆಡ್‌ ಸ್ಕಿನ್‌ ಟ್ರೀಟ್‌ಮೆಂಟ್‌ ಕೊಡುವುದರಿಂದ ಸ್ಕಿನ್‌ ಫ್ರೆಶ್‌ ಆಗುತ್ತದೆ. ವಿಎಲ್‌ಸಿಸಿ ಗ್ರೂಪ್‌ನ ಮೇಕಪ್‌ ಆರ್ಟಿಸ್ಟ್ ಫರೀದಾ ಮಿಸ್ತ್ರೀ ಬ್ರೈಡಲ್ ಮೇಕಪ್‌ನ ಕೆಲವು ಸೂಕ್ಷ್ಮ ಸಂಗತಿಗಳ ಬಗ್ಗೆ ಹೇಳುತ್ತಾ, ಮೇಕಪ್‌ನಿಂದ ವಧುವಿನ ಮುಖದಲ್ಲಿ ಬೇರೆಯದೇ ಆದ ಸೌಂದರ್ಯ ಹೊಳೆಯುತ್ತದೆ. ಅವಳ ಮೇಕಪ್‌ ಹೇಗಿರಬೇಕೆಂದರೆ ಅವಳನ್ನು ನೋಡುವವರು ನೋಡುತ್ತಲೇ ಇರಬೇಕು ಎಂದರು.

cheks-mkp

ಫೇಸ್‌ ಕ್ಲೀನಿಂಗ್‌ : ಫೇಸ್‌ ಮೇಕಪ್‌ ಮಾಡಿಸಿಕೊಳ್ಳುವ ಮೊದಲು ಮುಖವನ್ನು ಫೇಸ್‌ ವಾಶ್‌ನಿಂದ ಸ್ವಚ್ಛ ಮಾಡಿ ಕ್ಲೆನ್ಸರ್‌ನಿಂದ ಕ್ಲೀನ್‌ ಮಾಡಿ. ಇದು ಮುಖವನ್ನು ಮಾಲಿನ್ಯ ಹಾಗೂ ಕೊಳೆಯಿಂದ ರಕ್ಷಿಸುತ್ತದೆ.

eue-mkp-(1)

ಟೋನಿಂಗ್‌ : ಮುಖವನ್ನು ಚೆನ್ನಾಗಿ ಟೋನಿಂಗ್‌ ಮಾಡಿ. ಟೋನಿಂಗ್‌ನ್ನು ಬೆರಳುಗಳಿಂದ ಕಾಟನ್‌ ಸಹಾಯದಿಂದ ಮಾಡಿ. ಮುಖದ ಪಿಎಚ್‌ ಲೆವೆಲ್ ‌ಇನ್ ಬ್ಯಾಲೆನ್ಸ್ ಆಗಿ ಪೋರ್ಸ್‌ ತೆರೆದಾಗ ಟೋನರ್‌ ಸಹಾಯ ಮಾಡುತ್ತದೆ. ಅದು ತೆರೆದ ರಂಧ್ರಗಳನ್ನು ಮುಚ್ಚುತ್ತದೆ.

eye-smoky-look

ಮಾಯಿಶ್ಚರೈಸಿಂಗ್‌ : ಮಾಯಿಶ್ಚರೈಸಿಂಗ್‌ ಮಾಡುವ ಮೊದಲು ಸ್ಕಿನ್‌ ಚೆಕ್‌ ಮಾಡಿ ಅದರ ಪ್ರಕಾರ ಮಾಯಿಶ್ಚರೈಸರ್‌ ಹಚ್ಚಿ. ಮಾಯಿಶ್ಚರೈಸರ್‌ ಸ್ಕಿನ್‌ನ್ನು ಸಾಫ್ಟ್ ಮತ್ತು ಸ್ಮೂಥ್‌ ಮಾಡುತ್ತದೆ.

ಪ್ರೈಮರ್‌ : ಬ್ರೈಡಲ್ ಮೇಕಪ್‌ ಆರಂಭಿಸುವಾಗ ಫೇಸ್‌ಗೆ ಅಗತ್ಯವಾಗಿ ಪ್ರೈಮರ್‌ ಹಚ್ಚಿ. ಇದು ಮೇಕಪ್‌ ಬಹಳ ಹೊತ್ತು ಅಂಟಿಕೊಂಡಿರುವಂತೆ ಮಾಡುತ್ತದೆ. ಇದರ 2-3 ಡ್ರಾಪ್‌ನ್ನು ಮುಖದ ಮೇಲೆ ಡಾಟ್‌ ಡಾಟ್‌ ಆಗಿ ಹಚ್ಚಿ. ಇದರಲ್ಲಿ ಸಿಲಿಕಾನ್‌ ಇದ್ದು ಬೇಗ ಹರಡಿಕೊಳ್ಳುವುದರಿಂದ ಹೆಚ್ಚು ಹಚ್ಚಬೇಡಿ.

lip-colour

ಬೇಸ್‌ನ ಆಯ್ಕೆ : ಬೇಸ್‌ ಹಚ್ಚುವ ಮೊದಲು ಸ್ಕಿನ್‌ ಟೋನ್‌ನ್ನು ಅಗತ್ಯವಾಗಿ ಚೆಕ್‌ ಮಾಡಿ ಬೇಸ್‌ನ ಯಾವ ಟೋನ್‌ ಸ್ಕಿನ್ ನೊಂದಿಗೆ ಮ್ಯಾಚ್‌ ಆಗುತ್ತದೆಯೆಂದು ನೋಡಿ. ಅದನ್ನು ಲೈನ್‌ ಬಳಿ ಹಚ್ಚಿ ನೋಡಿ. ಇದು ಪರ್ಫೆಕ್ಟ್ ಮ್ಯಾಚ್‌ ಆಗಿರಬೇಕು. ನಂತರ ಇದನ್ನು ಸ್ಪಾಂಜ್‌ ಅಥವಾ ಬ್ರಶ್‌ನಿಂದ ಕಣ್ಣುಗಳ ಕೆಳಗೆ ಡಾರ್ಕ್‌ ಸರ್ಕಲ್ ಶುರು ಮಾಡಿ. ಒಂದು ವೇಳೆ ಕಣ್ಣುಗಳ ಕೆಳಗೆ ಡಾರ್ಕ್‌ ಸರ್ಕಲ್ ಇದ್ದರೆ ಕನ್ಸೀಲರ್‌ ಹಚ್ಚಿ ಬೇಸ್‌ ಹಚ್ಚಿ. ಈ ಬೇಸ್‌ನ್ನು ಲಿಪ್‌ ಮೇಲೆ, ಕೆನ್ನೆ ಮತ್ತು ಕಿವಿಯ ಮೇಲೂ ಹಚ್ಚಿ. ಬೇಸ್ ಹಚ್ಚಿದ ನಂತರ ಪಾಲಿಶಿಂಗ್‌ ಬ್ರಶ್‌ನಿಂದ ಮುಖದ ಮೇಲೆ ಗುಂಡಗೆ ತಿರುಗಿಸುತ್ತಾ ಬ್ಲೆಂಡಿಂಗ್‌ ಮಾಡಿ. ಒಳ್ಳೆಯ ಬ್ರ್ಯಾಂಡ್‌ನ ಲೂಸ್‌ ಪೌಡರ್‌ ತಗೆದುಕೊಂಡು ಪಫ್‌ನಿಂದ ಚೆನ್ನಾಗಿ ಹಚ್ಚಿ ಬೇಸ್‌ ಸೆಟ್‌ ಮಾಡಿ.

ಐ ಮೇಕಪ್‌ : ಎಲ್ಲಕ್ಕೂ ಮೊದಲು ಕಣ್ಣುಗಳಿಗಿ ವೈಟ್‌ ಬೇಸ್‌ ಕಲರ್‌ ಹಚ್ಚಿ. ನಂತರ ಕಣ್ಣುಗಳ ಹೊರಗಿನ ಮೂಲೆಗಳಲ್ಲಿ ಮೆರೂನ್ ಶ್ಯಾಡೋ ಹಚ್ಚಿ. ನಂತರ ಅದರ ಮೇಲೆ ಡಾರ್ಕ್‌ ಬ್ರೌನ್‌ ಶ್ಯಾಡೋ ಹಚ್ಚಿ. ಕಣ್ಣುಗಳ ಮೇಲೆ ಮತ್ತು ಐ ಬ್ರೋಸ್‌ ಕೆಳಗೆ ಹೈಲೈಟರ್‌ನ್ನು ಅಗತ್ಯವಾಗಿ ಹಚ್ಚಿ. ಐ ಬ್ರೋಸ್‌ನ್ನು ಫೈನಲ್ ಮಾಡಲು ಬ್ರಶ್‌ನಿಂದ ಬ್ರೌನ್‌ ಐ ಶ್ಯಾಡೋ ಹಚ್ಚಿ. ಐ ಶ್ಯಾಡೋ ನಂತರ ವಧುವಿನ ಐ ಲ್ಯಾಶಸ್‌ ತೆಳುವಾಗಿದ್ದರೆ ಆರ್ಟಿಫಿಶಿಯಲ್ ಐ ಲ್ಯಾಶಸ್‌ನ್ನು ಗ್ಲೂ ಸಹಾಯದಿಂದ ಅಂಟಿಸಿ. ಒಣಗಿದ ನಂತರ ವಾಟರ್‌ ಪ್ರೂಫ್‌ ಐ ಲೈನರ್‌ ಹಚ್ಚಿ.

ಕಣ್ಣುಗಳಲ್ಲಿ ಸ್ಮೋಕಿ ಲುಕ್‌ : ಕಣ್ಣುಗಳಲ್ಲಿ ಸ್ಮೋಕಿ ಲುಕ್‌ ತರಲು ಕಣ್ಣುಗಳ ಹೊರಗಿನ ಮೂಲೆಗಳ ಮೇಲೆ ಡಾರ್ಕ್‌ ಬ್ಲೂ ಬಣ್ಣದ ಶ್ಯಾಡೋವನ್ನು ಕೊಂಚ ಗಾಢವಾಗಿ ಹಚ್ಚಿ.

ನೀವು ಡ್ರೆಸ್‌ಗೆ ಮ್ಯಾಚ್‌ ಆಗುವ ಐ ಶ್ಯಾಡೋ ಅಥವಾ ಲಿಪ್‌ಸ್ಟಿಕ್‌ನ್ನೇ ಹಚ್ಚುವುದು ಅಗತ್ಯವಿಲ್ಲ. ಡ್ರೆಸ್‌ಗಿಂತ ಭಿನ್ನವಾದ ಬಣ್ಣದ ಲಿಪ್‌ಸ್ಟಿಕ್‌ ಮತ್ತು ಐ ಶ್ಯಾಡೋ ಹಚ್ಚಿದರೆ ಲುಕ್‌ ಇನ್ನಷ್ಟು ಎದ್ದು ಕಾಣುತ್ತದೆ. ಕಣ್ಣುಗಳ ವಾಟರ್‌ ಲೈನ್‌ ಏರಿಯಾದಲ್ಲಿ ಬ್ರಶ್‌ನಿಂದ ಕಾಜಲ್ ಹಚ್ಚಿ ಮತ್ತು ಐ ಲ್ಯಾಶಸ್‌ ಮೇಲೆ ವಾಟರ್‌ ಪ್ರೂಫ್‌ ಮಸ್ಕರಾ ಹಚ್ಚಿ.

ಕಾಂಟೂರಿಂಗ್‌ : ಮುಖ ಶಾರ್ಪ್‌ ಆಗಿ ಕಾಣಲು ನೋಸ್‌, ಚೀಕ್ಸ್ ಮತ್ತು ಮುಖಕ್ಕೆ ಕಾಂಟೂರಿಂಗ್‌ ಮಾಡಿ. ಅದಕ್ಕಾಗಿ ಡಾರ್ಕ್ಬೇಸ್‌ನ್ನು ಬೆರಳುಗಳಲ್ಲಿ ತೆಗೆದುಕೊಂಡು ನೋಸ್‌ನ ಎರಡೂ ಕಡೆ ಹಚ್ಚಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ನೋಸ್‌ನ ಮಿಡಲ್ ಸೆಕ್ಷನ್‌ನಲ್ಲಿ ವೈಟ್‌ ಬೇಸ್‌ ಹಚ್ಚಿ. ಚೀಕ್‌ ಬೋನ್ಸ್ ನ್ನೂ ಹೈಲೈಟ್‌ ಮಾಡಿ. ಮುಖ ದೊಡ್ಡದಾಗಿದ್ದರೆ ಕಾಂಟೂರಿಂಗ್‌ ಮಾಡಿ ಅದನ್ನು ಚಿಕ್ಕದಾಗಿ ಕಾಣುವಂತೆ ಮಾಡಬಹುದು.

ಲಿಪ್‌ ಕಲರ್‌ : ಲಿಪ್‌ ಕಲರ್‌ನ್ನು ನಿಮ್ಮ ತ್ವಚೆಗೆ ಹೊಂದುವಂತೆ ಆಯ್ದುಕೊಳ್ಳಿ. ತೆಳುವಾದ ಸ್ಕಿನ್‌ ಟೋನ್‌ನೊಂದಿಗೆ ಸಾಫ್ಟ್, ಪೀಚ್‌ಮತ್ತು ಆರೆಂಜ್‌ ಶೇಡ್‌ ಮಿಕ್ಸ್ ಮಾಡಿ ಹಚ್ಚಿ. ಶೈನಿಂಗ್‌ಗಾಗಿ ಇದರ ಮೇಲೆ ಗ್ಲಾಸ್‌ ಹಚ್ಚಿ.

ಗ್ಲಾಸಿ ಮೇಕಪ್‌ : ಬ್ರೈಡಲ್ ಮೇಕಪ್‌ ಡಾರ್ಕ್‌ ಆಗಿರುತ್ತದೆ. ಆದರೆ ಈಗ ಮ್ಯಾಟ್‌ ಜಾಗದಲ್ಲಿ ಶಿಮರ್‌ ಲುಕ್‌ಗಾಗಿ ಗ್ಲಾಸ್‌ ಮೇಕಪ್‌ಜನರಿಗೆ ಇಷ್ಟವಾಗುತ್ತದೆ. ಚಳಿಗಾಲದಲ್ಲಿ ವೆಟ್‌ ಲುಕ್‌ನ ಮೇಕಪ್‌ ಬಹಳ ಸುಂದರವಾಗಿರುತ್ತದೆ. ಅದೇ ಬೇಸಿಗೆಯಲ್ಲಿ ವಾಟರ್ ಪ್ರೂಫ್‌ ಮೇಕಪ್‌ ಚೆನ್ನಾಗಿರುತ್ತದೆ. ಒಟ್ಟಿನಲ್ಲಿ ಈಗ ತೆಳುವಾದ ಶೈನಿಂಗ್‌ ಮತ್ತು ಫ್ರೆಶ್‌ ಲುಕ್‌ ಫ್ಯಾಷನ್‌ ಆಗಿದೆ. ಸಾಧ್ಯವಾದಷ್ಟೂ ಮೇಕಪ್‌ ಪ್ರಾಡಕ್ಟ್ ಕಡಿಮೆ ಉಪಯೋಗಿಸಿ. ಈಗ ನ್ಯಾಚುರಲ್ ಲುಕ್‌ ಹೆಚ್ಚು ಇಷ್ಟವಾಗುತ್ತದೆ.

primer

ಬ್ಲಶರ್‌ ಆಯ್ಕೆ : ಬ್ಲಶರ್‌ ಹಚ್ಚುವ ಮೊದಲು ಸರಿಯಾದ ಬ್ಲಶರ್‌ನ್ನು ಆರಿಸಿಕೊಳ್ಳುವುದು ಮುಖ್ಯ. ಹಗಲು ಮತ್ತು ರಾತ್ರಿಗಾಗಿ ಬೇರೆ ಬೇರೆ ಶೇಡ್ಸ್ ಆರಿಸಿಕೊಳ್ಳಿ. ಹಗಲಿನಲ್ಲಿ ಬೇಜ್‌, ಪೀಚ್‌ ಮತ್ತು ಬೇಬಿ ಪಿಂಕ್‌ ಚೆನ್ನಾಗಿರುತ್ತದೆ. ರಾತ್ರಿ ಡಾರ್ಕ್‌ ಕಲರ್‌ ತೆಳುವಾದ ಶಿಮರ್‌ನೊಂದಿಗೆ ಚೆನ್ನಾಗಿರುತ್ತದೆ. ಬ್ಲಶರ್‌, ಕ್ರೀಂ ಅಥವಾ ಲಿಕ್ವಿಡ್‌ ಎರಡೂ ರೀತಿಯೂ  ಇರುತ್ತದೆ. ಕಾರ್ಡ್‌ ಶೇಡ್ಸ್ ಗೆ ತಕ್ಕಂತೆ ಶೇಡ್ಸ್ ಕೊಳ್ಳಬೇಡಿ. ಏಕೆಂದರೆ ಮುಖಕ್ಕೆ ಹಚ್ಚಿದ ನಂತರ ಇದರಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಇದನ್ನು ಅಂಗೈನ ಹಿಂಭಾಗದಲ್ಲಿ ಹಚ್ಚಿ ಟೆಸ್ಟ್ ಮಾಡಿ.

ಚೀಕ್ಸ್ ಮೇಕಪ್‌ : ಬ್ಲಶರ್‌ ಹಚ್ಚಲು ಲೈಟ್‌ ಪಿಂಕ್‌ ಕಲರ್‌ನ್ನು ಚೀಕ್ಸ್ ಮೇಲೆ ಹಚ್ಚಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ಬ್ಲಶರ್‌ನ್ನು ಕೆನ್ನೆಗಳ ಮಧ್ಯದಲ್ಲೇ ಹಚ್ಚಿ. ಅದನ್ನು ಕೆಳಗಿನವರೆಗೆ ಹರಡಬೇಡಿ. ಇದರಿಂದ ಫೇಸ್‌ ಅದ್ಭುತವಾಗಿ ಕಾಣುತ್ತದೆ. ಅದರ ಮೇಲೆ ಲೂಸ್‌ ಪೌಡರ್‌ ಹಾಕಿ. ಬ್ಲಶರ್‌ ಹಚ್ಚಿದ ನಂತರ ಅದು ಪ್ಯಾಚಿ ಆಗಿ ಕಾಣದೆ ನ್ಯಾಚುರಲ್ ಆಗ ಕಾಣಿಸಬೇಕು. ಇಲ್ಲದಿದ್ದರೆ ಇದು ಇಡೀ ಮುಖದ ಲುಕ್ಸ್ ನ್ನು ಹಾಳು ಮಾಡುತ್ತದೆ. ಬ್ಲಶರ್‌ ಕೊಳ್ಳುವಾಗ ನಿಮ್ಮ ತ್ವಚೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಬ್ಲಶರ್‌ ಕೊಳ್ಳಿ.

ಫೇರ್‌ ಸ್ಕಿನ್‌ಗಾಗಿ : ಪೀಚ್‌, ಪಿಂಕ್‌ ಮತ್ತು ಬೇಜ್‌ ಕಲರ್‌ ಬ್ಲಶರ್‌.

ಡಾರ್ಕ್‌ ಸ್ಕಿನ್‌ಗಾಗಿ : ಬ್ರೌನ್‌, ಪ್ಲಮ್ ಮತ್ತು ಬಾಂಜ್‌ ಕಲರ್‌ ಬ್ಲಶರ್‌.

ಟ್ಯಾನ್ಡ್ ಸ್ಕಿನ್‌ಗಾಗಿ : ಆರೆಂಜ್‌, ಮೆರೂನ್‌, ಪೀಚ್‌ ಮತ್ತು ಕೋರಲ್ ಬ್ಲಶರ್‌

ಯೆಲ್ಲೋ ಸ್ಕಿನ್‌ ಟೋನ್‌ಗಾಗಿ : ವಾರ್ಮ್ ಬ್ರೌನ್‌, ವಾರ್ಮ್ ಪಿಂಕ್‌ ಮತ್ತು ಆಲ್ಮಂಡ್‌ ಬ್ಲಶರ್‌

ಎಚ್ಚರಿಕೆ

ಸ್ಕಿನ್‌ ನಾರ್ಮಲ್ ಅಥವಾ ಡ್ರೈ ಆಗಿದ್ದರೆ ಕೇಕ್‌ ಶೇಡ್ಸ್ ಅಥವಾ ಕ್ರೀಮಿ ಶೇಡ್ಸ್  ಬ್ಲಶರ್‌ ಆರಿಸಿ.

ಆಯ್ಲಿ ಸ್ಕಿನ್‌ಗೆ ಪೌಡರ್‌ ಬ್ಲಶರ್‌ ಬೆಸ್ಟ್ ಬ್ಲಶರ್‌ ನಂತರ ಟ್ರಾನ್ಸ್ ಲ್ಯೂಷನ್‌ ಪೌಡರ್‌ ಹಚ್ಚಿ. ಅದರಿಂದ ಬ್ರೈಟ್‌ನೆಸ್‌ ಕೊಂಚ ಕಡಿಮೆಯಾಗುತ್ತದೆ.

ಫೌಂಡೇಶನ್‌ ಹಚ್ಚದಿದ್ದಲ್ಲಿ ಲಿಕ್ವಿಡ್‌ ಅಥವಾ ಕ್ರೀಮೀ ಬ್ಲಶರ್‌ ಹಚ್ಚಿ.

ಪೂರ್ತಿ ಮೇಕಪ್‌ ಆದ ನಂತರ ಮೇಕಪ್‌ ಫಿಕ್ಸ್ ಚರ್‌ ಸ್ಪ್ರೇಯನ್ನು ಮುಖದ ಮೇಲೆ ಸ್ವಲ್ಪ ದೂರದಿಂದ ಹಾಕಿಕೊಳ್ಳಿ. ಅದರಿಂದ ಮೇಕಪ್‌ ಹೆಚ್ಚು ಕಾಲ ಉಳಿಯುತ್ತದೆ. ಬಾಡಿ ಶೈನಿಂಗ್‌ಗೆ ಬಾಡಿ ಪಾಲಿಶಿಂಗ್‌ ಪೌಡರ್‌ನ್ನು ತೆರೆದ ಜಾಗ, ಕೈ ಕುತ್ತಿಗೆ ಇತ್ಯಾದಿಗಳ ಮೇಲೆ ಹಾಕಿ.

toning

ಬಿಂದಿ : ಫೇಸ್‌ಗೆ ತಕ್ಕಂತೆ ಬಿಂದಿ ಆರಿಸಿಕೊಳ್ಳಿ. ಬ್ರೈಡಲ್ ಬಿಂದಿ ಕೊಂಚ ಬೇರೆಯಾಗಿರುತ್ತದೆ. ಗುಂಡನೆಯ ಮುಖ ಇದ್ದರೆ ಉದ್ದವಾದದ್ದು, ಉದ್ದವಾಗಿದ್ದರೆ ದುಂಡನೆಯದು, ಚೌಕಾಕಾರವಾಗಿದ್ದರೆ ಯಾವುದೇ ಡಿಸೈನಿನ ಬಿಂದಿ ಹಚ್ಚಬಹುದು.

ಜ್ಯೂವೆಲರಿ : ಮೇಕಪ್‌ ಆರ್ಟಿಸ್ಟ್ ರೇಣು ಮಹೇಶ್ವರಿ ವಧುವಿನ ಫಿಗರ್‌ಗೆ ತಕ್ಕಂತೆ ಜ್ಯೂವೆಲರಿ ಆರಿಸಿಕೊಳ್ಳಿ. ಫ್ಯಾಷನ್‌ನತ್ತ ಓಡಬೇಡಿ. ವಧುವಿನ ಜ್ಯೂವೆಲರಿ ಆರಿಸುವಾಗ ಅವಳ ಕುತ್ತಿಗೆ ಚಿಕ್ಕದು ಅಲ್ಲ ತಾನೆ ಎಂದು ಗಮನಿಸಿ. ಒಂದುವೇಳೆ ಚಿಕ್ಕದಾಗಿದ್ದರೆ ಅವಳಿಗೆ ಭಾರದ ಜ್ಯೂವೆಲರಿ ತೊಡಿಸಬೇಡಿ. ಅದರಿಂದ ಫೇಸ್‌ ದೊಡ್ಡದಾಗಿರುವೆತೆ ಕಾಣುತ್ತದೆ. ಉದ್ದನೆಯ ಕತ್ತಿನ ವಧು ಹೆವಿ ಜ್ಯೂವೆಲರಿ ಧರಿಸಬಹುದು. ವಧುವಿನ ಹೆಗಲು ಅಗಲವಾಗಿದ್ದರೆ ಹೆವಿ ಜ್ಯೂವೆಲರಿ ಧರಿಸಬಹುದು. ಜ್ಯೂವೆಲರಿಯನ್ನು ಡ್ರೆಸ್‌ನೊಂದಿಗೆ ಅಥವಾ ಡ್ರೆಸ್‌ನ ಬಾರ್ಡರ್‌ನ ಎಂಬ್ರಾಯಿಡರಿಯೊಂದಿಗೆ ಮ್ಯಾಚ್‌ ಮಾಡಬಹುದು ಎನ್ನುತ್ತಾರೆ.

ಬ್ರೈಡಲ್ ಹೇರ್‌ ಸ್ಟೈಲ್ ‌: ಹೇರ್‌ ಎಕ್ಸ್ ಪರ್ಟ್‌ ಮಮತಾ ಪ್ರಕಾರ, ಎಲ್ಲಕ್ಕೂ ಮೊದಲು ಕೂದಲನ್ನು ಶ್ಯಾಂಪೂನಿಂದ ವಾಶ್‌ ಮಾಡಿ. ನಂತರ ಅದನ್ನು ಡ್ರೈ ಮಾಡಿ. ಕೂದಲಿಗೆ ಪರ್ಫೆಕ್ಟ್ ಲುಕ್‌ ಕೊಡಲು ಅದರ ಪ್ರೆಸ್ಸಿಂಗ್‌ ಮಾಡಿ. ನಂತರ ಕೂದಲಿಗೆ ಕ್ಲಿಪ್ ಹಾಕಿ.

ನಂತರ ಕೂದಲಿನ ಸೆಂಟರ್‌ ಪಾರ್ಟಿಂಗ್‌ ಮಾಡಿ ಮತ್ತು ಇಯರ್‌ ಟು ಇಯರ್‌ ಒಂದು ಸೆಕ್ಷನ್‌ ತೆಗೆಯಿರಿ. ಹಿಂದಿನ ಕೂದಲಿನ ಕೆಳಗೆ ಪೋನಿ ಮಾಡಿ. ನಂತರ ಇಡೀ ಕೂದಲಿಗೆ ಸ್ಪ್ರೇ ಮಾಡಿ. ಈಗ ಕ್ರೌನ್‌ ಏರಿಯಾದಲ್ಲಿ ಆರ್ಟಿಫಿಶಿಯಲ್ ಸ್ಟಫಿಂಗ್‌ ಮಾಡಿ ಮತ್ತು ಅದನ್ನು ಬಾಲ್ ಪಿನ್‌ನಿಂದ ಚೆನ್ನಾಗಿ ಸೆಟ್‌ ಮಾಡಿ. ನಂತರ ಮುಂದಿನ ಕೂದಲನ್ನು ಕೊಂಚ ಕೊಂಚವಾಗಿ 900ಯಲ್ಲಿ ತೆಗೆದುಕೊಂಡು ಹಿಂದಿನ ಕಡೆ ಸೆಟ್‌ ಮಾಡಿ. ಒಂದೊಂದು ಸೆಕ್ಷನ್‌ನಲ್ಲೂ ಬ್ಯಾಕ್‌ ಕೂಂಬಿಂಗ್‌ನೊಂದಿಗೆ ಪರ್ಫೆಕ್ಟ್ ಮಾಡುತ್ತಾ ಸ್ಟಫಿಂಗ್‌ ಮೇಲೆ ಸ್ಪ್ರೇ ಮಾಡಿ ಮತ್ತು ಕೂಂಬ್‌ನಿಂದ ಪರ್ಫೆಕ್ಟ್ ಮಾಡುತ್ತಾ ಹೋಗಿ. ಸ್ಟಫಿಂಗ್‌ನಲ್ಲಿ ಉಳಿದಿರುವ ಕೂದಲನ್ನು ಹಿಂದಿನ ಪೋನಿಯಲ್ಲಿ ಸಿಕ್ಕಿಸಿ ಪಿನ್‌ನಿಂದ ಸೆಟ್‌ ಮಾಡಿ. ಈಗ ಮುಂದಿನ ಒಂದೊಂದು ಹೆರಳು ತೆಗೆದುಕೊಂಡು ಮಧ್ಯದಲ್ಲಿ ಬೈತಲೆ ತೆಗೆಯಿರಿ ಮತ್ತು ಅಕ್ಕಪಕ್ಕದಲ್ಲಿ ಎರಡು ಕಡೆ ಪಿನ್‌ನಿಂದ ಸೆಟ್‌ ಮಾಡಿ. ಪೋನಿಗೆ ಆರ್ಟಿಫಿಶಿಯಲ್ ಕೂದಲು ಸಿಕ್ಕಿಸಿ ಜಡೆ ಹೆಣೆಯಿರಿ. ವಧುವಿಗೆ ಉದ್ದನೆಯ ರಿಬ್ಬನ್‌ ಸಹಿತದ ಜಡೆ ಸುಂದರವಾಗಿ ಕಾಣುತ್ತದೆ. ಅವಳ ಜಡೆಯಲ್ಲಿ 2 ಆರ್ಟಿಫಿಶಿಯಲ್ ಕೂದಲಿನ ಜಡೆಗಳನ್ನು ಸಿಕ್ಕಿಸಿ ಜಡೆ ಹೆಣೆಯಿರಿ. ಅದರ ಜೊತೆಗೆ ರಿಬ್ಬನ್‌ ಇರುವ ಜಡೆಯನ್ನು ಹೆಣೆಯಿರಿ. ಈಗ ಇಡೀ ಜಡೆಗೆ ಸ್ಪ್ರೇಗೆ ಮಾಡಿ. ಜಡೆಯಿಂದ ಹೊರಬಂದಿರುವ ಕೂದಲನ್ನು ಪಿನ್‌ನಿಂದ ಸೆಟ್‌ ಮಾಡಿ. ನಂತರ ಜಡೆಗೆ ಹೇರ್‌ ಆ್ಯಕ್ಸೆಸರೀಸ್‌ ಸಿಕ್ಕಿಸಿ. ಒಂದುವೇಳೆ ವಧುವಿನ ಮುಂದಿನ ಕೂದಲು ತೆಳುವಾಗಿದ್ದರೆ ಅಥವಾ ಸ್ಕಾಲ್ಪ್ ಕಾಣುತ್ತಿದ್ದರೆ ಕ್ರಿಂಪಿಂಗ್‌ ಮೆಷಿನ್‌ನಿಂದ ಕೂದಲಿನ ಸಣ್ಣ ಸಣ್ಣ ಕ್ರಿಂಪ್‌ ಮಾಡಿ. ಇದರಿಂದ ಮುಂದಿನ ಕೂದಲು ದಟ್ಟವಾಗಿ ಕಾಣುತ್ತದ.

ಈಗ ಸ್ತ್ರೇಟ್‌ ಕೂದಲಿನ ಜಾಗದಲ್ಲಿ ಗುಂಗುರು ಕೂದಲು ಇಷ್ಟಪಡಲಾಗುತ್ತಿದೆ. ಈ ದಿನಗಳಲ್ಲಿ ವಧು ಹೆವಿ ಹೇರ್‌ ಸ್ಟೈಲ್‌ಇಷ್ಟಪಡುವುದಿಲ್ಲ. ಏಕೆಂದರೆ ವಧುವಿನ ತಲೆ ಸೆರಗಿನಿಂದ ಮುಚ್ಚಿರುವುದರಿಂದ ಅವಳ ಹೇರ್‌ ಸ್ಟೈಲ್ ‌ಹೊರಗೆ ಕಾಣುವುದಿಲ್ಲ. ಅದಕ್ಕೆ ಕೂದಲಿಗೆ ಲೈಟ್‌ ಸ್ಟೈಲ್ ಕೊಟ್ಟು ನ್ಯಾಚುರಲ್ ಲುಕ್‌ ಕೊಡಬಹುದು. ಹೇರ್‌ ಸ್ಟೈಲ್ ‌ಮಾಡಿದ ನಂತರ ಕೂದಲಿನ ಮೇಲೆ ಗ್ಲಿಟರ್‌ ಸ್ಪ್ರೇ ಮಾಡಿ. ಅದರಿಂದ ಕೂದಲು ಹೊಳೆಯುತ್ತದೆ.

– ಮೋನಿಕಾ ವಿಲ್ಸನ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ