ಸುಂದರ ಉಗುರುಗಳು ಕೈಗಳ ಸೌಂದರ್ಯಕ್ಕೆ ಗರಿ ಮೂಡಿಸುತ್ತವೆ. ಕೆಲವೊಮ್ಮೆ ಮಾಡೆಲ್‌ಗಳು ಇವುಗಳ ಮಹತ್ವ ಗಮನಿಸಿ ತಮ್ಮ ಕೈಗಳು ಹಾಗೂ ಉಗುರುಗಳ ವಿಮೆ ಮಾಡಿಸುತ್ತಾರೆ. ಆದರೆ ಉಗುರುಗಳ ಬಗ್ಗೆ ಅನೇಕ ಮಿಥ್ಯೆಗಳೂ ಇವೆ. ಬನ್ನಿ, ಅವುಗಳ ಬಗ್ಗೆ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯೋಣ.
ನೇಲ್ ಪಾಲಿಶ್‌ನಲ್ಲಿ ಉಗುರುಗಳ ಮೇಲ್ಮೈ ಪದರಕ್ಕೆ ಹಾನಿ ಉಂಟು ಮಾಡುವ ಅಂಶಗಳಿವೆ ಎನ್ನಲಾಗುತ್ತದೆ. ಈ ವಿಷಯದ ಬಗ್ಗೆ ಮಹಿಳೆಯರಿಗೆ ಚಿಂತೆ ಇರುತ್ತದೆ. ಆದರೆ ಈ ವಿಷಯ ನಿಜವಲ್ಲ. ಎಕ್ಸ್ ಪರ್ಟ್‌ಗಳ ಅನುಸಾರ ನೇಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳ ಪದರಕ್ಕೆ ಹಾನಿಯಾಗುವುದಿಲ್ಲ. ಇನ್ನೊಂದು ಮಿಥ್ಯೆಯೆಂದರೆ.
ಹೆಚ್ಚು ನೇಲ್ ಪಾಲಿಶ್ ಹಚ್ಚುತ್ತಿದ್ದರೆ ಉಗುರು ಬಲಹೀನವಾಗುತ್ತದೆ, ಅವುಗಳ ಹೊಳಪು ಕಡಿಮೆಯಾಗುತ್ತದೆ ಎಂಬುದು. ಇದರ ಬಗ್ಗೆ ನ್ಯೂಯಾರ್ಕ್‌ನ ಪ್ರಸಿದ್ಧ ಡರ್ಮಟಾಲಜಿಸ್ಟ್ ಡಾನಾ ಸ್ಟಿರನ್ ಹೀಗೆ ಹೇಳುತ್ತಾರೆ, ``ಉಗುರು ಒಂದು ಮೃತ ಕೆರ್ಯಾಟಿನ್ ಸೆಲ್ ಆಗಿದೆ. ಅವು ಆರೋಗ್ಯವಾಗಿದ್ದರೆ ಮತ್ತು ನೇಲ್ ಪಾಲಿಶ್ ರಿಮೂವರ್‌ನಲ್ಲಿ ಉಂಟಾಗುವ ಅಸಿಟೋನ್ ಉಗುರುಗಳ ಮೇಲೆ ಪ್ರಭಾವ ಬೀರದಿದ್ದರೆ ನಾವು ನೇಲ್ ಪಾಲಿಶ್‌ನ್ನು ನಿಯಮಿತವಾಗಿ ಉಗುರಿನ ಮೇಲೆ ಹಾಕುತ್ತಿರಬಹುದು. ಗಾಢ ಬಣ್ಣದ ನೇಲ್ ಪಾಲಿಶ್‌ನ್ನು ಉಗುರಿನ ಮೇಲೆ ಒಂದೇ ಸಮನೆ ಹಚ್ಚುತ್ತಿದ್ದರೆ, ಹಲವು ಬಾರಿ ಸಣ್ಣಪುಟ್ಟ ಕೆಂಪು ಗುರುತುಗಳಾಗುತ್ತವೆ. ಅದರಿಂದ ಉಗುರು ಕುರೂಪಿಯಾಗಿ ಕಾಣುತ್ತದೆ. ಇಂತಹ ಗಾಢ ಬಣ್ಣ ವಿಶೇಷವಾಗಿ ಕೆಂಪು ಮತ್ತು ತೀಕ್ಷ್ಣ ಬದನೆ ಬಣ್ಣದಲ್ಲಿರುವ ಪಿಗ್ಮೆಂಟ್ಸ್ ಹೆಚ್ಚಳದಿಂದ ಉಂಟಾಗುತ್ತದೆ. ಪಿಗ್ಮೆಂಟ್ಸ್ ಹೆಚ್ಚಾಗುವುದರಿಂದ ಒಮ್ಮೊಮ್ಮೆ ಉಗುರಿನ ಬಣ್ಣ ಹಾಳಾಗುತ್ತದೆ. ಆದ್ದರಿಂದ ನೇಲ್ ಪಾಲಿಶ್ ಹಚ್ಚು ಮೊದಲು ಒಂದು ಸಾದಾ ಕೋಟ್ ಹಾಕಿಕೊಳ್ಳಬೇಕು.
ಕ್ಯುಟಿಕ್ಸ್ ಕತ್ತರಿಸಬಾರದು. ಹೌದು, ಈ ಮಾತಿನಲ್ಲೂ ಕೊಂಚ ಸತ್ಯವಿದೆ. ಮೆನಿಕ್ಯೂರ್ ಮಾಡಿಸುವಾಗ ಈ ಕ್ಯುಟಿಕಲ್ಸ್ ನ್ನು ನಿಧಾನವಾಗಿ ಹಿಂದಕ್ಕೆ ತಳ್ಳಬೇಕು. ಹೀಗೆ ಮಾಡುವುದು ಉತ್ತಮವೆಂದು ಬ್ಯೂಟೀಶಿಯನ್ನರು ಹೇಳುತ್ತಾರೆ. ಕತ್ತರಿಸುವುದರಿಂದ ಉಗುರಿನ ನಾಲ್ಕೂ ಕಡೆ ಕೆಂಪಾಗುವ ಭಯ ಇದೆ. ಅದರಿಂದ ಊತ ಹೆಚ್ಚಾಗಬಹುದು ಹಾಗೂ ನಿಧಾನವಾಗಿ ಸೋಂಕು ಉಂಟಾಗುತ್ತದೆ.
ಕೈಗಳು ತಾರುಣ್ಯ ಪೂರಿತವಾಗಿರಲಿ
ತೆಳುಬಣ್ಣದ ನೇಲ್ ಪಾಲಿಶ್ ಕೈಗಳ ವಯಸ್ಸನ್ನು ಮುಚ್ಚಿಡುತ್ತದೆ. ನಿಮ್ಮ ಕೈಗಳ ವಯಸ್ಸನ್ನು ಮುಚ್ಚಿಡಲು ತೆಳುಬಣ್ಣದ ನಿಮಗಿಷ್ಟವಾದ ಮ್ಯಾಚಿಂಗ್ ನೇಲ್ ಪಾಲಿಶ್ ಹಚ್ಚಿ. ಅದರಿಂದ ಕೈಗಳು ತಾರುಣ್ಯವಾಗಿ ಕಾಣುತ್ತದೆ.
ನೇಲ್ ಪಾಲಿಶ್ ಫ್ರಿಜ್‌ನಲ್ಲಿಡುವುದು ಸರಿಯಲ್ಲ. ಇದು ಮಿಥ್ಯೆ. ಹೊರಗಿನ ಬಿಸಿಲಿನಿಂದ ನೇಲ್ ಪಾಲಿಶ್‌ನ ಮುಖ್ಯ ಅಂಶವಾದ ವೆಕ್ವೇರ್ ಒಣಗಿ ಅಂಟಂಟಾಗುತ್ತದೆ. ಫ್ರಿಜ್‌ನಲ್ಲಿ ಇಡುವುದರಿಂದ ನೇಲ್ ಪಾಲಿಶ್ ಒಣಗುವುದಿಲ್ಲ. ಬಹಳ ದಿನಗಳವರೆಗೆ ಇರುತ್ತದೆ.
ನೇಲ್ ಪಾಲಿಶ್ ಒಣಗಿದ ನಂತರ ಅದರ ಮೇಲ್ಮೈ ಎಷ್ಟು ಹಾರ್ಡ್ ಆಗುತ್ತದೆಯೆಂದರೆ, ಅದನ್ನು ತೆಗೆಯಲು 15 ನಿಮಿಷಗಳವರೆಗೆ ಅಸಿಟೋನ್‌ನಲ್ಲಿ ನೆನೆಸಿಡುತ್ತಾರೆ.
ಅಲ್ಟ್ರಾವಯ್ಲೆಟ್ ಕಿರಣಗಳು ತ್ವಚೆಯನ್ನು ಪ್ರಭಾವಿತಗೊಳಿಸುತ್ತವೆ ಎಂಬುದರ ಬಗ್ಗೆ ವಿವಾದವಿದೆ. ಆದರೆ ನೇಲ್ ಪಾಲಿಶ್ ಇಷ್ಟು ದಿನಗಳವರೆಗೆ (3-4 ತಿಂಗಳು) ಅಂಟಿಕೊಂಡಿದ್ದರೆ, ಉಗುರಿನ ಬಣ್ಣ ಖಂಡಿತಾ ಪ್ರಭಾವಿತಗೊಳಿಸುತ್ತದೆ. ಜೆಲ್ ಮೆನಿಕ್ಯೂರ್‌ಮಾಡಿಸುವಾಗ ಉಗುರಿನ ಮೇಲ್ಮೈ ತೆಳ್ಳಗಾಗುತ್ತದೆ. ಅದರಿಂದ ಉಗುರು ಬೇಗನೆ ಮುರಿಯುತ್ತದೆ ಅಥವಾ ಮಧ್ಯದಲ್ಲಿ ಬಿರುಕುಗಳಾಗುತ್ತವೆಂದು ಒಬ್ಬ ಡರ್ಮಟಾಲಜಿಸ್ಟ್ ಹೇಳಿದರು. ಯಾವುದೇ ಆದರೂ ಅತಿಯಾದರೆ ಕೆಟ್ಟದಾಗುತ್ತದೆ.