ಒತ್ತಡ ತುಂಬಿದ ಜೀವನಶೈಲಿ ಮಹಿಳೆಯ ಆರೋಗ್ಯ ಮತ್ತು ಸೌಂದರ್ಯಕ್ಕೆ ಹಾನಿಯುಂಟು ಮಾಡುತ್ತದೆ. ಆಧುನಿಕ ಹಾಗೂ ಧಾವಂತದ ಜೀವನಶೈಲಿಯ ಪ್ರಭಾವವನ್ನು ಕಡಿಮೆಗೊಳಿಸಲು, ಮನಸ್ಸಿಗೆ ಮತ್ತು ಮೆದುಳಿಗೆ ಶಾಂತಿ ತರಲು ಹಾಗೂ ಆರೋಗ್ಯವಾಗಿರಲು ಸ್ಪಾ ಟ್ರೀಟ್‌ಮೆಂಟ್‌ ಸಹಾಯ ಮಾಡುತ್ತದೆ. ಸ್ಪಾ ಎಂದರೆ ಮಸಾಜ್‌ ಹಾಗೂ ಪ್ರಾಕೃತಿಕ ಸೌಂದರ್ಯದ ಮೇಳ. ಅದರಿಂದ ಮಾಂಸಖಂಡಗಳು ತೆರೆಯುತ್ತವೆ ಹಾಗೂ ತ್ವಚೆ ಒಳಗಿನಿಂದಲೇ ಹೊಳೆಯುತ್ತದೆ.

ವಾತಾವರಣದಲ್ಲಿ ಉಂಟಾಗುವ ಬದಲಾವಣೆಯೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಚಳಿಗಾಲದಲ್ಲಿ ಆರ್ದ್ರತೆಯ ಕೊರತೆಯಿಂದಾಗಿ ತ್ವಚೆ ಶುಷ್ಕವಾಗುತ್ತದೆ. ನೀವು ಆಗ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅದು ಮಾಮೂಲಿ. ಆಗ ಮನೆಯೊಳಗಿನ ಉಷ್ಣತೆ ತ್ವಚೆಯ ಪ್ರಾಕೃತಿಕ ಆರ್ದ್ರತೆಯನ್ನು ಹೀರಿ ಅದನ್ನು ಶುಷ್ಕಗೊಳಿಸುತ್ತದೆ.

ಆದರೆ ಈಗ ಚಿಂತಿಸುವ ಅಗತ್ಯವಿಲ್ಲ. ಚಳಿಗಾಲದಲ್ಲೂ ನಿಮ್ಮ ಹೊಳೆಯುವ ತ್ವಚೆಯನ್ನು ಆರೋಗ್ಯವಾಗಿಡಲು ಸ್ಪಾದ ಕೆಲವು ಪಾರಂಪರಿಕ ವಿಧಾನಗಳಿದ್ದು, ಅವನ್ನು ಮನೆಯಲ್ಲೇ ಮಾಡಿಕೊಳ್ಳಬಹುದು.

ದೇಹ ಮತ್ತು ಮುಖಕ್ಕೆ ಸೋಪ್‌ ಹಚ್ಚಬೇಡಿ

ಸೋಪ್‌ನಲ್ಲಿರುವ ರಾಸಾಯನಿಕಗಳು ಮುಖದ ಧೂಳು ಕಣಗಳ ಜೊತೆಗೆ ಅದರ ನುಣುಪುತನವನ್ನು ದೂರ ಮಾಡಿಬಿಡುತ್ತದೆ. ತ್ವಚೆಗೆ ಪ್ರಾಕೃತಿಕ ರೂಪದಿಂದಲೇ ಒಂದು ಸುರಕ್ಷಾತ್ಮಕ ತೈಲ ಪದರದ ಅಗತ್ಯವಿದೆ. ವಿಶೇಷವಾಗಿ ಚಳಿಗಾಲದಲ್ಲಿ. ಸೋಪ್ ಉಪಯೋಗಿಸುವುದೆಂದರೆ ನಿಮ್ಮ ತ್ವಚೆಯ ಪ್ರಾಕೃತಿಕ ಆರ್ದ್ರತೆಯನ್ನು ಕಳೆದುಕೊಳ್ಳುವುದಾಗಿದೆ. ಈ ದಿನಗಳಲ್ಲಿ ಸೋಪಿನ ಬದಲು ಮೃದುವಾದ ಕ್ಲೆನ್ಸಿಂಗ್‌ ಲೋಶನ್‌ ಅಥವಾ ಕ್ಲೆನ್ಸಿಂಗ್‌ ಕ್ರೀಂ ಉಪಯೋಗಿಸಿ.

ಸ್ನಾನದ ನಂತರ ತ್ವಚೆಯ ಪೋಷಣೆಗೆ ಮಾಯಿಶ್ಚರೈಸರ್‌ ಅಗತ್ಯವಾಗಿ ಹಚ್ಚಿ. ಜೊಜೊಬಾ ತೈಲ, ಶಿಯಾ ಬಟರ್‌ ಅಥವಾ ಕೊಕೊಲಾ ಬಟರ್‌ ಆಧಾರಿತ ಮಾಯಿಶ್ಚರೈಸರ್‌ ಉತ್ತಮವಾಗಿ ಕೆಲಸ ಮಾಡುತ್ತದೆ.

ಮೃತಕೋಶಗಳನ್ನು ನಿವಾರಿಸಿ

ತ್ವಚೆಯ ಮೃತಕೋಶಗಳಿರುವ ಮೇಲ್ಮೈ ಪದರವನ್ನು ತೆಗೆಯುವುದು ಬಹಳ ಅಗತ್ಯ. ನಮ್ಮ ತ್ವಚೆ ಶುಷ್ಕಗೊಂಡಾಗ ನಾವು ಸಾಮಾನ್ಯವಾಗಿ ದಪ್ಪಗೆ ಕ್ರೀಂ ಹಚ್ಚಿ ಅದನ್ನು ಸಮತೋಲನ ಮಾಡಲು ಪ್ರಯತ್ನಿಸುತ್ತೇವೆ. ಶುಷ್ಕ ತ್ವಚೆಯೆಂದರೆ ನಿಮ್ಮಲ್ಲಿ ಶುಷ್ಕ ತ್ವಚೆಯ ಕೋಶಗಳು ಉಂಟಾಗುತ್ತಿವೆ ಎಂದರ್ಥ. ಆದ್ದರಿಂದ ವಾರಕ್ಕೊಮ್ಮೆ ನಿಮ್ಮ ಶರೀರದ ಮೇಲಿನ ಪದರವನ್ನು ತೆಗೆಯುವುದು ಬಹಳ ಅಗತ್ಯ. ನಂತರ ಮಾಯಿಶ್ಚರೈಸರ್‌ ಹಚ್ಚಿ.

ಚೆನ್ನಾಗಿ ಮಾಯಿಶ್ಚರೈಸ್‌ ಮಾಡಿ

ಚಳಿಗಾಲದಲ್ಲಿ ತ್ವಚೆಯನ್ನು ರಕ್ಷಿಸಲು ಮಾಯಿಶ್ಚರೈಸರ್‌ನಿಂದ ತ್ವಚೆಗೆ ಚೆನ್ನಾಗಿ ಮಸಾಜ್‌ ಮಾಡಬೇಕು. ಶೀತ ಗಾಳಿ ನಿಮ್ಮ ತ್ವಚೆಯನ್ನು ತನ್ನ ವೇಗಕ್ಕಿಂತ ಹೆಚ್ಚು ವೇಗವಾಗಿ ಶುಷ್ಕಗೊಳಿಸುತ್ತದೆ. ಹೀಗಾಗಿ ನಿಮ್ಮ ತ್ವಚೆಯನ್ನು ಅಗತ್ಯವಾದ ಅಂಶಗಳಿಂದ ಸುರಕ್ಷಿತಗೊಳಿಸಬೇಕು. ಅದು ತ್ವಚೆಯ ಪದರದ ಕೆಳಗೆ ಆರ್ದ್ರತೆ ಉಳಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಶೀತಗಾಳಿಯನ್ನು ಪ್ರತಿಬಂಧಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ, ಬೇಸಿಗೆಯಲ್ಲಿ ಉಪಯೋಗಿಸುವ ಮಾಯಿಶ್ಚರೈಸರ್‌ಗಿಂತ ಅಧಿಕ ದಟ್ಟವಾದ ಮಾಯಿಶ್ಚರೈಸರ್‌ ಉಪಯೋಗಿಸಿ. ಅದನ್ನು ಇಡೀ ಮುಖದ ಮೇಲೆ ಹಚ್ಚುವುದರೊಂದಿಗೆ ಹೊರಗಿನ ತ್ವಚೆಯನ್ನು ಸ್ವಚ್ಛಗೊಳಿಸಿದ ನಂತರ ಮನೆಯಲ್ಲಿ ತಯಾರಿಸಿದ ಫೇಸ್‌ ಪ್ಯಾಕ್‌ ಹಚ್ಚಿ. ಅದಕ್ಕೆ 1 ದೊಡ್ಡ ಚಮಚ ಬಾದಾಮಿ ಎಣ್ಣೆ ಮತ್ತು 2 ತೊಟ್ಟು ಪಚೌಲಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ. ಆರೋಗ್ಯಕರ ನಿದ್ದೆ ಪಡೆಯಲು ದಿನ ರಾತ್ರಿ ಮಲಗುವ ಮೊದಲು ಇದನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ. ರಾತ್ರಿಯಿಡೀ ಹಾಗೇ ಬಿಡಿ. ಬೆಳಗ್ಗೆ ಬಿಸಿನೀರಿನಲ್ಲಿ ತೊಳೆಯಿರಿ ಮತ್ತು ತಣ್ಣೀರನ್ನು ಹಗುರವಾಗಿ ಸಿಂಪಡಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ