ತಮ್ಮ ಆಹಾರ, ಪೋಷಾಕು ಮತ್ತು ದೇಶದ ಭೌಗೋಳಿಕ ಪರಿಸ್ಥಿತಿಯ ಕಾರಣದಿಂದ ಬಹಳಷ್ಟು ಮಹಿಳೆಯರು ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ತಮ್ಮ ಗಂಡಂದಿರಿಗಿಂತ ದೊಡ್ಡವರೆಂಬಂತೆ ಕಂಡುಬರುತ್ತಾರೆ. ನೀವು ಕೂಡ ನಿಮ್ಮ ಪತಿಗಿಂತ ದೊಡ್ಡವಳಂತೆ ಕಂಡುಬರುತ್ತಿದ್ದೀರಾ? ಜನರು ನಿಮ್ಮನ್ನು ಆಂಟಿ ಎಂದೂ ಕರೆಯುತ್ತಾರೆಯೇ? `ಹೌದು' ಎಂದಾದಲ್ಲಿ ನಿರಾಶರಾಗಬೇಕಾದ ಅಗತ್ಯವಿಲ್ಲ. ಕೆಳಕಂಡ ಟಿಪ್ಸ್ ಅನುಸರಿಸಿ ಹಾಗೂ ಸದಾ ಯೌವನದಿಂದ ನಳನಳಿಸುವಂತೆ ಕಂಡುಬನ್ನಿ.

ವ್ಯಾಯಾಮ ಮಾಡಿ

ಹೆರಿಗೆಯ ಬಳಿಕ ಸಾಮಾನ್ಯವಾಗಿ ಮಹಿಳೆಯರು ಪಾರಂಪರಿಕ ಆಹಾರ ಮತ್ತು ದೈಹಿಕ ಶ್ರಮದ ಕೊರತೆಯಿಂದ ಸ್ವಲ್ಪ ದಪ್ಪಗಾಗುತ್ತಾರೆ. ದಪ್ಪ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ವಯೋಮಿತಿಗಿಂತ ಸ್ವಲ್ಪ ಹೆಚ್ಚಿನ ವಯಸ್ಸಿನವರಂತೆ ಕಂಡುಬರುತ್ತಾರೆ. ಹೀಗಾಗಿ ನಿಯಮಿತ ವ್ಯಾಯಾಮ ಮಾಡಿ.

ಕೂದಲು ಕಪ್ಪಗಿರಲಿ

ಬಿಳಿ ಕೂದಲು ವಯಸ್ಸನ್ನು ಹೆಚ್ಚಿರುವಂತೆ ತೋರಿಸುತ್ತವೆ. ಹೀಗಾಗಿ ಕಾಲಕಾಲಕ್ಕೆ ಹೇರ್‌ ಕಲರ್‌ ಅಥವಾ ಮೆಹಂದಿ ಹಚ್ಚುತ್ತಾ ಇರಿ. ಕೂದಲು ವ್ಯಕ್ತಿಯೊಬ್ಬರಿಗೆ ವ್ಯಕ್ತಿತ್ವವನ್ನೂ ಕೊಡುತ್ತವೆ ಹಾಗೂ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳುಗೆಡಹುತ್ತವೆ. ಹೀಗಾಗಿ ಕೂದಲಿನ ಬಗ್ಗೆ ವಿಶೇಷ ಗಮನ ಕೊಡಿ.

ಕೇಶ ವಿನ್ಯಾಸ

ಹೇರ್‌ ಸ್ಟೈಲ್ ವಯಸ್ಸನ್ನು ಹೆಚ್ಚಿಸುವಂತೆ ಅಥವಾ ಕಡಿಮೆ ಇರುವಂತೆ ತೋರಿಸುತ್ತವೆ. ನಿಮ್ಮ ಮುಖ ಲಕ್ಷಣಕ್ಕನುಗುಣವಾಗಿ ಕೂದಲಿನ ಸ್ಟೈಲ್ ‌ಇರಲಿ. ಅಂದರೆ ಹೈಪೋನಿ ಅಥವಾ ಯಾವುದೇ ಬೇರೆ ಸ್ಟೈಲ್ ಮಾಡಿಕೊಳ್ಳಿ.

ಮೇಕಪ್‌ ಸಮರ್ಪಕವಾಗಿರಲಿ

ಗಾಢ ಮೇಕಪ್‌ ಮಾಡಿಕೊಳ್ಳುವುದರಿಂದ ಮುಖದ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಹೀಗಾಗಿ ನಿಮ್ಮ ಮೇಕಪ್‌ಯಾವಾಗಲೂ ತಿಳಿಯಾಗಿರಲಿ.

ಬೊಟ್ಟಿನ ಆಕಾರ

ದೊಡ್ಡ ಬೊಟ್ಟು ಇಡುವುದರಿಂದ ನಿಮ್ಮ ವಯಸ್ಸು ಹೆಚ್ಚಾದಂತೆ ಕಂಡುಬರುತ್ತದೆ. ಕೆಲವರಿಗೆ ಅದು ಹೆಚ್ಚು ಒಪ್ಪುತ್ತದೆ. ಹಾಗೆ ಇಟ್ಟುಕೊಂಡೂ ಕೂಡ ಕಡಿಮೆ ವಯಸ್ಸಿನವರಂತೆ ಕಂಡುಬರುತ್ತಿದ್ದರೆ ಇಟ್ಟುಕೊಳ್ಳಿ.

ಹೈಹೀಲ್ ‌ಹೆಚ್ಚು ಎತ್ತರದ ಹಿಮ್ಮಡಿ ಇರುವ ಸ್ಯಾಂಡಲ್ ಗಳನ್ನು ಧರಿಸಬೇಡಿ. ಪತಿಯ ಎತ್ತರಕ್ಕೆ ತಕ್ಕಂತೆ ನಿಮ್ಮ ಎತ್ತರ ಇದ್ದಲ್ಲಿ ಹೈಹೀಲ್ ‌ಧರಿಸಬೇಡಿ.

ಒತ್ತಡಕ್ಕೆ ಗುಡ್‌ ಬೈ ಆಧುನಿಕ ಜೀವನಶೈಲಿಯಲ್ಲಿ ಒತ್ತಡ ಒಂದು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಒತ್ತಡದ ಕಾರಣದಿಂದಾಗಿ ನಮ್ಮ ದೇಹ ವಯಸ್ಸಾದವರಂತೆ ಕಂಡುಬರುತ್ತದೆ. ಹೀಗಾಗಿ ಯಾವುದೇ ವಿಷಯದ ಬಗ್ಗೆ ಒತ್ತಡಗ್ರಸ್ಥರಾಗಬೇಡಿ. ಜೀವನವನ್ನು ಸಹಜ ಮತ್ತು ಸರಳಗೊಳಿಸಿ.

ಸೂಕ್ತ ಬಣ್ಣ ಆರಿಸಿ

ಮಾಸಲು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಮಾಸಲು ಬಣ್ಣದ ಬಟ್ಟೆಗಳಲ್ಲಿ ನಿಮ್ಮ ವ್ಯಕ್ತಿತ್ವ ಮಾಸಲು ಎಂಬಂತೆ ಗೋಚರಿಸುತ್ತದೆ. ಆದರೆ ಅಷ್ಟೇ ಪ್ರಖರ, ಬಟ್ಟೆಗಳನ್ನು ಕೂಡ ಧರಿಸಬೇಡಿ. ಅದೂ ಕೂಡ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ಕೊಡಲಿಕ್ಕಿಲ್ಲ.

ನಿಮ್ಮ ಬಗ್ಗೆ ಕಾಳಜಿ ಇರಲಿ

ಅತಿಯಾದ ಉಷ್ಣ ವಾತಾವರಣ ಮುಖದಲ್ಲಿ ಸುಕ್ಕುಗಳು, ಕಪ್ಪು ವರ್ತುಲಗಳನ್ನು ಉಂಟು ಮಾಡಬಹುದು. ಹೀಗಾಗಿ ನಿಮ್ಮದೇ ಆದ ಉಪಾಯಗಳನ್ನು ಅನುಸರಿಸಿ ಸುಂದರವಾಗಿ ಕಾಣಲು ಪ್ರಯತ್ನಿಸಿ.

ಆರೋಗ್ಯ ಭಾಗ್ಯ

ಮೇಲಿಂದ ಮೇಲೆ ಅನಾರೋಗ್ಯ ಪೀಡಿತರಾಗುವುದರಿಂದ ದಣಿವಾದವರಂತೆ, ದುರ್ಬಲವಾಗಿರುವಂತೆ ಕಂಡುಬರುತ್ತೀರಿ, ಹೀಗಾಗಿ ಆರೋಗ್ಯದ ಬಗ್ಗೆ ಗಮನವಿಡಿ.

- ಪೂರ್ಣಿಮಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ