ರಾತ್ರಿ 12 ಗಂಟೆ. ಚೆನ್ನಾಗಿ ಗೊರಕೆ ಹೊಡೆಯುತ್ತಿದ್ದ ಗಂಡನನ್ನು ತಿವಿದು ಎಬ್ಬಿಸಿದ ಮಾಧುರಿ ಕೇಳಿದಳು, “ಹಮ್ ಆಪ್ ಕೆ ಹೈ ಕೌನ್ ಚಿತ್ರದ ನಾಯಕಿ ಯಾರು?”
ಪತಿ : ಮಾಧುರಿ ದೀಕ್ಷಿತ್, ಅದರಲ್ಲಿ ಅವರಕ್ಕ ರೇಣುಕಾ.
ಪತ್ನಿ : ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದಲ್ಲಿ ನಾಯಕಿ ಕಾಜೋಲ್ ಪಾತ್ರಧಾರಿಯ ಹಸರೇನು?
ಪತಿ : ಸಿಮ್ರಾನ್
ಪತ್ನಿ : ನಮ್ಮ ಮುಂದಿನ ಫ್ಲಾಟ್‌ಗೆ ಹೊಸದಾಗಿ ಬಂದಿರುವ ನವಿವಾಹಿತ ಜೋಡಿಯಲ್ಲಿ ದಂಪತಿಗಳ ಹೆಸರೇನು?
ಪತಿ : ಗಂಡನ ಹೆಸರೇನೋ ಗೊತ್ತಿಲ್ಲ, ಹೆಂಡ್ತಿ ಮಾತ್ರ ಮಧುಮಿತಾ!
ಪತ್ನಿ : ಫ್ಲಾಟ್ 307ಗೆ ಹೊಸದಾಗಿ ಬಂದಿರುವ ನಿಶಾ ಬಾಡಿಗೆಗೆ ಬಂದು ಎಷ್ಟು ತಿಂಗಳಾಯಿತು?
ಪತಿ : 3 ತಿಂಗಳು. ಅದು ಸರಿ, ಈ ಸರಿ ರಾತ್ರಿಯಲ್ಲಿ ಇದನ್ನೆಲ್ಲ ಏಕೆ ಕೇಳ್ತಿದ್ದೀ?
ಪತ್ನಿ : ಯಾಕಂದ್ರೆ ಇವತ್ತು ನನ್ನ ಬರ್ತ್‌ಡೇ…. ನೀವು ನನ್ನನ್ನು ಕಟ್ಟಿಕೊಂಡು 10 ವರ್ಷಗಳಾಗಿವೆ…
ಹೊಸದಾಗಿ ಕೊಂಡಿದ್ದ ಟ್ರಾನ್ಸಿಸ್ಟರ್ 4 ದಿನಗಳ ನಂತರ ಹಾಡುವುದನ್ನು ನಿಲ್ಲಿಸಿದಾಗ ಬಸ್ಯಾನ ತಲೆ ಕೆಟ್ಟಿತು.
ಏನೇನೋ ಹರಸಾಹಸ ಮಾಡಿ ಅದರ ಹಿಂಭಾಗ ಬಿಚ್ಚಿ ನೋಡಿದ. ಅಲ್ಲೊಂದು ಇಲಿ ಮರಿ ಸತ್ತು ಬಿದ್ದಿತ್ತು.
“ಅಯ್ಯಯ್ಯೋ…. ಇದರ ಸಿಂಗರ್ ಸತ್ತನಲ್ಲಪ್ಪೋ!” ಎಂದು ಕಿರುಚಿದ.
ರಂಗ ಪರೀಕ್ಷೇಲಿ ಡ್ರಾಯಿಂಗ್ ಮಾಡ್ತಾ ಇದ್ದ. ಬಕೆಟ್‌ನ ಚಿತ್ರ ಬಿಡಿಸಿ 10 ಅಂಕಗಳು. ಚೊಂಬಿನ ಚಿತ್ರ ಬಿಡಿಸಿ 5 ಅಂಕ ಎಂದಿತ್ತು. ರಂಗ ಕಷ್ಟಪಟ್ಟು ಹೇಗೋ ಮಾಡಿ ಬಕೆಟ್ ಚಿತ್ರ ಬರೆದ. ಆದರೆ ತಿಪ್ಪರಾಗ ಹಾಕಿದ್ರು ಚೊಂಬು ಬಿಡಿಸೋಕೆ ಬರಲಿಲ್ಲ. ಅನ್ಯಾಯವಾಗಿ 5 ಮಾರ್ಕ್ಸ್ ಹೋಗುತ್ತೆ ಅಂತ ಹೀಗೆ ಬರೆದ :
ಬಕೆಟ್ ಬರೆಯಲಾಗಿದೆ. ಚೊಂಬನ್ನು ಬರೆದು ಬಕೆಟ್ ಒಳಗೆ ಹಾಕಲಾಗಿದೆ…..!!!
ಉತ್ತರ ಪತ್ರಿಕೆ ಮೇಷ್ಟ್ರ ಹತ್ತಿರ ಹೋಯ್ತು. ರಂಗ ಉತ್ತರ ಪತ್ರಿಕೆಯಲ್ಲಿ ಚಿತ್ರ ಬರೆದದ್ದನ್ನು ನೋಡಿ ಮೇಷ್ಟ್ರು ಹೀಗೆ ಬರೆದರು.
5 ಮಾರ್ಕ್ಸ್ ನ್ನು ಚೊಂಬಿನೊಳಗೆ ಹಾಕಾಲಾಗಿದೆ…..!!
ಗುಂಡನಿಗೆ ಬಹಳ ದಿನಗಳಿಂದ ಒಂದು ಸಮಸ್ಯೆ ಕಾಡುತ್ತಿತ್ತು. ಅವನು ಡಾಕ್ಟರ್ ಬಳಿ ಹೋಗಿ ತನ್ನ ಸಮಸ್ಯೆಯನ್ನು ಈ ರೀತಿ ಹೇಳಿಕೊಂಡ :
ಗುಂಡ : ಡಾಕ್ಟ್ರೇ ರಾತ್ರಿ ಮಲಗಿದಾಗ ಮಂಚದ ಕೆಳಗೆ ಯಾರೋ ಇದ್ದಾರೆ ಅನಿಸುತ್ತೆ, ನೋಡಿದ್ರೆ ಯಾರೂ ಇರಲ್ಲ…..
ಡಾಕ್ಟರ್ : ಇದನ್ನು ಅಂಡರ್ ಕಾಟ್ ಡಿಸಾರ್ಡರ್ ಅಂತ ಕರೀತೀವಿ. ಇದಕ್ಕೆ ಸಲ್ಯೂಷನ್ ಅಂದ್ರೆ ನೀವು ಹಲವಾರು ಸಿಟಿಂಗ್ ಬರಬೇಕಾಗುತ್ತೆ.
ಗುಂಡ : ಫೀಸ್ ಎಷ್ಟು ಡಾಕ್ಟ್ರೇ?
ಡಾಕ್ಟರ್ : ಪರ್ ಸಿಟಿಂಗ್ 500 ರೂ. ಸರಿ ಮತ್ತೆ ಬರ್ತೀನಿ ಅಂತ ಹೇಳಿ ಹೋದವನು ಬರಲೇ ಇಲ್ಲ. ಸ್ವಲ್ಪ ದಿನಗಳ ನಂತರ ದಾರಿಯಲ್ಲಿ ಡಾಕ್ಟರ್ ಮತ್ತು ಗುಂಡ ಭೇಟಿಯಾದಾಗ…..
ಡಾಕ್ಟರ್ : ಗುಂಡ ನಿನ್ನ ಸಮಸ್ಯೆ ಪರಿಹಾರಕ್ಕೆ ಮತ್ತೆ ಬರಲಿಲ್ಲ ಯಾಕೆ?
ಗುಂಡ : ಡಾಕ್ಟ್ರೇ….. ನನ್ನ ಫ್ರೆಂಡ್‌ಗೆ ಒಂದು ಕ್ವಾಟ್ರು, ದಮ್ ಬಿರಿಯಾನಿ ಕೊಡ್ಸಿದ್ದಕ್ಕೆ ಒಳ್ಳೆ ಸಜೆಷನ್ ಕೊಟ್ಟ… ಪ್ರಾಬ್ಲಂ ಸಾಲ್ವ್ ಆಯಿತು. ನಾನೇಕೆ ನಿಮಗೆ 500 ರೂ. ಕೊಟ್ಟು ನಿಮ್ಮ ಬಳಿಗೆ ಬರಬೇಕು?
ಡಾಕ್ಟರ್ : ಏನದು ಅಂತ ಸಜೆಷನ್…..?
ಗುಂಡ : ಏನಿಲ್ಲ ಮಂಚ ಮಾರಿ ಚಾಪೆ ಹಾಸ್ಕೊಂಡು ಮಲಕ್ಕೊ ಅಂದ….!!
ಬಾಸ್ : ರೋಜಾ, ಇವತ್ತು ನೀನು ನನ್ನ ಸೆಕ್ರೆಟರಿ ಆಗಿದ್ದು ಸಾರ್ಥಕವಾಯ್ತು, ಎಷ್ಟು ಬ್ಯೂಟಿಫುಲ್ ಗ್ಲಾಮರಸ್ ಆಗಿ ಕಾಣಿಸ್ತಿದ್ದೀಯಾ ಗೊತ್ತಾ ಡಿಯರ್!
ರೋಜಾ : ಥ್ಯಾಂಕ್ಸ್ ಸಾರ್.
ಬಾಸ್ : ನಿನ್ನ ಇಂದಿನ ಫ್ಯಾಷನ್ ಸುಪರ್ಬ್ ಆಗಿದೆ. ಕಂಗಳಿಗೆ ಬಳಸಿದ ಕಾಜಲ್, ಮಸ್ಕರಾ ಫೆಂಟಾಸ್ಟಿಕ್ ಆಗಿದೆ. ಬ್ಯೂಟಿಫುಲ್ ಡ್ರೆಸ್ಸಿಂಗ್ ಸೆನ್ಲ್…. ಪರ್ಫೆಕ್ಟ್ ಮ್ಯಾಚಿಂಗ್. ನನ್ನ ಹೆಂಡ್ತೀನೂ ಇದ್ದಾಳೆ ಹಸಿ ದಡ್ಡಿ….!
ರೋಜಾ : ಥಾಂಕ್ಯೂ ಸೋ ಮಚ್ ಸಾರ್. (ಅವರ ಹತ್ತಿರ ಬರುತ್ತಾ) ನೀವೂ ಬಹಳ ಹ್ಯಾಂಡ್‌ಸಂ ಆಗಿದ್ದೀರಿ ಬಿಡಿ… ವಾಟ್ ಎ ಡ್ಯಾಶಿಂಗ್ ಪರ್ಸನಾಲ್ಟಿ!
ಬಾಸ್ : ಅದು ಸರಿ ಡಿಯರ್… ಇವತ್ತು ಸಂಜೆ ನೀನು ಫ್ರೀನಾ? ಏನಾದರೂ ಬೇರೆ ಪರ್ಸನಲ್ ಕೆಲಸವಿತ್ತೇ?
ರೋಜಾ : ಅದೇನಿಲ್ಲ ಬಿಡಿ ಸಾರ್…. (ನಾಚಿ ಕೆಂಪಾಗುತ್ತಾ) ನೀವು ಕೇಳೋದು ಹೆಚ್ಚಾ…. ನಾನು ಬರೋದು ಹೆಚ್ಚಾ…. ಯಾವ ಕಡೆ ಹೋಗೋಣ ಅಂತೀರಿ….?
ಬಾಸ್ : ಎಲ್ಲಿಗೂ ಹೋಗೋ ಪ್ರೋಗ್ರಾಂ ಏನಿಲ್ಲ ಬಿಡು….. ಇದನ್ನು ತಗೋ, ನಾಳೆ ಮೀಟಿಂಗ್‌ಗೆ ಬೇಕಾದ ಮ್ಯಾಟರ್….. 40 ಪೇಜಸ್ ಇದೆ… ಎಲ್ಲಾ ಟೈಪ್ ಮಾಡಿ 4-4 ಸೆಟ್ ಪ್ರಿಂಟ್ ಔಟ್ ತೆಗೆದಿರಿಸು… ಹ್ಞಾಂ, ನಾಳೆ ಬೆಳಗ್ಗೆ ಡೈರೆಕ್ಟ್ ಆಗಿ ಬೊಕೆ ಹಿಡಿದು 7 ಗಂಟೆಗೆ ಏರ್‌ಪೋರ್ಟ್‌ಗೆ ಬಂದುಬಿಡು. ಮುಂಬೈನಿಂದ ಎಂ.ಡಿ. ಬರ್ತಿದ್ದಾರೆ. ಇಬ್ಬರೂ ಒಟ್ಟಿಗೆ ಹೋಗಿ ರಿಸೀವ್‌ಮಾಡಿಕೊಳ್ಳೋಣ……
ಬಾಲಕ ಕಿಟ್ಟಿ ಅಮ್ಮ ಅಪ್ಪನ ಮದುವೆ ಆಲ್ಬಂ ನೋಡುತ್ತಿದ್ದ.
ಕಿಟ್ಟಿ : ಅಮ್ಮ, ಈ ಫೋಟೋದಲ್ಲಿ ನಿನ್ನ ಜೊತೆ ಇದ್ದಾರಲ್ಲ…. ಇವರು ಯಾರು? ಬಹಳ ಸ್ಮಾರ್ಟ್ ಆಗಿದ್ದಾರೆ!
ಅಮ್ಮ : ಮಗು, ಅವರೇ ನಿನ್ನ ಡ್ಯಾಡಿ.
ಕಿಟ್ಟಿ : ಮತ್ತೆ ನಾವೇಕೆ ಈ ಬಾಲ್ಡ್, ಡುಮ್ಮ ಅಂಕಲ್ ಜೊತೆ ಈ ಮನೆಯಲ್ಲಿದ್ದೇವೆ? ಡ್ಯಾಡಿ ಮನೆಗೆ ಹೋಗೋಣ ಬಾ…..!
ಅಂದು ಭಾನುವಾರ ಅಂತ ನಾಣಿ ತಡವಾಗಿ ಎದ್ದಾಗ ಬೆಳಗ್ಗೆ 10 ಗಂಟೆ ಆಗಿತ್ತು.
ರತ್ನಾ : ಆಹಾ… ಪ್ರಭುಗಳು ಎದ್ದು ಬಂದಿರೋ… ಶುಭ ಸುಪ್ರಭಾತ! ಈಗ ಮೊದಲು ಏನನ್ನು ಸೇವಿಸುವಿರಿ? ಕಾಫಿ…. ಟೀ? ತಿಂಡಿಗೆ ಏನು ಮಾಡಿ ಕೊಡ್ಲಿ? ಮಸಾಲೆ ದೋಸೆ…. ಪೂರಿ ಸಾಗು? ಸ್ನಾನಕ್ಕೆ ಬಿಸಿ ನೀರು ತೋಡಿ ಒಂದಿಷ್ಟು ಗುಲಾಬಿ ದಳ, ಯೂಡಿಕೊಲೋನ್ ಬೆರೆಸಲೇ? ಈ ದಾಸಿ ಸದಾ ನಿಮ್ಮ ಸೇವೆಗಾಗಿ ಸಿದ್ಧಾಗಿದ್ದಾಳೆ…. ಏನಪ್ಪಣೆ ಮಾಡುವಿರೋ ಶಿರಸಾವಹಿಸಿ ಪರಿಪಾಲಿಸುವೆ. ಮನೆಯ ಕೆಲಸ ಪೂರ್ತಿ ಮಾಡಿ ನಿಮ್ಮ ಸೇವೆಗಾಗಿ ಸಿದ್ಧಳಾಗಿದ್ದೇನೆ. ಕಿಟ್ಟಿ ಇದನ್ನು ಮರೆಯಲು ಸಾಧ್ಯವೇ? ಮಾರನೇ ಭಾನುವಾರ ಮರೆಯದೆ ಅವನು 6 ಗಂಟೆಗೇ ಎದ್ದು ಕುಳಿತು, ಇವತ್ತು ಮಂಗಳಾರತಿ ತಪ್ಪಿಸಿಕೊಂಡೆ ಎಂದು ಧನ್ಯತಾ ಭಾವ ತಾಳುತ್ತಿದ್ದ. ಅಷ್ಟರಲ್ಲಿ….
ರತ್ನಾ : ಏನ್ರಿ ಇದು ನಿಮ್ಮ ವರಾತ… ಇಷ್ಟು ಚಳಿಯಲ್ಲಿ ಎದ್ದು ಕುಳಿತು ನನಗೂ ನಿದ್ದೆ ಇಲ್ಲದಂತೆ ಮಾಡಿದ್ದೀರಿ. ಯಾವ ಊರು ಸುತ್ತು ಪ್ರೋಗ್ರಾಂ ನಿಮ್ಮದು? ನಿಮ್ಮ ರಂಗುರಂಗಿನ ಕಾರ್ಯಕ್ರಮಕ್ಕಾಗಿ ಇಡೀ ದಿನ ಕಾಯುತ್ತಿದೆ…? ಈಗ ತೆಪ್ಪಗೆ ಬಿದ್ದುಕೊಳ್ಳಿ… ಮನೆಯಲ್ಲಿ ಒಂದು ಕಡ್ಡಿ ಇಲ್ಲಿಂದ ಅಲ್ಲಿಗೆ ಎತ್ತಿಡಲ್ಲ. ದೊಡ್ಡದಾಗಿ ಎದ್ದುಬಿಟ್ರು…. ಆ ಕಂಬಳಿ ಇಲ್ಲಿ ಕೊಡಿ…. ಸುಮ್ಮನೆ ಮಲಗಿ……
ಹಲವು ವರ್ಷಗಳ ಹಿಂದಿನ ಮಾತು. ಆಗ ಒಬ್ಬ ರಾಜ ತನ್ನ ಸಭೆಯಲ್ಲಿ ಹೀಗೊಂದು ಆದೇಶ ಹೊರಡಿಸಿದ ಈ ಸಭೆಯಲ್ಲಿರುವ ಎಲ್ಲಾ ವಿವಾಹಿತ ಗಂಡಸರೂ ಒಂದು ಸಾಲಿನಲ್ಲಿ, ಅವಿವಾಹಿತರು ಮತ್ತೊಂದು ಸಾಲಲ್ಲಿ ನಿಂತುಕೊಳ್ಳಿ. ಯಾರು ತಮ್ಮ ಪತ್ನಿಗೆ ಹೆದರುತ್ತಾರೋ ಅವರು ಎರಡೂ ಕೈ ಮೇಲೆತ್ತಿ, ಹೆದರದವರು ಅದೇ ಸಾಲಲ್ಲಿ ಕೈ ಮೇಲೆತ್ತದೆ ನಿಂತುಕೊಳ್ಳಿ!
ಹೆಸರಿಗೆ 4-5 ಜನ ಅವಿವಾಹಿತರು ಬೇರೆ ಸಾಲಿನಲ್ಲಿ ಹಾಗೂ ವಿವಾಹಿತರೆಲ್ಲ ತಮ್ಮ ಎರಡೂ ಕೈ ಮೇಲೆತ್ತಿ ಒಂದು ಸಾಲಿನಲ್ಲಿ ನಿಂತಿದ್ದರು.
ಆದರೆ ಗುಂಡಯ್ಯ ಮಾತ್ರ ತನ್ನ ಕುರ್ಚಿ ಬಿಡದೆ ಅಲ್ಲೇ ಕುಳಿತಿದ್ದ.
ರಾಜ : ಶಭಾಷ್! ಗಂಡಸು ಅಂದ್ರೆ ನೀನೇ ಕಣಯ್ಯ…. ಆದರೆ ನೀನು ನಿನ್ನ ಪತ್ನಿಗೆ ಏಕೆ ಹೆದರುವುದಿಲ್ಲ ಅಂತ ವಿವರವಾಗಿ ತಿಳಿಸುವವನಾಗು.
ಗುಂಡಯ್ಯ : ಸ್ವಾಮಿ, ನೀವು ಹೇಳಿದ್ದೇನೂ ಅರ್ಥ ಆಗಲಿಲ್ಲ. ನನ್ನ ಪತ್ನಿ ಈ ಕುರ್ಚಿಯಲ್ಲಿ ಅಲುಗಾಡದೆ ಹೀಗೇ ಕುಳಿತಿರಬೇಕು ಅಂತ ಆಜ್ಞೆ ಮಾಡಿದ್ದಾಳೆ. ಅವಳು ಅಪ್ಪಣೆ ಕೊಡಿಸುವವರೆಗೂ ನಾನಂತೂ ಯಾವ ಸಾಲಿನಲ್ಲೂ ನಿಲ್ಲುವವನಲ್ಲ