ರಾತ್ರಿ 12 ಗಂಟೆ. ಚೆನ್ನಾಗಿ ಗೊರಕೆ ಹೊಡೆಯುತ್ತಿದ್ದ ಗಂಡನನ್ನು ತಿವಿದು ಎಬ್ಬಿಸಿದ ಮಾಧುರಿ ಕೇಳಿದಳು, ``ಹಮ್ ಆಪ್‌ ಕೆ ಹೈ ಕೌನ್‌ ಚಿತ್ರದ ನಾಯಕಿ ಯಾರು?''

ಪತಿ : ಮಾಧುರಿ ದೀಕ್ಷಿತ್‌, ಅದರಲ್ಲಿ ಅವರಕ್ಕ ರೇಣುಕಾ.

ಪತ್ನಿ : ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದಲ್ಲಿ ನಾಯಕಿ ಕಾಜೋಲ್ ‌ಪಾತ್ರಧಾರಿಯ ಹಸರೇನು?

ಪತಿ : ಸಿಮ್ರಾನ್‌

ಪತ್ನಿ : ನಮ್ಮ ಮುಂದಿನ ಫ್ಲಾಟ್‌ಗೆ ಹೊಸದಾಗಿ ಬಂದಿರುವ ನವಿವಾಹಿತ ಜೋಡಿಯಲ್ಲಿ ದಂಪತಿಗಳ ಹೆಸರೇನು?

ಪತಿ : ಗಂಡನ ಹೆಸರೇನೋ ಗೊತ್ತಿಲ್ಲ, ಹೆಂಡ್ತಿ ಮಾತ್ರ ಮಧುಮಿತಾ!

ಪತ್ನಿ : ಫ್ಲಾಟ್‌ 307ಗೆ ಹೊಸದಾಗಿ ಬಂದಿರುವ ನಿಶಾ ಬಾಡಿಗೆಗೆ ಬಂದು ಎಷ್ಟು ತಿಂಗಳಾಯಿತು?

ಪತಿ : 3 ತಿಂಗಳು. ಅದು ಸರಿ, ಈ ಸರಿ ರಾತ್ರಿಯಲ್ಲಿ ಇದನ್ನೆಲ್ಲ ಏಕೆ ಕೇಳ್ತಿದ್ದೀ?

ಪತ್ನಿ : ಯಾಕಂದ್ರೆ ಇವತ್ತು ನನ್ನ ಬರ್ತ್‌ಡೇ.... ನೀವು ನನ್ನನ್ನು ಕಟ್ಟಿಕೊಂಡು 10 ವರ್ಷಗಳಾಗಿವೆ...

ಹೊಸದಾಗಿ ಕೊಂಡಿದ್ದ ಟ್ರಾನ್ಸಿಸ್ಟರ್‌ 4 ದಿನಗಳ ನಂತರ ಹಾಡುವುದನ್ನು ನಿಲ್ಲಿಸಿದಾಗ ಬಸ್ಯಾನ ತಲೆ ಕೆಟ್ಟಿತು.

ಏನೇನೋ ಹರಸಾಹಸ ಮಾಡಿ ಅದರ ಹಿಂಭಾಗ ಬಿಚ್ಚಿ ನೋಡಿದ. ಅಲ್ಲೊಂದು ಇಲಿ ಮರಿ ಸತ್ತು ಬಿದ್ದಿತ್ತು.

``ಅಯ್ಯಯ್ಯೋ.... ಇದರ ಸಿಂಗರ್‌ ಸತ್ತನಲ್ಲಪ್ಪೋ!'' ಎಂದು ಕಿರುಚಿದ.

ರಂಗ ಪರೀಕ್ಷೇಲಿ ಡ್ರಾಯಿಂಗ್‌ ಮಾಡ್ತಾ ಇದ್ದ. ಬಕೆಟ್‌ನ ಚಿತ್ರ ಬಿಡಿಸಿ 10 ಅಂಕಗಳು. ಚೊಂಬಿನ ಚಿತ್ರ ಬಿಡಿಸಿ 5 ಅಂಕ ಎಂದಿತ್ತು. ರಂಗ ಕಷ್ಟಪಟ್ಟು ಹೇಗೋ ಮಾಡಿ ಬಕೆಟ್‌ ಚಿತ್ರ ಬರೆದ. ಆದರೆ ತಿಪ್ಪರಾಗ ಹಾಕಿದ್ರು ಚೊಂಬು ಬಿಡಿಸೋಕೆ ಬರಲಿಲ್ಲ. ಅನ್ಯಾಯವಾಗಿ 5 ಮಾರ್ಕ್ಸ್ ಹೋಗುತ್ತೆ ಅಂತ ಹೀಗೆ ಬರೆದ :

ಬಕೆಟ್‌ ಬರೆಯಲಾಗಿದೆ. ಚೊಂಬನ್ನು ಬರೆದು ಬಕೆಟ್‌ ಒಳಗೆ ಹಾಕಲಾಗಿದೆ.....!!!

ಉತ್ತರ ಪತ್ರಿಕೆ ಮೇಷ್ಟ್ರ ಹತ್ತಿರ ಹೋಯ್ತು. ರಂಗ ಉತ್ತರ ಪತ್ರಿಕೆಯಲ್ಲಿ ಚಿತ್ರ ಬರೆದದ್ದನ್ನು ನೋಡಿ ಮೇಷ್ಟ್ರು ಹೀಗೆ ಬರೆದರು.

5 ಮಾರ್ಕ್ಸ್ ನ್ನು ಚೊಂಬಿನೊಳಗೆ ಹಾಕಾಲಾಗಿದೆ.....!!

ಗುಂಡನಿಗೆ ಬಹಳ ದಿನಗಳಿಂದ ಒಂದು ಸಮಸ್ಯೆ ಕಾಡುತ್ತಿತ್ತು. ಅವನು ಡಾಕ್ಟರ್‌ ಬಳಿ ಹೋಗಿ ತನ್ನ ಸಮಸ್ಯೆಯನ್ನು ಈ ರೀತಿ ಹೇಳಿಕೊಂಡ :

ಗುಂಡ : ಡಾಕ್ಟ್ರೇ ರಾತ್ರಿ ಮಲಗಿದಾಗ ಮಂಚದ ಕೆಳಗೆ ಯಾರೋ ಇದ್ದಾರೆ ಅನಿಸುತ್ತೆ, ನೋಡಿದ್ರೆ ಯಾರೂ ಇರಲ್ಲ.....

ಡಾಕ್ಟರ್‌ : ಇದನ್ನು ಅಂಡರ್‌ ಕಾಟ್‌ ಡಿಸಾರ್ಡರ್‌ ಅಂತ ಕರೀತೀವಿ. ಇದಕ್ಕೆ ಸಲ್ಯೂಷನ್‌ ಅಂದ್ರೆ ನೀವು ಹಲವಾರು ಸಿಟಿಂಗ್ ಬರಬೇಕಾಗುತ್ತೆ.

ಗುಂಡ : ಫೀಸ್‌ ಎಷ್ಟು ಡಾಕ್ಟ್ರೇ?

ಡಾಕ್ಟರ್‌ : ಪರ್‌ ಸಿಟಿಂಗ್‌ 500 ರೂ. ಸರಿ ಮತ್ತೆ ಬರ್ತೀನಿ ಅಂತ ಹೇಳಿ ಹೋದವನು ಬರಲೇ ಇಲ್ಲ. ಸ್ವಲ್ಪ ದಿನಗಳ ನಂತರ ದಾರಿಯಲ್ಲಿ ಡಾಕ್ಟರ್‌ ಮತ್ತು ಗುಂಡ ಭೇಟಿಯಾದಾಗ.....

ಡಾಕ್ಟರ್‌ : ಗುಂಡ ನಿನ್ನ ಸಮಸ್ಯೆ ಪರಿಹಾರಕ್ಕೆ ಮತ್ತೆ ಬರಲಿಲ್ಲ ಯಾಕೆ?

ಗುಂಡ : ಡಾಕ್ಟ್ರೇ..... ನನ್ನ ಫ್ರೆಂಡ್‌ಗೆ ಒಂದು ಕ್ವಾಟ್ರು, ದಮ್ ಬಿರಿಯಾನಿ ಕೊಡ್ಸಿದ್ದಕ್ಕೆ ಒಳ್ಳೆ ಸಜೆಷನ್‌ ಕೊಟ್ಟ... ಪ್ರಾಬ್ಲಂ ಸಾಲ್ವ್ ಆಯಿತು. ನಾನೇಕೆ ನಿಮಗೆ 500 ರೂ. ಕೊಟ್ಟು ನಿಮ್ಮ ಬಳಿಗೆ ಬರಬೇಕು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ