ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೈಟೆಕ್ ಆಗುವುದು ಅತ್ಯವಶ್ಯ. ನೀವು ಬಳಸುವ ಗ್ಯಾಜೆಟ್ಸ್ ಮನೆಯಲ್ಲಿ ಬಳಸುವುದಾಗಿರಬಹುದು ಅಥವಾ ವೈಯಕ್ತಿಕ ಕಾಳಜಿ ವಹಿಸುವಂಥೆ ಆಗಿರಬಹುದು. ಅವು ಜೀವನದಲ್ಲಿ ಬಹಳಷ್ಟು ಬದಲಾವಣೆ ತರುತ್ತವೆ. ಈ ಗ್ಯಾಜೆಟ್ಸ್ ಹಾಗೂ ಟೂಲ್ಸ್ ನೆರವಿನಿಂದ ನೀವು ಅವಶ್ಯವಾಗಿ ನಿಮ್ಮ ಲೈಫ್ ಸ್ಟೈಲ್‌ನ್ನು ಅಪ್ ಗ್ರೇಡ್ ಹಾಗೂ ಇಂಪ್ರೂವ್ ಮಾಡಬಹುದು.
ಸ್ಮಾರ್ಟ್ ಡೋರ್/ವಿಂಡೊ ಸೆನ್ಸರ್ : ಇದು ವೈಫೈ ಮುಖಾಂತರ ನಡೆಯುವ ಸೆನ್ಸರ್ ಆಗಿದ್ದು, ಇದು ಮನೆಯ ಸುರಕ್ಷತೆಗೆ ಒಂದು ಒಳ್ಳೆಯ ಆಪ್ಶನ್ ಆಗಿದೆ. ಇದರ ಬಿಲ್ಟ್ ಇನ್ ಮ್ಯಾಗ್ನೆಟ್ ಬಾಗಿಲುಗಳು ಮತ್ತು ಕಿಟಕಿಗಳ ಮೇಲಾಗುವ ಪ್ರತಿಯೊಂದು ಹಸ್ತಕ್ಷೇಪದ ಮಾಹಿತಿಯನ್ನು ನಿಮಗೆ ಫೋನ್‌ನಲ್ಲಿ ಕೊಡುತ್ತದೆ. ನೀವು ಈ ಸೆನ್ಸರ್‌ನ್ನು ಸುಲಭವಾಗಿ ನಿಯಂತ್ರಿಸಬಹುದು.
ಇದು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಒಂದು ಉಪಕರಣವಾಗಿದ್ದು, ಇದರ ಕ್ರೆಡಿಟ್ ಕಾರ್ಡ್ ಸೈಜ್‌ನ ಟೂಲ್‌ನ್ನು 1-1 ಬೇರೆ ಬೇರೆ ಕೆಲಸಗಳಿಗಾಗಿ ಉಪಯೋಗಿಸಿಕೊಳ್ಳಬಹುದು. ಇದನ್ನು ಓಪ್ನರ್, ಚಾಕು, ಸ್ಕೇಲ್ ಮುಂತಾದವುಗಳ ರೂಪದಲ್ಲಿ ಉಪಯೋಗಿಸಬಹುದು. ಇದನ್ನು ನೀವು ವಾಲೆಟ್‌ನಲ್ಲೂ ಕ್ಯಾರಿ ಮಾಡಬಹುದು.
ಟ್ರ್ಯಾಕಿಂಗ್ ಅಲಾರ್ಮ್ : ಇದು ಎಂತಹ ಒಂದು ಗ್ಯಾಜೆಟ್ ಎಂದರೆ, ಅಲ್ಲಿ ಇಲ್ಲಿ ಬೀಗದ ಕೈಗಳನ್ನು ಬಿಟ್ಟು ಮರೆತು ಹೋಗುವವರಿಗೆ ಇದೊಂದು ಉಪಯುಕ್ತ ಗ್ಯಾಜೆಟ್ ಆಗಿದೆ. ಇದು ಬ್ಲೂ ಟೂಥ್ ಕನೆಕ್ಟೆಡ್ ಡಿವೈಸ್ ಆಗಿದ್ದು, ಫೋನ್ ಮೂಲಕ ಸಂಪರ್ಕ ಪಡೆದುಕೊಳ್ಳುತ್ತದೆ. ಇದರ ರೇಂಜ್ 50 ಮೀಟರ್‌ವರೆಗೂ ಇರುತ್ತದೆ. ಯಾವ ವಸ್ತುಗಳ ಜೊತೆ ಇದು ಸಂಪರ್ಕವಾಗುತ್ತೋ, ಒಂದು ವೇಳೆ ಆ ವಸ್ತುಗಳು ಸಿಗದೇ ಇದ್ದಾಗ, ಅದರ ಗುಂಡಿ ಒತ್ತಿ ಅವನ್ನು ಹುಡುಕಬಹುದು.
ಬ್ಯಾಗ್ ಸೀಲಿಂಗ್ ಕ್ಲಿಪ್ಸ್ : ಈ ಕ್ಲಿಪ್ಸ್ ನ ಆಕಾರ ಕೂದಲು ಕಟ್ಟಲು ಬಳಸುವ ಕ್ಲಿಪ್‌ನ ಹಾಗೆಯೇ ಇರುತ್ತದೆ. ಈ ಕ್ಲಿಪ್‌ಗಳು ಓಪನ್ ಪ್ಯಾಕೆಟ್‌ಗಳನ್ನು ಏರ್‌ಟೈಟ್ ಸೀಲ್ ಮಾಡುತ್ತದೆ. ಅದರ ಬಳಕೆ ಸಲುಭ. ಅದರಿಂದ ಹಾಲು, ಮೊಸರಿನ ಪ್ಯಾಕೆಟ್ಸ್, ಸ್ನ್ಯಾಕ್ಸ್ ನ್ನು ಪ್ಲಾಸ್ಟಿಕ್ ಅಥವಾ ಪೇಪರ್ ಪ್ಯಾಕೆಟ್‌ನಿಂದ ಸೀಲ್ ಮಾಡಬಹುದು.
ಮೈಕ್ರೋ ಫೈಬರ್ ಕ್ಲೀನಿಂಗ್ ಗ್ಲೌಸ್ : ನಾವು ಮನೆಯಲ್ಲಿ ಧೂಳು ತೆಗೆಯಲು ಬಟ್ಟೆ ಉಪಯೋಗಿಸುತ್ತೇವೆ. ಆದರೆ ಒಂದೆರಡು ಸಲ ಧೂಳು ತೆಗೆಯುತ್ತಿದ್ದಂತೆ, ಅದು ಕೊಳೆಯಾಗಿಬಿಡುತ್ತದೆ. ಅದು ಮೂಲೆಯ ಅಂಚಿನತನಕ ತಲುಪದು. ಅದರಿಂದ ಸ್ವಚ್ಛಗೊಳಿಸಲು ತೊಂದರೆಯಾಗುತ್ತದೆ. ಬಟ್ಟೆಗಿಂತ ತದ್ವಿರುದ್ಧವಾಗಿ ಗ್ಲೌಸ್ ಮೈಕ್ರೊ ಫೈಬರ್‌ನಿಂದ ತಯಾರಾಗಿರುತ್ತದೆ. ನೀವು ಅದನ್ನು ಧರಿಸಿ ಕಾರು, ಟೇಬಲ್, ಲ್ಯಾಪ್ ಟಾಪ್, ಕಿಚನ್, ಪೇಂಟಿಂಗ್ಸ್ ಮುಂತಾದವುಗಳನ್ನು ಸ್ವಚ್ಛಗೊಳಿಸಬಹುದು.
ಹ್ಯಾಂಡ್ ಬ್ಲೆಂಡರ್ : ಈ ಹ್ಯಾಂಡ್ ಬ್ಲೆಂಡರ್ ವಿದ್ಯುತ್‌ನ ಸಹಾಯವಿಲ್ಲದೆ ಕೈಯಿಂದ ನಡೆಸಬಹುದು. ನಿಮಗೆ ಕೇವಲ ಅದರ ಹ್ಯಾಂಡಲ್‌ನ್ನು ಅದುಮಿದರೆ ಸಾಕು, ಅದು ಚಲಾಯಿಸಲ್ಪಡುತ್ತದೆ. ಅದರಿಂದ ವಿದ್ಯುತ್ ಉಳಿತಾಯವಂತೂ ಆಗಿಯೇ ಆಗುತ್ತದೆ. ಜೊತೆಗೆ ಕೈಗಳಿಗೆ ಚಲನೆ ಕೂಡ ಸಿಗುತ್ತದೆ. ಇದರಿಂದ ನೀವು ಮೊಸರನ್ನು ಕಡೆಯಬಹುದು. ಶೇಕ್, ಜೂಸ್ ಮತ್ತು ಡಿಶೆಸ್‌ಗಳನ್ನು ಸಿದ್ಧಪಡಿಸಬಹುದು.
ಫ್ಲೆಕ್ಸಿಬಲ್ ಲ್ಯಾಂಪ್ ಎಲ್ಇಡಿ ಲೈಟ್ : ಈ ಚಿಕ್ಕ ಲ್ಯಾಂಪ್ ಅಥವಾ ಎಲ್ಇಡಿ ವೈಟ್ ಯಾವ ರೀತಿಯಲ್ಲಿ ತಯಾರಿಸಲಾಗಿದೆ ಎಂದರೆ ಅದನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಇದನ್ನು ಚಾರ್ಜ್ ಮಾಡುವುದು ಸುಲಭ. ಇದನ್ನು ರೂಮ್ ನ ಟೇಬಲ್‌ನಲ್ಲಿ ಅಥವಾ ಪ್ರವಾಸಕ್ಕೆ ಹೋಗುವಾಗ ಬಳಸಬಹುದು.
ಸ್ಮಾರ್ಟ್ ಥರ್ಮೋಸ್ಟೇಟ್ : ಇದು ಎಂತಹ ಒಂದು ಉಪಕರಣವೆಂದರೆ, ಅದನ್ನು ನೀವು ಮನೆಯ ಯಾವುದಾದರೂ ಗೋಡೆಯ ಮೇಲೆ ಅಳವಡಿಸಬಹುದು. ಅದು ವಾಯ್ಸ್ ಓವರ್‌ನ್ನು ನಿಯಂತ್ರಿಸುತ್ತದೆ. ಇದು ಕೋಣೆಯ ತಾಪಮಾನವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಡುತ್ತದೆ. ಇದನ್ನು ವೈಫೈ, ಫೋನ್ ಮುಖಾಂತರ ಕನೆಕ್ಟ್ ಮಾಡಬಹುದು.
ಪ್ಲಾಸ್ಟಿಕ್ ಹ್ಯಾಂಡ್ ಗ್ರಿಪ್ : ಯಾವ ಮನೆಯಲ್ಲಿ ಮಕ್ಕಳು ಹಾಗೂ ವೃದ್ಧರು ಇರುತ್ತಾರೊ, ಅವರು ಸ್ನಾನ ಮಾಡುವಾಗ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಇದೊಂದು ಪರ್ಫೆಕ್ಟ್ ಟೂಲ್ ಆಗಿದೆ. ಈ ಹ್ಯಾಂಡ್ ಗ್ರಿಪ್‌ನ ಹ್ಯಾಂಡಲ್ ಎಷ್ಟೊಂದು ಸ್ಟ್ರಾಂಗ್ ಆಗಿರುತ್ತದೆಂದರೆ, ಅದನ್ನು ಗೋಡೆ ಅಥವಾ ಬಾಗಿಲ ಮೇಲೆ ಅಳವಡಿಸಿ ವ್ಯಕ್ತಿ ಸುಲಭವಾಗಿ ಸ್ಥಿರವಾಗಿ ನಿಂತುಕೊಳ್ಳಬಹುದು. ಇದರ ಗುಂಡಿಯನ್ನು ಅನ್ ಲಾಕ್ ಮಾಡುವತನಕ ಅದು ಗೋಡೆಯ ಮೇಲೆ ಹಾಗೆಯೇ ಅಂಟಿಕೊಂಡೇ ಇರುತ್ತದೆ. ಅದಕ್ಕಾಗಿ ಗೋಡೆಯ ಮೇಲೆ ರಂಧ್ರ ಮಾಡಬೇಕಾದ ಅಗತ್ಯ ಉಂಟಾಗುವುದಿಲ್ಲ. ಇದು ರೀ ಯೂಸೆಬಲ್ ಹಾಗೂ ವಾಟರ್ ಪ್ರೂಫ್ ಕೂಡ ಆಗಿದೆ.
ಪೆಸ್ಟ್ ಕಂಟ್ರೋಲ್ ರಿಪೆಲೆಂಟ್ ಡಿವೈಸ್ : ಅಲ್ಟ್ರಾಸಾನಿಕ್ ಟೆಕ್ನಾಲಜಿಯ ಈ ಡಿವೈಸ್ ಸೊಳ್ಳೆ, ನೊಣ, ಜಿರಲೆ, ಇಲಿಗಳನ್ನು ಸಾಯಿಸದೆ ಅವನ್ನು ಓಡಿಸುತ್ತದೆ. ಇದರ ಕವರೇಜ್ ಏರಿಯಾ 80-120 ಚದರ ಮೀಟರ್ ಆಗಿರುತ್ತದೆ. ಇದನ್ನು ಮನೆಯೊಳಗೆ ಬಳಸಬಹುದು. ಇದು ನಾನ್‌ಟಾಕ್ಸಿಕ್ ಮತ್ತು ಇಕೋಫ್ರೆಂಡ್ಲಿ ಆಗಿದೆ. ಇದರ ವಿಶೇಷತೆಯೇನೆಂದರೆ, ಇದು ನಿಮ್ಮ ಸಾಕು ಪ್ರಾಣಿಗಳಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ.
ಸ್ಮಾರ್ಟ್ ರಿಸ್ಟ್ ಬ್ಯಾಂಡ್ : ಪ್ರಸ್ತುತ ಮಾರ್ಕೆಟ್‌ನಲ್ಲಿ ಹಲವು ಬಗೆಯ ರಿಸ್ಟ್ ಬ್ಯಾಂಡ್ ಲಭ್ಯವಿವೆ. ಈ ರಿಸ್ಟ್ ಬ್ಯಾಂಡ್ ಒಂದು ಗಡಿಯಾರವೇ ಆಗಿದ್ದು, ಅದು ಸಮಯ ತೋರಿಸುವುದರ ಹೊರತಾಗಿ, ಹಲವು ರೀತಿಯಲ್ಲಿ ಬಳಸಬಹುದಾಗಿದೆ. ನೀವು ಒಂದು ದಿನಕ್ಕೆ ಎಷ್ಟು ದೂರ ನಡೆದಿರಿ, ನಿಮ್ಮ ಹೃದಯ ಬಡಿತ, ಫೋನ್‌ನಿಂದ ಕನೆಕ್ಟಿವಿಟಿ, ಟಚ್ ಸ್ಕ್ರೀನ್, ಕಾಲ್ ಮತ್ತು ಎಸ್‌ಎಂಎಸ್ ನೋಟಿಫಿಕೇಶನ್ ಅಲರ್ಟ್ ಮುಂತಾದವು ಇದರ ಫೀಚರ್‌ಗಳಾಗಿವೆ. ಇದು ಬ್ಯಾಟರಿ ಮೂಲಕ ಚಾಲನೆಯಾಗುತ್ತದೆ. ಅದರ ಲೈಫ್ 20 ದಿನ ಇರುತ್ತದೆ.
ಸ್ಮಾರ್ಟ್ ಸ್ಪೀಕರ್ : ಗೂಗಲ್ ಹೋಮ್ ಅಮೆರನ್ ಇಕೊ ಡಾಟ್ ಮುಂತಾದ ಸ್ಮಾರ್ಟ್ ಸ್ಪೀಕರ್ಸ್ ಆಗಿವೆ. ಅವು ನಿಮ್ಮ ಮನೆಯನ್ನು ಸ್ಮಾರ್ಟ್ ಹೋಮ್ ಗಳಾಗಿಸುತ್ತವೆ. ಈ ಸ್ಪೀಕರ್ ನಿಮ್ಮ ಧ್ವನಿ ಆಲಿಸಿ ಆ್ಯಕ್ಟಿವ್ ಆಗುತ್ತದೆ. ಅದರ ಜೊತೆಗೆ ಲೈಟ್, ಫ್ಯಾನ್‌ನಂತಹ ಎಲೆಕ್ಟ್ರಾನಿಕ್ ಡಿವೈಸಸ್‌ಗೆ ಕಮಾಂಡ್ ದೊರೆತಾಗ ಆನ್ ಅಥವಾ ಆಫ್ ಮಾಡುತ್ತವೆ. ನೀವು ಇದರಿಂದ ಹಾಡು ಆಲಿಸಬಹುದು. ಹವಾಮಾನದ ಅಪ್ ಡೇಟ್ ಅಥವಾ ನ್ಯೂಸ್ ಕೂಡ ಆಲಿಸಬಹುದು.
ಹ್ಯೂಮಿಡಿ ಫೈರ್ : ಕೋಣೆ, ಕಾರು ಅಥವಾ ಆಫೀಸಿನಲ್ಲಿ ಇದನ್ನು ಬಳಸಬಹುದು. ಇದು ತಾಜಾ ಗಾಳಿಯನ್ನು ಹೊರಹೊಮ್ಮಿಸುತ್ತದೆ. ಅದರಿಂದಾಗಿ ಅಕ್ಕಪಕ್ಕದ ವಾತಾವರಣ ಶುದ್ಧ ಹಾಗೂ ಸುವಾಸನಾಯುಕ್ತವಾಗುತ್ತದೆ. ಇದರಲ್ಲಿ ನೀರು ಭರ್ತಿ ಮಾಡಿ. ಅದರಲ್ಲಿ ಒಂದೆರಡು ಹಸಿ ಆ್ಯರೊಮಾ ಆಯಿಲ್ ಹಾಕಿದರೆ ಇದು ರೂಮ್ ಫ್ರೆಶ್‌ನರ್‌ನ ಕೆಲಸ ಕೂಡ ಮಾಡುತ್ತದೆ. ಇದನ್ನು ಚಾರ್ಜ್ ಮಾಡುವುದು ಸುಲಭ. ಇದರಲ್ಲಿ ಎಲ್ಇಡಿ ನೈಟ್ ಲೈಟ್ ಕೂಡ ಇರುತ್ತದೆ.
ಎಮರ್ಜೆನ್ಸಿ ಹ್ಯಾಮರ್ : ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಯಾವುದೇ ತೆರನಾದ ಅನಾಹುತಗಳನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಅಂತಹ ಘಟನೆಗಳು ಘಟಿಸುವ ಮುನ್ನವೇ ಸನ್ನದ್ಧರಾಗಿರುವುದು ಒಳ್ಳೆಯದು. ಈ ಟೂಲ್ ಹ್ಯಾಮರ್ ಸೀಟ್ ಬೆಲ್ಟ್ ಕಟರ್ ಹಾಗೂ ಆಟೊಮ್ಯಾಟಿಕ್ ಗ್ಲಾಸ್ ಫೈರಿಂಗ್ ಬುಲೆಟ್‌ನಂತೆಯೂ ಕೆಲಸ ಮಾಡುತ್ತದೆ.
ಫ್ಲೆಕ್ಸಿಬಲ್ ನಾಜಲ್ ಫಾರ್ ಟ್ಯಾಪ್ : ನೀವು ಪಾತ್ರೆ ತೊಳೆಯುವಾಗ ನೀರಿನ ವೇಗ ಹೆಚ್ಚಾದರೆ ಒಮ್ಮೆಲೆ ನೀರು ಮುಖಕ್ಕೆ ಸಿಡಿಯುತ್ತದೆ. ಇಲ್ಲಿ ಅತ್ತಿತ್ತ ಚಿಮ್ಮುತ್ತದೆ. ನೀರಿನ ಹರಿ ಕಡಿಮೆಯಾದರೆ ಸ್ವಚ್ಛತೆಯ ಕೆಲಸ ಸರಿಯಾಗಿ ಆಗುವುದಿಲ್ಲ. ಈ ನಾಜಲ್ ಫ್ಲೆಕ್ಸಿಬಲ್ ಆಗಿದ್ದು, ಅದರಿಂದ ಪಾತ್ರೆಗಳ ಮೇಲೆ ನೀರು ಸರಿಯಾಗಿ ಬೀಳುತ್ತದೆ. ಜೊತೆಗೆ ಸಿಂಕ್ ಕೂಡ ಚೆನ್ನಾಗಿ ಸ್ವಚ್ಛವಾಗುತ್ತದೆ.
ಗ್ರಿಪ್ ಯೂನಿವರ್ಸ್ ಸಾಕೆಟ್ ಅಡಾಪ್ಟರ್ : ಉಳಿದ ಟೂಲ್‌ಗಳಿಗಿಂತ ಭಿನ್ನವಾಗಿ ಇದು ಯಾವುದೇ ಸಾಕೆಟ್‌ಗಳಿಗೆ ಸೂಕ್ತವಾಗಿ ಫಿಟ್ ಆಗುತ್ತದೆ. ಇದನ್ನು ಯಾವುದೇ ಶೇಪ್‌ಗೆ ಫಿಟ್ ಆಗುವ ರೀತಿಯಲ್ಲಿ ಡಿಸೈನ್ ಮಾಡವಾಗಿದೆ. ನಿಮ್ಮ ಬಳಿ ಇದೊಂದು ಇದ್ದರೆ ನಿಮಗೆ ಬೇರಾವುದೇ ಟೂಲ್‌ನ ಅವಶ್ಯಕತೆ ಉಂಟಾಗುವುದಿಲ್ಲ.
ಸ್ಟೀಲ್ ಹ್ಯಾಂಡ್ ಓಡರ್ ರಿಮೂವರ್ : ಈರುಳ್ಳಿ, ಬೆಳ್ಳುಳ್ಳಿ, ಮೀನು, ಮೊಟ್ಟೆಗಳನ್ನು ಸೇವಿಸಿದ ಬಳಿಕ ಕೈಗಳಿಂದ ಬರುವ ವಾಸನೆಯನ್ನು ಸ್ಟೇನ್ ಲೆಸ್ ಸ್ಟೀಲ್‌ನಿಂದ ತಯಾರಾದ ಉಪಕರಣ ನಿವಾರಿಸುವ ಕೆಲಸ ಮಾಡುತ್ತದೆ. ನೀವು ಕೈಗೆ ಸೋಪ್ ಲೇಪಿಸಿಕೊಳ್ಳುವ ಹಾಗೆ ಇದನ್ನು ಕೂಡ ಬಳಸಬಹುದು. ಇದನ್ನು ಎಲ್ಲಿಯಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು.
ಆ್ಯಪಿಲೆಟರ್ : ಈ ಉಪಕರಣ ಕೂದಲು ನಿವಾರಿಸಲು ಬಳಸಲು ಉಪಯೋಗವಾಗುತ್ತದೆ. ಪುರುಷರು ಹಾಗೂ ಮಹಿಳೆಯರು ಇದನ್ನು ಬಳಸಬಹುದು. ದೇಹದ ವಿಭಿನ್ನ ಭಾಗಗಳಲ್ಲಿ ಕೂದಲು ನಿವಾರಿಸಲು ಇದು ಸೂಕ್ತ ಉಪಕರಣವಾಗಿದೆ. ಇದು ವ್ಯಾಕ್ಸಿಂಗ್‌ನ ಹಾಗೆ ಕೂದಲನ್ನು ಎಳೆದು ತೆಗೆಯುತ್ತದೆ. ಇದನ್ನು ಬ್ಯಾಟರಿಯಿಂದ ಚಾರ್ಜ್ ಮಾಡಬಹುದು.
ಗಾರ್ಮೆಂಟ್ ಸ್ಟೀಮರ್ : ಯಾವ ಬಟ್ಟೆಗಳನ್ನು ನೀವು ಸಾಧಾರಣ ಇಸ್ತ್ರಿ ಪೆಟ್ಟಿಗೆಯಿಂದ ಪ್ರೆಸ್ ಮಾಡಲು ಆಗುವುದಿಲ್ಲ, ಅವುಗಳಿಗೆ ಈ ಸ್ಟೀಮರ್ ಪರ್ಫೆಕ್ಟ್ ಆಗಿದೆ. ಇದು ಯಾವುದೇ ಆ್ಯಂಗಲ್‌ನಲ್ಲಾದರೂ ಸ್ಟೀಮ್ ಕೊಡಬಹುದು. ಇದು ಬೆಡ್, ದಿಂಬು, ಇಳಿ ಪರದೆಗಳು ಮುಂತಾದವುಗಳಿಗೆ ಉಪಯುಕ್ತ. ಇದು ಹಗುರ ಹಾಗೂ ಹೆಚ್ಚು ಜಾಗ ವ್ಯಾಪಿಸಿಕೊಳ್ಳದು.
ಮ್ಯಾಗ್ನೆಟಿಕ್ ಮೊಬೈಲ್ ಹೋಲ್ಡರ್ : ಈ ಚಿಕ್ಕ ಮ್ಯಾಗ್ನೆಟಿಕ್ ಡಿಸ್ಕ್, ನಿಮ್ಮ ಫೋನ್ ಬೀಳದಂತೆ ತಡೆಯುತ್ತದೆ. ನೀವು ಇದನ್ನು ಅಡುಗೆ ಮಾಡುವಾಗ ಪಕ್ಕದಲ್ಲಿಯೇ ಇರಿಸಿಕೊಳ್ಳಬಹುದು. ಕಾರಿನಲ್ಲಿ ಪ್ರಯಾಣ ಮಾಡುವಾಗಲೂ ಸಹ ಬಳಸಬಹುದು. ಇದು ಗಾಡಿ ಜಂಪ್ ಮಾಡಿದಾಗ ಫೋನ್ ಎಗರಿ ಬೀಳುವುದನ್ನು ತಪ್ಪಿಸುತ್ತದೆ.
– ಸೀಮಾ