ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೈಟೆಕ್‌ ಆಗುವುದು ಅತ್ಯವಶ್ಯ. ನೀವು ಬಳಸುವ ಗ್ಯಾಜೆಟ್ಸ್ ಮನೆಯಲ್ಲಿ ಬಳಸುವುದಾಗಿರಬಹುದು ಅಥವಾ ವೈಯಕ್ತಿಕ ಕಾಳಜಿ ವಹಿಸುವಂಥೆ ಆಗಿರಬಹುದು. ಅವು ಜೀವನದಲ್ಲಿ ಬಹಳಷ್ಟು ಬದಲಾವಣೆ ತರುತ್ತವೆ. ಈ ಗ್ಯಾಜೆಟ್ಸ್ ಹಾಗೂ ಟೂಲ್ಸ್ ‌ನೆರವಿನಿಂದ ನೀವು ಅವಶ್ಯವಾಗಿ ನಿಮ್ಮ ಲೈಫ್‌ ಸ್ಟೈಲ್‌ನ್ನು ಅಪ್‌ ಗ್ರೇಡ್‌ ಹಾಗೂ ಇಂಪ್ರೂವ್ ‌ಮಾಡಬಹುದು.

Smart-Door-Sensor

ಸ್ಮಾರ್ಟ್‌ ಡೋರ್‌/ವಿಂಡೊ ಸೆನ್ಸರ್‌ : ಇದು ವೈಫೈ ಮುಖಾಂತರ ನಡೆಯುವ ಸೆನ್ಸರ್‌ ಆಗಿದ್ದು, ಇದು ಮನೆಯ ಸುರಕ್ಷತೆಗೆ ಒಂದು ಒಳ್ಳೆಯ ಆಪ್ಶನ್‌ ಆಗಿದೆ. ಇದರ ಬಿಲ್ಟ್ ಇನ್‌ ಮ್ಯಾಗ್ನೆಟ್‌ ಬಾಗಿಲುಗಳು ಮತ್ತು ಕಿಟಕಿಗಳ ಮೇಲಾಗುವ ಪ್ರತಿಯೊಂದು ಹಸ್ತಕ್ಷೇಪದ ಮಾಹಿತಿಯನ್ನು ನಿಮಗೆ ಫೋನ್‌ನಲ್ಲಿ ಕೊಡುತ್ತದೆ. ನೀವು ಈ ಸೆನ್ಸರ್‌ನ್ನು ಸುಲಭವಾಗಿ ನಿಯಂತ್ರಿಸಬಹುದು.

ಇದು ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ಮಾಡಿದ ಒಂದು ಉಪಕರಣವಾಗಿದ್ದು, ಇದರ ಕ್ರೆಡಿಟ್‌ ಕಾರ್ಡ್‌ ಸೈಜ್‌ನ ಟೂಲ್‌‌ನ್ನು 1-1 ಬೇರೆ ಬೇರೆ ಕೆಲಸಗಳಿಗಾಗಿ ಉಪಯೋಗಿಸಿಕೊಳ್ಳಬಹುದು. ಇದನ್ನು ಓಪ್ನರ್‌, ಚಾಕು, ಸ್ಕೇಲ್ ಮುಂತಾದವುಗಳ ರೂಪದಲ್ಲಿ ಉಪಯೋಗಿಸಬಹುದು. ಇದನ್ನು ನೀವು ವಾಲೆಟ್‌ನಲ್ಲೂ ಕ್ಯಾರಿ ಮಾಡಬಹುದು.

Tracking-Alarm

 

ಟ್ರ್ಯಾಕಿಂಗ್‌ ಅಲಾರ್ಮ್ : ಇದು ಎಂತಹ ಒಂದು ಗ್ಯಾಜೆಟ್‌ ಎಂದರೆ, ಅಲ್ಲಿ ಇಲ್ಲಿ ಬೀಗದ ಕೈಗಳನ್ನು ಬಿಟ್ಟು ಮರೆತು ಹೋಗುವವರಿಗೆ ಇದೊಂದು ಉಪಯುಕ್ತ ಗ್ಯಾಜೆಟ್‌ ಆಗಿದೆ. ಇದು ಬ್ಲೂ ಟೂಥ್‌ ಕನೆಕ್ಟೆಡ್‌ ಡಿವೈಸ್‌ ಆಗಿದ್ದು, ಫೋನ್‌ ಮೂಲಕ ಸಂಪರ್ಕ ಪಡೆದುಕೊಳ್ಳುತ್ತದೆ. ಇದರ ರೇಂಜ್‌ 50 ಮೀಟರ್‌ವರೆಗೂ ಇರುತ್ತದೆ. ಯಾವ ವಸ್ತುಗಳ ಜೊತೆ ಇದು ಸಂಪರ್ಕವಾಗುತ್ತೋ, ಒಂದು ವೇಳೆ ಆ ವಸ್ತುಗಳು ಸಿಗದೇ ಇದ್ದಾಗ, ಅದರ ಗುಂಡಿ ಒತ್ತಿ ಅವನ್ನು ಹುಡುಕಬಹುದು.

Bag-Sealing

ಬ್ಯಾಗ್‌ ಸೀಲಿಂಗ್‌ ಕ್ಲಿಪ್ಸ್ : ಈ ಕ್ಲಿಪ್ಸ್ ನ ಆಕಾರ ಕೂದಲು ಕಟ್ಟಲು ಬಳಸುವ ಕ್ಲಿಪ್‌ನ ಹಾಗೆಯೇ ಇರುತ್ತದೆ. ಈ ಕ್ಲಿಪ್‌ಗಳು ಓಪನ್ ಪ್ಯಾಕೆಟ್‌ಗಳನ್ನು ಏರ್‌ಟೈಟ್‌ ಸೀಲ್ ಮಾಡುತ್ತದೆ. ಅದರ ಬಳಕೆ ಸಲುಭ. ಅದರಿಂದ ಹಾಲು, ಮೊಸರಿನ ಪ್ಯಾಕೆಟ್ಸ್, ಸ್ನ್ಯಾಕ್ಸ್ ನ್ನು ಪ್ಲಾಸ್ಟಿಕ್‌ ಅಥವಾ ಪೇಪರ್‌ ಪ್ಯಾಕೆಟ್‌ನಿಂದ ಸೀಲ್ ಮಾಡಬಹುದು.

Microfiber-Cleaning-Gloves

ಮೈಕ್ರೋ ಫೈಬರ್‌ ಕ್ಲೀನಿಂಗ್‌ ಗ್ಲೌಸ್‌ : ನಾವು ಮನೆಯಲ್ಲಿ ಧೂಳು ತೆಗೆಯಲು ಬಟ್ಟೆ ಉಪಯೋಗಿಸುತ್ತೇವೆ. ಆದರೆ ಒಂದೆರಡು ಸಲ ಧೂಳು ತೆಗೆಯುತ್ತಿದ್ದಂತೆ, ಅದು ಕೊಳೆಯಾಗಿಬಿಡುತ್ತದೆ. ಅದು ಮೂಲೆಯ ಅಂಚಿನತನಕ ತಲುಪದು. ಅದರಿಂದ ಸ್ವಚ್ಛಗೊಳಿಸಲು ತೊಂದರೆಯಾಗುತ್ತದೆ. ಬಟ್ಟೆಗಿಂತ ತದ್ವಿರುದ್ಧವಾಗಿ ಗ್ಲೌಸ್‌ ಮೈಕ್ರೊ ಫೈಬರ್‌ನಿಂದ ತಯಾರಾಗಿರುತ್ತದೆ. ನೀವು ಅದನ್ನು ಧರಿಸಿ ಕಾರು, ಟೇಬಲ್, ಲ್ಯಾಪ್‌ ಟಾಪ್‌, ಕಿಚನ್‌, ಪೇಂಟಿಂಗ್ಸ್ ಮುಂತಾದವುಗಳನ್ನು ಸ್ವಚ್ಛಗೊಳಿಸಬಹುದು.

Hand-Blender

ಹ್ಯಾಂಡ್ ಬ್ಲೆಂಡರ್‌ : ಈ ಹ್ಯಾಂಡ್‌ ಬ್ಲೆಂಡರ್‌ ವಿದ್ಯುತ್‌ನ ಸಹಾಯವಿಲ್ಲದೆ ಕೈಯಿಂದ ನಡೆಸಬಹುದು. ನಿಮಗೆ ಕೇವಲ ಅದರ ಹ್ಯಾಂಡಲ್‌ನ್ನು ಅದುಮಿದರೆ ಸಾಕು, ಅದು ಚಲಾಯಿಸಲ್ಪಡುತ್ತದೆ. ಅದರಿಂದ ವಿದ್ಯುತ್‌ ಉಳಿತಾಯವಂತೂ ಆಗಿಯೇ ಆಗುತ್ತದೆ. ಜೊತೆಗೆ ಕೈಗಳಿಗೆ ಚಲನೆ ಕೂಡ ಸಿಗುತ್ತದೆ. ಇದರಿಂದ ನೀವು ಮೊಸರನ್ನು ಕಡೆಯಬಹುದು. ಶೇಕ್‌, ಜೂಸ್‌ ಮತ್ತು ಡಿಶೆಸ್‌ಗಳನ್ನು ಸಿದ್ಧಪಡಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ