ಇವುಗಳಿಂದ ಸೌಂದರ್ಯ ಹೆಚ್ಚಿಸಿ

ಹನೀ ಫೇಶಿಯಲ್ ಮಾಸ್ಕ್ : ಎಲ್ಲರ ಅಡುಗೆಮನೆಯಲ್ಲಿ ಜೇನು ಇದ್ದೇ ಇರುತ್ತದೆ. ಇದು ಕೇವಲ ಸಿಹಿ ವ್ಯಂಜನಗಳಿಗೆ ಬಳಕೆ ಆಗುವುದಲ್ಲದೆ, ಕಫಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಚರ್ಮಕ್ಕೂ ಸಹ ಇದು ಹೆಚ್ಚು ಲಾಭಕರ. ಇದರಲ್ಲಿ ಅಡಗಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಆ್ಯಕ್ನೆಯಿಂದ ಮುಕ್ತಿ ನೀಡುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿರುವ ಕಾರಣ, ಇದು ಚರ್ಮವನ್ನು ಹಾನಿಕಾರಕ ಫ್ರೀ ರಾಡಿಕಲ್ಸ್ ನಿಂದಲೂ ರಕ್ಷಿಸುತ್ತದೆ. ಜೊತೆಗೆ ಇದು ಚರ್ಮದಲ್ಲಿ ಮಾಯಿಶ್ಚರ್‌ನ್ನೂ ಕಾಪಾಡುತ್ತದೆ.

ಇದರಿಂದ ಚರ್ಮ ಸಾಫ್ಟ್ ಸ್ಮೂಥ್‌ ಆಗುತ್ತದೆ. ಹೀಗಾಗಿ ಮಾರ್ಕೆಟ್‌ನಲ್ಲಿ ಹನೀ ಫೇಶಿಯಲ್ ಮಾಸ್ಕ್ ಕೊಳ್ಳುವ ಬದಲು, ಮನೆಯಲ್ಲೇ ಜೇನು ಬಳಸಿ ಅಂದ ಹೆಚ್ಚಿಸಿಕೊಳ್ಳಿ.

ಹೀಗೆ ಅಪ್ಲೈ ಮಾಡಿ ಆ್ಯಕ್ನೆ ಪ್ರೋನ್‌ ಸ್ಕಿನ್‌ : ನೀವು ಆ್ಯಕ್ನೆ ಸಮಸ್ಯೆಯಿಂದ ಪೀಡಿತರೆ ಹಾಗಿದ್ದರೆ ಕಿಚನ್ನಿನ 2 ಸಾಮಗ್ರಿಗಳಿಂದ ಇದನ್ನು ದೂರ ಮಾಡಿ. ಇದಕ್ಕಾಗಿ ನೀವು ಒಂದು ಬಟ್ಟಲಿಗೆ 3 ಸಣ್ಣ ಚಮಚ ಚೇನು, ತುಸು ದಾಲ್ಚಿನ್ನಿಪುಡಿ ಬೆರೆಸಿಕೊಂಡು, ಈ ಮಿಶ್ರಣವನ್ನು ಮುಖಕ್ಕೆ ಪೂರ್ತಿ ಹಚ್ಚಿಕೊಂಡು 30 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇವೆರಡು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು, ನಿಮಗೆ ಆ್ಯಕ್ನೆಯಿಂದ ಮುಕ್ತಿ ಕೊಡಿಸುತ್ತದೆ.

ಡ್ರೈ ಸ್ಕಿನ್‌ : ನೀವು ನಿಮ್ಮ ಶುಷ್ಕ ತ್ವಚೆಯಿಂದ ಬೇಸತ್ತಿದ್ದೀರಾ 1 ಸಣ್ಣ ಚಮಚ ಫುಲ್ ಕ್ರೀಂ ಗಟ್ಟಿ ಮೊಸರಿಗೆ ಜೇನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ಹಾಗೇ ಬಿಡಿ. ಮೊಸರಿನಲ್ಲಿನ  ಲ್ಯಾಕ್ಟಿಕಲ್ ಆ್ಯಸಿಡ್‌ ನಿಮ್ಮ ಡ್ರೈ ಸ್ಕಿನ್‌ನ್ನು ಸ್ಮೂಥ್‌ ಸಾಫ್ಟ್ ಮಾಡುತ್ತದೆ.

ಸೆನ್ಸಿಟಿವ್ ‌ಸ್ಕಿನ್‌ ನಿಮ್ಮದು

ಸೆನ್ಸಿಟಿವ್ ಸ್ಕಿನ್‌ ಆಗಿದ್ದರೆ ಮುಖಕ್ಕೆ ಏನೇ ಹಚ್ಚಲಿಕ್ಕೂ ಹೆದರುವಿರಿ. ಹಾಗಿರುವಾಗ ಆ್ಯಲೋವೆರಾ ಜೆಲ್ ‌+ ಜೇನು ಬೆರಸಿ ಮುಖಕ್ಕೆ ಮಾಸ್ಕ್ ಹಾಕಿ. ಇದು ನಿಮ್ಮ ಚರ್ಮಕ್ಕೆ ವೇಶ ಮಾತ್ರವೂ ಹಾನಿ ಮಾಡದೆ ಹೆಚ್ಚಿನ ಗ್ಲೋ ನೀಡುತ್ತದೆ. ಜೊತೆಗೆ ರೆಡ್‌ ನೆಸ್‌, ಉರಿ ಮುಂತಾದ ಸಮಸ್ಯೆಗಳೂ ದೂರವಾಗುತ್ತವೆ. ಏಕೆಂದರೆ ಹನೀ ಜೊತೆ ಬೆರೆತ ಆ್ಯಲೋವೆರಾದಲ್ಲಿ ಹೀಲಿಂಗ್‌ ಗುಣಗಳಿವೆ.

rasoi-me-beauty

ಮೇಕಪ್‌ ರಿಮೂವರ್‌ಗಾಗಿ ಕೊಬ್ಬರಿ ಎಣ್ಣೆ : ದ. ಕನ್ನಡ, ಕೇರಳದ ಕಡೆ ಕೊಬ್ಬರಿ ಎಣ್ಣೆ ನೇರವಾಗಿ ಅಡುಗೆಗೆ ಬಳಸಲ್ಪಡುತ್ತದೆ. ಏಕೆಂದರೆ ಇದರ ಸೇವನೆ ಹೆಲ್ದಿ ಮಾತ್ರವಲ್ಲದೆ, ಕೂದಲು ಚರ್ಮಕ್ಕೂ ಹೆಚ್ಚಿನ ಲಾಭ ತಂದುಕೊಡುತ್ತದೆ. ಏಕೆಂದರೆ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿಫಂಗಲ್ ಗುಣ ಅಡಗಿದೆ. ಹೀಗಾಗಿ ನೀವು ನಿಮ್ಮ ಮೇಕಪ್‌ ಕಳಚಲು ದುಬಾರಿ ಮೇಕಪ್‌ ಪ್ರಾಡಕ್ಟ್ಸ್ ಬಳಸುವ ಬದಲು ಕೊಬ್ಬರಿ ಎಣ್ಣೆಯನ್ನೇ ಬಳಸಿರಿ. ಇದು ಬಹಳ ಲಾಭಕರ ಎಂದು ನಿಮಗೇ ತಿಳಿಯುತ್ತದೆ. ಇದನ್ನು ಹಚ್ಚಿದ ತಕ್ಷಣ ಸುಲಭವಾಗಿ ಮೇಕಪ್‌ ರಿಮೂವ್ ‌ಮಾಡಬಹುದು, ಚರ್ಮಕ್ಕೆ ಯಾವುದೇ ಇರಿಟೇಶನ್‌ ಆಗದಂತೆ ಇದು ಮುನ್ನೆಚ್ಚರಿಕೆ ವಹಿಸುತ್ತದೆ. ಸ್ಕಿನ್‌ ಎಷ್ಟು ಮೃದುವಾಗುತ್ತದೆ ಎಂದರೆ, ಮತ್ತೆ ಮತ್ತೆ ನಿಮಗೆ ಅದನ್ನು ಮುಟ್ಟಬೇಕೆನಿಸುತ್ತದೆ.

ಮೊಸರು, ಅರಿಶಿನ, ಕಡಲೆಹಿಟ್ಟಿನ ಪ್ಯಾಕ್‌ : ನೀವು ಆ್ಯಕ್ನೆ, ಪಿಗ್ಮೆಂಟೇಶನ್‌, ಓಪನ್‌ ಪೋರ್ಸ್‌, ಅನ್‌ ಈವೆನ್‌ ಸ್ಕಿನ್‌ ಟೋನ್‌ ಇತ್ಯಾದಿ ಸಮಸ್ಯೆಗಳಿಂದ ಕಂಗೆಟ್ಟಿದ್ದೀರಾ? ಹಾಗಿದ್ದರೆ ಮೊಸರು, ಅರಿಶಿನ, ಕಡಲೆಹಿಟ್ಟಿನ ಪ್ಯಾಕ್‌ ನಿಮಗೆ ಹೆಚ್ಚು ಲಾಭಕರ. ಏಕೆಂದರೆ ಈ ಮೂರು ಸಾಮಗ್ರಿ ನಿಮಗೆ ಸುಲಭವಾಗಿ ಕಿಚನ್‌ನಿಂದಲೇ ಸಿಗುತ್ತದೆ. ಇಲ್ಲಿ ಮೊಸರು ಕಡಲೆಹಿಟ್ಟು ನಿಮ್ಮ ಚರ್ಮವನ್ನು ಸ್ಮೂಥ್‌ಗೊಳಿಸಿದರೆ, ಅರಿಶಿನದಲ್ಲಿನ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳಿಂದ ಅದು ಚರ್ಮವನ್ನು ಟ್ಯಾನಿಂಗ್‌, ಕಲೆಗುರುತು ಇತ್ಯಾದಿಗಳಿಂದ ಮುಕ್ತಿ ನೀಡಿ, ಚರ್ಮವನ್ನು ಆದಷ್ಟು ಸಾಫ್ಟ್ ಗೊಳಿಸುತ್ತದೆ. ಒಂದು ಬಟ್ಟಲಿಗೆ 2 ಚಮಚ ಗಟ್ಟಿ ಮೊಸರು, 2 ಚಿಟಕಿ ಅರಿಶಿನ, ತುಸು ಕಡಲೆಹಿಟ್ಟು ಬೆರೆಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಮಟ್ಟಕ್ಕೆ ಹಚ್ಚಿ 15-20 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರು ಹಾಕಿ ಲಘುವಾಗಿ ಮಸಾಜ್‌ ಮಾಡುತ್ತಾ ಮುಖ ತೊಳೆಯಿರಿ. ಈ ಪ್ಯಾಕ್‌ನ್ನು ನೀವು ವಾರದಲ್ಲಿ 3-4 ಸಲ ಬಳಸಿಕೊಳ್ಳಿ. ಇದರಿಂದ ನಿಧಾನವಾಗಿ ನಿಮ್ಮ ಚರ್ಮ ಬಿಲ್ಕುಲ್ ಕ್ಲಿಯರ್‌ ಆಗಿಬಿಡುತ್ತದೆ.

aloe-vera

ಬ್ರೌನ್‌ ಶುಗರ್‌ ಲಿಪ್‌ ಸ್ಕ್ರಬ್‌ : ಸೀಸನ್‌ ಬದಲಾದಂತೆ ಎಲ್ಲಕ್ಕೂ ಮೊದಲು ನಮ್ಮ ತುಟಿ ಒಣಗತೊಡಗುತ್ತದೆ. ಇದರಿಂದ ನಮಗೆ ಕಂಫರ್ಟ್‌ ಫೀಲ್ ‌ಹೋಗಿಬಿಡುತ್ತದೆ. ಇದರಿಂದ ಬಚಾವಾಗಲು ನಾವು ಮಾರ್ಕೆಟ್‌ನಲ್ಲಿನ ದುಬಾರಿ ಬಾಮ್ ತಂದು ಹಚ್ಚುತ್ತೇವೆ. ಇದು ಸ್ವಲ್ಪ ಹೊತ್ತು ಮಾತ್ರ ನಮಗೆ ನೆಮ್ಮದಿ ನೀಡಬಲ್ಲದು, ನಂತರ ಹಿಂದಿನಂತೆಯೇ ಆಗಿಬಿಡುತ್ತದೆ. ಇದಕ್ಕೆ ಸುಲಭ ಲಭ್ಯವಿರುವ ಬ್ರೌನ್‌ ಶುಗರ್‌ ತೆಗೆದುಕೊಳ್ಳಿ. ಇದು ಆರೋಗ್ಯಕ್ಕೆ ಹಿತಕರ ಮಾತ್ರವಲ್ಲದೆ, ತುಟಿಗಳ ಡ್ರೈನೆಸ್‌ಗೆ 3-4 ಸಲ ಅಪ್ಲೈ ಮಾಡುವುದರಿಂದ ಅದು ಇಲ್ಲದಂತೆ ಮಾಡಬಲ್ಲದು!

ಇದಕ್ಕಾಗಿ ನೀವು ತುಸು ಬ್ರೌನ್‌ ಶುಗರ್‌ಗೆ, ಕೆಲವು ಹನಿ ಕೊಬ್ಬರಿ ಎಣ್ಣೆ ಅಥವಾ ಹಿಪ್ಪೆ ಎಣ್ಣೆ ಬೆರೆಸಿ ಸ್ಕ್ರಬ್‌ ತಯಾರಿಸಿಕೊಳ್ಳುವ ಅಗತ್ಯವಿದೆ. ನಂತರ ಈ ಮಿಶ್ರಣ ತುಟಿಗೆ ಸವರಿ, ಸ್ಕ್ರಬ್‌ ಮಾಡಿ. ಇದರಿಂದ ಡೆಡ್‌ ಸ್ಕಿನ್‌ ತೊಲಗುವುದಲ್ಲದೆ, ತುಟಿ ಎಷ್ಟೋ ಸಾಫ್ಟ್ ಆಗುತ್ತದೆ. ಇದರಲ್ಲಿನ ಮಾಯಿಶ್ಚರೈಸರ್‌ನಿಂದಾಗಿ ತುಟಿಯ ಶುಷ್ಕತೆ ಹೋಗುತ್ತದೆ. ಹೀಗೆ ವಾರಕ್ಕೆ 4-5 ದಿನ ಮಾಡಿ, ನಿಮ್ಮ ತುಟಿಗಳಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತದೆ.

ಸ್ಕಿನ್‌ ಇರಿಟೇಶನ್‌ ದೂರವಾಗಲು ಓಟ್ಸ್ : ಇತ್ತೀಚೆಗೆ ಎಲ್ಲರೂ ಹೆಲ್ಚ್ ಕಾನ್ಶಿಯಸ್‌ ಆಗುತ್ತಿದ್ದಾರೆ. ಹೀಗಾಗಿ ಮಾರ್ನಿಂಗ್‌ ತಿಂಡಿಗೆ ಪರೋಟ ಬದಲು ಓಟ್ಸ್ ಉಪ್ಪಿಟ್ಟು ಮಾಡಲಾಗಿದೆ. ಏಕೆಂದರೆ ಇದು ಹೈ ಫೈಬರ್‌ ರಿಚ್‌ ಡಯೆಟ್‌ ಆದಕಾರಣ. ಬಹಳ ಹೊತ್ತು ನಿಮಗೆ ಹೊಟ್ಟೆ ತುಂಬಿರುವಂತೆ ಅನಿಸುತ್ತದೆ. ನೀವು ಸಹಜವಾಗಿ ಫಿಟ್‌ ಆಗುವಿರಿ. ಇದು ನಿಮ್ಮ ಚರ್ಮದ ಇರಿಟೇಶನ್‌, ಡ್ರೈನೆಸ್ ಪ್ರಾಬ್ಲಂ ದೂರಗೊಳಿಸುತ್ತದೆ. ಇದಕ್ಕಾಗಿ ನೀವು ಮೊದಲು ಓಟ್ಸ್ ನ್ನು ಪೌಡರ್‌ ಮಾಡಿಕೊಂಡು, ಅದಕ್ಕೆ ತುಸು ಮೊಸರು, ನೀರು ಬೆರೆಸಿ, ಪೇಸ್ಟ್ ಸಿದ್ಧಪಡಿಸಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚುವುದರಿಂದ,  ನಿಮಗೆ ಸ್ಕಿನ್‌ ಪ್ರಾಬ್ಲಂನಿಂದ ಬಿಡುಗಡೆ ಸಿಗುವ ಜೊತೆಗೆ ಸ್ಕಿನ್‌ ಬಹಳ ಸಾಫ್ಟ್ ಆಗುತ್ತದೆ.

cinnamon

ಮಸೂರ್‌ ಬೇಳೆ ಪ್ಯಾಕ್‌ನಿಂದ ಹೆಚ್ಚು ಹೊಳಪು : ನೀವು ನಿಮ್ಮ ಬಣ್ಣ ತಿಳಿಯಾಗಿಸಿ, ಹೆಚ್ಚಿನ ಹೊಳಪು ಗಳಿಸ ಬಯಸಿದರೆ, ನಿಮಗೆ ಹೋಂ ಮೇಡ್‌ ಮಸೂರ್‌ ಬೇಳೆ ಪ್ಯಾಕ್‌ ಬಹಳಷ್ಟು ಲಾಭಕಾರಿ ಆಗುತ್ತದೆ. ಇದಕ್ಕಾಗಿ 4-5 ಚಮಚ ಮಸೂರ್‌ ಬೇಳೆಯನ್ನು ರಾತ್ರಿಯಿಡೀ ನೆನೆಸಿಡಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಇದು ಒಣಗಿದಾಗ, ಮೃದುವಾಗಿ  ಮಸಾಜ್ ಮಾಡುತ್ತಾ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಸಾಫ್ಟ್ ಆಗುತ್ತದೆ, ಆ್ಯಕ್ನೆ ದೂರವಾಗುತ್ತದೆ.

ಉದ್ದಿನ ಬೇಳೆ ಮಾಡುತ್ತದೆ ಬ್ಲೀಚಿಂಗ್‌ ಕೆಲಸ : ಹಾರ್ಮೋನ್‌ ಬದಲಾವಣೆ ಅಥವಾ ಬೇರಾವುದೇ ಕಾರಣದಿಂದ, ಹೆಣ್ಣಿನ  ಚರ್ಮದಲ್ಲಿ ಕೂದಲು ಮೊಳೆತರೆ, ಯಾವ ಹುಡುಗಿಗೇ ಆದರೂ ಇರಿಸುಮುರಿಸಾಗುತ್ತದೆ. ಇದಕ್ಕಾಗಿ ಅವಳು ತಿಂಗಳಿಗೆ 2 ಸಲ ಪಾರ್ಲರ್‌ಗೆ ಹೋಗಿ ಬ್ಲೀಚ್‌ ಮಾಡಿಸಿಕೊಳ್ಳುತ್ತಾಳೆ. ಅದರಲ್ಲಿನ ಕೆಮಿಕಲ್ಸ್ ಕಾರಣ ಚರ್ಮ ಕ್ರಮೇಣ ಕಪ್ಪಾಗುತ್ತದೆ, ಒಮ್ಮೊಮ್ಮೆ ಸ್ಕಿನ್‌ ಅಲರ್ಜಿ ಸಹ ಆಗಬಹುದು. ಹೀಗಾಗಿ ನೀವು ಮನೆಯಲ್ಲಿದ್ದುಕೊಂಡೇ ಸುರಕ್ಷಿತ ವಿಧಾನದಿಂದ ಬ್ಲೀಚ್‌ಮಾಡಿಕೊಳ್ಳಬಾರದೇಕೆ?

ಇದಕ್ಕಾಗಿ ನೀವು 2 ಸಣ್ಣ ಚಮಚ ಉದ್ದಿನ ಬೇಳೆಯನ್ನು 3-4 ಬಾದಾಮಿಯೊಂದಿಗೆ ರಾತ್ರಿಯಿಡೀ ಹಸಿ ಹಾಲಲ್ಲಿ ನೆನೆಹಾಕಿಡಿ. ನಂತರ ಮಾರನೇ ಬೆಳಗ್ಗೆ ನೀಟಾಗಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ರೋಟೀನ್‌ ಮಾಸ್ಕ್ ಚರ್ಮಕ್ಕೆ ಪೋಷಣೆ ನೀಡುವುದರ ಜೊತೆಯಲ್ಲೇ ಬ್ಲೀಚಿಂಗ್‌ನ ಕೆಲಸವನ್ನೂ ಮಾಡುತ್ತದೆ.

ಮೊಸರಿನಿಂದ ಕೂದಲಿನ ಕಂಡೀಶನಿಂಗ್‌ : ದ. ಭಾರತದ ಊಟದಲ್ಲಿ ಮೊಸರು ಇಲ್ಲದಿದ್ದರೆ ಅದು ಊಟವೇ ಅಲ್ಲ. ಅದು ಆರೋಗ್ಯಕ್ಕೆ ಅಷ್ಟು ಹಿತಕರ. ಜೊತೆಗೆ ಮೊಸರು ನೈಸರ್ಗಿಕ ಕಂಡೀಶನರ್‌ನ ಕೆಲಸವನ್ನೂ ಮಾಡಬಲ್ಲದು. ಇದಕ್ಕಾಗಿ ನಿಮ್ಮ ಕೂದಲಿನ ಅಳತೆಗೆ ತಕ್ಕಂತೆ, ಧಾರಾಳ ಮೊಸರನ್ನು ನೆತ್ತಿಯಿಂದ ಕೂದಲು ತುದಿವರೆಗೂ ಹಚ್ಚಿ, 40 ನಿಮಿಷ ಒಣಗಲು ಬಿಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ತಲೆಗೆ ಹೊಳಪು ಬರುವುದಲ್ಲದೆ, ಕೂದಲು ಬಲು ಸಾಫ್ಟ್ ಆಗುತ್ತದೆ.

ಈ ರೀತಿ ನೀವು ಅಡುಗೆಮನೆಯಲ್ಲಿನ ಸಾಮಗ್ರಿಗಳಿಗಿಂದಲೇ ಸೌಂದರ್ಯ ಸಂರಕ್ಷಣೆ ಮಾಡಿಕೊಳ್ಳಬಹುದು.

– ಪಾರ್ವತಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ