ಇವುಗಳಿಂದ ಸೌಂದರ್ಯ ಹೆಚ್ಚಿಸಿ
ಹನೀ ಫೇಶಿಯಲ್ ಮಾಸ್ಕ್ : ಎಲ್ಲರ ಅಡುಗೆಮನೆಯಲ್ಲಿ ಜೇನು ಇದ್ದೇ ಇರುತ್ತದೆ. ಇದು ಕೇವಲ ಸಿಹಿ ವ್ಯಂಜನಗಳಿಗೆ ಬಳಕೆ ಆಗುವುದಲ್ಲದೆ, ಕಫಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಚರ್ಮಕ್ಕೂ ಸಹ ಇದು ಹೆಚ್ಚು ಲಾಭಕರ. ಇದರಲ್ಲಿ ಅಡಗಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಆ್ಯಕ್ನೆಯಿಂದ ಮುಕ್ತಿ ನೀಡುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿರುವ ಕಾರಣ, ಇದು ಚರ್ಮವನ್ನು ಹಾನಿಕಾರಕ ಫ್ರೀ ರಾಡಿಕಲ್ಸ್ ನಿಂದಲೂ ರಕ್ಷಿಸುತ್ತದೆ. ಜೊತೆಗೆ ಇದು ಚರ್ಮದಲ್ಲಿ ಮಾಯಿಶ್ಚರ್‌ನ್ನೂ ಕಾಪಾಡುತ್ತದೆ.
ಇದರಿಂದ ಚರ್ಮ ಸಾಫ್ಟ್ ಸ್ಮೂಥ್ ಆಗುತ್ತದೆ. ಹೀಗಾಗಿ ಮಾರ್ಕೆಟ್‌ನಲ್ಲಿ ಹನೀ ಫೇಶಿಯಲ್ ಮಾಸ್ಕ್ ಕೊಳ್ಳುವ ಬದಲು, ಮನೆಯಲ್ಲೇ ಜೇನು ಬಳಸಿ ಅಂದ ಹೆಚ್ಚಿಸಿಕೊಳ್ಳಿ.
ಹೀಗೆ ಅಪ್ಲೈ ಮಾಡಿ ಆ್ಯಕ್ನೆ ಪ್ರೋನ್ ಸ್ಕಿನ್ : ನೀವು ಆ್ಯಕ್ನೆ ಸಮಸ್ಯೆಯಿಂದ ಪೀಡಿತರೆ ಹಾಗಿದ್ದರೆ ಕಿಚನ್ನಿನ 2 ಸಾಮಗ್ರಿಗಳಿಂದ ಇದನ್ನು ದೂರ ಮಾಡಿ. ಇದಕ್ಕಾಗಿ ನೀವು ಒಂದು ಬಟ್ಟಲಿಗೆ 3 ಸಣ್ಣ ಚಮಚ ಚೇನು, ತುಸು ದಾಲ್ಚಿನ್ನಿಪುಡಿ ಬೆರೆಸಿಕೊಂಡು, ಈ ಮಿಶ್ರಣವನ್ನು ಮುಖಕ್ಕೆ ಪೂರ್ತಿ ಹಚ್ಚಿಕೊಂಡು 30 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇವೆರಡು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು, ನಿಮಗೆ ಆ್ಯಕ್ನೆಯಿಂದ ಮುಕ್ತಿ ಕೊಡಿಸುತ್ತದೆ.
ಡ್ರೈ ಸ್ಕಿನ್ : ನೀವು ನಿಮ್ಮ ಶುಷ್ಕ ತ್ವಚೆಯಿಂದ ಬೇಸತ್ತಿದ್ದೀರಾ 1 ಸಣ್ಣ ಚಮಚ ಫುಲ್ ಕ್ರೀಂ ಗಟ್ಟಿ ಮೊಸರಿಗೆ ಜೇನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ಹಾಗೇ ಬಿಡಿ. ಮೊಸರಿನಲ್ಲಿನ ಲ್ಯಾಕ್ಟಿಕಲ್ ಆ್ಯಸಿಡ್ ನಿಮ್ಮ ಡ್ರೈ ಸ್ಕಿನ್‌ನ್ನು ಸ್ಮೂಥ್ ಸಾಫ್ಟ್ ಮಾಡುತ್ತದೆ.
ಸೆನ್ಸಿಟಿವ್ ಸ್ಕಿನ್ ನಿಮ್ಮದು
ಸೆನ್ಸಿಟಿವ್ ಸ್ಕಿನ್ ಆಗಿದ್ದರೆ ಮುಖಕ್ಕೆ ಏನೇ ಹಚ್ಚಲಿಕ್ಕೂ ಹೆದರುವಿರಿ. ಹಾಗಿರುವಾಗ ಆ್ಯಲೋವೆರಾ ಜೆಲ್ + ಜೇನು ಬೆರಸಿ ಮುಖಕ್ಕೆ ಮಾಸ್ಕ್ ಹಾಕಿ. ಇದು ನಿಮ್ಮ ಚರ್ಮಕ್ಕೆ ವೇಶ ಮಾತ್ರವೂ ಹಾನಿ ಮಾಡದೆ ಹೆಚ್ಚಿನ ಗ್ಲೋ ನೀಡುತ್ತದೆ. ಜೊತೆಗೆ ರೆಡ್ ನೆಸ್, ಉರಿ ಮುಂತಾದ ಸಮಸ್ಯೆಗಳೂ ದೂರವಾಗುತ್ತವೆ. ಏಕೆಂದರೆ ಹನೀ ಜೊತೆ ಬೆರೆತ ಆ್ಯಲೋವೆರಾದಲ್ಲಿ ಹೀಲಿಂಗ್ ಗುಣಗಳಿವೆ.
ಮೇಕಪ್ ರಿಮೂವರ್‌ಗಾಗಿ ಕೊಬ್ಬರಿ ಎಣ್ಣೆ : ದ. ಕನ್ನಡ, ಕೇರಳದ ಕಡೆ ಕೊಬ್ಬರಿ ಎಣ್ಣೆ ನೇರವಾಗಿ ಅಡುಗೆಗೆ ಬಳಸಲ್ಪಡುತ್ತದೆ. ಏಕೆಂದರೆ ಇದರ ಸೇವನೆ ಹೆಲ್ದಿ ಮಾತ್ರವಲ್ಲದೆ, ಕೂದಲು ಚರ್ಮಕ್ಕೂ ಹೆಚ್ಚಿನ ಲಾಭ ತಂದುಕೊಡುತ್ತದೆ. ಏಕೆಂದರೆ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿಫಂಗಲ್ ಗುಣ ಅಡಗಿದೆ. ಹೀಗಾಗಿ ನೀವು ನಿಮ್ಮ ಮೇಕಪ್ ಕಳಚಲು ದುಬಾರಿ ಮೇಕಪ್ ಪ್ರಾಡಕ್ಟ್ಸ್ ಬಳಸುವ ಬದಲು ಕೊಬ್ಬರಿ ಎಣ್ಣೆಯನ್ನೇ ಬಳಸಿರಿ. ಇದು ಬಹಳ ಲಾಭಕರ ಎಂದು ನಿಮಗೇ ತಿಳಿಯುತ್ತದೆ. ಇದನ್ನು ಹಚ್ಚಿದ ತಕ್ಷಣ ಸುಲಭವಾಗಿ ಮೇಕಪ್ ರಿಮೂವ್ ಮಾಡಬಹುದು, ಚರ್ಮಕ್ಕೆ ಯಾವುದೇ ಇರಿಟೇಶನ್ ಆಗದಂತೆ ಇದು ಮುನ್ನೆಚ್ಚರಿಕೆ ವಹಿಸುತ್ತದೆ. ಸ್ಕಿನ್ ಎಷ್ಟು ಮೃದುವಾಗುತ್ತದೆ ಎಂದರೆ, ಮತ್ತೆ ಮತ್ತೆ ನಿಮಗೆ ಅದನ್ನು ಮುಟ್ಟಬೇಕೆನಿಸುತ್ತದೆ.