ಉದ್ಯೋಗಸ್ಥ ವನಿತೆ ತನ್ನ ಬಿಝಿ ದಿನಚರ್ಯೆಯಿಂದಾಗಿ, ಬಯಸಿದರೂ ಸಹ ತಾನು ಹೆಚ್ಚು ಹೊತ್ತು ಮಗುವಿನ ಜೊತೆ ಕಳೆಯಲಾರಳು. ಅಂಥ ಒಂದು ಗಿಲ್ಟ್ ಫೀಲಿಂಗ್ನಿಂದ ಹೊರಬರುವುದು ಹೇಗೆ......?

ನೀವು ಉದ್ಯೋಗಸ್ಥ ವನಿತೆಯಾಗಿದ್ದು, ಸಣ್ಣ ಮಗುವನ್ನು ಕ್ರೀಚ್‌ ನಲ್ಲಿ ಬಿಟ್ಟು ಬಂದು, ತಾನು ಅದಕ್ಕೆ ಹೆಚ್ಚು ಸಮಯ ನೀಡುತ್ತಿಲ್ಲ ಎಂಬ ಹೀನಭಾವನೆಗೆ ಒಳಗಾಗಿದ್ದರೆ, ತಾನು ಮಗುವನ್ನು ಸರಿಯಾಗಿ ಸಾಕುತ್ತಿಲ್ಲವೇನೋ ಎಂದೆನಿಸಿದರೆ, ಮನಸ್ಸಿನಲ್ಲಿ ಸದಾ ಕಿರಿಕಿರಿ ತುಂಬಿಕೊಳ್ಳುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ `ಮಾಮ್ ಗಿಲ್ಟ್' ಎನ್ನುತ್ತಾರೆ. ಇದರಿಂದ ಹೊರಬರುವುದು ಹೇಗೆ ಎಂದು ವಿವರವಾಗಿ ತಿಳಿಯೋಣ.

ಇಲ್ಲಿ ತಾಯಿ ಹೀಗೆ ಭಾವಿಸುವುದು ಅವಳ ಕೋಮಲ ಭಾವನಾತ್ಮಕತೆಯ ಪ್ರತಿರೂಪ. ಇದನ್ನೇ ಆಧುನಿಕವಾಗಿ `ಮಾಮ್ ಗಿಲ್ಟ್' ಎನ್ನುತ್ತಾರೆ. ಇಂದಿನ ವರ್ಕಿಂಗ್‌ ಮದರ್‌ ಈ ಸ್ಥಿತಿಯನ್ನು ಎದುರಿಸಲೇ ಬೇಕಾಗುತ್ತದೆ. ಅವಳ ಬಳಿ ಸದಾ ಸಮಯದ ಅಭಾವ ತುಂಬಿರುತ್ತದೆ. ಹೀಗಾಗಿ ಅವಳು ತನ್ನ ಕುಟುಂಬ, ಮಕ್ಕಳಿಗಾಗಿ ಸಮಯ ಮಾಡಿಕೊಳ್ಳುವುದು ತ್ರಾಸದಾಯಕವೇ ಸರಿ. ಇದರ ನೇರ ಪರಿಣಾಮ ಮಗುವಿನ ಮೇಲಾಗುತ್ತದೆ.

ಈ ಕಾರಣದಿಂದೋ ಏನೋ.... ತಾಯಿಮಗುವಿನ ಬಾಂಧವ್ಯ ಹಿಂದಿನಷ್ಟು ಮಧುರವಾಗಿಲ್ಲ ಎಂದೇ ಹೇಳಬಹುದು. ಮಕ್ಕಳು ಕ್ರಮೇಣ ತಾಯಿ ಬಳಿ ತಮ್ಮ ಎಲ್ಲಾ ವಿಷಯ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಅವರು ಸದಾ ಮೊಬೈಲ್ ‌ಗೆ ಅಂಟಿಕೊಂಡಿರಲು ಬಯಸುತ್ತಾರೆ.

ಸ್ಥಿತಿ ಎದುರಾಗಿದೆ ಎಂದು ಗುರುತಿಸುವುದು ಹೇಗೆ?

ನಾನೊಬ್ಬ ಕೆಟ್ಟ ತಾಯಿ ಅನಿಸ ತೊಡಗಿದಾಗ.

ಸದಾ ನೀವು ಟೆನ್ಶನ್‌ ನಲ್ಲೇ ಕಳೆಯುತ್ತಾ, ನೀವು ಸಂಪೂರ್ಣ ನೆಮ್ಮದಿ ಕಳೆದುಕೊಳ್ಳುವಂತೆ ಆದಾಗ.

ನಿಮ್ಮ ಮಾನಸಿಕ ಆರೋಗ್ಯ ಕ್ರಮೇಣ ಹದಗೆಡತೊಡಗಿದಾಗ.

ಸದಾ ಸೋಶಿಯಲ್ ಮೀಡಿಯಾಗೆ ಅಂಟಿಕೊಂಡು ಈ ಲೋಕವೇ ಬೇಡ ಅನಿಸಿದಾಗ.

ಮಗುವನ್ನು ಕ್ರೀಚ್‌ ಗೆ ಬಿಡುವಾಗ ಹಿಂಸೆ ಎನಿಸಿದರೆ.

ನಕಾರಾತ್ಮಕತೆ ಹೆಚ್ಚ ತೊಡಗಿದಾಗ.

ಇದರಿಂದ ಹೊರಬರಲು ನೀವು ಈ ಕೆಳಗಿನ ಸಲಹೆಗಳನ್ನು ಅಗತ್ಯ ಅಳವಡಿಸಿಕೊಳ್ಳಿ :

ನಿಮಗೆ ನೀವು ಬ್ರೇಕ್ಮಾಡಿ : ಮಗುವಿಗೆ ನಿಮ್ಮ ಅಗತ್ಯ ತುಂಬಾ ಇದೆ, ಬಹಳ ದಿನಗಳಿಂದ ನೀವು ಮಕ್ಕಳ ಜೊತೆ ಹೆಚ್ಚು ಕಾಲ ಕಳೆದಿಲ್ಲ ಎನಿಸಿದಾಗ, ಅವರಿಗೆ ಶಾಲೆಯಿಂದ ಬಿಡುವು ದೊರಕುವ ಸಮಯದಲ್ಲಿ ಅಥವಾ ಅವರಿಗೆ ಪರೀಕ್ಷೆ ಇರುವ ಸಂದರ್ಭದಲ್ಲಿ ನೀವು ಆಫೀಸ್‌ ನಿಂದ ಕೆಲವು ದಿನ ಬ್ರೇಕ್‌ ಪಡೆಯಿರಿ. ಆಗ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ, ನೀವು ಅವರಿಗೆ ಹೆಚ್ಚು ಸಪೋರ್ಟ್‌ ಮಾಡಿದಂತೆ ಆಗುತ್ತದೆ.

ಮಕ್ಕಳ ಜೊತೆ ಕ್ವಾಲಿಟಿ ಟೈಂ ಕಳೆಯರಿ : ರಾತ್ರಿ ಮಲಗುವ ಮುನ್ನ, ತುಸು ಹೆಚ್ಚು ಹೊತ್ತು ಮಕ್ಕಳ ಜೊತೆ ಕಳೆಯಿರಿ. ಅವರ ಆ ದಿನ ಹೇಗೆ ಕಳೆಯಿತು? ಶಾಲೆಯಲ್ಲಿ ಏನೇನು ಮಾಡಿದರು? ಅವರಿಗೆ ಆ ದಿನ ಇಷ್ಟವಾದದ್ದು ಏನು? ಅವರಿಗೆ ಯಾವುದರಿಂದ ಬೇಸರವಾಯಿತು? ಇಂಥ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆಯುವುದರಿಂದ ಅವರ ತೊಂದರೆಗಳು ಏನೇನು ಎಂದು ನಿಮಗೆ ಅರಿವಾಗುತ್ತದೆ, ಅದನ್ನು ಸರಿಪಡಿಸಲು ನೀವು ಸಹಾಯ ಮಾಡಬಹುದು. ಈ ರೀತಿ ನೀವು ಅವರ ಜೀವನದಲ್ಲಿ ಎಷ್ಟು ಪ್ರಧಾನ ಪಾತ್ರ ವಹಿಸುತ್ತೀರಿ ಎಂಬುದು ಇದರಿಂದ ಅವರಿಗೆ ಸ್ಪಷ್ಟವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ