ಬೆಂಗಳೂರಿನ ನಿವಾಸಿ ಸ್ಮೃತಿಯ ಮದುವೆ ಫಿಕ್ಸ್ ಆಗಿತ್ತು. ಅವಳಂತೂ ಬಹಳ ಖುಷಿಯಲ್ಲಿದ್ದಳು. ಮದುವೆಯ ಪಾರ್ಟಿಯಲ್ಲಿ ತಾನು ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಬೇಕೆಂದು ಬಯಸಿದಳು. ಹೀಗಾಗಿ ಅವಳು ತನ್ನ ತೋಳು, ಬೆನ್ನಿನ ತೆರೆದ ಭಾಗಗಳಲ್ಲಿ ಹೂಚಿಟ್ಟೆಗಳ ಟ್ಯಾಟೂ ಹಾಕಿಸಿಕೊಂಡಳು. ಇದರಲ್ಲಿ ಹೆಚ್ಚಿನ ಚಮಕ್‌ ಬರಲೆಂದು ಸ್ಟೋನ್‌ ಕಲರ್‌ ಬಳಸಿಕೊಂಡಳು. ಸಂಜೆಯ ಆರತಕ್ಷತೆಯಲ್ಲಿ ಅದರ ಮೇಲೆ ಲೈಟ್‌ ಪ್ರತಿಫಲಿಸಿದಾಗ, ಟ್ಯಾಟೂ ಭಾಗಗಳು ಹೈಲೈಟೆಡ್‌ ಆಗಿ ಫಳಫಳ ಹೊಳೆಯುತ್ತಿತ್ತು.

ಸ್ಮೃತಿ ಯಾವ ಬ್ಯೂಟಿ ಪಾರ್ಲರ್‌ನಲ್ಲಿ ಮೇಕಪ್‌ ಮಾಡಿಸುತ್ತಿದ್ದಳೋ, ಅಲ್ಲಿನ ಬ್ಯೂಟಿ ಎಕ್ಸ್ ಪರ್ಟ್‌ ಪ್ರತಿಭಾಳಿಗೆ ತಾನು ಈ ರೀತಿ ರೆಡಿ ಆಗಬೇಕೆಂದು ತಿಳಿಸಿದ್ದಳು. ಪ್ರತಿಭಾಳಿಗೆ ಇವಳ ಮಾತು ಅರ್ಥವಾಯಿತು. ಹಾಗಾಗಿ ಅವಳು ಸ್ಮೃತಿಯ ತೋಳು ಹಾಗೂ ಸ್ತನದ ಮೇಲ್ಭಾಗದಲ್ಲಿ ಲಿಪ್‌ ಪೆನ್ಸಿಲ್‌‌ನ ನೆರವಿನಿಂದ ಹೂಚಿಟ್ಟೆಗಳ ಔಟ್‌ ಲೈನ್‌ ಬಿಡಿಸಿದಳು. ಇದಾದ ಬಳಿಕ ಆ್ಯಕ್ವಾ ಕಲರ್‌ನಿಂದ ಅದಕ್ಕೆ ಬಣ್ಣ ತುಂಬಿಸಿ ಐಲ್ಯಾಶ್‌ ಗಮ್ ನಿಂದ ಸ್ಟೋನ್‌ ಅಂಟಿಸಿದಳು. ಸ್ಮೃತಿಯ ರಿಸೆಪ್ಶನ್‌ ಸೀರೆಗೆ ಮ್ಯಾಚ್‌ ಮಾಡಿದಳು.

ಬಣ್ಣಗಳಿಂದ ತುಂಬಿದ ಟ್ಯಾಟೂ

ಈ ರೀತಿ ತನ್ನ ಮೈಗೇರಿದ ಟ್ಯಾಟೂ ಕಂಡು ಸ್ಮೃತಿ ಖುಷಿಯಾದಳು. ಅವಳ ಮೈನ ತೆರೆದ ಭಾಗಗಳಲ್ಲಿ ಪ್ರತಿಭಾ ಬಹು ಸುಂದರ ಟ್ಯಾಟೂ ವಿನ್ಯಾಸ ತುಂಬಿಸಿದ್ದಳು. ಇದಕ್ಕಾಗಿ ಪ್ರತಿಭಾ ಟ್ಯಾಟೂವನ್ನು ಆಕರ್ಷಕಗೊಳಿಸಲು ಬಣ್ಣ ಬಣ್ಣದ ಮಣಿಗಳು, ಕುಂದಣ, ಗ್ಲಿಟರ್‌ ಇತ್ಯಾದಿಗಳನ್ನು ಬಳಸಿದ್ದಳು. ಬಹಳಷ್ಟು ಜನ ಬಾಡಿಯನ್ನು ಟ್ಯಾಟೂ, ಮೆಹಂದಿಯಿಂದ ಈ ರೀತಿ ತುಂಬಿಸುತ್ತಾರೆ. ಈ ರೀತಿ ಟ್ಯಾಟೂ ಡಿಸೈನ್‌ ಮಾಡುವ ಪ್ರತಿಭಾ ಹೇಳುತ್ತಾಳೆ, ಟ್ಯಾಟೂನಿಂದ ಬಾಡಿ ಅಲಂಕಾರ ಅತ್ಯಂತ ಕಾಮನ್‌ ಆಗಿದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ಹೊಂದಿಸಬಹುದು, ನಂತರ ರಿಮೂವ್ ‌ಮಾಡಬಹುದು. ಟ್ರೆಂಡಿ ಸ್ಟೈಲಿಶ್‌ ಆಗಿರುವ ಈ ಟ್ಯಾಟೂ ಕ್ರೇಝ್ ನ್ನು ಯುವಜನತೆ ಜ್ಯೂವೆಲರಿ ಜಾಗದಲ್ಲಿ ಬಳಸುತ್ತಿದ್ದಾರೆ. ಟ್ಯಾಟೂ ಇದೀಗ ಬಾಡಿ ಆರ್ಟ್‌ನ ಪ್ರಮುಖ ಭಾಗವಾಗಿದೆ.

ಪ್ರತಿಭಾಳ ಮತ್ತೊಬ್ಬ ಕ್ಲೈಂಟ್‌ ಸ್ಮಿತಾ, ತನ್ನ ಮದುವೆಯ ಮೊದಲ ವಾರ್ಷಿಕೋತ್ಸವದ ಸಲುವಾಗಿ, ಟ್ರೆಂಡಿ  ಗ್ಲಾಮರಸ್‌ ಆಗಿರಲು ಟ್ಯಾಟೂ ಡಿಸೈನ್ಸ್ ಮಾಡಿಸಿದಳು. ಸ್ಮಿತಾ ಪ್ರಕಾರ, ಇಂದು ಎಲ್ಲಲ್ಲೂ ಫ್ಯಾಷನ್‌ ಆಗಿ ಟ್ಯಾಟೂ ಹೊರಹೊಮ್ಮುತ್ತಿದೆ. ಪ್ರತಿಯೊಬ್ಬರೂ ಡಿಫರೆಂಟ್‌ ಆಗಿ ಕಂಡುಬರಲು ಬಯಸುತ್ತಾರೆ. ಹೀಗಾಗಿ ಟ್ಯಾಟೂ ಈಗ ಬಗೆಬಗೆಯಲ್ಲಿ ಪ್ರಯೋಗಗೊಳ್ಳುತ್ತಿದೆ.

ಪ್ರತಿಭಾ ಪ್ರಕಾರ, ಹುಡುಗ ಹುಡುಗಿ ಇಬ್ಬರಲ್ಲೂ ಟ್ಯಾಟೂ ಜನಪ್ರಿಯ ಎನ್ನುತ್ತಾಳೆ. ಹುಡುಗರು ಹೆಚ್ಚು ಹೆಚ್ಚು ಲುಕ್ಸ್ ಇಷ್ಟಪಟ್ಟರೆ, ಹುಡುಗಿಯರು ಸೆಕ್ಸಿ ಹಾಟ್‌ ಲುಕ್ಸ್ ಪಡೆಯಲು ಹೂ, ಚಿಟ್ಟೆ, ಸ್ಟಾರ್‌, ಲವ್ ಸೈನ್‌, ಫಿಶ್‌, ಸ್ನೇಕ್‌ ಇತ್ಯಾದಿ ಮಾಡಿಸುತ್ತಾರೆ.

ಗ್ಲಾಮರಸ್‌ ಆಗುತ್ತಿರುವ ಟ್ಯಾಟೂ ಕ್ರೇಝ್

ಟ್ಯಾಟೂ ನೆರವಿನಿಂದ ದೇಹದ ತೆರೆದ ಭಾಗಗಳನ್ನು ಗ್ಲಾಮರಸ್‌ ಮಾಡಬಹುದು. ಬಾಡಿಯನ್ನು ಅಲಂಕರಿಸಲು ಮಾರ್ಕೆಟ್‌ನಲ್ಲಿ ರೆಡಿಮೇಡ್‌ ಟ್ಯಾಟೂ ಸಹ ಲಭ್ಯ. ಯಾರು ತಮ್ಮನ್ನು ತಾವು ಇತರರಿಗಿಂತ ವಿಭಿನ್ನವಾಗಿ ತೋರಿಸಿಕೊಳ್ಳಲು ಬಯಸುತ್ತಾರೋ ಅಂಥವರು ತಮ್ಮದೇ ಆಯ್ಕೆಯ ಟ್ಯಾಟೂಗಳನ್ನು ಮಾಡಿಸುತ್ತಾರೆ. ಪಾರ್ಟಿಯಲ್ಲಿ ವಿಭಿನ್ನವಾಗಿ ಕಂಗೊಳಿಸ ಬಯಸುವವರು ತಮ್ಮ ತೋಳು, ಕುತ್ತಿಗೆಯ ಕೆಳಭಾಗ, ಬದಿ ಭಾಗ, ಎದೆಯ ಮೇಲ್ಬಾಗ, ಕೈನ ಮಣಿಕಟ್ಟು, ಬ್ಯಾಕ್‌ ಶೋಲ್ಡರ್‌, ಹೊಕ್ಕುಳ ಬಳಿ ಇವನ್ನು ಹಾಕಿಸುತ್ತಾರೆ.

ಟ್ಯಾಟೂನಿಂದ ಬಾಡಿ ಆರ್ಟ್‌ ಮಾಡಿಸುವ ಮೊದಲು, ನಿಮ್ಮ ಡ್ರೆಸ್‌ಗೆ ಅದು ಮ್ಯಾಚ್‌ ಆಗುತ್ತಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ. ಡ್ರೆಸ್‌ ಅತಿ ದೊಡ್ಡದಾಗಿದ್ದು ಟ್ಯಾಟೂವನ್ನೇ ಮರೆಸುವಂತಿರಬಾರದು ಅಥವಾ ತುಂಬಾ ಚಿಕ್ಕದಾಗಿ ನಿಮ್ಮ ದೇಹದ ಅನಗತ್ಯ ಭಾಗ ಹೊರಗೆ ಇಣುಕುವಂತಾಗಬಾರದು.

ಟಿವಿ ಧಾರಾವಾಹಿಗಳ ಪ್ರಭಾವ

ಬಾಲಿವುಡ್‌ ನಿಂದ ಹಾಲಿವುಡ್‌ ವರೆಗಿನ ಕಲಾವಿದರು ಟ್ಯಾಟೂ ಗ್ಲಾಮರನ್ನು ಧಾರಾಳ ಎಲ್ಲೆಡೆ ಹರಡಿದ್ದಾರೆ. ಹಾಲಿವುಡ್‌ ನ ನಾಯಕಿ ಆ್ಯಂಜೆಲಿನಾ ತನ್ನ ದೇಹದ ಮೇಲೆ ಡಜನ್‌ ಗಿಂತಲೂ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಬ್ರಿಟನಿ ಸ್ಪಿಯರ್ಸ್‌ ತನ್ನ ಬೆನ್ನ ಮೇಲೆ ಹಲವು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಐಶ್ವರ್ಯಾ ರಾಯ್‌, ಅಮೃತಾ ಅರೋರಾ, ಈಶಾ ದಿಯೋಲ್‌, ಸಂಜಯ್‌ ದತ್‌, ಹೃತಿಕ್ ರೋಶನ್‌, ಅಜಯ್‌ ದೇವಗನ್‌, ಪ್ರೀತಿ ಭೂಟಾನಿ ಮುಂತಾದವರೆಲ್ಲ ಟ್ಯಾಟೂ ಪ್ರಿಯರು.

ಫುಟ್‌ ಬಾಲ್ ‌ಆಟಗಾರ ಬೈಚುಂಗ್‌ ಭೂಟಿಯಾ ಮತ್ತು ಡೇವಿಡ್‌ ಬೆಕ್ಹೆಮ್ ಸಹ ಹಲವಾರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕಿರುತೆರೆಯ ಕಲಾವಿದರೂ ಸಹ ಇದರ ಆಕರ್ಷಣೆಯಿಂದ ಹೊರತಲ್ಲ.

ತಮ್ಮನ್ನು ಬಯಸುವವರನ್ನು ಇಂಪ್ರೆಸ್‌ ಗೊಳಿಸಲೆಂದೇ ಯುವಜನತೆ ತಮ್ಮ ಕೈ, ಕಾಲು, ತೋಳು, ಎದೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಟೆಂಪರರಿ ಟ್ಯಾಟೂ ಹೆಚ್ಚು ಬಳಕೆಯಲ್ಲಿದೆ. ಇದು ದುಬಾರಿಯಲ್ಲ ಹಾಗೂ ಸುಲಭವಾಗಿ ತೆಗೆದುಬಿಡಬಹುದು.

ಕಾಲೇಜು ಕಿಶೋರಿ ಪೂಜಾ ಹೇಳುತ್ತಾಳೆ, ಅವಳ ಗೆಳತಿಯರೆಲ್ಲ ಮೆಹಂದಿಯಿಂದ ತಮ್ಮ ಹೊಟ್ಟೆ, ಹೊಕ್ಕುಳ, ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರಂತೆ. ಪ್ರತಿಭಾಳ ಪ್ರಕಾರ ಹುಡುಗಿಯರು ಹೂವಿನ ಡಿಸೈನ್ಸ್ ಹೆಚ್ಚು ಮೆಚ್ಚುತ್ತಾರೆ. ಶರ್ಟ್‌, ಟೀ ಶರ್ಟ್‌, ಲೋ ವೆಯ್ಸಟ್ ಜೀನ್ಸ್ ಧರಿಸುವ ಹುಡುಗಿಯರು ಹೆಚ್ಚಾಗಿ ತಮ್ಮ ಹೊಕ್ಕುಳ ಬಳಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಅದು ಇವರುಗಳಿಗೆ ಸೆಕ್ಸಿ ಹಾಟ್‌ ಲುಕ್ಸ್ ನೀಡುತ್ತದೆ. ಶಾರ್ಟ್‌ ಸ್ಕರ್ಟ್‌ ಧರಿಸುವ ಹುಡುಗಿಯರು ತಮ್ಮ ಮಂಡಿಯ ಹಿಂಭಾಗ, ಸೊಂಟದ ಕೆಳಗೆ ತೆರೆದ ಭಾಗಗಳಲ್ಲೂ ಟ್ಯಾಟೂ ಹಾಕಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಿಗೆಂದು ದೇಹಪೂರ್ತಿ ಟ್ಯಾಟೂ ಹಾಕಿಸುವ ಪದ್ಧತಿ ಹೆಂಗಸರಲ್ಲಿ ಹೆಚ್ಚುತ್ತಿದೆ. ಯಾರ ದೇಹದ ಮೇಲೆ ಏನಾದರೂ ಕಲೆ, ಗುರುತುಗಳಿದ್ದರೆ ಅದನ್ನು ಟ್ಯಾಟೂ ಮರೆಮಾಚುತ್ತದೆ.

– ಶೈಲಜಾ ಮೂರ್ತಿ

ಎಚ್ಚರಿಕೆಗಳು

ಟೆಂಪರರಿ ಟ್ಯಾಟೂ ಹೆಚ್ಚು ದಿನ ಬಾಳಿಕೆ ಬರಲು, ನೀರು ಮತ್ತು ಶೇಡಿಂಗ್‌ ಸ್ಪ್ರೇನಿಂದ ದೂರವಿರಿಸಿ. ಬಹಳಷ್ಟು ಮಂದಿ ಪರ್ಮನೆಂಟ್‌ ಟ್ಯಾಟೂ ಸರಿ ಎಂದು ಭಾವಿಸುತ್ತಾರೆ. ಆದರೆ ಇದನ್ನು ಹಾಕಿಸಿಕೊಳ್ಳುವಾಗ ನೋವನ್ನು ಸಹಿಸಬೇಕಾಗುತ್ತದೆ. ಡಿಸೈನ್‌ಆಕಾರದ ದೃಷ್ಟಿಯಿಂದ ಪರ್ಮನೆಂಟ್‌ ಟ್ಯಾಟೂ ಮಾಡಿಸಲು ಖರ್ಚು ಪ್ರತಿ ಇಂಚಿಗೆ 2 ಸಾವಿರ ಆಗುತ್ತದೆ. ಕೆಲವು ವಿಶಿಷ್ಟ ಡಿಸೈನ್‌ ಗಳಿಗಾಗಿ 1 ಲಕ್ಷದವರೆಗೂ ಖರ್ಚು ಮಾಡಬೇಕು. ಇದನ್ನು ಚರ್ಮದ ಒಳಪದರದ ಮೇಲೆ ಇಂಪ್ರೆಸ್ಟ್ ಮಾಡಿ ಹಾಕಿಸಬೇಕಾಗುತ್ತದೆ. ಹೀಗಾಗಿ ಇದನ್ನು ತೆಗೆಸುವುದು ಸುಲಭದ ಕೆಲಸವಲ್ಲ. ಸಣ್ಣ ಪರ್ಮನೆಂಟ್‌ ಟ್ಯಾಟೂ ತೆಗೆಸಲು ಸರ್ಜರಿ ಖರ್ಚು 5-15 ಸಾವಿರ ಆಗುತ್ತದೆ. ದೊಡ್ಡ ಗಾತ್ರದ ಟ್ಯಾಟೂಗಾಗಿ 40-45 ಸಾವಿರ ಖರ್ಚಾಗುತ್ತದೆ.

ಕೆಲವು ಟ್ಯಾಟೂ ಇಂಪೋರ್ಟೆಡ್

ಡೈ ಯಾ ಲೇಟೆಸ್ಟ್ ಶೇಡಿಂಗ್‌ ಬಳಸಿ ಮಾಡಿರುತ್ತಾರೆ. ಇದರಿಂದ ಚರ್ಮದ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಟ್ಯಾಟೂ ಹಾಕಿಸುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಪರ್ಮನೆಂಟ್‌ ಟ್ಯಾಟೂ ಹಾಕಿಸುವಾಗ ಆ ಸೂಜಿಯನ್ನು ಇನ್‌ಫೆಕ್ಷನ್‌ ಫ್ರೀ ಮಾಡಿದ್ದಾರೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಜೊತೆಗೆ ಇದನ್ನು ತೆಗೆಸಿ ಹಾಕುವುದು ಖಂಡಿತಾ ಸುಲಭವಲ್ಲ ಎಂಬುದನ್ನು ನೆನಪಿಡಿ. ಪರ್ಮನೆಂಟ್‌ ಟ್ಯಾಟೂ ತೆಗೆಸಿ ಹಾಕಲು ಲೇಸರ್‌ನ ಬಳಕೆ ಅನಿವಾರ್ಯ. ಇದನ್ನು ಹಲವು ಸಿಟ್ಟಿಂಗ್ಸ್ ಗಾಗಿ ಬಳಸುತ್ತಾರೆ. ಒಮ್ಮೊಮ್ಮೆ ಇಷ್ಟೆಲ್ಲ ಮಾಡಿಯೂ ಪರ್ಮನೆಂಟ್‌ ಟ್ಯಾಟೂ ಹೋಗದು! ಬೆನ್ನು ಮತ್ತು ತೋಳುಗಳ ಮೇಲೆ ಟ್ಯಾಟೂ ಮಾಡಿಸುವಾಗ ಒಮ್ಮೊಮ್ಮೆ ಗಂಟುಗಳಾಗುವ ಸಾಧ್ಯತೆ ಇದೆ, ಚರ್ಮ ತಜ್ಞರ ಸಲಹೆ ಇಲ್ಲದೆ ಮುಂದುವರಿಯಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ