ಋತುಮಾನಕ್ಕೆ ತಕ್ಕಂತೆ ಫುಟ್ ವೇರ್ ಧರಿಸಬೇಕು. ಈ ಕುರಿತಾಗಿಯೇ ಇಲ್ಲಿ ಮಾನ್‌ಸೂನ್ ಫ್ಯಾಷನ್ ಫುಟ್ ವೇರ್ ಬಗ್ಗೆ ತಿಳಿಸಲಾಗಿದೆ.
ಹೌದು, ಚಳಿಗಾಲ ಬೇಸಿಗೆಯಲ್ಲಿ ಫುಟ್ ವೇರ್ ಫ್ಯಾಷನ್ ನಲ್ಲಿ ಬದಲಾವಣೆ ಆಗುವಂತೆ, ಮಳೆಗಾಲದಲ್ಲಿ ಏಕೆ ಆಗಬಾರದು? ಮಳೆಗಾಲದಲ್ಲಿ ನೀವು ಮಾರುಕಟ್ಟೆಗೆ ಹೋದಾಗ ನಿಮಗೆ ಅಲ್ಲಿ ಬೇಕಾದಷ್ಟು ವೈವಿಧ್ಯಮಯ ಆಯ್ಕೆಗಳು ಸಿಗುತ್ತವೆ. ಅದು ಮಳೆ ತುಂತುರು ನಡುವೆ ನಿಮ್ಮ ಸ್ಟೈಲಿಗೆ ಹೆಚ್ಚಿನ ಬೆಡಗು ತುಂಬಲಿದೆ.
ಮಳೆಗಾಲದಲ್ಲಿ ಮಾರುಕಟ್ಟೆ ತುಂಬಾ ನಿಮಗೆ ಬಣ್ಣಬಣ್ಣದ ಫ್ಲಿಪ್ ಫ್ಲಾಪ್, ಫ್ಲಾಟರ್, ರೇನ್ ಬೂಟ್ಸ್ ಮತ್ತು ಪ್ಲಾಸ್ಟಿಕ್ ಚಪ್ಪಲಿಗಳು ತುಂಬಿರುವಂತೆ ಕಂಡುಬರುತ್ತವೆ. ಇವು ನೀಲಿ, ಕೆಂಪು, ಹಳದಿ, ಹಸಿರು ಬಣ್ಣಗಳಲ್ಲಿ ಧಾರಾಳ ದೊರೆಯುತ್ತವೆ. ಇಷ್ಟು ಮಾತ್ರವಲ್ಲದೆ ಫ್ಲವರ್ ಫ್ರಿಂಟ್ಸ್ ಇತರ ಆಕರ್ಷಕ ಡಿಸೈನ್‌ಗಳಲ್ಲಿಯೂ ಲಭ್ಯ. ಇದಂತೂ ನಿಮಗೆ ಟ್ರೆಂಡಿ, ಫಂಕಿ, ಹ್ಯಾಪನಿಂಗ್ ಲುಕ್ಸ್ ನೀಡುತ್ತವೆ.
ಹೀಗಾಗಿ ಈ ಮಾನ್ ಸೂನ್ ಸೀಸನ್ ನಲ್ಲಿ ನೀವು ಎಲ್ಲರಿಗಿಂತ ಹೆಚ್ಚು ಮಿಂಚುವಿರಿ.
ಆಯ್ಕೆ ಹೇಗೆ?
ಮಳೆಗಾಲದಲ್ಲಿ ನೀವು ಫುಟ್ ವೇರ್ ಆರಿಸುವಾಗ ಬಹಳ ಎಚ್ಚರವಾಗಿರಬೇಕು. ಈ ದಿನಗಳಲ್ಲಿ ಶೂಸ್ ಬೇಡವೇ ಬೇಡ. ಏಕೆಂದರೆ ಮಳೆಗಾಲದಲ್ಲಿ ಶೂ ಒಳಗೆ ನೀರು ಇಳಿಯುವುದರಿಂದ, ಒದ್ದೆ ಸಾಕ್ಸ್ ನಿಂದ ಬೇಗನೆ ಫಂಗಲ್ ಇನ್ ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಈ ಸೀಸನ್ ನಲ್ಲಿ ಪ್ಲಾಸ್ಟಿಕ್ ಇತ್ಯಾದಿ ಚಪ್ಪಲಿ ಕಾಲುಗಳಿಗೆ ಸುರಕ್ಷಿತ ಎಂದು ಸಾಬೀತಾಗಿದೆ.
ಈ ಮಳೆಗಾಲದ ಶೋಭೆ ಹೆಚ್ಚು ಫುಟ್ ವೇರ್‌ಗಳಾಗಿ ಇತ್ತೀಚೆಗೆ `ಮ್ಯೂಮ್ಸ್' ಫ್ಯಾಷನ್ ನಲ್ಲಿ ಇನ್ ಆಗಿದೆ, ಇವು ಒಂದು ವಿಧದಲ್ಲಿ ಬ್ಯಾಕ್ ಲೆಸ್ ಶೂಸ್ ಆಗಿವೆ. ಇದು ಫ್ಲಿಪ್ ಫ್ಲಾಪ್ ನದೇ ಸ್ಟೈಲಿಶ್ ವಿಕಲ್ಪ ಆಗಿದೆ. ಇವನ್ನು ಧರಿಸಿ, ಕಳಚುವುದೂ ಅಷ್ಟೇ ಸುಲಭ.
ಬೆಲೆ. ರೂ.250/, 500/ ಇಂದಿನ ಯುವಜನತೆಗೆ ಇದು ಕೈಗೆಟುಕು ಬೆಲೆಯಲ್ಲೇ ಇದೆ.
ಫುಟ್ ವೇರಿನ ಆರೈಕೆ
ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಫುಟ್ ವೇರ್ಸ್ ಎಲ್ಲೆಲ್ಲೂ ಕಂಡುಬರುತ್ತವೆ. ಈ ಬಾರಿ ಗಮ್ ಬೂಟ್‌ನ ಭಾರಿ ಕಲೆಕ್ಷನ್ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಮಳೆಗಾಲದಲ್ಲಿ ಈ ಫುಟ್ ವೇರ್‌ನ್ನು ಎಷ್ಟೇ ಜೋಪಾನವಾಗಿ ಇರಿಸಿಕೊಂಡರೂ, ಅವುಗಳ ಆರೈಕೆಯತ್ತ ಗಮನ ಕೊಡಬೇಕಿದೆ.
ಪ್ಲಾಸ್ಟಿಕ್ ಸ್ಯಾಂಡಲ್ಸ್ : ಪ್ಲಾಸ್ಟಿಕ್ ಸ್ಯಾಂಡಲ್ಸ್ ಯಾ ಶೂಸ್ ಗಲೀಜಾದಾಗ ಸುಲಭವಾಗಿ ಬ್ರಶ್ ಬಳಸಿ ಶುಚಿಗೊಳಿಸಬಹುದಾಗಿದೆ.
ರಬ್ಬರ್ ಫುಟ್ ವೇರ್ : ರಬ್ಬರ್ ಸ್ಯಾಂಡಲ್ಸ್ / ಶೂಸ್ ಧರಿಸುತ್ತೀರಾದರೆ, ಬಳಸಿದ ನಂತರ ತಕ್ಷಣ ಅದನ್ನು ಫ್ಯಾನ್ ಕೆಳಗೆ ಒಣಗಿಸಿ. ಏಕೆಂದರೆ ಒದ್ದೆ ರಬ್ಬರ್ ದುರ್ನಾತ ಬೀರುತ್ತದೆ. ಇದರಿಂದ ಇಂಥ ಪುಟ್ ವೇರ್ ಬೇಗ ಹಾಳಾದೀತು.
ಸ್ಪೋರ್ಟ್ಸ್ ಶೂಸ್ : ನೀವು ಸ್ಪೋರ್ಟ್ಸ್ ಶೂಸ್ ಧರಿಸುತ್ತೀರಾ? ಮನೆಗೆ ಮರಳಿದ ತಕ್ಷಣ ಲೇಸ್ ಕಳಚಿ ಶೂಸ್‌ನ್ನು ಉಲ್ಟಾ ತಿರುಗಿಸಿಡಿ, ಬೇಗ ಒಣಗುತ್ತವೆ. ಹೀಗೆ ಹೊರಗಿನಿಂದ ಮನೆಗೆ ಬಂದ ತಕ್ಷಣ ಬೇಗ ಈ ಕೆಲಸ ಮಾಡುವುದರಿಂದ ನಿಮ್ಮ ಶೂಸ್ ಹೆಚ್ಚು ಬಾಳಿಕೆ ಬರುತ್ತವೆ.