ಬಹಳಷ್ಟು ತಾಯಂದಿರು ಮುಟ್ಟಿಗೆ ಸಂಬಂಧಪಟ್ಟಂತೆ ತಮ್ಮ ಪುತ್ರಿಯರ ಜೊತೆ ಮುಕ್ತವಾಗಿ ಮಾತನಾಡುವುದಿಲ್ಲ. ಅದೇ ಕಾರಣದಿಂದ  ಹದಿವಯಸ್ಸಿನವರು ಆ ಅವಧಿಯಲ್ಲಿ ನೈರ್ಮಲ್ಯದ ಬಗ್ಗೆ ಮಹತ್ವ ಕೊಡುವುದಿಲ್ಲ. ಅದರಿಂದಾಗಿ ಅವರು ಹಲವು ಬಗೆಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಮುಟ್ಟಿಗೆ ಸಂಬಂಧಪಟ್ಟಂತೆ ಜಾಗರೂಕತೆ ಇಲ್ಲದಿರುವುದು ಈ ಎಲ್ಲ ತೊಂದರೆಗಳಿಗೆ ಕಾರಣ. ಈ ಕುರಿತಂತೆ ತಾಯಿಯಾದವಳು ತನ್ನ ಮಗಳಿಗೆ ತಿಳಿಸಿ ಹೇಳಬೇಕು. ಅದರಿಂದ ಅವರು ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನೂ ನಿಭಾಯಿಸುವುದು ಹೇಗೆ ಎಂದು ತಿಳಿದುಕೊಳ್ಳುತ್ತಾರೆ.

ಬಟ್ಟೆ ಬೇಡವೆಂದು ಹೇಳಿ : ಜಾಗರೂಕತೆಯ ಕೊರತೆಯಿಂದ ಈಗಲೂ ನಮ್ಮ ದೇಶದಲ್ಲಿ ಬಹಳಷ್ಟು ಯುವತಿಯರು ಮುಟ್ಟಿನ ಸಂದರ್ಭದಲ್ಲಿ ಬಟ್ಟೆಯನ್ನೇ ಬಳುಸುತ್ತಾರೆ. ಹೀಗೆ ಮಾಡುವುದರಿಂದ ಅವರು ಹಲವು ಗಂಭೀರ ರೋಗಗಳನ್ನು ಎದುರಿಸುವಂತೆ ಮಾಡುತ್ತದೆ. ಬಟ್ಟೆಯನ್ನು  ಬಳಸುವುದರಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ತನ್ನ ಪುತ್ರಿಯನ್ನು ಜಾಗರೂಕಗೊಳಿಸುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯ. ಮಗಳಿಗೆ ಸ್ಯಾನಿಟರಿ ಪ್ಯಾಡ್‌ನ ಉಪಯುಕ್ತತೆಯ ಬಗ್ಗೆ ಮನದಟ್ಟು ಮಾಡಿ ಹಾಗೂ ಅದರಿಂದ ಅವರು ಹಲವು ರೋಗಗಳಿಂದ ದೂರ ಇರಬಹುದು ಮತ್ತು ಆ ದಿನಗಳ್ಲೂ ಉಲ್ಲಸಿತರಾಗಿರಬಹುದು ಎಂದು ತಿಳಿಸಿ ಹೇಳಿ.

ಪ್ಯಾಡನ್ನು ಯಾವಾಗ ಬದಲಿಸಬೇಕು? : ತಾಯಿಯಾದವಳು ಮಗಳಿಗೆ ತಿಳಿಸಬೇಕಾದ ವಿಷಯವೆಂದರೆ, ಪ್ರತಿ 6 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್‌ ಬದಲಿಸಬೇಕು. ಅದರ ಹೊರತಾಗಿ ಅವರ ಅನುಕೂಲಕ್ಕೆ ತಕ್ಕಂತೆ ಪ್ಯಾಡ್‌ ಬದಲಿಸಬೇಕು. ಹೆವಿ ಪ್ಲೇ ಸಂದರ್ಭದಲ್ಲಿ ಮೇಲಿಂದ ಮೇಲೆ ಪ್ಯಾಡ್‌ ಬದಲಿಸಬೇಕಾಗುತ್ತದೆ. ಫ್ಲೋ ಕಡಿಮೆ ಇದ್ದಾಗ ಮೇಲಿಂದ ಮೇಲೆ ಬದಲಿಸಬೇಕಾದ ಅಗತ್ಯವಿಲ್ಲ. ಆದರೂ 4-6 ಗಂಟೆಯಲ್ಲಿ ಸ್ಯಾನಿಟರಿ ಪ್ಯಾಡ್‌ ಬದಲಿಸುವುದು ಸೂಕ್ತ, ಏಕೆಂದರೆ ಸೋಂಕಿನಿಂದ ಸುರಕ್ಷಿತವಾಗಿರುತ್ತದೆ.

ಗುಪ್ತಾಂಗದ ನಿಯಮಿತ ಸ್ವಚ್ಛತೆ : ಪೀರಿಯಡ್ಸ್ ಸಂದರ್ಭದಲ್ಲಿ ಗುಪ್ತಾಂಗದ ಆಸುಪಾಸಿನ ತ್ವಚೆಯಲ್ಲಿ ರಕ್ತ ಜಮೆಗೊಂಡಿರುತ್ತದೆ. ಅದೇ ಸೋಂಕಿಗೆ ಕಾರಣವಾಗುತ್ತದೆ. ಹಾಗಾಗಿ ಗುಪ್ತಾಂಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಅದರಿಂದ ದುರ್ಗಂಧ ಕೂಡ ಬರವುದು.

ಇದನ್ನು ಬಳಸಬೇಡಿ : ವಜೈನಾದಲ್ಲಿ ತನ್ನನ್ನು ತಾನು ಸ್ವಚ್ಛಗೊಳಿಸುವ ನೈಸರ್ಗಿಕ ವ್ಯವಸ್ಥೆ ಇರುತ್ತದೆ. ಅದು ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳ ನಡುವೆ ಸಮತೋಲನ ಕಾಯ್ದುಕೊಂಡು ಹೋಗಲು ನೆರವಾಗುತ್ತದೆ. ಸೋಪು ಯೋನಿಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ. ಹಾಗಾಗಿ ಅದನ್ನು ಬಳಸದಿರಲು ಸಲಹೆ ಕೊಡಿ.

ಸ್ವಚ್ಛತೆಯ ಸರಿಯಾದ ವಿಧಾನ : ನಿಮ್ಮ ಪುತ್ರಿಗೆ ತಿಳಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಗುಪ್ತಾಂಗವನ್ನು ಮುಂದಿನಿಂದ ಹಿಂಭಾಗದತ್ತ ಸ್ವಚ್ಛಗೊಳಿಸಬೇಕು. ತದ್ವಿರುದ್ಧ ದಿಸೆಯಲ್ಲಿ ಎಂದೂ ತೊಳೆಯಬಾರದು. ತದ್ವಿರುದ್ಧವಾಗಿ ತೊಳೆದುಕೊಳ್ಳುವುದರಿಂದ ಹಿಂಭಾಗದ ರೋಗಾಣುಗಳು ಯೋನಿ ಭಾಗದಲ್ಲಿ ಪ್ರವೇಶ ಪಡೆಯುತ್ತವೆ ಹಾಗೂ ಅದೇ ಸೋಂಕಿಗೆ ಕಾರಣವಾಗುತ್ತದೆ.

ಸ್ಯಾನಿಟರಿ ಪ್ಯಾಡಿನ ವಿಲೇವಾರಿ : ಬಳಸಿದ ಪ್ಯಾಡ್‌ನ್ನು ಸೂಕ್ತ ರೀತಿಯಲ್ಲಿ ಸರಿಯಾದ ಜಾಗದಲ್ಲಿ ಎಸೆಯಲು ಹೇಳಿ. ಏಕೆಂದರೆ ಅದು ಸೋಂಕಿಗೆ ಕಾರಣವಾಗುತ್ತದೆ. ಪ್ಯಾಡ್‌ನ್ನು ಫ್ಲಶ್‌ ಮಾಡಬೇಡಿ. ಏಕೆಂದರೆ ಅದರಿಂದ ಟಾಯ್ಲೆಟ್‌ ಬ್ಲಾಕ್‌ ಆಗಬಹುದು. ನ್ಯಾಪ್‌ಕಿನ್‌ನ್ನು ಎಸೆದ ಬಳಿಕ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.

ರಾಶೆಸ್‌ನಿಂದ ಹೇಗೆ ದೂರವಿರುವುದು?

ಮುಟ್ಟಿನ ಅತಿಯಾದ ಸ್ರಾವದ ಸಂದರ್ಭದಲ್ಲಿ ಪ್ಯಾಡ್‌ನಿಂದಾಗಿ ರಾಶೆಸ್‌ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯವಾಗಿ ಪ್ಯಾಡ್‌ ದೀರ್ಘಾವಧಿಯ ತನಕ ಒದ್ದೆಯಾಗಿದ್ದಾಗ ಹಾಗೂ ಅದು ತ್ವಚೆಯ ಮೇಲೆ ಉಜ್ಜುತ್ತಿದ್ದರೆ ಹೀಗಾಗುತ್ತದೆ. ಹೀಗಾಗಿ ಪುತ್ರಿಗೆ ನಿಯಮಿತವಾಗಿ ಪ್ಯಾಡ್‌ ಬದಲಿಸಲು ಹೇಳಬೇಕು. ಒಂದು ವೇಳೆ ರಾಶೆಸ್‌ ಆಗಿದ್ದರೆ, ಸ್ನಾನದ ಬಳಿಕ ಹಾಗೂ ಮಲಗುವ ಮುನ್ನ ಆ್ಯಂಟಿ ಸೆಪ್ಟಿಕ್‌ ಆಯಿಂಟ್‌ಮೆಂಟ್‌ಲೇಪಿಸಿ. ಅದರಿಂದಾಗಿ ರಾಶೆಸ್‌ ಹೊರಟುಹೋಗುತ್ತದೆ. ಒಂದು ವೇಳೆ ಆಯಿಂಟ್‌ಮೆಂಟ್‌ ಲೇಪಿಸಿಕೊಂಡ ಬಳಿಕ ರಾಶೆಸ್‌ ಗುಣಮುಖವಾಗದಿದ್ದರೆ ಅವಳನ್ನು ಸ್ತ್ರೀ ರೋಗತಜ್ಞರ ಬಳಿ ಕರೆದುಕೊಂಡು ಹೋಗಿ.

ಒಂದೇ ಬಗೆಯ ಸ್ಯಾನಿಟರಿ ಪ್ರಾಡಕ್ಟ್ ಬಳಸಿ : ಯಾವ ಹುಡುಗಿಯರಿಗೆ ಹೆವಿ ಫ್ಲೋ ಆಗುತ್ತದೋ, ಅವರು ಏಕಕಾಲಕ್ಕೆ 2 ಪ್ಯಾಡ್‌ಅಥವಾ  1 ಪ್ಯಾಡ್‌ ಜೊತೆಗೆ ಒಂದು ಟ್ಯಾಂಪೋನ್‌ಬಳಸುತ್ತಾರೆ ಅಥವಾ ಒಮ್ಮೊಮ್ಮೆ ಸ್ಯಾನಿಟರಿ ಪ್ಯಾಡ್‌ ಜೊತೆಗೆ ಬಟ್ಟೆಯನ್ನು  ಬಳಸುತ್ತಾರೆ. ಅಂದರೆ ಹೀಗೆ ಮಾಡುವುದರಿಂದ ಅವರಿಗೆ ದೀರ್ಘಾಕಾಲದ ತನಕ ಪ್ಯಾಡ್‌ ಬದಲಿಸುವ ಅವಶ್ಯಕತೆ ಉಂಟಾಗುವುದಿಲ್ಲ. ಇಂತಹದರಲ್ಲಿ ನೀವು ಒಂದು ಸಲಕ್ಕೆ ಒಂದೇ ಬಗೆಯ ಪ್ರಾಡಕ್ಟ್ ಬಳಸಬೇಕು ಎಂದು ಹೇಳಬೇಕು. ಎರಡು ಬಗೆಯ ಪ್ರಾಡಕ್ಟ್ ಧರಿಸಿದರೆ ಅದನ್ನು ಬದಲಿಸದಿದ್ದರೆ ಅದರಿಂದ ಇನ್‌ಫೆಕ್ಷನ್‌ ಉಂಟಾಗುವ ಸಾಧ್ಯತೆ ಇರುತ್ತದೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ