ಈ ಲೇಖನದ ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಅಂದುಕೊಂಡಿರಾ? ಹಿಂದಿನ ಕಾಲದಂತೆ ಕೇವಲ ಗಂಡನಿಗಾಗಿ ಮಾತ್ರವೇ ಎಂಬಂತೆ ಸಿಂಗರಿಸಿಕೊಳ್ಳುವುದಲ್ಲ. ಈಗ, ಅದನ್ನೂ ದಾಟಿ ಜೀವನ ಪ್ರವಾಹ ಹರಿದಂತೆ ಹೆಣ್ಣು ಮುಂದುವರಿಯಬೇಕಿದೆ. ಜೀವನದ ಪ್ರತಿ ಘಟ್ಟವನ್ನೂ ನೀಟಾಗಿ ಎದುರಿಸುತ್ತಾ ಸಾಗಬೇಕು. ಪ್ರತಿ ಹೆಣ್ಣೂ ತನ್ನ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ಅದನ್ನು ಗಳಿಸಲಿಕ್ಕಾಗಿ, ಮೇಕಪ್‌ ಅತಿ ಮುಖ್ಯವಾಗುತ್ತದೆ.

ಮೇಕಪ್‌ ಎಂದ ತಕ್ಷಣ ಮನಸ್ಸಿಗೆ ಹೊಳೆಯುವುದು ಬಗೆಬಗೆಯ ಬಣ್ಣ ಬಣ್ಣದ ಲಿಪ್‌ಸ್ಟಿಕ್‌, ಕ್ರೀಂ ಬಳಿದ ಮುಖ ಇತ್ಯಾದಿ. ಆದರೆ ಮೇಕಪ್‌ನ ಅಸಲಿ ಉದ್ದೇಶ ಮುಖದಲ್ಲಿನ ಕುಂದುಕೊರತೆಗಳನ್ನು ಮರೆಮಾಚುವುದು, ಮುಖಕ್ಕೆ ಹೆಚ್ಚು ಕಳೆ ಕೊಡುವ ಭಾಗ ಲಕಲಕ ಹೊಳೆಯುವಂತೆ ಮಾಡುವುದು.

ರೆಗ್ಯುಲರ್‌ ಆಗಿ ಮೇಕಪ್‌ ಮಾಡಿಕೊಳ್ಳುವ ಅನುಭವಿ ಹೆಂಗಸರನ್ನು ಕೇಳಿದರೆ, ಆಕೆ ತಾನು ಈಗಾಗಲೇ 40+ ದಾಟಿದ್ದರೂ ಮೇಕಪ್‌ ಮುಂದಕ್ಕೂ ಬೇಕೆನಿಸುತ್ತದೆ ಎಂದೇ ಹೇಳುತ್ತಾಳೆ. ಆಕೆ ಆತ್ಮವಿಶ್ವಾಸದಿಂದ ಹೇಳುವ ಮತ್ತೊಂದು ಮಾತೆಂದರೆ, ಪ್ರತಿ ವಯಸ್ಸಿನವರಿಗೂ ಬೇರೆ ಬೇರೆ ಆದ್ಯತೆಗಳಿರುತ್ತವೆ, ಹಾಗಾಗಿ ಪ್ರತಿ ವಯಸ್ಸಿನವರೂ ತಮ್ಮ ವಯಸ್ಸಿಗೆ ತಕ್ಕಂತೆ ಮೇಕಪ್ ಪ್ರಾಡಕ್ಟ್ಸ್ ಬದಲಿಸುತ್ತಾ ಇರಬೇಕು. ಸಾಮಾನ್ಯವಾಗಿ ಹೆಂಗಸರು ಒಂದೇ ಬಗೆಯ ಫೌಂಡೇಶನ್‌, ಫೇಸ್‌ ಪೌಡರ್‌ ಯಾ ಲಿಪ್‌ಸ್ಟಿಕ್‌ ಶೇಡ್ಸ್ ನ್ನು ಬಳಸುತ್ತಿರುತ್ತಾರೆ.

ಆದರೆ ನೀವೇ ಯೋಚಿಸಿ ನೋಡಿ, ನಿಮ್ಮ ಚರ್ಮ ವಯಸ್ಸಿಗೆ ತಕ್ಕಂತೆ ಮಾರ್ಪಡುತ್ತಿರುವಾಗ, ನೀವು ಒಂದೇ ಬಗೆಯ ಮೇಕಪ್‌ಪ್ರಾಡಕ್ಟ್ ಬಳಸುತ್ತಿದ್ದರೆ ಅದು ಸರೀಹೋದೀತೇ?

ವಯಸ್ಸು 6 ಇರಲಿ ಅಥವಾ 60, ಕನ್ನಡಿ ಹೆಣ್ಣಿನ ಅತಿ ನಿಕಟ ಸಂಗಾತಿ. ಹಾಗಾಗಿ ಕನ್ನಡಿ ಅವಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮೊದಲು ತಿಳಿಸಿಬಿಡುತ್ತದೆ. ಹಾಗಿರುವಾಗ ಕನ್ನಡಿ ನೀಡುವ ಸಲಹೆ ಪ್ರಕಾರ ವಯಸ್ಸು, ಏರಿದಂತೆ ನಮ್ಮ ಮೇಕಪ್‌ ಪ್ರಾಡಕ್ಟ್ಸ್ ಬದಲಾಯಿಸಬಾರದೇಕೆ? ಆಗ ನಾವು ಜೀವನವಿಡೀ ಸುಂದರವಾಗಿ ಸ್ಮಾರ್ಟ್‌ ಆಗಿ ಕಂಗೊಳಿಸಲು ಸಾಧ್ಯ.

ಅದಕ್ಕಾಗಿ ಈ ಕೆಳಗಿನ ಸಲಹೆ ಅನುಸರಿಸಿ :

1-10

ಮುದ್ದು ಮಗು ಇಂಚರಾಳನ್ನು ಅವಳ ಚಿಕ್ಕಮ್ಮನ ಮದುವೆಯಲ್ಲಿ ಎಲ್ಲರಿಗಿಂತ ಕ್ಯೂಟ್‌ ಬೇಬಿ ಎಂದು ಸಾರಲು ಅವರಮ್ಮ ಪಲ್ಲವಿ ಮನಸ್ಸು ಬಂದಂತೆ ಮೇಕಪ್‌ ಮಾಡಿದಳು. ಆ ಮಗುವಿಗಾದರೋ ಇನ್ನೂ 7 ವರ್ಷ ಅಷ್ಟೆ. ಹೀಗಾಗಿ ಮನ ಬಂದಂತೆ ಇಷ್ಟು ಚಿಕ್ಕ ಹುಡುಗಿಗೆ ಮೇಕಪ್‌ ಮಾಡಬಾರದು, ಅಥವಾ ಇದೇನು ಇಷ್ಟು ಚಿಕ್ಕ ಹುಡುಗಿಗೆ ಮೇಕಪ್‌ ಮಾಡಬೇಕೇ ಎಂದು ಮೂಗು ಮುರಿಯದಿರಿ. ಅದು ಹೆಣ್ತನದ ಹಕ್ಕು, ಹೀಗಾಗಿ ಲೈಟ್‌ ಮೇಕಪ್‌ನಲ್ಲಿ ತಪ್ಪಿಲ್ಲ.

1-10 ವರ್ಷದ ಹೆಣ್ಣುಮಕ್ಕಳಿಗೆ ಹೀಗೆ ಮೇಕಪ್‌ ಮಾಡಿ :

ಈ ವಯಸ್ಸಿನಲ್ಲಿ ಚರ್ಮ ಸಹಜವಾಗಿಯೇ ಮೃದು, ಕೋಮಲ ಆಗಿರುತ್ತದೆ. ಹೀಗಾಗಿ ಪ್ರತಿ ದಿನದ ಸ್ನಾನಕ್ಕೆ ಕೆಮಿಕಲ್ಸ್ ರಹಿತ ಮೈಲ್ಡ್ ಸೋಪ್‌ಶ್ಯಾಂಪೂ ಬಳಸಿರಿ.

ಈ ಮಕ್ಕಳಿಗೆ ಎಂದೂ ಮರೆತೂ ಸಹ ತುಟಿಗೆ ಲಿಪ್‌ಸ್ಟಿಕ್‌ ಹಚ್ಚಬಾರದು! ಈ ವಯಸ್ಸಿನಲ್ಲಿ ಮಕ್ಕಳ ತುಟಿ ನೈಸರ್ಗಿಕವಾಗಿಯೇ ಗುಲಾಬಿಯಾಗಿರುತ್ತದೆ. ಚಳಿ, ಮಳೆಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಮಕ್ಕಳ ತುಟಿಗಳಿಗೆ ಹಾಲಿನ ಕೆನೆ, ಗಟ್ಟಿಯಾದ ಕೊಬ್ಬರಿ ಎಣ್ಣೆ ಪದರ, ವ್ಯಾಸಲೀನ್‌ ಅಥವಾ ಗ್ಲಿಸರಿನ್‌ ಹಚ್ಚಿರಿ. ಅಮ್ಮ ಮೇಕಪ್‌ ಮಾಡಿಕೊಳ್ಳುವುದನ್ನು ನೋಡಿ 7-8 ವರ್ಷದ ಮಗಳು ಹಠ ಮಾಡಿದರೆ, ನೀವು ನ್ಯೂಡ್‌ ಲಿಪ್‌ ಜೆಲ್ ‌ಲೈಟಾಗಿ ಟಚ್‌ ಮಾಡಿ, ಇದರಿಂದ ಹಾನಿ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ