ತಾಯಂದಿರಾದ ನಂತರ ಹೆಂಗಸರು ತಮ್ಮ ಕಡೆ ಗಮನ ಕೊಡುವುದನ್ನು ಸಂಪೂರ್ಣ ನಿರ್ಲಕ್ಷಿಸಿ ಸದಾ ಮಗುವಿನ ಬಗ್ಗೆ ಚಿಂತಿಸುತ್ತಿರುತ್ತಾರೆ, ತಮ್ಮನ್ನು ಸಿಂಗರಿಸಿಕೊಳ್ಳಲು ಹೊರಗೆ ಹೋಗುವಾಗ ಪ್ರೆಸೆಂಟೆಬಲ್ ಆಗಿರುವುದರತ್ತಲೂ ಯೋಚಿಸುವುದಿಲ್ಲ. ಹೀಗಾಗಿ ಗಾರ್ಜಿಯಸ್ ಆಗಿ ಕಾಣಿಸುವ ಬದಲು ಸದಾ ಸುಸ್ತಾಗಿರುವಂತೆ ಕಂಡು ಬರುತ್ತಾರೆ.
ಮನೆಯಲ್ಲಿರುವಾಗ ನೈಟಿ ಧರಿಸಿ ಹೇಗೋ ಇದ್ದುಬಿಡುವುದು, ಬಿಳಿ ಕೂದಲ ಬಗ್ಗೆ ನಿರ್ಲಕ್ಷ್ಯ, ಹೇರ್ ಕಟ್ ಬಗ್ಗೆ ಚಿಂತೆಯಿಲ್ಲ ಹೇಗೋ ಇದ್ದರಾಯ್ತು ಬಿಡು ಎಂಬ ಮನೋಭಾವ ಬಂದುಬಿಟ್ಟಿರುತ್ತದೆ. ಇಂಥ ಲುಕ್ಸ್ ನಲ್ಲಿ ಅವರು ಕನ್ನಡಿಯಲ್ಲಿ ತಮ್ಮನ್ನು ತಾವು ಗಮನಿಸಿಕೊಂಡಾಗ ಇನ್ನಷ್ಟು ಟೆನ್ಶನ್ ಹೆಚ್ಚುತ್ತದೆ.
ಹೀಗಾಗಿ ಹೇರ್ ಸ್ಟೈಲಿಸ್ಟ್ ತಜ್ಞರು, ಇಂಥ ಬಿಝಿ ತಾಯಂದಿರು ಸೆಲೂನ್‌ಗೆ, ಪಾರ್ಲರ್‌ಗೆ ಹೋದಾಗ ಆಯಾ ಒಡತಿಯರು ಇವರಿಗೆ ಮೊದಲ ಆದ್ಯತೆ ಕೊಡಬೇಕು ಎನ್ನುತ್ತಾರೆ. ತಜ್ಞರ ಪ್ರಕಾರ, ಒಬ್ಬ ತಾಯಿಯಾಗಿ ಮಗು ಕೈಗೂಸಾಗಿದ್ದರೆ ನಮಗಾಗಿ ಸಮಯ ಮಾಡಿಕೊಳ್ಳುವುದು ಎಷ್ಟು ಕಷ್ಟ ಅಂತ ಗೊತ್ತು. ಆದರೂ ತಾಯಂದಿರು ತಮ್ಮ ಲುಕ್ಸ್ಗಾಗಿ ಬದಲಾವಣೆ ಮಾಡಿಕೊಳ್ಳಬೇಕಾದುದು ಅನಿವಾರ್ಯ. ಈ ಬದಲಾವಣೆ ಅವರ ಪರ್ಸನಾಲ್ಟಿ ಬೆಳಗುತ್ತದೆ. ಕೂದಲಿಗೆ ಕಲರಿಂಗ್ ಮಾಡಿ ಲುಕ್ಸ್ ಬದಲಿಸಿಕೊಳ್ಳಬಹುದು. ಹೇರ್ ಕಲರಿಂಗ್ ಈಗ ಬಹಳ ಟ್ರೆಂಡಿ ಎನಿಸಿದೆ. ನಿಮ್ಮ ಆಯ್ಕೆ ಪ್ರಕಾರ ಬ್ರೌನ್, ಕಾಫಿ, ಬರ್ಗಂಡಿ, ರೆಡ್ ಇತ್ಯಾದಿ ಆರಿಸಿ. ಇತ್ತೀಚೆಗೆ ಅಮೋನಿಯಾ ಮುಕ್ತ ಕಲರ್ಸ್ ಧಾರಾಳ ಸಿಗುತ್ತಿದೆ. ಇದರಿಂದ ಕೂದಲಿಗೆ ಯಾವುದೇ ಹಾನಿ ಇಲ್ಲ.
ಪರ್ಫೆಕ್ಟ್ ಹೇರ್ ಕಲರ್ ಆಯ್ಕೆ
ನಿಮ್ಮ ಕೂದಲಿಗಾಗಿ ಪರ್ಫೆಕ್ಟ್ ಕಲರ್ ಆರಿಸುವ ಬಣ್ಣ ಕೆಮಿಕಲ್ಸ್ ರಹಿತ ಆಗಿರಬೇಕು, ಗಿಡಮೂಲಿಕೆ (ಹರ್ಬಲ್) ಆಧರಿಸಿರಬೇಕು.
ಬ್ಲ್ಯಾಕ್ ಹೇರ್ ಕಲರ್ : ನಿಮ್ಮ ಚರ್ಮದ ಬಣ್ಣ ಗಾಢವಾಗಿದ್ದರೆ, ಆಗ ನೀವು ನಿಮ್ಮ ಕೂದಲಿಗಾಗಿ ಬ್ಲ್ಯಾಕ್ ಕಲರ್‌ನ್ನೇ ಬಳಸಿ. ಈ ಬಣ್ಣ ಎಲ್ಲರ ಅಚ್ಚುಮೆಚ್ಚು! ಗಾಢ ಸ್ಕಿನ್ ಟೋನ್‌ಗೆ ಇದು ಚೆನ್ನಾಗಿ ಒಪ್ಪುತ್ತದೆ.
ಬ್ರೌನ್ ಹೇರ್ ಕಲರ್ : ನೀವು ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಬಯಸಿದರೆ, ಆಗ ಬ್ರೌನ್ ಬಣ್ಣ ಆರಿಸಿ. ಇದರಲ್ಲೂ ನಿಮಗೆ ತೆಳು ಹಾಗೂ ಗಾಢ ಬಣ್ಣ ಎರಡೂ ದೊರಕುತ್ತದೆ. ಇದರ ಎರಡೂ ಶೇಡ್ಸ್ ಬಲು ಪರ್ಫೆಕ್ಟ್.
ರೆಡ್ ಹೇರ್ ಕಲರ್ : ಇತ್ತೀಚೆಗೆ ಈ ಬಣ್ಣದ ಕ್ರೇಜ್ ಹೆಚ್ಚುತ್ತಿದೆ. ಇದರಲ್ಲಿ ನಿಮ್ಮ ಲುಕ್ಸ್ ಎದ್ದು ತೋರುತ್ತದೆ. ಬೇರೆಯವರಿಗಿಂತ ವಿಭಿನ್ನರಾಗಿ ಕಾಣುವಿರಿ. ಈ ಬಣ್ಣದಲ್ಲೂ ಲೈಟ್ ಡಾರ್ಕ್ ಕಲರ್ಸ್ ಲಭ್ಯ.
ಗೋಲ್ಡನ್ ಹೇರ್ ಕಲರ್ : ಈ ಬಣ್ಣ ಬಹು ಜನರಿಗೆ ಒಪ್ಪುವುದಿಲ್ಲ. ಆದರೆ ನಿಮ್ಮದು ಗೌರವರ್ಣ (ಫೇರ್) ಆಗಿದ್ದರೆ, ಇದನ್ನು ಆರಿಸಿ. ಫೇರ್ ಸ್ಕಿನ್‌ನವರಿಗೆ ಇದು ಹೆಚ್ಚು ಒಪ್ಪುತ್ತದೆ.
ಹೇರ್ ಸ್ಟೈಲ್ ಟಿಪ್ಸ್
ತಾಯಿಯಾದ ಮೇಲೆ ಹೆಣ್ಣು ತನ್ನನ್ನು ತಾನು ನಿರ್ಲಕ್ಷಿಸಿದರೂ ಕೆಲವು ಸುಲಭ ಸ್ಟೆಪ್ಸ್ ಫಾಲೋ ಮಾಡಿ ಲುಕ್ಸ್ ಸುಧಾರಿಸಬಹುದು. ಕಡಿಮೆ ಸಮಯದಲ್ಲೇ ಸ್ಟೈಲಿಶ್ ಹೇರ್ ಲುಕ್ಸ್ ಪಡೆಯಿರಿ.