- ರಾಘವೇಂದ್ರ ಅಡಿಗ ಎಚ್ಚೆನ್.

ಜವಳಿಗಳ ರಾಣಿ  ಎಂದೇ ಕರೆಯಲಾಗಿರುವ ರೇಷ್ಮೆಯ ಉಡುಪುಗಳನ್ನೇ ಭಾರತದ ಎಲ್ಲೆಡೆ ಮಹಿಳೆಯರು ಪ್ರಮುಖ ಸಮಾರಂಭಗಳಲ್ಲಿ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಧರಿಸುತ್ತಾರೆ. ಗ್ರಾಹಕರು ಶುದ್ಧವಾದ ರೇಷ್ಮೆಯನ್ನೆ ಖರೀದಿಸುವುದನ್ನು ಎದುರು ನೋಡುವುದರಿಂದ ಶೇ.100ರಷ್ಟು ಶುದ್ಧ ರೇಷ್ಮೆ ಪಡೆಯುವುದು ಅವರ ಹಕ್ಕಾಗಿರುತ್ತದೆ. ಆದರೆ, ಶುದ್ಧವಲ್ಲದ ರೇಷ್ಮೆಯ ಮಾರಾಟ ಮಾಡುವ  ನೀತಿ ನಿಷ್ಠೆಗಳಿಲ್ಲದ ಮಾರಾಟಗಾರರಿಂದ ಅನೇಕರು ವಂಚನೆಗೆ ಒಳಗಾಗುತ್ತಾರೆ. ಈ ಶುದ್ಧವಲ್ಲದ ರೇಷ್ಮೆಗಳನ್ನು ವಿಸ್ಕಾಸ್, ರೇಯಾನ್, ಪಾಲಿಯೆಸ್ಟರ್, ನೈಲಾನ್ ಮುಂತಾದಗಳಿAದ ತಯಾರಿಸಿ ಶುದ್ಧ ರೇಷ್ಮೆ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

IMG-20260304-WA0031

ಭಾರತ ಸರ್ಕಾರದ ಜವಳಿ ಇಲಾಖೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ನ ಉಪಕ್ರಮವಾಗಿರುವ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ(ಎಸ್‌ಎAಒಐ) ಭಾರತದ ಎಲ್ಲೆಡೆ ಸಿಲ್ಕ್ ಮಾರ್ಕ್ ಎಕ್ಸ್ಪೋಗಳನ್ನು ಆಯೋಜಿಸುತ್ತದೆ. ಗುಣಗ್ರಾöಹಿ ರೇಷ್ಮೆ ಪ್ರೇಮಿ ಗ್ರಾಹಕರು ದೇಶದ ಎಲ್ಲೆಡೆಯ ಶೇ.100ರಷ್ಟು ಪರಿಶುದ್ಧ ರೇಷ್ಮೆಯ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸುವ ಅವಕಾಶ ಮಾಡಿಕೊಡಲು ಈ ಎಕ್ಸ್ಪೋಗಳನ್ನು ನಡೆಸಲಾಗುತ್ತಿದೆ.

IMG-20260304-WA0044

ಅಧಿಕೃತ ನೇಕಾರರು, ಸಹಕಾರ ಸಂಸ್ಥೆಗಳು, ಸಂಘಗಳು, ಮಹಿಳಾ ಉದ್ಯಮಶೀಲರು, ಮಾರಾಟಗಾರರು ಮುಂತಾದವರು ಅವರ ಉತ್ಪನ್ನಗಳನ್ನು ಶುದ್ಧ ರೇಷ್ಮೆಯ ಮೌಲ್ಯ ಅರಿತಿರುವ ಗ್ರಾಹಕರ ಮುಂದೆ ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಈ ಎಕ್ಸ್ಪೊಗಳು ವೇದಿಕೆ ಪೂರೈಸುತ್ತವೆ.

IMG-20260304-WA0046

ಈ ಎಕ್ಸ್ಪೋಗಳ ಅನನ್ಯ ವೈಶಿಷ್ಟö್ಯ ಎಂದರೆ ಭಾರತದ ಎಲ್ಲೆಡೆಯಿಂದ ಬರುವ ಅಸಂಖ್ಯ ರೇಷ್ಮೆ ನೇಯ್ಗೆ ಗುಂಪುಗಳ ವಿಸ್ತಾರವಾದ ಶ್ರೇಣಿಯ ರೇಷ್ಮೆಗಳನ್ನು ನೋಡಲು ಕಾಣಸಿಗುವುದಾಗಿದೆ. ಜೊತೆಗೆ ಮಲ್ಬರಿ, ಟಸ್ಸಾರ್, ಎರಿ ಮತ್ತು ಮುಗದಂತಹ ನಾಲ್ಕು ವಾಣಿಜ್ಯ ರೇಷ್ಮೆಗಳನ್ನು ಸ್ವತಃ ಸ್ಪರ್ಷಿಸಿ ಅನುಭವಿಸಲು ಮತ್ತು ಆರಿಸಿಕೊಳ್ಳಲು ಇಲ್ಲಿ ಅವಕಾಶವಿರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಈ ಎಕ್ಸ್ಪೋದಲ್ಲಿ ಮಾರಾಟ ಮಾಡುವ ಪ್ರತಿಯೊಂದು ಉತ್ಪನ್ನ ಶೇ.

IMG-20260304-WA0040

100ರಷ್ಟು ಶುದ್ಧ ರೇಷ್ಮೆಯಾಗಿರುವ ಖಾತ್ರಿಯ ಭರವಸೆಯನ್ನು ಸಿಲ್ಕ್ ಮಾರ್ಕ್ ಲೇಬಲ್ ನೀಡುತ್ತದೆ. ಇದಲ್ಲದೆ ಎಕ್ಸ್ಪೋದಲ್ಲಿ ಸ್ಥಳದಲ್ಲಿಯೇ ರೇಷ್ಮೆ ಪರೀಕ್ಷಿಸುವ ಕೇಂದ್ರ ಇದ್ದು, ಗ್ರಾಹಕರು ತಾವು ಖರೀದಿಸುವ ರೇಷ್ಮೆಯ ಶುದ್ಧತೆಯನ್ನು ತಕ್ಷಣದಲ್ಲಿ ಸಂಪೂರ್ಣ ಉಚಿತವಾಗಿ ಪರೀಕ್ಷಿಸಿಕೊಳ್ಳಬಹುದಾಗಿದೆ.

IMG-20260304-WA0038

ಸಿಲ್ಕ್ ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾದ ಪ್ರಮುಖ ಮಳಿಗೆಗಳು ರೇಷ್ಮೆ ಕೃಷಿ ಉದ್ಯಮದ ಒಂದು ನೋಟವನ್ನು ರೇಷ್ಮೆ ಗೂಡು, ನೂಲು ಮತ್ತು ಬಟ್ಟೆಯ ಪ್ರದರ್ಶನದೊಂದಿಗೆ ಈ ಎಕ್ಸ್ಪೊದಲ್ಲಿ ಪ್ರಸ್ತುತಪಡಿಸುವುದರೊಂದಿಗೆ ಹೆಚ್ಚಿನ ಗಮನ ಸೆಳೆಯುತ್ತವೆ. ಈ ಕೇಂದ್ರದಲ್ಲಿ ಜೀವಂತ ರೇಷ್ಮೆ ಹುಳುಗಳ ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿದೆ.

IMG-20260304-WA0032

ಈ ಬಾರಿಯ ಪ್ರದರ್ಶನ ಮಾರ್ಚ್ 3 ರಿಂದ 8, 2026 ರವರೆಗೆ ನಡೆಯಲಿದ್ದು ಇಂಡಿಯನ್ ಸಿಲ್ಕ್ ಗ್ಯಾಲರಿ ಎಕ್ಸ್ಪೋ 2026  ಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಚಾಲನೆ ಸಿಕ್ಕಿದೆ. ಇಂಡಿಯನ್ ಸಿಲ್ಕ್ ಗ್ಯಾಲರಿ ಎಕ್ಸ್ಪೋ ಪ್ರದರ್ಶನವು ಕರ್ನಾಟಕ ಚಿತ್ರಕಲಾ ಪರಿಷತ್,  (ಹೋಟೆಲ್ ಲಲಿತ್ ಅಶೋಕ್ ಪಕ್ಕ),  ಕುಮಾರ ಕೃಪಾ, ಬೆಂಗಳೂರು ಈ ವಿಳಾಸದಲ್ಲಿ ಬೆಳಗ್ಗೆ 10.00 ಗಂಟೆಯಿAದ ರಾತ್ರಿ 8.00 ಗಂಟೆಯವರೆಗೆ ನಡೆಯಲಿದೆ.

IMG-20260304-WA0045

ಮಾರ್ಚ್ 3 ರಂದು ಮಧ್ಯಾಹ್ನ 2.30ಕ್ಕೆ ಚಿತ್ರಕಲಾ ಪರಿಷತ್ತಿನಲ್ಲಿ ಸ್ಯಾಂಡಲ್‌ವುಡ್ ನಟಿ ಮಿಸ್ ಸಾಕ್ಷಿ ಮೇಘನಾ ಅವರು ಇಂಡಿಯನ್ ಸಿಲ್ಕ್ ಗ್ಯಾಲರಿ ಎಕ್ಸ್ಪೊ ಉದ್ಘಾಟಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ