ಮೇಘಾ ತನ್ನ ನೆರೆಮನೆಯವಳನ್ನು ಮುಕ್ತವಾಗಿ ಸ್ವಾಗತಿಸಿದಳು. ಅಂಜಲಿ ಇತ್ತೀಚೆಗೆ ತನ್ನ ಪತಿ ಸುನೀಲ್ ‌ಹಾಗೂ ಅವರ 4 ವರ್ಷದ ಮಗಳು ವಿನೂತಾ ಎದುರುಗಿನ ಫ್ಲ್ಯಾಟಿಗೆ ಬಂದಿದ್ದರು. ಎದುರಿಗೆ ಬಂದಾಗ ಅವರು ಮುಗುಳ್ನಗುತ್ತಿದ್ದರು. ಸುನೀಲ್ ನದು ಟೂರಿಂಗ್‌ ಜಾಬ್‌, ಮೇಘಾಳ ಪತಿ ವಿನಯ್‌ ಹಾಗೂ ವಯಸ್ಸಿಗೆ ಬಂದ ಮಗ ಯಶ್‌ ಸ್ವಲ್ಪ ಧಾರಾಳ ಸ್ವಭಾವದವರಾಗಿದ್ದರು.

ಕೆಲವು ದಿನಗಳ ಬಳಿಕ ಮೇಘಾ ಒಂದು ಸಂಗತಿ ಗಮನಿಸಿದಳು. ಎದುರು ಮನೆಯ ಅಂಜಲಿ ವಿನಯ್‌ ಆಫೀಸಿಗೆ ಹೋಗುವ ಸಮಯದಲ್ಲಿಯೇ ಹೊರಗೆ ಪಾರ್ಕಿಂಗಿನಲ್ಲಿ ಸುತ್ತಾಡುತ್ತಿರುವುದನ್ನು ನೋಡಿದಳು. ಒಂದೆರಡು ಸಲ ಆಕೆ ಇದನ್ನು ಯೋಗಾ ಯೋಗ ಎಂದು ಭಾವಿಸಿದಳು. ಆದರೆ ವಿನಯ್‌ ಸ್ವತಃ ಬಂದು ಹೇಳಿದಾಗ ಆಕೆ ಅಲ್ಲಿ ನಿಲ್ಲುತ್ತಿದ್ದುದು ಉದ್ದೇಶಪೂರ್ವಕವಾಗಿ ಎನ್ನುವುದು ತಿಳಿಯಿತು. ಅಂಜಲಿ ತನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾಳೆ, ನಾನು ಏಕಾಂಗಿಯಾಗಿರುತ್ತೇನೆ. ಎದುರು ಮನೆಯವರ ನಂಬರ್‌ ತನ್ನ ಬಳಿ ಇದ್ದರೆ ಒಳ್ಳೆಯದು ಅದಕ್ಕೆ ನಿಮ್ಮ ನಂಬರ್‌ ಕೊಡಿ ಎಂದು ಕೇಳಿರುವುದು ಮೇಘಾಳನ್ನು ಚಕಿತಳನ್ನಾಗಿಸಿತು. ತಾನು ಅನೇಕ ಸಲ ಅವಳಿಗೆ ಮುಖಾಮುಖಿಯಾದರೂ ತನ್ನ ಮುಂದೆ ಅದರ ಬಗ್ಗೆ ಪ್ರಸ್ತಾಪಿಸಲಿಲ್ಲವಲ್ಲ ಎನ್ನುವುದು ಮೇಘಾಳಿಗೆ ಬೇಸರವನ್ನುಂಟು ಮಾಡಿತು.

ಅಂಜಲಿ ಯಾವ ಸಮಯದಲ್ಲಿ ಬಂದು ದಾಳಿ ಇಡುತ್ತಿದ್ದಳೆಂದರೆ, ಮೇಘಾ ಅಡುಗೆ ಕೆಲಸದಲ್ಲಿ ಸಾಕಷ್ಟು ಮಗ್ನಳಾಗಿದ್ದಾಗ. ಆಗ ವಿನಯ್‌ ಟಿವಿ ನೋಡುತ್ತಾ ಕುಳಿತಿರುತ್ತಿದ್ದ. ಅವಳ ವೇಷಭೂಷಣ, ಅಲಂಕಾರ ಎಲ್ಲವೂ ಮೇಘಾಳನ್ನು ಆತಂಕಕ್ಕೀಡು ಮಾಡುತ್ತಿತ್ತು. ಅದೊಂದು ದಿನ ವಿನಯ್‌ ತಾನು ಅವಳಿಗೆ ಮೆಸೇಜ್‌, ಜೋಕ್ಸ್ ಕಳಿಸುತ್ತಿದ್ದುದಾಗಿ ಹೇಳಿದ. ಮೊದ ಮೊದಲು ಮೇಘಾಳಿಗೆ ಬಹಳ ಕೋಪ ಬರುತ್ತಿತ್ತು. ಬಳಿಕ ಅವಳು ಶಾಂತ ಮನಸ್ಸಿನಿಂದ “ನೀವು ಇದನ್ನು ಎಂಜಾಯ್‌ ಮಾಡುತ್ತಿಲ್ಲ ತಾನೇ?” ಎಂದು ಛೇಡಿಸಿದಳು.

“ನಾನು ಅದನ್ನು ಎಂಜಾಯ್‌ ಮಾಡುತ್ತಿದ್ದರೆ ನಿನಗೆ ಅದರ ಬಗ್ಗೆ ಹೇಳುತ್ತಿದ್ದೆನಾ?” ಎಂದು ವಿನಯ್‌ ತಮಾಷೆ ಮಾಡುತ್ತಾ, “ನಿನ್ನ ಗಂಡ ಪಕ್ಕದ ಮನೆಯವರ ಫ್ಲರ್ಟಿಗೆ ಬಲಿಯಾಗುತ್ತಾನಾ ಮೈ ಡಿಯರ್‌ ಪ್ರಮ್ ಲೈಫ್‌,” ಎಂದ ಹೇಳಿದ.

“ಓಹೋ ಹಾಗೋ ಸಮಾಚಾರ….. ಪಕ್ಕದ ಮನೆಯವರ ಫ್ಲರ್ಟಿಂಗ್‌ ಭೂತ ಇಳಿಸುವುದು ನನಗೆ ಸುಲಭದ ಕೆಲಸ,” ಎಂದು ಮೇಘಾ ಹೇಳಿದಳು. ಆಗ ವಿನಯ್‌ ಅವಳ ಮುಂದೆ ಕೈ ಜೋಡಿಸಿ ನಿಂತ.

ಮರುದಿನ ಮೇಘಾ, ವಿನಯ್‌ ಹೊರಡುವ ಸಮಯಕ್ಕೆ ಪಾರ್ಕಿಂಗ್‌ ಸಮೀಪವೇ ಸುತ್ತಾಡುತ್ತಿದ್ದಳು. ಅವಳಿಗೆ ಅಲ್ಲಿ ಅಂಜಲಿ ಕಾಣಿಸಿದಳು. ಮೇಘಾಳನ್ನು ನೋಡಿ ಅವಳಿಗೆ ಸ್ವಲ್ಪ ಶಾಕ್‌ ಆಯಿತು. ಆದರೂ `ಹಾಯ್‌ ಹಲೋ….’ ಹೇಳಿ ಅವಳು ಅಲ್ಲಿಂದ ಕಾಲ್ಕಿತ್ತಳು. ಮೇಘಾ ಮನಸ್ಸಿನಲ್ಲಿಯೇ ಮುಗುಳ್ನಗುತ್ತ ಒಳಗೆ ಬಂದಳು.

ಸಂಜೆ ಹೊತ್ತು ವಿನಯ್‌ ಹಾಗೂ ಯಶ್‌ ಟಿವಿಯಲ್ಲಿ  ಮ್ಯಾಚ್‌ ನೋಡುತ್ತಾ ಕುಳಿತಿದ್ದರು. ತನಗೂ ಮ್ಯಾಚ್‌ ನೋಡುವ ಹವ್ಯಾಸವಿದೆ ಎಂದು ಹೇಳುತ್ತಾ ಬಂದ ಅಂಜಲಿ, ವಿನಯ್‌ ಪಕ್ಕದಲ್ಲಿಯೇ ಕುಳಿತಳು. ತನ್ನ ಪತಿಗೆ ಮ್ಯಾಚ್‌ ನೋಡುವ ಅಭ್ಯಾಸವೇ ಇಲ್ಲ ಎಂದು ಅವಳು ಉಸುರಿದಳು.

“ಬಾ ಅಂಜಲಿ, ನಾವಿಬ್ಬರೂ ಒಳಗೆ ಕುಳಿತುಕೊಳ್ಳೋಣ. ಇವರಿಬ್ಬರ ಮ್ಯಾಚಿಗೆ ನಾವೇಕೆ ಡಿಸ್ಟರ್ಬ್‌ ಮಾಡಬೇಕು?” ಎಂದಳು ಮೇಘಾ.

“ಇಲ್ಲ, ನಾನು ಹೊರಡ್ತೀನಿ. ಮಗಳು ಮನೆಯಲ್ಲಿ ಒಬ್ಬಳೇ ಇದ್ದಾಳೆ,” ಎಂದು ಅಂಜಲಿ ಹೊರಟಳು.

“ಹೌದು, ಅವಳನ್ನು ಹೆಚ್ಚು ಹೊತ್ತು ಒಂಟಿಯಾಗಿ ಬಿಡಬೇಡ,” ಮೇಘಾ ಒತ್ತಿ ಹೇಳಿದಳು.

ಆ ದಿನ ಅಂಜಲಿ ಬೇಗನೇ ಹೊರಟುಹೋದಳು. ಅದೊಂದು ದಿನ ವಿನಯ್‌ ಹೇಳಿದ, “ಅವಳು ಸಾಕಷ್ಟು ಮೆಸೇಜ್ ಕಳುಹಿಸುತ್ತಿರುತ್ತಾಳೆ. ಗುಡ್‌ ಮಾರ್ನಿಂಗ್‌ ಹೇಳುತ್ತಾಳೆ. ಕೆಲವೊಮ್ಮೆ ಜೋಕ್ಸ್ ಕಳಿಸುತ್ತಾಳೆ,” ಎಂದ.

“ನನಗೂ ತೋರಿಸಿ,” ಎನ್ನುತ್ತಾ ಮೇಘಾ ಅವನ ಮೊಬೈಲಿ‌ನಲ್ಲಿ ಅಂಜಲಿ ಕಳಿಸಿದ ಮೆಸೇಜ್‌ ನೋಡತೊಡಗಿದಳು. ಅವಳು ಕಳಿಸಿದ್ದೆಲ್ಲ ಅಡಲ್ಟ್ ಜೋಕ್ಸ್, ವಿಡಿಯೋ ಕೂಡ ಅಂಥವೇ ಆಗಿದ್ದವು. ಆಶ್ಚರ್ಯದ ಸಂಗತಿಯೆಂದರೆ ವಿನಯ್‌ ಅವುಗಳನ್ನು ಓಪನ್ ಕೂಡ ಮಾಡಿರಲಿಲ್ಲ. ಏಕೆಂದರೆ ವಿನಯ್‌ ಆಫೀಸಿನಲ್ಲಿ ಬಹಳ ಬಿಜಿಯಾಗಿರುತ್ತಿದ್ದ. ಅವನು ಅವಳಿಗೆ ಸ್ಪಂದಿಸುವ ಮೂಡಿನಲ್ಲಿ ಇರಲೇ ಇಲ್ಲ. ಈಗ ಮೇಘಾ ಸ್ವಲ್ಪ ಗಂಭೀರಳಾಗಬೇಕಾಯಿತು.

ಮರುದಿನ ಮೇಘಾ ಅಂಜಲಿಯ ಫ್ಲ್ಯಾಟಿಗೆ ಹೋದಳು. ಅವಳ ಜೊತೆ ಮಾತನಾಡುತ್ತಾ, “ಅಂಜಲಿ, ಬಹುಶಃ ನೀನು ಬಹಳ ಬೋರ್‌ ಆಗ್ತಿದೀಯಾ ಅನಿಸುತ್ತೆ. ನೀನು ವಿನಯ್‌ ಗೆ ಬಹಳಷ್ಟು ಜೋಕ್ಸ್, ವಿಡಿಯೋ ಕಳಿಸುತ್ತಿರುತ್ತೀಯಾ. ಆದರೆ ವಿನಯ್ ಅದನ್ನು ಓಪನ್‌ ಕೂಡ ಮಾಡುವುದಿಲ್ಲ. ನೀನು ಅವರಿಗೆ ಅವನ್ನು ಕಳಿಸುವುದು ವೇಸ್ಟ್. ನಾನೇ ಅವನ್ನೆಲ್ಲ ನೋಡಿದೆ. ನೀನು ಇನ್ಮುಂದೆ ನನ್ನ ಮೊಬೈಲ್ ನಂಬರಿಗೆ ಜೋಕ್ಸ್, ವಿಡಿ.ಓ ಕಳಿಸು. ವಿನಯ್‌ ಸ್ವಲ್ಪ ವಿಭಿನ್ನ ಸ್ವಭಾವದ ಮನುಷ್ಯ. ಅವರು ನನ್ನ ಬಳಿ ಏನೂ ಮುಚ್ಚಿಟ್ಟುಕೊಳ್ಳುವುದಿಲ್ಲ,” ಎಂದು ಹೇಳಿದಾಗ, ಅಂಜಲಿಗೆ ಮುಜುಗರ ಎನಿಸತೊಡಗಿತು.

ಮೇಘಾ ಪರಿಸ್ಥಿತಿ ನಿಭಾಯಿಸುತ್ತಾ ಅಲ್ಲಿಂದ ಎದ್ದು ಮನೆ ಕಡೆ ಬಂದಳು. ಅಂದಿನ ಬಳಿಕ ಅಂಜಲಿ ಯಾವುದೇ ಮೆಸೇಜ್‌ ಕಳಿಸಲಿಲ್ಲ. ಈ ರೀತಿ ಅವಳು ಮೇಘಾಳ ಜೀವನದಿಂದ ಹೊರಗೆ ಹೋದಳು.

ಪ್ರಕರಣ ಬೇರೆ ಪರಿಸ್ಥಿತಿ ಬೇರೆ

ಒಂದು ವೇಳೆ ವಿನಯ್‌ ಪಕ್ಕದ ಮನೆಯವಳ ಜೊತೆ ಫ್ಲರ್ಟ್‌ ಮಾಡುತ್ತಿದ್ದರೆ ಅದು ಬೇರೆ ಮಾತು, ಆಗ ಸಮಸ್ಯೆ ನೆರೆಮನೆಯವಳದ್ದಾಗಿ ಇರುವುದಿಲ್ಲ. ಪತಿಯ ಸಮಸ್ಯೆ ಆಗಿರುತ್ತಿತ್ತು. ಇಂತಹ ಸ್ಥಿತಿಯನ್ನು ಬಹುಬೇಗನೇ ಸಂಭಾಳಿಸಬೇಕು. ಫ್ಲರ್ಟಿಂಗ್‌ ಅಫೇರ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಡೇಟಿಂಗ್‌, ಸೆಕ್ಸ್ ಹಾಗೂ ರಿಲೇಶನ್‌ ಶಿಪ್‌ ಎಕ್ಸ್ ಪರ್ಟ್ಸ್ ಪ್ರಕಾರ, ಮಹಿಳೆಯರು ವಿವಾಹಿತ ಪುರುಷರ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಯಾವುದೇ ಒಬ್ಬ ಮಹಿಳೆ ನಿಮ್ಮ ಗಂಡನೊಂದಿಗೆ ಫ್ಲರ್ಟ್‌ ಮಾಡುತ್ತಿದ್ದಾಳೊ, ಇಲ್ಲವೋ ಎನ್ನುವುದನ್ನು ಹೇಗೆ ಕಂಡುಕೊಳ್ಳಬೇಕು? ಅದರ ಬಗ್ಗೆ ತಿಳಿಯಿರಿ :

ಒಂದು ವೇಳೆ ನಿಮ್ಮ ಪತಿ ತನ್ನ ಕಾಲ್ಸ್ ಹಾಗೂ ಸಂದೇಶಗಳ ಬಗ್ಗೆ ಸ್ವತಃ ಹೇಳಿಕೊಳ್ಳುತ್ತಿದ್ದಾನೆಂದರೆ, ಅವನು ನಿಮ್ಮನ್ನು ಬಹಳ ಪ್ರೀತಿಸುತ್ತಿದ್ದಾನೆ ಎಂದರ್ಥ. ಆದರೆ ಇದೆಲ್ಲ ನಿಮಗೆ ಗೊತ್ತಾಗುತ್ತಿಲ್ಲವೆಂದರೆ ನಿಮ್ಮ ಪತಿ ಅದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾನೆ ಎಂದರ್ಥ.

ಒಂದು ವೇಳೆ ಆಕೆ ನಿಮ್ಮ ಪತಿಯ ಆಸುಪಾಸು ಸುತ್ತಾಡುತ್ತಿದ್ದರೆ, ವಿಭಿನ್ನ ಪೋಷಾಕು, ಮೇಕಪ್‌ ಮಾಡಿಕೊಳ್ಳುತ್ತಿದ್ದರೆ, ಅವನ ಬಗ್ಗೆ ಆಸಕ್ತಿ ತೋರಿಸುತ್ತಿದ್ದರೆ, ಅವಳು ನಿಮ್ಮ ಪತಿಯನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಪ್ರಯತ್ನಶೀಲಳಾಗಿದ್ದಾಳೆ ಎಂದರ್ಥ.

ಯಾವುದೇ ಮಹಿಳೆ ಒಬ್ಬ ಪರಪುರುಷನ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾಳೆಂದರೆ, ಆಕೆ ಸದಾ ತಾನು ಅವನ ಪತ್ನಿಗಿಂತ ಹೆಚ್ಚು ಒಳ್ಳೆಯವಳು ಎಂದು ತೋರಿಸುವವಳಾಗಿರುತ್ತಾಳೆ. ಗಂಡನಿಗಿರುವ ಹವ್ಯಾಸ ಹೆಂಡತಿಗೆ ಇಲ್ಲದಿದ್ದರೆ, ತಾನು ಅವನ ಹವ್ಯಾಸವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬಹುದು.

ಏನು ಮಾಡಬೇಕು?

ಅಂತಹ ಪರಿಸ್ಥಿತಿಯಲ್ಲಿ ಹೆಂಡತಿ ಏನು ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ನಿಮ್ಮ ಗಂಡನ ಮೇಲೆ ಸಂದೇಹಪಟ್ಟು ಅವನಿಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ, ನಿಮಗೆ ಆತನ ಬಗ್ಗೆ ನಂಬಿಕೆ ಇಲ್ಲ ಎಂದೆನಿಸುತ್ತದೆ. ಅದು ನಿಮಗೆ ಹಾನಿಯನ್ನುಂಟು ಮಾಡಬಹುದು. ಗಂಡನ ಜೊತೆಗೆ ಫ್ಲರ್ಟ್‌ ಮಾಡುವ ಮಹಿಳೆಯ ಜೊತೆ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ :

ನೀವು ಪಕ್ಕದ ಮನೆಯಾಕೆಗೆ ನೇರವಾಗಿ ಏನಾದರೂ ಹೇಳಿದರೆ ನೀವು ಮುಂಗೋಪಿ, ಇನ್‌ ಸೆಕ್ಯೂರ್‌ ಹೆಂಡತಿ ಎಂದು ಕರೆಸಿಕೊಳ್ಳುವಿರಿ. ಹೀಗಾಗಿ ನೀವು ಆಕೆಯ ಜೊತೆಗೆ ಚೆನ್ನಾಗಿ ವರ್ತಿಸಿ, ಆದರೆ ಅವಳಿಗೆ ಅದು ಸಹಜ ಎನ್ನಿಸಬೇಕು. ವಾಸ್ತವ ಏನೆಂದರೆ ಆಕೆ ನಿಮ್ಮನ್ನು ಇಷ್ಟಪಡುವುದಿಲ್ಲ. ಏಕೆಂದರೆ ಆಕೆ ನಿಮ್ಮ ಗಂಡನ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ನೀವು ಅವಳನ್ನು ದ್ವೇಷಿಸುತ್ತೀರಿ ಎನ್ನುವುದು ಅವಳಿಗೆ ಗೊತ್ತಾಗಬಾರದು. ನೀವು ಅವಳ ಒಳ್ಳೆಯ ಫ್ರೆಂಡ್‌ ಎನ್ನುವ ನಾಟಕ ಆಡಿ. ಅವಳಿಗೆ ನಿಮ್ಮ ಪತಿಯ ಜೊತೆಗೆ ಕ್ವಾಲಿಟಿ ಟೈಮ್ ಕಳೆಯಲು ಅವಕಾಶ ಕೊಡಬೇಡಿ. ಆಗ ಅವಳಿಗೆ ಅಸಹಜತೆ ಎನ್ನಿಸಿ ಹಿಂದೆ ಸರಿಯಬಹುದು.

ನಿಮ್ಮ ಗಂಡನ ಜೊತೆಗೂ ಮಾತನಾಡಿ. ಅವಳ ವರ್ತನೆಯಿಂದ ನಿಮ್ಮ ಪತಿಗೂ ಸಂದೇಹ ಉಂಟಾಗಬಹುದು. ನಿಮ್ಮ ಗಂಡನೆದುರು ಪ್ರಶ್ನೆಗಳ ಸುರಿಮಳೆ ಸುರಿಸದೆ, ತಾಳ್ಮೆಯಿಂದ ಮಾತನಾಡಿ. ಇಲ್ಲಿ ಫ್ಲರ್ಟ್‌ ಯಾರು ಮಾಡುತ್ತಿದ್ದಾರೊ, ಅವರನ್ನು ಕೇಳಿ ನೋಡಿ. ಒಂದು ವೇಳೆ ಪತಿ, “ನೀನು ಕಾರಣವಿಲ್ಲದೆಯೇ ಸಂದೇಹ ಪಡುತ್ತಿದ್ದೀಯಾ” ಎಂದು ಹೇಳಿದರೆ, ಅವನಿಗೆ ಘಟನೆಗಳ ಜೊತೆ ಆಕೆ ಫ್ಲರ್ಟ್‌ ಮಾಡುತ್ತಿದ್ದಳು ಎಂಬುದನ್ನು ಸ್ಪಷ್ಟಪಡಿಸಿ. ಈ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪತಿಗೆ ನೆರವು ನೀಡಿ ಹಾಗೂ ಇಬ್ಬರೂ ಸೇರಿ ಅದನ್ನು ನಿಭಾಯಿಸಿ.

ಈ ಸ್ಥಿತಿಯ ಬಗ್ಗೆ ನಗಲು ಕಲಿತುಕೊಳ್ಳಿ. ನಿಮ್ಮ ಪ್ರೀತಿಸುವ ಗಂಡನನ್ನು ಯಾರೊ ಒಬ್ಬಳು ಪ್ರೀತಿ ಮಾಡುತ್ತಿರುವುದು ನಿಮಗೆ ತಮಾಷೆ ಎನಿಸುತ್ತದೆ. ನೀವು ನಿಮ್ಮ ಸಂಬಂಧದ ಬಗ್ಗೆ ಫೋಕಸ್‌ ಮಾಡಿ. ಯಾವಾಗಲೂ ಅದೇ ಮಹಿಳೆಯ ಬಗ್ಗೆ ಯೋಚನೆ ಮಾಡುತ್ತಾ ಒತ್ತಡ ಹೆಚ್ಚಿಸಿಕೊಳ್ಳಬೇಡಿ.

ಇಂತಹ ಮಹಿಳೆಯರು ನಿಮ್ಮ ಹಾಗೂ ನಿಮ್ಮ ಪತಿಯ ನಡುವಣ ಮಿಸ್ಸಿಂಗ್‌ ಸ್ಪಾರ್ಕ್‌ನ ಲಾಭ ಪಡೆದುಕೊಳ್ಳಲು  ಪ್ರಯತ್ನಪಡುತ್ತಾರೆ. ಹೀಗಾಗಿ ಅವರಿಗೆ ಅವಕಾಶ ಕೊಡಬೇಡಿ.

ಪೂರ್ಣಿಮಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ