ಮೇಘಾ ತನ್ನ ನೆರೆಮನೆಯವಳನ್ನು ಮುಕ್ತವಾಗಿ ಸ್ವಾಗತಿಸಿದಳು. ಅಂಜಲಿ ಇತ್ತೀಚೆಗೆ ತನ್ನ ಪತಿ ಸುನೀಲ್ ‌ಹಾಗೂ ಅವರ 4 ವರ್ಷದ ಮಗಳು ವಿನೂತಾ ಎದುರುಗಿನ ಫ್ಲ್ಯಾಟಿಗೆ ಬಂದಿದ್ದರು. ಎದುರಿಗೆ ಬಂದಾಗ ಅವರು ಮುಗುಳ್ನಗುತ್ತಿದ್ದರು. ಸುನೀಲ್ ನದು ಟೂರಿಂಗ್‌ ಜಾಬ್‌, ಮೇಘಾಳ ಪತಿ ವಿನಯ್‌ ಹಾಗೂ ವಯಸ್ಸಿಗೆ ಬಂದ ಮಗ ಯಶ್‌ ಸ್ವಲ್ಪ ಧಾರಾಳ ಸ್ವಭಾವದವರಾಗಿದ್ದರು.

ಕೆಲವು ದಿನಗಳ ಬಳಿಕ ಮೇಘಾ ಒಂದು ಸಂಗತಿ ಗಮನಿಸಿದಳು. ಎದುರು ಮನೆಯ ಅಂಜಲಿ ವಿನಯ್‌ ಆಫೀಸಿಗೆ ಹೋಗುವ ಸಮಯದಲ್ಲಿಯೇ ಹೊರಗೆ ಪಾರ್ಕಿಂಗಿನಲ್ಲಿ ಸುತ್ತಾಡುತ್ತಿರುವುದನ್ನು ನೋಡಿದಳು. ಒಂದೆರಡು ಸಲ ಆಕೆ ಇದನ್ನು ಯೋಗಾ ಯೋಗ ಎಂದು ಭಾವಿಸಿದಳು. ಆದರೆ ವಿನಯ್‌ ಸ್ವತಃ ಬಂದು ಹೇಳಿದಾಗ ಆಕೆ ಅಲ್ಲಿ ನಿಲ್ಲುತ್ತಿದ್ದುದು ಉದ್ದೇಶಪೂರ್ವಕವಾಗಿ ಎನ್ನುವುದು ತಿಳಿಯಿತು. ಅಂಜಲಿ ತನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾಳೆ, ನಾನು ಏಕಾಂಗಿಯಾಗಿರುತ್ತೇನೆ. ಎದುರು ಮನೆಯವರ ನಂಬರ್‌ ತನ್ನ ಬಳಿ ಇದ್ದರೆ ಒಳ್ಳೆಯದು ಅದಕ್ಕೆ ನಿಮ್ಮ ನಂಬರ್‌ ಕೊಡಿ ಎಂದು ಕೇಳಿರುವುದು ಮೇಘಾಳನ್ನು ಚಕಿತಳನ್ನಾಗಿಸಿತು. ತಾನು ಅನೇಕ ಸಲ ಅವಳಿಗೆ ಮುಖಾಮುಖಿಯಾದರೂ ತನ್ನ ಮುಂದೆ ಅದರ ಬಗ್ಗೆ ಪ್ರಸ್ತಾಪಿಸಲಿಲ್ಲವಲ್ಲ ಎನ್ನುವುದು ಮೇಘಾಳಿಗೆ ಬೇಸರವನ್ನುಂಟು ಮಾಡಿತು.

ಅಂಜಲಿ ಯಾವ ಸಮಯದಲ್ಲಿ ಬಂದು ದಾಳಿ ಇಡುತ್ತಿದ್ದಳೆಂದರೆ, ಮೇಘಾ ಅಡುಗೆ ಕೆಲಸದಲ್ಲಿ ಸಾಕಷ್ಟು ಮಗ್ನಳಾಗಿದ್ದಾಗ. ಆಗ ವಿನಯ್‌ ಟಿವಿ ನೋಡುತ್ತಾ ಕುಳಿತಿರುತ್ತಿದ್ದ. ಅವಳ ವೇಷಭೂಷಣ, ಅಲಂಕಾರ ಎಲ್ಲವೂ ಮೇಘಾಳನ್ನು ಆತಂಕಕ್ಕೀಡು ಮಾಡುತ್ತಿತ್ತು. ಅದೊಂದು ದಿನ ವಿನಯ್‌ ತಾನು ಅವಳಿಗೆ ಮೆಸೇಜ್‌, ಜೋಕ್ಸ್ ಕಳಿಸುತ್ತಿದ್ದುದಾಗಿ ಹೇಳಿದ. ಮೊದ ಮೊದಲು ಮೇಘಾಳಿಗೆ ಬಹಳ ಕೋಪ ಬರುತ್ತಿತ್ತು. ಬಳಿಕ ಅವಳು ಶಾಂತ ಮನಸ್ಸಿನಿಂದ ``ನೀವು ಇದನ್ನು ಎಂಜಾಯ್‌ ಮಾಡುತ್ತಿಲ್ಲ ತಾನೇ?'' ಎಂದು ಛೇಡಿಸಿದಳು.

``ನಾನು ಅದನ್ನು ಎಂಜಾಯ್‌ ಮಾಡುತ್ತಿದ್ದರೆ ನಿನಗೆ ಅದರ ಬಗ್ಗೆ ಹೇಳುತ್ತಿದ್ದೆನಾ?'' ಎಂದು ವಿನಯ್‌ ತಮಾಷೆ ಮಾಡುತ್ತಾ, ``ನಿನ್ನ ಗಂಡ ಪಕ್ಕದ ಮನೆಯವರ ಫ್ಲರ್ಟಿಗೆ ಬಲಿಯಾಗುತ್ತಾನಾ ಮೈ ಡಿಯರ್‌ ಪ್ರಮ್ ಲೈಫ್‌,'' ಎಂದ ಹೇಳಿದ.

``ಓಹೋ ಹಾಗೋ ಸಮಾಚಾರ..... ಪಕ್ಕದ ಮನೆಯವರ ಫ್ಲರ್ಟಿಂಗ್‌ ಭೂತ ಇಳಿಸುವುದು ನನಗೆ ಸುಲಭದ ಕೆಲಸ,'' ಎಂದು ಮೇಘಾ ಹೇಳಿದಳು. ಆಗ ವಿನಯ್‌ ಅವಳ ಮುಂದೆ ಕೈ ಜೋಡಿಸಿ ನಿಂತ.

ಮರುದಿನ ಮೇಘಾ, ವಿನಯ್‌ ಹೊರಡುವ ಸಮಯಕ್ಕೆ ಪಾರ್ಕಿಂಗ್‌ ಸಮೀಪವೇ ಸುತ್ತಾಡುತ್ತಿದ್ದಳು. ಅವಳಿಗೆ ಅಲ್ಲಿ ಅಂಜಲಿ ಕಾಣಿಸಿದಳು. ಮೇಘಾಳನ್ನು ನೋಡಿ ಅವಳಿಗೆ ಸ್ವಲ್ಪ ಶಾಕ್‌ ಆಯಿತು. ಆದರೂ `ಹಾಯ್‌ ಹಲೋ....' ಹೇಳಿ ಅವಳು ಅಲ್ಲಿಂದ ಕಾಲ್ಕಿತ್ತಳು. ಮೇಘಾ ಮನಸ್ಸಿನಲ್ಲಿಯೇ ಮುಗುಳ್ನಗುತ್ತ ಒಳಗೆ ಬಂದಳು.

ಸಂಜೆ ಹೊತ್ತು ವಿನಯ್‌ ಹಾಗೂ ಯಶ್‌ ಟಿವಿಯಲ್ಲಿ  ಮ್ಯಾಚ್‌ ನೋಡುತ್ತಾ ಕುಳಿತಿದ್ದರು. ತನಗೂ ಮ್ಯಾಚ್‌ ನೋಡುವ ಹವ್ಯಾಸವಿದೆ ಎಂದು ಹೇಳುತ್ತಾ ಬಂದ ಅಂಜಲಿ, ವಿನಯ್‌ ಪಕ್ಕದಲ್ಲಿಯೇ ಕುಳಿತಳು. ತನ್ನ ಪತಿಗೆ ಮ್ಯಾಚ್‌ ನೋಡುವ ಅಭ್ಯಾಸವೇ ಇಲ್ಲ ಎಂದು ಅವಳು ಉಸುರಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ