2019ರಲ್ಲಿ ಅರ್ಥಶಾಸ್ತ್ರಜ್ಞ ಸೂರಜ್‌ ಜಾಕೋಬ್‌ ಹಾಗೂ ಮಾನಶಾಸ್ತ್ರಜ್ಞ ಶ್ರೀಪರ್ಣಾ ಚಟ್ಟೋಪಾಧ್ಯಾಯ ಅವರು ನಡೆಸಿದ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು 14 ಲಕ್ಷ ಜನರು ವಿಚ್ಛೇದಿತರು ಇದ್ದಾರೆ. ಇದು ಒಟ್ಟಾರೆ ಜನಸಂಖ್ಯೆಯ ಶೇ.0.11 ಆಗಿದೆ. ಇದು ವಿವಾಹಿತರ  0.24% ಆಗಿದೆ. ಆಶ್ಚರ್ಯದ ಸಂಗತಿಯೆಂದರೆ, ಪ್ರತ್ಯೇಕವಾಗಿರುವವರ ಸಂಖ್ಯೆ ವಿಚ್ಛೇದಿತರ ಸಂಖ್ಯೆಗಿಂತ 3 ಪಟ್ಟು ಅಧಿಕವಾಗಿದೆ. ಪುರುಷರಿಗೆ ಹೋಲಿಸಿದರೆ ವಿಚ್ಛೇದಿತ ಹಾಗೂ ಗಂಡನಿಂದ ಪ್ರತ್ಯೇಕವಾಗಿರುವ ಮಹಿಳೆಯರ ಸಂಖ್ಯೆ ಅದೆಷ್ಟೋ ಹೆಚ್ಚಿಗೆ ಇದೆ. ವಿಚ್ಛೇದಿತ ಪುರುಷರು ಸಾಮಾನ್ಯವಾಗಿ ಮದುವೆಯಾಗುತ್ತಾರೆ. ಆದರೆ ವಿಚ್ಛೇದಿತ ಮಹಿಳೆಯರು ಏಕಾಂಗಿಯಾಗಿ ಉಳಿದುಬಿಡುತ್ತಾರೆ.

ಲವ್ ಮ್ಯಾರೇಜ್‌ ಅಥಾ ಅರೇಂಜ್ಡ್ ಮ್ಯಾರೇಜ್‌ ಆಗಿರಬಹುದು ಎಷ್ಟೋ ಸಲ ಪರಿಸ್ಥಿತಿ ಹೇಗಾಗಿ ಬಿಡುತ್ತದೆ? ಎಂದರೆ, ಮೊದಲು ಪರಸ್ಪರ ಅತಿಯಾಗಿ ಪ್ರೀತಿಸುವ ಗಂಡ ಹೆಂಡತಿಯರೇ ದೂರ ದೂರ ಆಗಿಬಿಡುತ್ತಾರೆ. ಪ್ರೀತಿಯ ಎಳೆಯಿಂದ ರೂಪಿಸಲ್ಪಟ್ಟ ಗಂಡ ಹೆಂಡತಿಯ ಸಂಬಂಧ ಆಕಸ್ಮಿಕವಾಗಿ ತುಂಡಾದಾಗ ಭಾವನಾತ್ಮಕವಾಗಿ ದುರ್ಬಲರಾಗಿರುವ ಸ್ತ್ರೀಪುರುಷರು ಗಾಢ ದುಃಖಕ್ಕೆ ಸಿಲುಕುತ್ತಾರೆ. ಗಮನದಲ್ಲಿಡಬೇಕಾದ ಸಂಗತಿಯೆಂದರೆ, ವೈವಾಹಿಕ ಜೀವನದಲ್ಲಿ ಸಂಗಾತಿ ನಿಕಟವಾಗಿದ್ದೂ ದೂರ ಇರುವಂತೆ ಅನುಭವ ಆಗುತ್ತದೆಯೇ? ಸಂಗಾತಿಯ ಬಾಹುಬಂಧನದಲ್ಲಿದ್ದರೂ ನಿಮಗೆ ಮೊದಲಿನ ಪ್ರೀತಿಯ ಅನುಭವ ಆಗುತ್ತಿಲ್ಲವೇ? ಸಂಗಾತಿ ನೆಪ ಹೇಳಿ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಿದ್ದಾನೆಯೇ? ಒಂದು ವೇಳೆ `ಹೌದು' ಎಂದಾದಲ್ಲಿ, ನೀವು ಈಗಲೇ ಸಂಭಾಳಿಸಿಕೊಳ್ಳಿ ಹಾಗೂ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿ. ನೀವಿಬ್ಬರೂ ಗಮನಹರಿಸಬೇಕಾದ ಸಂಗತಿಯೆಂದರೆ, ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುವುದರತ್ತ ಸನ್ನೆ ಮಾಡುವ ಸಂಗತಿಗಳಾವು ಎನ್ನುವುದನ್ನು ತಿಳಿದುಕೊಳ್ಳಿ.

ಪರಸ್ಪರ ನಿಕಟರಾಗಿರದಿರುವುದು

ಆಫೀಸಿನಿಂದ ಮನೆಗೆ ಬಂದ ನೀವು ಒಂದು ಕೋಣೆಯಲ್ಲಿ ಕುಳಿತಿದ್ದೀರಿ. ಆದರೆ ಒಬ್ಬರು ತಮ್ಮ ಲ್ಯಾಪ್‌ ಟಾಪ್‌ ಅಥವಾ ಕಂಪ್ಯೂಟರಿನಲ್ಲಿ ಮತ್ತೊಬ್ಬರು ಟಿ.ವಿ ಅಥವಾ ಮೊಬೈಲಿನಲ್ಲಿ ವ್ಯಸ್ತರಾಗಿರಬಹುದು. ಪಾರ್ಟಿಯಲ್ಲಿ ಇಬ್ಬರೂ ಜೊತೆ ಜೊತೆಗೆ ಹೋಗಿರುವಿರಿ. ಆದರೆ ಒಬ್ಬರು ಒಂದು ಕೋಣೆಯಲ್ಲಿ ಇನ್ನೊಬ್ಬರು ಇನ್ನೊಂದು ಕೋಣೆಯಲ್ಲಿ ತಮ್ಮ ಸ್ನೇಹ ಬಳಗದೊಂದಿಗೆ ಹರಟುತ್ತಾ ಕಾಲಕಳೆಯುತ್ತಿದ್ದಾರೆ ಅಂದರೆ ಜೊತೆ ಜೊತೆಗೆ ಸೇರಿ ಆನಂದ ಪಡೆಯುವುದರ ಬದಲು, ತಮ್ಮ ತಮ್ಮ ಲೋಕದಲ್ಲಿ ವ್ಯಸ್ತರಾಗಿದ್ದರೆ, ಇದು ನಿಮ್ಮಿಬ್ಬರ ಹೆಚ್ಚುತ್ತಿರುವ ಅಂತರದ ಸಂಕೇತ.

ಜಗಳವನ್ನು ಬಿಟ್ಟುಬಿಟ್ಟಿದ್ದೇವೆ

ಒಂದು ವೇಳೆ ನೀವು ಪರಸ್ಪರರು ವಾದವಿವಾದ ಮಾಡುವುದು ಅಥವಾ ಜಗಳವಾಡುವುದನ್ನು ಬಿಟ್ಟುಬಿಟ್ಟರೆ ಇದೂ ಕೂಡ ಅಂತರ ಹೆಚ್ಚಿರುವುದರ ಸಂಕೇತವಾಗಿದೆ. ಒಂದು ವೇಳೆ ಜಗಳದ ಬಳಿಕ ನೀವು ಈ ವಿಷಯದ ಬಗ್ಗೆ ಮಾತುಕತೆ ನಡೆಸದಿದ್ದರೆ ಅಥವಾ ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿರದಿದ್ದಲ್ಲಿ ಈ ನಿಮ್ಮ ಅಭ್ಯಾಸ ಸಂಬಂಧ ತುಂಡರಿಸುವುದರತ್ತ ಹೊರಟಿದೆ ಎನ್ನುವುದರತ್ತ ಕೈ ಬೆರಳು ಮಾಡಿ ತೋರಿಸುತ್ತದೆ. ಎಷ್ಟೋ ಸಲ ದಂಪತಿಗಳ ನಡುವೆ ನಡೆಯುವ ಜಗಳಗಳು ಅವರ ನಿಕಟತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಆದರೆ ಇದೆಲ್ಲ ಸಾಧ್ಯವಾಗುವುದು ಇಬ್ಬರೂ ಜಗಳದ ಮೂಲದತನಕ ತಲುಪಿ, ಪರಸ್ಪರರ ಮಾತುಗಳನ್ನು ಆಲಿಸಿ, ಅರ್ಥ ಮಾಡಿಕೊಂಡು ಮನಸ್ಸಿನ ಕೊಳೆಯನ್ನು ದೂರ ಮಾಡಲು ಪ್ರಯತ್ನ ಮಾಡುತ್ತೀರೊ ಆಗ ಮಾತ್ರ ಯಶಸ್ಸು ಸಿಗುತ್ತದೆ. ಆದರೆ ಈ ರೀತಿಯ ಪ್ರಯತ್ನ ಮಾಡದೇ ಇದ್ದರೆ, ನೀವು ದೂರಾಗುವ ದಿನಗಳು ಹತ್ತಿರ ಬಂದಿವೆ ಎಂದರ್ಥ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ