ಇತ್ತೀಚಿನ ದಿನಗಳಲ್ಲಿ ರೇಪ್‌ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಹೊರಟಿವೆ. ಆದರೆ ಅದೆಷ್ಟೋ ಸಲ ಎಂತಹ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತವೆಂದರೆ, ಅದರಲ್ಲಿ ಪ್ರೇಯಸಿ ತನ್ನ ಪ್ರಿಯಕರನ ಮೇಲೆ ರೇಪ್‌ ಆರೋಪ ಹೊರಿಸುತ್ತಾಳೆ. ಇಂತಹ ಪ್ರಕರಣಗಳು ನಿಜಕ್ಕೂ ಗಾಬರಿಗೊಳಿಸುವಂತವಾಗಿರುತ್ತವೆ.

ಹೈದರಾಬಾದಿನಿಂದ ಬೆಂಗಳೂರಿಗೆ ಬಂದಿದ್ದ ಮೋಹನ್‌ ನ ಪ್ರಕರಣ ಹೀಗೆಯೇ ಚಕಿತಗೊಳಿಸುವಂಥದ್ದು. ಮೋಹನ್‌ ತನ್ನ ಗರ್ಲ್ ಫ್ರೆಂಡ್‌ ಕಾಂಚನಾ ಜೊತೆ ಒಂದೇ ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದ. ಇಬ್ಬರೂ ಜೊತೆ ಜೊತೆಗಿದ್ದು ಬ್ಯಾಂಕಿಂಗ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಇಬ್ಬರೂ ಜೊತೆ ಜೊತೆಗೆ ಕೋಚಿಂಗ್‌ ಸೆಂಟರಿಗೂ ಹೋಗುತ್ತಿದ್ದರು. ಇಬ್ಬರೂ ಹೆಚ್ಚಿನ ಹೊತ್ತು ಜೊತೆ ಜೊತೆಗೇ ಕಳೆಯುತ್ತಿದ್ದರು.

ಮೋಹನ್‌ ತನ್ನ ಕೆರಿಯರ್‌ ಬಗ್ಗೆ ಬಹಳ ಸೀರಿಯಸ್‌ ಆಗಿದ್ದ. ಆದರೆ ಕಾಂಚನಾ ತನ್ನ ಕೆರಿಯರ್‌ ಗಿಂತ ಹೆಚ್ಚಾಗಿ ಮೋಹನ್‌ ಬಗ್ಗೆ ಹೆಚ್ಚು ಸೀರಿಯಸ್‌ ಆಗಿದ್ದಳು. ಅಂದರೆ ಅವಳು ಮೋಹನ್‌ ನಲ್ಲಿ ತನ್ನ ಭವಿಷ್ಯವನ್ನು ಕಾಣುತ್ತಿದ್ದಳು.

ಉತ್ತರ ಪ್ರದೇಶದ ಲಖನೌದವಳಾಗಿದ್ದ ಕಾಂಚನಾ ಅಷ್ಟಿಷ್ಟು ಹಠಮಾರಿ ಹಾಗೂ ಕೋಪಿಷ್ಠೆ. ಬೆಂಗಳೂರಿಗೆ ಬಂದ ಬಳಿಕ ಅವಳ ಸ್ವಭಾವದಲ್ಲಿ ಬಹಳಷ್ಟು ಬದಲಾವಣೆ ಬಂದಿತ್ತು. ಕೋಚಿಂಗ್‌ ಸೆಂಟರ್‌ನಲ್ಲಿ ಇಬ್ಬರ ಭೇಟಿಯಾಗಿ ನಂತರ ಪರಸ್ಪರ ನಿಕಟವಾಗಿದ್ದರು.

ಆ ನಿಕಟತೆ ಮೋಹನ್‌ ಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಅಂದಾಜು ಅವನಿಗಿರಲಿಲ್ಲ. ಒಂದೇ ಫ್ಲ್ಯಾಟಿನಲ್ಲಿದ್ದರೂ ಮೋಹನ್‌ ಎಂದೂ ಕಾಂಚನಾಳ ಜೊತೆಗೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಲಿಲ್ಲ. ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು, ಆದರೆ ಒಂದು ಇತಿಮಿತಿಯಲ್ಲೇ ಇದ್ದರು.

ಮೋಹನ್‌ ತನ್ನ ಕುಟುಂಬದಲ್ಲಿ ಏಕೈಕ ಪುತ್ರನಾಗಿದ್ದ. ಅವನು ಬೇಗ ಮದುವೆಯಾಗಬೇಕೆಂದು ಅವನ ಪೋಷಕರು ಬಯಸುತ್ತಿದ್ದರು. ಇತ್ತ ಮೋಹನನಿಗೆ ಪರೀಕ್ಷೆಗಳು ಆರಂಭವಾಗಲಿದ್ದವು. ಅತ್ತ ಕಡೆಯಿಂದ ಮದುವೆಯ ಒತ್ತಡ ಪರೀಕ್ಷೆ ಕ್ಲಿಯರ್ ಆದರೆ ಮಾತ್ರ ತಾನು ಬೇಗ ಮದುವೆಯಾಗುವುದಾಗಿ ಅವನು ಕೋಪದಿಂದ ತನ್ನ ಅಪ್ಪಅಮ್ಮನಿಗೆ ಹೇಳಿದ್ದ.

2 ತಿಂಗಳ ಬಳಿಕ ಮೋಹನನ ಪರೀಕ್ಷೆ ಪರಿಣಾಮ ಬಂತು. ಅದನ್ನು ಕಂಡು ಕಾಂಚನಾಳ ಕಾಲ ಕೆಳಗಿನ ನೆಲ ಅದುರಿದಂತೆ ಆಯಿತು. ಏಕೆಂದರೆ ಮೋಹನ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ.

ಮೋಹನ್‌ ಈಗ ತನ್ನಿಂದ ದೂರವಾಗುತ್ತಾನೆಂದು ಕಾಂಚನಾಳಿಗೆ ಹೆದರಿಕೆಯಾಗುತ್ತಿತ್ತು. ಪರೀಕ್ಷಾ ಪರಿಣಾಮದ ಬಗ್ಗೆ ಮೋಹನ್ ಅಷ್ಟೇ ಅಲ್ಲ, ಅವನ ಕುಟುಂಬದವರು ಕೂಡ ಬಹಳ ಖುಷಿಗೊಂಡಿದ್ದರು.

ಇತ್ತ ಕಾಂಚನಾಳ ವರ್ತನೆಯಲ್ಲಿ ಬಹಳಷ್ಟು ಬದಲಾವಣೆ ಕಂಡುಬರುತ್ತಿತ್ತು. ಮಾತು ಮಾತಿಗೂ ಕೋಪ ಸಿಡಿಮಿಡಿತನ ಉಂಟಾಗುತ್ತಿದ್ದುದು ಮೋಹನನ ಗಮನಕ್ಕೂ ಬಂದಿತ್ತು. ಆದರೆ ಅವನು ಕಾಂಚನಾಳಿಗೆ ಏನೂ ಹೇಳಿರಲಿಲ್ಲ. ಅವರಿಬ್ಬರೂ ಒಂದೇ ಫ್ಲ್ಯಾಟಿಗೆ ಬರುವ ಮುನ್ನವೇ ಮೋಹನ್‌ ಕಾಂಚನಾಗೆ ನಾನು ನಿನ್ನನ್ನು ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿದ್ದ. ಆ ಮಾತಿಗೆ ಕಾಂಚನಾ ಕೂಡ ಒಪ್ಪಿಗೆ ಸೂಚಿಸಿದ್ದಳು. ಆದರೆ ಈಗ ಅವಳು ಅವನ ಮೇಲೆ ಹಕ್ಕು ಪ್ರತಿಪಾದಿಸಲು ಶುರುಮಾಡಿದ್ದಳು. ಆದರೆ ಅವಳ ಮಾತನ್ನು ಮೋಹನ್‌ ನಿರ್ಲಕ್ಷ್ಯ ಮಾಡುತ್ತಿದ್ದ.

ಕೆಲವು ದಿನಗಳ ಬಳಿಕ ಮೋಹನ್‌ ತಾನು ಇನ್ನು ಪ್ರತ್ಯೇಕವಾಗಿರಬೇಕೆಂದು ನಿರ್ಧರಿಸಿದ. ಹೀಗಾಗಿ ಅವನು ಕೆಲದಿನಗಳ ಮಟ್ಟಿಗೆಂದು ಊರಿಗೆ ಹೋದ. ಅಲ್ಲಿಗೆ ಹೋಗುತ್ತಿದ್ದಂತೆ ಅವನ ಪೋಷಕರು ಒಳ್ಳೆಯ ಮನೆತನದ ಹುಡುಗಿಯ ಜೊತೆಗೆ ಅವನಿಗೆ ನಿಶ್ಚಿತಾರ್ಥ ಕೂಡ ಮುಗಿಸಿಬಿಟ್ಟರು. ಮೋಹನ್‌ ಈ ವಿಷಯವನ್ನು ಕಾಂಚನಾಳಿಗೆ ಹೇಳಿದಾಗ, ಅವಳು ಅವನ ಮೇಲೆ ಕೂಗಾಡತೊಡಗಿದಳು. ತನ್ನೊಂದಿಗೆ ಮದುವೆಯಾಗದಿದ್ದರೆ ತಾನು ಸಾಯುವುದಾಗಿಯೂ, ಅವನ ಜೀವನವನ್ನೇ ಹಾಳು ಮಾಡುವುದಾಗಿಯೂ ಬೆದರಿಕೆ ಹಾಕತೊಡಗಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ