ಕೊರೋನಾ ಸೋಂಕು ಮತ್ತು ಲಾಕ್‌ ಡೌನ್‌ ಕಾರಣದಿಂದಾಗಿ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಉಂಟಾಗಿವೆ. ಅನೇಕ ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು ಇದ್ದು ಮಕ್ಕಳು ಬೇಸತ್ತು ಹೋಗಿದ್ದಾರೆ. ಇನ್ನೊಂದೆಡೆ ಪೋಷಕರು ಅವರನ್ನು ಸಂಭಾಳಿಸಲು ನಾನಾ ರೀತಿಯ ಕಸರತ್ತು ಮಾಡಬೇಕಾಗಿ ಬರುತ್ತದೆ.

ಮಕ್ಕಳು 24 ಗಂಟೆ ಮನೆಯಲ್ಲಿಯೇ ಇರಬೇಕಾಗಿ ಬಂದುದರಿಂದ ಅವರಿಗೆ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಅವರ ಆನ್‌ ಲೈನ್‌ ಕ್ಲಾಸ್‌ ಗಳಿಂದಾಗಿ ಪೋಷಕರ ಜೇಬಿಗೆ ದುಬಾರಿ ಕತ್ತರಿ ಬೀಳುತ್ತಿದೆ.

10ನೇ ತರಗತಿಯ ಅನೂಷಾ ತನ್ನ ಅಮ್ಮನ ಮೊಬೈಲಿ‌ನಲ್ಲಿ ಆನ್‌ ಲೈನ್‌ ಕ್ಲಾಸಿಗೆ ಹಾಜರಾದಳು. ಆದರೆ ತಲೆನೋವು ಮತ್ತು ಕಣ್ಣುಗಳಲ್ಲಿ ನೀರು ಬರುತ್ತಿರುವ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೋದಾಗ ಅವರು ಚಿಕ್ಕ ಸ್ಕ್ರೀನಿನ ಮೊಬೈಲ‌ನ್ನು ಹೆಚ್ಚು ಹೊತ್ತು ನೋಡುತ್ತಿರಬಾರದು ಎಂದು ಸಲಹೆ ನೀಡಿದರು. ಈ ಕಾರಣದಿಂದ ಪೋಷಕರು ಅವಳಿಗಾಗಿ 16,000 ರೂ. ಮೌಲ್ಯದ ಹೊಸ ಟ್ಯಾಬ್ಲೆಟ್‌ ಖರೀದಿಸಬೇಕಾಗಿ ಬಂತು.

ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಬ್ಯೂಟಿ ಪಾರ್ಲರ್‌ ನಡೆಸುವ ಕೀರ್ತನಾ ತನ್ನ ಮಗಳ ಆನ್‌ ಲೈನ್‌ ಕ್ಲಾಸಿಗಾಗಿ ಬಹಳಷ್ಟು ಕಷ್ಟ ಎದುರಿಸಬೇಕಾಯಿತು. ಮನೆಯಲ್ಲಿ ಜಾಗ ಸಾಲದೆ ಅಪಾರ್ಟ್‌ ಮೆಂಟಿನ ತನ್ನದೇ ಭಾಗದಲ್ಲಿ ಒಂದು ಮಿನಿ ಪಾರ್ಟಿಶನ್‌ ಮಾಡಿ ಆನ್‌ ಲೈನ್‌ ಕ್ಲಾಸಿಗೆ ಅನುಕೂಲ ಮಾಡಿಕೊಟ್ಟಳು. ಈ ಕಾರಣದಿಂದ ಆಕೆ ಸಾಕಷ್ಟು ಪಾರ್ಲರ್‌ ಗ್ರಾಹಕರನ್ನು ಕಳೆದುಕೊಳ್ಳಬೇಕಾಯಿತು.

ಸಹಜ ಎಂಬಂತೆ ಮಕ್ಕಳ ಆನ್‌ ಲೈನ್‌ ಕ್ಲಾಸುಗಳಿಗಾಗಿ ಪೋಷಕರಿಗೆ ಪ್ರತ್ಯಕ್ಷ, ಪರೋಕ್ಷ ರೀತಿಯಲ್ಲಿ ಖರ್ಚಿನ ಹೊರೆ ಹೆಚ್ಚಾಗಿದೆ.

ಯಾವ ಯಾವ ಖರ್ಚುಗಳು ಪೋಷಕರ ಜೇಬಿಗೆ ಹೊರೆಯಾಗಿ ಪರಿಣಮಿಸಿವೆ ಎನ್ನುವುದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ :

ವೈಫೈ ಅಥವಾ ಡೇಟಾ :

corona-me-parents-ka-rona-1

ಆನ್‌ ಲೈನ್‌ ಕ್ಲಾಸುಗಳಿಗಾಗಿ ಮಕ್ಕಳಿಗಾಗಿ ಫೋನಿನಲ್ಲಿ ಡೇಟಾ ರೀಚಾರ್ಜ್‌ ಮಾಡಿಸಬೇಕಾಗಿ ಬರುತ್ತದೆ. ವೈಫೈ ಹಾಕಿಸುವುದು ಒಂದು ಅತ್ಯವಶ್ಯ ಖರ್ಚಿನಲ್ಲಿ ಸೇರಿಕೊಂಡಿದೆ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪ್ರತಿಯೊಂದು ಮಗುವಿಗೂ ಡೇಟಾ ರೀಚಾರ್ಜ್‌ ಮಾಡುವ ಬದಲು ವೈಫೈ ಹಾಕಿಸುವುದು ಹೆಚ್ಚು ಅನುಕೂಲವಾಗಿರುತ್ತದೆ. ಅಗತ್ಯ ಉಂಟಾದಾಗ ಮನೆಯ ಎಲ್ಲ ಸದಸ್ಯರು ಕಂಪ್ಯೂಟರ್‌ ಅಥವಾ ಮೊಬೈಲಿ‌ನಲ್ಲಿ ಏಕಕಾಲಕ್ಕೆ ಅದರ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ.

ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‌ ಖರೀದಿಸುವುದು ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗಾಗಿ ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‌ ಖರೀದಿಸುವುದು ಕೂಡ ಒಂದು ಅವಶ್ಯಕ ಖರ್ಚಾಗಿ ಪರಿಣಮಿಸಿದೆ. ಕಂಪ್ಯೂಟರಿನ ದೊಡ್ಡ ಸ್ಕ್ರೀನ್‌ ಮೊಬೈಲಿ‌ಗೆ ಹೋಲಿಸಿದಲ್ಲಿ ಹೆಚ್ಚು ಅನುಕೂಲಕರ.

ಟ್ಯಾಬ್ಲೆಟ್‌ಸ್ಕ್ರೀನ್‌ ಕೂಡ ಸಾಮಾನ್ಯವಾಗಿ 8-10 ಅಂಗುಲವಾಗಿರುತ್ತದೆ. ಅದನ್ನು ನೋಡುವುದರಿಂದ ಮಕ್ಕಳ ಕಣ್ಣಿಗೆ ಅಷ್ಟೇನೂ ದುಷ್ಪರಿಣಾಮ ಉಂಟಾಗುವುದಿಲ್ಲ.

ಇನ್‌ ವರ್ಟರ್‌ ಅಳಡಿಸುವುದು : ಆಕಸ್ಮಿಕವಾಗಿ ವಿದ್ಯುತ್‌ ಕಡಿತದಿಂದ ಮಕ್ಕಳ ಆನ್‌ ಲೈನ್‌ ಕ್ಲಾಸ್‌ ಅಥವಾ ಹೋಂವರ್ಕಿಗಾಗಿ ಇನ್‌ ವರ್ಟರ್‌ ಅಳವಡಿಸುವುದು ಕೂಡ ಒಂದು ಅವಶ್ಯಕ ಖರ್ಚು ಎಂಬಂತೆ ಆಗಿದೆ. ಅದನ್ನು ಪೋಷಕರು ಮನಸ್ಸಿಲ್ಲದ ಮನಸ್ಸಿನಿಂದ ಅಳವಡಿಸುವಂತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ